ಬಿಗ್‌ಬಾಸ್‌ನಿಂದ ಹೊರಬಿದ್ದ ಚಂದನ್; ವಿನ್ನರ್ ಬಗ್ಗೆ ಕೊಟ್ರು ಶಾಕ್..!

By Suvarna News  |  First Published Jan 21, 2020, 9:28 AM IST

ಕಿರುತೆರೆಯ ಬಹುಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಕ್ಲೈಮ್ಯಾಕ್ಸ್‌ ಹಂತದಲ್ಲಿದೆ. ಈ ವಾರ ಬಿಗ್‌ಬಾಸ್‌ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರ ಬಂದಿದ್ದಾರೆ. ಕೊರಿಯೋಗ್ರಾಫರ್‌ ಕಿಶನ್‌ ಹಾಗೂ ನಟ ಚಂದನ್‌ ಆಚಾರ್ಯ. ಚಂದನ್‌ ಆಚಾರ್ಯ ಜತೆಗೆ ಮಾತುಕತೆ.


ದೇಶಾದ್ರಿ ಹೊಸ್ಮನೆ

ಎಲಿಮಿನೇಟ್‌ ನಿರೀಕ್ಷಿತವೋ, ಅನಿರೀಕ್ಷಿತವೋ?

Tap to resize

Latest Videos

ನಿಜಕ್ಕೂ, ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಯಾಕಂದ್ರೆ, ಹಲವು ಬಾರಿ ನಾಮಿನೇಟ್‌ ಆದಾಗಲೂ ವೀಕೆಂಡ್‌ನಲ್ಲಿ ಸೇಫ್‌ ಆಗುತ್ತಾ ಬಂದಿದ್ದೆ. ಅದು ಜನರ ಆಶೀರ್ವಾದ. ಈ ಸಲ ಮಾತ್ರ ಏನಾಯ್ತೋ ಗೊತ್ತಿಲ್ಲ. ಎಲಿಮಿನೇಟ್‌ ಆದೆ. ಇದು ಅಚಾತುರ್ಯ.

ನಿಮ್ಮ ಪ್ರಕಾರ ಇದಕ್ಕೆ ಕಾರಣ ಏನಿರಬಹುದು?

ಸ್ಟೆ್ರೖಟ್‌ ಫಾರ್ವಡ್‌ ವ್ಯಕ್ತಿತ್ವ. ಅದರ ಜತೆಗೆ ನಾನು ನಾನಾಗಿರಲು ಹಾಕಿದ ಪ್ರಯತ್ನ. ಅದೇ ಎಲ್ಲೋ ನನ್ನ ಎಲಿಮಿನೇಷನ್‌ಗೆ ಕಾರಣವಾಗಿರಬಹುದೆನ್ನುವುದು ನನ್ನ ಬಲವಾದ ನಂಬಿಕೆ. ಅದರಾಚೆಗೂ ಬೇರೆಯದೇ ಕಾರಣ ಇರಬಹುದು. ಯಾಕಂದ್ರೆ, ಬಿಗ್‌ಬಾಸ್‌ ಅನ್ನೋದು ಅದಷ್ಟೇ ಅಲ್ಲ ಅಲ್ವಾ?

BB7: ಈ ವಾರ ಡಬಲ್ ಎಲಿಮಿನೇಷನ್‌, ಕಿಶನ್‌ ಆದ್ಮೇಲೆ ಹೊರ ಬಂದ್ರಾ ಚಂದನ್ ಆಚಾರ್?

ಅಂದ್ರೆ, ನೀವು ನೀವಾಗಿರಲು ಅಲ್ಲಿಗೆ ಹೋಗಬೇಕಿತ್ತಾ?

