Celebrities Luxury Cars ಈ ವರ್ಷ ಬಾಲಿವುಡ್ ಸೆಲೆಬ್ರೆಟಿಗಳನ್ನು ಮೋಡಿ ಮಾಡಿದೆ ಈ 2 ಕಾರು!

By Suvarna News  |  First Published Dec 14, 2021, 8:28 PM IST
  • 2021ರಲ್ಲಿ ಬಾಲಿವುಡ್ ಸೆಲೆಬ್ರೆಟಿಗಳ ಮನಸ್ಸು ಗೆದ್ದ ಕಾರು ಇದು
  • ಈ ವರ್ಷ ಹೆಚ್ಚು ಸೆಲೆಬ್ರೆಟಿಗಳು ಈ ಎರಡು ಕಾರು ಖರೀದಿ
  • 2021ರಲ್ಲಿ ಸೆಲೆಬ್ರೆಟಿಗಳನ್ನು ಆಕರ್ಷಿಸಿದ ಕಾರಿನ ವಿವರ

ಮುಂಬೈ(ಡಿ.14):  ಬಾಲಿವುಡ್ ಸೆಲೆಬ್ರೆಟಿಗಳು(Bollywood Celebrities) ಹೊಸ ಹೊಸ ಕಾರು(Cars) ಖರೀದಿಸುವುದು, ತಮ್ಮ ಕಾರು ಕಲೆಕ್ಷನ್ ಹೆಚ್ಚಿಸಿಕೊಳ್ಳುವುದು ಹೊಸದೇನಲ್ಲ. ಸೆಲೆಬ್ರೆಟಿಗಳಲ್ಲಿ ಇದು ಸಾಮಾನ್ಯ. ಇದೀಗ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಹೊಸ್ತಿಲಲ್ಲಿದ್ದೇವೆ. ಹೊಸ ವರ್ಷದ(New Year 2022) ಆಗಮನಕ್ಕೂ ಮುನ್ನ ಈ ವರ್ಷ ಬಾಲಿವುಡ್ ಸೆಲೆಬ್ರೆಟಿಗಳನ್ನು ಎರಡು ಐಷಾರಾಮಿ ಕಾರು(Luxury cars) ಹೆಚ್ಚು ಮೋಡಿ ಮಾಡಿದೆ. ಹೆಚ್ಚಿನ ಸೆಲೆಬ್ರೆಟಿಗಳು ಈ ಎರಡು ಕಾರು ಖರೀದಿಸಿದ್ದಾರೆ. ಇದರಲ್ಲಿ ಮೊದಲ ಸ್ಥಾನ ಮರ್ಸಿಡಿಸ್ ಬೆಂಜ್ ಮೇಬ್ಯಾಚ್ GLS 600 ಹಾಗೂ ಲ್ಯಾಂಬೋರ್ಗಿನಿ ಉರುಸ್.

ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಅತೀ ದೊಡ್ಡ ಫಿಲ್ಮ್ ಇಂಡಸ್ಟ್ರಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಬಾಲಿವುಡ್ ಸರಿಸುಮಾರು 3,00,000 ಮಂದಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಮುಖ್ಯಭೂಮಿಕೆಯಲ್ಲಿರುವ ನಾಯಕ, ನಾಯಕಿ ಹಾಗೂ ನಟ, ನಟಿಯರು ಸೇರಿದಂತೆ ಇತರರು ಹೆಚ್ಚಿನ ಸಂಭಾವನೆ ಪಡೆಯುತ್ತಾರೆ. ಹೀಗೆ ಸಂಭಾವನೆ ಪಡೆಯುವ ಸೆಲೆಬ್ರೆಟಿಗಳು ತಮ್ಮ ಐಷಾರಾಮಿ ಕಾರು ಕಲೆಕ್ಷನ್‌ನಲ್ಲಿ ಹೊಸ ಹೊಸ ಕಾರುಗಳನ್ನು ಪಾರ್ಕ್ ಮಾಡುತ್ತಾರೆ. ಸ್ಟಾರ್ ಸೆಲೆಬ್ರೆಟಿಗಳು ಮರ್ಸಿಡೀಸ್ ಬೆಂಜ್ ಮೇಬ್ಯಾಚ್ GLS 600 ಕಾರಿನ ಹಿಂದೆ ಬಿದ್ದಾರೆ. ರಣವೀರ್ ಸಿಂಗ್(Ranveer Singh ) ಸೇರಿದಂತೆ ಪ್ರಮುಖ ಸೆಲೆಬ್ರೆಟಿಗಳು ಕಾರು ಖರೀದಿಸಿದ್ದಾರೆ.

