HAL Recruitment 2022: ಜನರಲ್ ಮ್ಯಾನೇಜರ್ ಸೇರಿ 7 ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna News  |  First Published Feb 5, 2022, 3:50 PM IST

HAL ಕಂಪನಿಯು ಖಾಲಿ ಇರುವ  ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಫೆಬ್ರವರಿ 05 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ಬೆಂಗಳೂರು(ಫೆ.5): ಬೆಂಗಳೂರಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (Hindustan Aeronautics Limited-HAL) ಕಂಪನಿಯು ಖಾಲಿ ಇರುವ  ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜನರಲ್ ಮ್ಯಾನೇಜರ್ (General Manager), ಮುಖ್ಯ ವ್ಯವಸ್ಥಾಪಕರು, ಹೆಚ್‌ಆರ್ (HR) ಮತ್ತು ಕಾನೂನು ಅಧಿಕಾರಿ (law officer) ಸೇರಿ ಒಟ್ಟು 7 ಹುದ್ದೆಗಳು ಖಾಲಿ ಇದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 05, 2022ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ನೇಮಕಾತಿ ಬಗೆಗಿನ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://hal-india.co.in/ ಗೆ   ಅಥವಾ http://portal.mhrdnats.gov.in/ ಭೇಟಿ ನೀಡಬಹುದು.

ಶೈಕ್ಷಣಿಕ ವಿದ್ಯಾರ್ಹತೆ: ಹಿಂದೂಸ್ತಾನ್ ಏರೋನಾಟಿಕ್ಸ್​​ ಲಿಮಿಟೆಡ್​ನಲ್ಲಿ ಖಾಲಿ ಇರುವ ಜನರಲ್ ಮ್ಯಾನೇಜರ್, ಮುಖ್ಯ ವ್ಯವಸ್ಥಾಪಕರು, ಹೆಚ್‌ಆರ್ ಮತ್ತು ಕಾನೂನು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪದವಿ, ಕಾನೂನು ಪದವಿ ಮತ್ತು ಪಿಜಿ ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು.

Tap to resize

Latest Videos

undefined

ವಯೋಮಿತಿ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿಯ ಜನರಲ್ ಮ್ಯಾನೇಜರ್, ಮುಖ್ಯ ವ್ಯವಸ್ಥಾಪಕರು, ಹೆಚ್‌ಆರ್ ಮತ್ತು ಕಾನೂನು ಅಧಿಕಾರಿ ಹುದ್ದೆಗಳಿಗೆ ಫೆಬ್ರವರಿ 16,2022ರ ಅನ್ವಯ ಹುದ್ದೆಗಳಿಗನುಸಾರ ಗರಿಷ್ಟ 50 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

BMRCL RECRUITMENT 2022: ಬೆಂಗಳೂರು ಮೆಟ್ರೋದಲ್ಲಿದೆ ಉದ್ಯೋಗಾವಕಾಶ, ಇಂದೇ ಅರ್ಜಿ ಸಲ್ಲಿಸಿ

ವೇತನ ವಿವರ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿಯ ಜನರಲ್ ಮ್ಯಾನೇಜರ್, ಮುಖ್ಯ ವ್ಯವಸ್ಥಾಪಕರು, ಹೆಚ್‌ಆರ್ ಮತ್ತು ಕಾನೂನು ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 40,000/- ರಿಂದ 2,60,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿಯ ಜನರಲ್ ಮ್ಯಾನೇಜರ್, ಮುಖ್ಯ ವ್ಯವಸ್ಥಾಪಕರು, ಹೆಚ್‌ಆರ್ ಮತ್ತು ಕಾನೂನು ಅಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

Cognizant Hiring Freshers: 50 ಸಾವಿರ ಫ್ರೆಶರ್‌ಗಳ ನೇಮಕಕ್ಕೆ ಮುಂದಾದ ಕಾಗ್ನಿಜೆಂಟ್

ಅರ್ಜಿ ಶುಲ್ಕ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿಯ ಜನರಲ್ ಮ್ಯಾನೇಜರ್, ಮುಖ್ಯ ವ್ಯವಸ್ಥಾಪಕರು, ಹೆಚ್‌ಆರ್ ಮತ್ತು ಕಾನೂನು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಪರಿಶಿಷ್ಟ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.

AAAL Recruitment 2022: ಕಮಾಂಡರ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ : ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿಯ ಜನರಲ್ ಮ್ಯಾನೇಜರ್, ಮುಖ್ಯ ವ್ಯವಸ್ಥಾಪಕರು, ಹೆಚ್‌ಆರ್ ಮತ್ತು ಕಾನೂನು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://www.hal-india.co.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಫೆಬ್ರವರಿ 16,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ: 
Chief Manager (HR)
Recruitment Section
Hindustan Aeronautics Limited Corporate Office
15/1 Cubbon Road, Bangalore - 560 001

NIMHANS Recruitment 2022: ಕಚೇರಿ ಆಡಳಿತಗಾರ ಹುದ್ದೆಗೆ ಅರ್ಜಿ ಆಹ್ವಾನಿಸಿದ ನಿಮ್ಹಾನ್ಸ್

click me!