ಖಂಡಿತಾ ಅದು ಹಾಗಲ್ಲ, ನಾವೇನು ಅಂತ ಗೊತ್ತಾಗಬೇಕಾದ್ರೆ ಬಿಗ್‌ಬಾಸ್‌ ಶೋ ಒಂದೊಳ್ಳೆಯ ವೇದಿಕೆ ಅಂತಲೇ ಬಂದ ಆಫರ್‌ಗೆ ಓಕೆ ಹೇಳಿದ್ದೆ. ಹಾಗೆಯೇ ಅಲ್ಲಿರಲು ಪ್ರಯತ್ನಿಸಿದೆ. ವೈಯಕ್ತಿಕವಾಗಿಯೂ, ಗ್ರೂಪ್‌ ಮೂಲಕವೂ ಟಾಸ್ಕ್‌ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡೆ. ಅದು ವೀಕ್ಷಕರಿಗೂ ಗೊತ್ತಿದೆ. ಅದರ ರೂಲ್ಸ್‌ ಫಾಲೋ ಮಾಡುವುದರ ಜತೆಗೆ ನನ್ನ ದೋಷಗಳನ್ನು ಸರಿಪಡಿಸಿಕೊಂಡು ಎಲ್ಲರ ಜತೆಗೆ ಮಿಂಗಲ್‌ ಆದೆ. ಅಷ್ಟಾಗಿಯೂ ಏನಾಯ್ತು ಅನ್ನೋದಕ್ಕೆ ಇಡೀ ಜರ್ನಿ ಹೇಳಬೇಕಾಗುತ್ತೆ.

ಬಿಗ್‌ಬಾಸ್‌ ಮನೆಯಲ್ಲಿ ನೀವು ಕೆಲವರಿಗೆ ಟಾರ್ಗೆಟ್‌ ಆಗಿದ್ರಾ?

ಟಾರ್ಗೆಟ್‌ ಅನ್ನೋದು ನಂಗೆ ಹೊಸದಲ್ಲ. ಹೊರಗಡೆ ಇದ್ದಾಗಲೂ ಅಂತಹ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ. ಅಲ್ಲಿಗೆ ಹೋದಾಗಲೂ ಅಂತಹ ಅನುಭವ ಆಗಿದೆ. ಹಾಗಂತ ಅದು ಉದ್ದೇಶ ಪೂರ್ವಕ ಟಾರ್ಗೆಟ್‌ ಅಂತ ಹೇಳೋದಿಲ್ಲ. ಅದು ಗೆಲ್ಲುವ ತಂತ್ರವೂ ಇರಬಹುದು. ಹಾಗಾಗಿ ಅವರವರ ದೃಷ್ಟಿಕೋನದಲ್ಲಿ ಮತ್ತೊಬ್ಬರನ್ನು ನೋಡುತ್ತಾರೆ. ನನ್ನನ್ನು ಕೂಡ ಕೆಲವರು ಹಾಗೆಯೇ ನೋಡಿರಬಹುದು. ಆದ್ರೆ ನಾನು ಎಂದಿಗೂ ಫೇಕ್‌ ಎನ್ನುವ ಹಾಗೆ ಬದುಕಿಲ್ಲ. ಇರುವಷ್ಟುದಿನ ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಬಿಗ್‌ಬಾಸ್‌ ರೂಲ್ಸ್‌ ಪ್ರಕಾರವೇ ಆಟ ಆಡಿದೆ. ಅದರ ಜತೆಗೆ ನಾನು ನಾನಾಗಿಯೇ ಉಳಿದುಕೊಂಡೆ.

ಅತಿ ಹೆಚ್ಚು ವೋಟ್‌ ಗಿಟ್ಟಿಸಿದ ಚಂದನ್‌ ಆಚಾರ್ ಗೇಮ್‌ ಪ್ಲ್ಯಾನ್‌ಗೆ ಮನಸೋತ ಜನ!

ಬಿಗ್‌ಬಾಸ್‌ ಮನೆಯಲ್ಲಿ ನೀವು ಹೆಚ್ಚಾಗಿ ಏಕಾಂಗಿ ಆಗಿಯೇ ಇರುತ್ತಿದ್ದು ಯಾಕೆ?