Tap to resize

Latest Videos

undefined

Lamborghini ನಂತರ ದುಬಾರಿ Mercedes Maybach GLS 600 ಖರೀದಿಸಿದ ರಣವೀರ್

2021ರ ಜುಲೈ ತಿಂಗಳಲ್ಲಿ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಮರ್ಸಿಡೀಸ್ ಬೆಂಜ್ ಮೇಬ್ಯಾಚ್ GLS 600  ಕಾರು ಖರೀದಿಸಿದ್ದರು. ಜುಲೈನಲ್ಲಿ ಕೆಲ ಬಾರಿ ತಮ್ಮ ನೂತನ ಕಾರಿನಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದರು. ವರದಿಗಳ ಪ್ರಕಾರ ರಣವೀರ್ ಸಿಂಗ್ ತಮ್ಮ ಹುಟ್ಟುಹಬ್ಬಕ್ಕೆ ಈ ಕಾರನ್ನು ಖರೀದಿಸಿದ್ದಾರೆ. ರಣವೀರ್ ಸಿಂಗ್ ಬಳಿಕ ಆಯುಷ್ಮಾನ್ ಖುರಾನ ಮರ್ಸಿಡೀಸ್ ಬೆಂಜ್ ಮೇಬ್ಯಾಚ್ GLS 600 ಕಾರು ಖರೀದಿಸಿ ಸುದ್ದಿಯಾಗಿದ್ದರು. ರಣವೀರ್ ಸಿಂಗ್ ಜೊತೆ ಮರ್ಸಿಡೀಸ್ ಬೆಂಜ್ ಮೇಬ್ಯಾಚ್ GLS 600 ಕಾರಿನಲ್ಲಿ ಜಾಲಿ ರೈಡ್ ಹೋದ ಅರ್ಜುನ್ ಕಪೂರ್ ಅಷ್ಟೇ ವೇಗದಲ್ಲಿ ತಮ್ಮ ಕಾರು ಸಂಗ್ರಹಕ್ಕೆ ನೂತನ ಮರ್ಸಿಡೀಸ್ ಬೆಂಜ್ ಮೇಬ್ಯಾಚ್ GLS 600 ಕಾರು ಸೇರಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಮಿಮಿ ಚಿತ್ರ ಸೂಪರ್ ಹಿಟ್ ಆಗುತ್ತಿದ್ದಂತೆ ಕೃತಿ ಸನನ್ ನೇರವಾಗಿ ಮರ್ಸಿಡೀಸ್ ಬೆಂಜ್ ಮೇಬ್ಯಾಚ್ GLS 600 ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. 

ಮಿಮಿ ಸಕ್ಸಸ್ ಬೆನ್ನಲ್ಲೇ ದುಬಾರಿ ಮರ್ಸಿಡಿಸ್ ಕಾರು ಖರೀದಿಸಿದ ಕೃತಿ

ಸ್ಟಾರ್ ಸೆಲೆಬ್ರೆಟಿಗಳ ಜೊತೆಗೆ ಕೆಲ ಬಾಲಿವುಡ್ ಇಂಡಸ್ಟ್ರಿಯ ಟೆಕ್ನಿಷಿಯನ್, ಆರ್ಟ್ ಡೈರೆಕ್ಟರ್ ಸೇರಿದಂತೆ ಇತರ ಕೆಲವರು ಮರ್ಸಿಡೀಸ್ ಬೆಂಜ್ ಮೇಬ್ಯಾಚ್ GLS 600 ಕಾರು ಖರೀದಿಸಿದ್ದಾರೆ. 2021ರಲ್ಲಿ ಮರ್ಸಿಡೀಸ್ ಬೆಂಜ್ ಮೇಬ್ಯಾಚ್ GLS 600 ಕಾರು ಬಾಲಿವುಡ್ ಸೆಲೆಬ್ರೆಟಿಗಳನ್ನು ಹೆಚ್ಚು ಮೋಡಿ ಮಾಡಿದೆ. ಇದಾದ ಬಳಿಕ ನಂತರದ ಸ್ಥಾನದಲ್ಲಿ ಲ್ಯಾಂಬೋರ್ಗಿನಿ ಉರುಸ್ ವಿರಾಜಮಾನವಾಗಿದೆ. 

ಪತ್ನಿ ಬರ್ತ್‌ಡೇಗೆ ಕೋಟಿ ಬೆಲೆಯ ಮರ್ಸಿಡಿಸ್ ಗಿಫ್ಟ್ ಕೊಟ್ಟ ಅನಿಲ್ ಕಪೂರ್

ಲ್ಯಾಂಬೋರ್ಗಿನಿ ಉರುಸ್ ಕಾರಿನ ಬೆಲೆ 3.10 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). 2021ರಲ್ಲಿ ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಲ್ಯಾಂಬೋರ್ಗಿನಿ ಉರುಸ್ ಕಾರು ಖರೀದಿಸಿದ್ದಾರೆ. ಇದರ ಬೆನ್ನಲ್ಲೇ ರಣವೀರ್ ಸಿಂಗ್ ಲ್ಯಾಂಬೋರ್ಗಿನಿ ಉರುಸ್ ಕಾರು ಖರೀದಿಸಿದ್ದಾರೆ. ಇದು ರಣವೀರ್ ಸಿಂಗ್ ಎರಡನೇ ಉರುಸ್ ಕಾರು. ಆರೇಂಜ್ ಕಲರ್ ಲ್ಯಾಂಬೋರ್ಗಿನಿ ಉರುಸ್ ಕಾರು ಖರೀದಿಸಿದ್ದಾರೆ. ಈ ಬಣ್ಣಕ್ಕಾಗಿ ರಣವೀರ್ ಸಿಂಗ್ 28 ಲಕ್ಷ ರೂಪಾಯಿ ಹೆಚ್ಚುವರಿ ನೀಡಿ ಖರೀದಿಸಿದ್ದಾರೆ.  ಇನ್ನು ಬಾಲಿವುಡ್ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಕೂಡ ಲ್ಯಾಂಬೋರ್ಗಿನಿ ಉರುಸ್ ಕಾರು ಖರೀದಿಸಿದ್ದಾರೆ. ಬಾಲಿವುಡ್ ಹೊರತು ಪಡಿಸಿದರೆ ದಕ್ಷಿಣ ಭಾರತದ ಸೆಲೆಬ್ರೆಟಿಗಳು ಲ್ಯಾಂಬೋರ್ಗಿನಿ ಉರುಸ್ ಕಾರು ಖರೀದಿಸಿದ್ದಾರೆ. ಈ ಪಟ್ಟಿಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸ್ಥಾನ ಪಡೆದಿದ್ದಾರೆ.

click me!