Technical graduate course: ಭಾರತೀಯ ಸೇನೆಯಲ್ಲಿ ಟೆಕ್ನಿಕಲ್ ಗ್ರ್ಯಾಜುಯೆಟ್ ಕೋರ್ಸ್‌ಗೆ ಅರ್ಜಿ ಆಹ್ವಾನ

By Suvarna News  |  First Published Dec 12, 2021, 2:00 PM IST
  • 40 ಟೆಕ್ನಿಕಲ್ ಗ್ರ್ಯಾಜುಯೆಟ್ ಕೋರ್ಸ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
  • ಬಿ.ಇ ಮತ್ತು ಬಿಟೆಕ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ
  • ಅರ್ಜಿ ಸಲ್ಲಿಸಲು 2022 ಜನವರಿ 4 ಕೊನೆಯ ದಿನವಾಗಿದೆ.

ನವದೆಹಲಿ (ಡಿ.12): ಭಾರತೀಯ ಸೇನೆಯು (Indian Army) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 40 ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್ (Technical Graduate Course) ಹುದ್ದೆಗಳು ಖಾಲಿ ಇದ್ದು, ಬಿಇ, ಬಿಟೆಕ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಡಿಸೆಂಬರ್ 6ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಜನವರಿ 4, 2022 ಡೆಡ್ ಲೈನ್ ಆಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು joinindianarmy.nic.in ಗೆ ಭೇಟಿ ನೀಡಿ ಪರಿಶೀಲಿಸಬಹುದು. ಅಗತ್ಯವಿರುವ ಇಂಜಿನಿಯರಿಂಗ್ ಪದವಿ ಕೋರ್ಸ್‌ನಲ್ಲಿ ಉತ್ತೀರ್ಣರಾದ ಅಥವಾ ಇಂಜಿನಿಯರಿಂಗ್ ಪದವಿ ಕೋರ್ಸ್‌ನ ಅಂತಿಮ ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಇಂಜಿನಿಯರಿಂಗ್ ಪದವಿ ಕೋರ್ಸ್‌ನ ಅಂತಿಮ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿಗಳು ಜುಲೈ 1, 2022 ರೊಳಗೆ ಎಲ್ಲಾ ಸೆಮಿಸ್ಟರ್‌ಗಳು/ವರ್ಷಗಳ ಅಂಕಪಟ್ಟಿಗಳೊಂದಿಗೆ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುರಾವೆಗಳನ್ನು ಸಲ್ಲಿಸಬೇಕು ಮತ್ತು ತರಬೇತಿ ಪ್ರಾರಂಭವಾದ ದಿನಾಂಕದಿಂದ 12 ವಾರಗಳ ಒಳಗೆ ವಿದ್ಯಾರ್ಹತೆ ಪದವಿ ಪ್ರಮಾಣಪತ್ರವನ್ನು ಸಲ್ಲಿಸಬೇಕು. 

BEL Recruitment: ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ 

Tap to resize

Latest Videos

undefined

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಬೋರ್ಡ್ನಿಂದ ಬಿಇ, ಬಿ ಟೆಕ್ ಪದವಿ ಪೂರೈಸಿರಬೇಕು. ಇಂಡಿಯನ್ ಆರ್ಮಿ (Indian Army)ಯ ಟೆಕ್ನಿಕಲ್ ಗ್ರಾಜುಯೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 20-27 ವರ್ಷದೊಳಗಿರಬೇಕು. ಭಾರತೀಯ ಸೇನೆಯ 135ನೇ ತಾಂತ್ರಿಕ ಪದವೀಧರರ ಕೋರ್ಸ್ (TGC) ಇದಾಗಿದ್ದು, ಜುಲೈ 2022 ರಲ್ಲಿ ಪ್ರಾರಂಭವಾಗಲಿದೆ. ಒಟ್ಟು  40 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.