ಅದು ನಾನಿರೋದೇ ಹಾಗೆ. ಅನಗತ್ಯವಾಗಿ ಮಾತನಾಡೋದು, ಸುಖಾಸುಮ್ಮನೆ ಮೂಗು ತೂರಿಸುವುದು ನನಗಾಗದ ಕೆಲಸ. ಅದಕ್ಕಿಂತ ಹೆಚ್ಚಾಗಿ ನನಗನಿಸಿದ್ದನ್ನು ನಿಷ್ಟುರವಾಗಿ ಹೇಳಿದ್ರೆ ಅಲ್ಲಿದ್ದ ಕೆಲವರಿಗೆ ಆಗುತ್ತಿರಲಿಲ್ಲ. ನಾವೆಲ್ಲ ಅವರದೇ ಮಾತು ಕೇಳಬೇಕೆನ್ನುವ ಹಾಗೆ ವರ್ತಿಸುತ್ತಿದ್ದರು. ಆ ಕಾರಣಕ್ಕೆ ಕೆಲವೊಮ್ಮೆ ಒಬ್ಬನೇ ಕೂರುತ್ತಿದೆ. ಹಾಗಂತ ಇಷ್ಟುದಿವಸ ಅದನ್ನೇ ಮಾಡಿದೆ ಅಂತಲ್ಲ, ಗ್ರೂಪ್‌ ಟಾಸ್ಕ್‌ಗಳು ಬಂದಾಗಲೂ ಎಲ್ಲರ ಜತೆಗೂ ಮಿಂಗಲ್‌ ಆದೆ. ಕಳೆದ ಎರಡ್ಮೂರು ವಾರಗಳಿಂದ ನನ್ನೊಳಗೆ ನಾನು ಸಾಕಷ್ಟುಬದಲಾವಣೆ ತಂದುಕೊಂಡಿದ್ದೆ.

ಈಗ ನೀವು ಬದಲಾಗಿದ್ದೀರಿ ಅಂದ್ರೆ ಅದು ಹೇಗೆ, ಯಾಕೆ?

ನಿಷ್ಟುರವಾಗಿ ಹೇಳೋದನ್ನು ನಿಲ್ಲಿಸಿದ್ದೇನೆ. ಹಾಗಂತ ವ್ಯಕ್ತಿತ್ವ ಬದಲಾಗಿಲ್ಲ. ಇಲ್ಲಿ ನಾನು ನಾನೇ. ಬದಲಿಗೆ ಇನ್ನೊಬ್ಬರಿಗೆ ಹರ್ಟ್‌ ಆಗುತ್ತೆ ಅಂದ್ರೆ ಅದನ್ನು ನಿಷ್ಟುರವಾಗಿ ಹೇಳಬಾರದು ಅನ್ನೋದು ಗೊತ್ತಾಗಿದೆ. ಅದು ಅಗತ್ಯವೂ ಹೌದು. ನನ್ನೊಳಗಿನ ಆ ಗುಣ ಜನರಿಗೂ ಇಷ್ಟವಾಗಿದೆ. ಮೊದಲಿಗಿಂತ ಜನರ ಪ್ರೀತಿ ಹೆಚ್ಚಾಗಿದೆ. ಹಾಗಾಗಿಯೇ ನನ್ನನ್ನು ಇಲ್ಲಿ ತನಕ ಅವರು ಕರೆ ತಂದಿದ್ದರು. ಆ ನಿಟ್ಟಿನಲ್ಲಿ ಬದಲಾಗಿದ್ದೇನೆ ಅಂತ ಹೇಳಬಹುದು.

ಬಿಗ್‌ಬಾಸ್‌ ಮನೆಗೆ ಹೋಗಿ ನೀವು ಗಳಿಸಿದ್ದೇನು, ಕಳೆದುಕೊಂಡಿದ್ದೇನು?

