BRO Recruitment: ಗಡಿ ರಸ್ತೆಗಳ ಸಂಸ್ಥೆಯಲ್ಲಿ 354 ಹುದ್ದೆಗಳಿಗೆ ನೇಮಕಾತಿ

By Suvarna News  |  First Published Dec 12, 2021, 3:07 PM IST
  • ಮ್ಯಾಟ್ರಿಕ್ಯುಲೇಷನ್ ಪಾಸು ಮಾಡಿದವರಿಗೆ ಭರಪೂರ ಉದ್ಯೋಗವಕಾಶ
  • ಮಲ್ಟಿ ಸ್ಕಿಲ್ ವರ್ಕರ್ ಸೇರಿದಂತೆ ನಾನಾ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2022 ಜನವರಿ 18 ಕೊನೆಯ ದಿನವಾಗಿದೆ

ನವದೆಹಲಿ (ಡಿ. 12): ಭಾರತೀಯ ಸಶಸ್ತ್ರ ಪಡೆಗಳ ಭಾಗವಾಗಿರುವ ಗಡಿ ರಸ್ತೆಗಳ ಸಂಸ್ಥೆ (Border Roads Organisation-BRO), ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಮೆಟ್ರಿಕ್ಯುಲೇಷನ್ ಪಾಸ್ ಮಾಡಿದ್ದರೆ ಸಾಕು, ಬಿಆರ್ ಒ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಬಹುದು. ಖಾಲಿ ಇರುವ 354 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮಲ್ಟಿ ಸ್ಕಿಲ್ಡ್‌ ವರ್ಕರ್(Multi Skill Worker), ವೆಹಿಕಲ್ ಮೆಕ್ಯಾನಿಕ್ (Vehicle Mechanic) ಮತ್ತು ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್‌ (Driver Machanical Transport) ಹುದ್ದೆ ಸೇತಿ ಒಟ್ಟು 354 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.  ಆಸಕ್ತರು ಬಾರ್ಡರ್ ರೋಡ್ಸ್‌ ಆರ್ಗನೈಜೇಷನ್ (ಬಿಆರ್‌ಒ)ನ  ಅಧಿಕೃತ ವೆಬ್‌ಸೈಟ್‌ bro.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ  ಜನವರಿ 18 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ ಭೇಟಿ ನೀಡಬಹುದು.

ಬಾರ್ಡರ್ ರೋಡ್ಸ್ ಅರ್ಗನೈಸೇಷನ್ (Border Roads Organisation-BRO) ನೇಮಕಾತಿಯಲ್ಲಿ ವೆಹಿಕಲ್ ಮೆಕ್ಯಾನಿಕ್ -293 ಹುದ್ದೆಗಳು ಮಲ್ಟಿಸ್ಕಿಲ್ಡ್ ವರ್ಕರ್‌ - 45 ಹುದ್ದೆಗಳು ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ - 16 ಹುದ್ದೆಗಳು ಒಟ್ಟು 354 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

Tap to resize

Latest Videos

undefined

BEL Recruitment: ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ 

ಈ ಬಾರ್ಡರ್ ರೋಡ್ಸ್ ಅರ್ಗನೈಸೇಷನ್ ಹುದ್ದೆಗಳಿಗೆ ಕೇವಲ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ರಿಂದ ಗರಿಷ್ಟ 27 ವರ್ಷ ವಯೋಮಿತಿಯೊಳಗಿರಬೇಕು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷಗಳು ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. 

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುವುದು. ನಂತರ ದೈಹಿಕ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 18,000 ರಿಂದ 63,200/-ರೂಗಳ ವರೆಗೆ ವೇತನ ಸಿಗಲಿದೆ.  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 50 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು. ಎಸ್‌ಬಿಐ ಕಲೆಕ್ಟ್ ಅಥವಾ ಆನ್‌ಲೈನ್ ಮೂಲಕ  ಶುಲ್ಕವನ್ನು ಪಾವತಿಸಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. 

ಬಾರ್ಡರ್ ರೋಡ್ಸ್‌ ಆರ್ಗನೈಜೇಶನ್ (Border Roads Organisation-BRO) ನೇಮಕಾತಿಯ ಮಲ್ಟಿ ಸ್ಕಿಲ್ಡ್‌ ವರ್ಕರ್, ವೆಹಿಕಲ್ ಮೆಕ್ಯಾನಿಕ್ ಮತ್ತು ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್‌ (ಒಜಿ) ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಬಾರ್ಡರ್ ರೋಡ್ಸ್‌ ಆರ್ಗನೈಜೇಷನ್ (ಬಿಆರ್‌ಒ)ನ  ಅಧಿಕೃತ ವೆಬ್‌ಸೈಟ್‌ bro.gov.in ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಬೇಕು. ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ  ಜನವರಿ 18, 2022ರೊಳಗೆ ಕಚೇರಿಗೆ ಅರ್ಜಿಯನ್ನು ಕೊರಿಯರ್ ಅಥವಾ ಪೋಸ್ಟ್ ಮೂಲಕ ಕಳುಹಿಸಬಹುದು. ಕಮಾಂಡೆಂಟ್ ಜಿಆರ್ ಇಎಫ್ ಸೆಂಟರ್, ಡಿಗ್ಗಿ ಕ್ಯಾಂಪ್, ಪುಣೆ- 411 015 - ಈ ವಿಳಾಸಕ್ಕೆ ಭರ್ತಿ ಮಾಡಿರುವ ಅರ್ಜಿ ಹಾಗೂ ದಾಖಲೆಗಳನ್ನು ಪೋಸ್ಟ್ /ಕೊರಿಯರ್ ಮೂಲಕ ಕಳುಹಿಸಬೇಕು.

NIFT Recruitment 2021: ಸಂಸ್ಥೆಯಲ್ಲಿ 190 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ

click me!