ಇಂಡಿಯನ್ ಆರ್ಮಿಯ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲಿಗೆ ಶಾರ್ಟ್ ಲಿಸ್ಟ್‌ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳನ್ನು  ಪಿಇಟಿ, ಎಸ್‌ಎಸ್‌ಬಿ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಜೊತೆಗೆ ವೈದ್ಯಕೀಯ ಪರೀಕ್ಷೆಗೂ ಅಭ್ಯರ್ಥಿಗಳು ಒಳಪಡಬೇಕಾಗುತ್ತದೆ.  ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 56,100 – 1,77,500/- ರೂ. ಲಭ್ಯವಾಗಲಿದೆ.

ಸಿವಿಲ್/ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಟೆಕ್ನಾಲಜಿ 09 ಹುದ್ದೆ, ಆರ್ಕಿಟೆಕ್ಚರ್  (Architecture)- 01 ಹುದ್ದೆ, ಮೆಕ್ಯಾನಿಕಲ್  05 ಹುದ್ದೆ, ಎಲೆಕ್ಟಿಕಲ್/ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ 03 ಹುದ್ದೆಗಳು, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್/ಕಂಪ್ಯೂಟರ್ ಟೆಕ್ನಾಲಜಿ/ಎಂಎಸ್ಸಿ ಕಂಪ್ಯೂಟರ್ ಸೈನ್ಸ್ - 08 ಹುದ್ದೆಗಳು, ಇನ್ಫಾರ್ಮೇಷನ್ ಟೆಕ್ನಾಲಜಿ - 03 ಹುದ್ದೆ, ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯೂನಿಕೇಷನ್ 01 ಹುದ್ದೆ, ಟೆಲಿಕಮ್ಯೂನಿಕೇಷನ್  01 ಹುದ್ದೆ, ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ (Electronics & Communication)- 02 ಹುದ್ದೆ, ಏರೊನಾಟಿಕಲ್/ಏರೋಸ್ಪೇಸ್/ಎವಿನಾಕ್ಸ್ 01 ಹುದ್ದೆ, ಎಲೆಕ್ಟ್ರಾನಿಕ್ಸ್ (Electronics) 01 ಹುದ್ದೆ, ಎಲೆಕ್ಟ್ರಾನಿಕ್ಸ್ & ಇನ್ಸ್ಟುಮೆಂಟೇಷನ್/ಇನ್ಸ್ಟ್ರುಮೆಂಟೇಷನ್  01 ಹುದ್ದೆ, ಪ್ರೊಡಕ್ಷನ್(Production) 01 ಹುದ್ದೆ, ಇಂಡಸ್ಟ್ರಿಯಲ್/ಮ್ಯಾನ್ಯುಫ್ಯಾಕ್ಟರಿಂಗ್/ಇಂಡಸ್ಟ್ರಿಯಲ್ ಇಂಜಿನಿಯರಿಂಗ್ 01 ಹುದ್ದೆ, ಆಫ್ಟೋ ಎಲೆಕ್ಟ್ರಾನಿಕ್ಸ್ 01 ಹುದ್ದೆ, ಆಟೋಮೊಬೈಲ್ ಇಂಜಿನಿಯರಿಂಗ್ (Automobile Engg)01 ಹುದ್ದೆಗಳು ಸೇರಿ ಒಟ್ಟು 40 ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲಾಗುತ್ತಿದೆ. 

NIFT Recruitment 2021: ಸಂಸ್ಥೆಯಲ್ಲಿ 190 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ

ಜುಲೈ 2, 1995 ಮತ್ತು ಜುಲೈ 1 2002 ರ ನಡುವೆ ಜನಿಸಿದ ಅಭ್ಯರ್ಥಿಗಳು, ಎರಡೂ ದಿನಾಂಕಗಳನ್ನು ಒಳಗೊಂಡಂತೆ. ಅಭ್ಯರ್ಥಿಗಳು www.joinindianarmy.nic.in ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಜನವರಿ 4, 2022 ರ ಮಧ್ಯಾಹ್ನ 3 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಆನಂತರ ಬರುವ ಅರ್ಜಿಗಳನ್ನು ಇಂಡಿಯನ್ ಆರ್ಮಿ ಸ್ವೀಕರಿಸುವುದಿಲ್ಲ. ಅಪ್ಲಿಕೇಷನ್ ಪೋರ್ಟಲ್(Application Portal) ಅನ್ನು ಕ್ಲೋಸ್ ಮಾಡಲಾಗುತ್ತದೆ.

click me!