ಕಳೆದುಕೊಂಡಿದ್ದು ಎನ್ನುವುದಕ್ಕಿಂತ ಪಡೆದುಕೊಂಡಿದ್ದು ಹೆಚ್ಚು. ದೊಡ್ಡ ಮಟ್ಟದಲ್ಲಿ ಜನರ ಪ್ರೀತಿ ಸಿಕ್ಕಿದೆ. ಎಲ್ಲಿಗೆ ಹೋದರೂ ಜನ ನನ್ನನ್ನು ಗುರುತಿಸುವ ಮಟ್ಟಕ್ಕೆ ಜನಪ್ರಿಯತೆ ಇದು ಎನ್ನುವುದನ್ನು ಸುದೀಪ್‌ ಸರ್‌ ಮಾತಿನಲ್ಲೇ ಕೇಳಿದ್ದೇನೆ. ಅಪ್ಪ, ಅಮ್ಮ ಕೂಡ ಹೇಳಿದರು. ಇನ್ನು ಸುದೀಪ್‌ ಸರ್‌ ಬದುಕಿನ ದೊಡ್ಡ ಪಾಠ ಹೇಳಿಕೊಟ್ಟಿದ್ದಾರೆ. ಅವರಲ್ಲಿ ಬರೀ ನಿರೂಪಕರು ಎನ್ನುವುದಷ್ಟೇ ಅಲ್ಲ, ನಮ್ಮೆಲ್ಲ ಪರ್ಸನಾಲಿಟಿ ಡೆವಲಪ್‌ಮೆಂಟ್‌ನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಪ್ರತಿ ವೀಕೆಂಡ್‌ನಲ್ಲಿ ಅವರು ಮಾತು ಕೇಳುತ್ತಿದ್ದಾಗ ಹೊಸದನ್ನು ಕಲಿಯುತ್ತಲೇ ಬಂದಿದ್ದೇವೆ. ಅದು ಬಿಗ್‌ಬಾಸ್‌ ಮನೆಯಿಂದ ಸಿಕ್ಕ ಬಹು ದೊಡ್ಡ ಕೊಡುಗೆ.

ಫೈನಲ್‌ ಸ್ಟೇಜ್‌ನಲ್ಲಿ ಎಲಿಮಿನೇಟ್‌ ಆಗಿದ್ದು ಬೇಸರ ಎನಿಸಿಲ್ವಾ?

ಖಂಡಿತಾ ಬೇಸರ ಆಗಿದೆ. ಎಲಿಮಿನೇಟ್‌ ಆಗಿಬಿಟ್ಟೆಎನ್ನುವುದಕ್ಕಿಂತ ಬಿಟ್ಟುಕೊಟ್ಟೆಎನಿಸುತ್ತೆ. ಒಂದ್ರೀತಿ ಒತ್ತಡ ನನ್ನನ್ನು ಹಾಗೆ ಮಾಡಿತು ಅಂತೆನಿಸುತ್ತದೆ. ಕೆಲವೊಮ್ಮೆ ನಮ್ಮ ಮೇಲಿನ ದೂಷಣೆಗಳು ನಮ್ಮನ್ನು ಕುಗ್ಗಿಸಿ ಬಿಡುತ್ತವೆ. ಅಲ್ಲೂ ನನಗೆ ಹಾಗೆ ಆಯಿತು. ನೀನೇ ದೂಷಿ , ನೀನೇ ದೂಷಿ ಎನ್ನುವ ಮಾತುಗಳು ನನಗ್ಯಾಕೋ ಸಾಕೆನಿಸುವಂತೆ ಮಾಡಿದವು. ಹಾಗಾಗಿ ಎಲಿಮಿನೇಟ್‌ ಮೂಲಕ ಕಂಪಿಟೇಷನ್‌ ಬಿಟ್ಟುಕೊಟ್ಟಂತಾಯಿತೇನೋ ಎನ್ನುವುದು ನನ್ನ ಅನಿಸಿಕೆ.

ನಿಮ್ಮ ಪ್ರಕಾರ ಯಾರು ಬಿಗ್‌ಬಾಸ್‌ ವಿನ್ನರ್‌ ಆಗಬಹುದು?

ಇದುವರೆಗೂ ನಾನು ನೋಡಿದ ಪ್ರಕಾರ ಶೈನ್‌ ಶೆಟ್ಟಿಗೆ ಅಂತಹ ಅರ್ಹತೆ ಇದೆ. ಅವನನ್ನು ನಾನು ಹತ್ತಿರದಿಂದ ಬಲ್ಲೆ. ತುಂಬಾ ಬುದ್ಧಿವಂತ. ಎಮೋಷನಲ್‌ ಪರ್ಸನ್‌. ಡೆಲಿಬರೇಟ್‌ ಆಗಿ ಆಡುತ್ತಾರೆ. ಅದು ಅವರನ್ನು ಗೆಲುವಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತೆ ಎನ್ನುವ ವಿಶ್ವಾಸ ನನ್ನದು.

click me!