Automobile Price Hike: 2023ರವರೆಗೆ ಆಟೊಮೊಬೈಲ್‌ ದರದ ಏರಿಕೆ ಮುಂದುವರಿಕೆ

Suvarna News   | Asianet News
Published : Dec 13, 2021, 01:38 PM ISTUpdated : Dec 13, 2021, 02:31 PM IST
Automobile Price Hike: 2023ರವರೆಗೆ ಆಟೊಮೊಬೈಲ್‌ ದರದ ಏರಿಕೆ ಮುಂದುವರಿಕೆ

ಸಾರಾಂಶ

ಮುಂದಿನ ವರ್ಷವೂ ಕಾರುಗಳ ಬೆಲೆ ಏರಿಕೆ ಪ್ರವೃತ್ತಿ ಮುಂದುವರಿಕೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ, ಚಿಪ್‌ ಕೊರತೆಯಿಂದ ಉತ್ಪಾದನೆ ವಿಳಂಬ. ದೇಶೀಯ ಉತ್ಪಾದನೆಯ ಮೊರೆ ಹೋಗಲು ಶಿಫಾರಸು  

ಕಚ್ಚಾ ವಸ್ತುಗಳ ಬೆಲೆ ಏರಿಕೆ, ಕೋವಿಡ್‌ ಸಾಂಕ್ರಾಮಿಕ ಮತ್ತು ಜಾಗತಿಕ ಸೆಮಿಕಂಡಕ್ಟರ್‌ ಕೊರತೆಯ ಸಮಸ್ಯೆಯಿಂದ ಆಟೊ ತಯಾರಕರು ಬೇಡಿಕೆಗೆ ತಕ್ಕಂತೆ ವಾಹನಗಳನ್ನು ಉತ್ಪಾದಿಸಲು ತೊಂದರೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಟೊಮೊಬೈಲ್‌ ದರಗಳು  ಸದ್ಯಕ್ಕಂತೂ ಕಡಿಮೆಯಾಗುವ ನಿರೀಕ್ಷೆಗಳಿಲ್ಲ ಎಂದು ವರದಿ ತಿಳಿಸಿದೆ. "ಈ ಬೆಲೆ ಏರಿಕೆ  ಪ್ರಕ್ರಿಯೆ ಮುಂದಿನ ವರ್ಷವೂ ಮುಂದುವರಿಯುವ ಸಾಧ್ಯತೆಯಿದೆ ಮತ್ತು 2023 ರವರೆಗೆ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾಣದೆ ಇರಬಹುದು ಎಂದು ನಿರೀಕ್ಷಿಸಲಾಗುತ್ತಿದೆ” ಎಂದು ವರದಿ ಹೇಳಿದೆ. ಇದಲ್ಲದೆ, ಸೆಮಿಕಂಡಕ್ಟರ್ (Semi- conductor) ಕೊರತೆಯಂತಹ ಸಮಸ್ಯೆಗಳು ವಾಹನ ತಯಾರಕರಿಗೆ ಸಮಸ್ಯೆಗಳನ್ನು ಉಲ್ಬಣಗೊಳಿಸಿದೆ.

ದೇಶೀಯ (Indiginous) ಉತ್ಪಾದನೆಗೆ ಒತ್ತು:
ಸೆಮಿ ಕಂಡಕ್ಟರ್‌ ಹಾಗೂ ಚಿಪ್‌ ಕೊರತೆಯ ಸಮಸ್ಯೆಗಳನ್ನು ಪರಿಹರಿಸಲು ಕಾರು ಉತ್ಪಾದಕ ಕಂಪನಿಗಳು (Company) ದೇಶೀಯ ಉತ್ಪಾದನೆ ಹಾಗೂ ದೇಶಿಯ ಕಚ್ಚಾ (Raw) ವಸ್ತುಗಳ ಮೊರೆ ಹೋಗುವುದು ಉತ್ತಮ ಎಂದು ವರದಿ ಸಲಹೆ ನೀಡಿದೆ.

ಸೆಮಿಕಂಡಕ್ಟರ್ (Semi Conductor) ಅಗತ್ಯಗಳನ್ನು ಪೂರೈಸಲು ದೇಶೀಯ ಉತ್ಪಾದನೆಯನ್ನು ಅವಲಂಬಿಸುವುದು ಸೂಕ್ತ. ಆದರೆ, ದೇಶದಲ್ಲಿ ಚಿಪ್‌ಗಳು(Chip) ತಯಾರಾಗುವವರೆಗೆ ಆಟೊಮೊಬೈಲ್‌ ತಯಾರಕರು ಕಾಯಬೇಕಾಗಬಹುದು. ಸದ್ಯಕ್ಕೆ, ಸೆಮಿಕಂಡಕ್ಟರ್ ವಲಯದಲ್ಲಿ ದೇಶ ಅದರ ಜೋಡಣೆ, (Assemble) ತಪಾಸಣೆ, (Testing) ಮಾರ್ಕಿಂಗ್ (Marking) ಮತ್ತು ಪ್ಯಾಕೇಜಿಂಗ್ (packaging) (ಎಟಿಎಂಪಿ) (ATMP) ಮತ್ತು ವಿಶೇಷ ಸೌಲಭ್ಯಗಳ ಅಳವಡಿಕೆಯತ್ತ ಗಮನ ಹರಿಸಿದೆ.

ಅದಲ್ಲದೆ, ಸ್ವಾವಲಂಬಿ ಆರ್ಥಿಕತೆ ಹೊಂದಲು ಕೇಂದ್ರ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳು ಹಾಗೂ ಉತ್ಪಾದನಾ ಪೂರಕ ಕೊಡುಗೆಗಳು (ಪಿಎಲ್‌ಐ) (PLI) ಯೋಜನೆಗಳ ಆಧಾರದ ಮೇಲೆ ಭಾರತದ ಆಟೊಮೊಬೈಲ್‌ ಮತ್ತು ಉತ್ಪಾದನಾ ವಲಯ ಪ್ರಸ್ತುದ ವರ್ಷದ ಎಫ್‌ಡಿಐ(FDII)ಗೆ ಬಹುದೊಡ್ಡ ಕೊಡುಗೆ ನೀಡುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.

ಇನ್ಮುಂದೆ ಬೆಂಗಳೂರಿನ ರಸ್ತೆಗೆ ಇಳಿಯಲಿವೆ ಮೀಟರ್ ಟ್ಯಾಕ್ಸಿ

ಈ ಯೋಜನೆಯಲ್ಲಿ ದೇಶೀಯ ಆಟೊಮೊಬೈಲ್‌ ಉತ್ಪಾದನೆಗಳಿಗೆ ಹಣಕಾಸಿನ (Incentives) ನೆರವು ನೀಡುವ ಕಾರ್ಯಕ್ರಮಗಳನ್ನು ಒಳಗೊಂಡಿದೆ ಮತ್ತು ಇದು ರಫ್ತು (Export)ಹೆಚ್ಚಿಸುವ ಗುರಿಯನ್ನು ಕೂಡ ಹೊಂದಿದೆ.

ಒಂದೆಡೆ ಮಾರುಕಟ್ಟೆಗೆ ಕೈಗೆಟಕುವ ದರದ ಕಾರುಗಳನ್ನು ಬಿಡುಗಡೆಗೊಳಿಸುವುದಾಗಿ ಹೇಳಿಕೆ ನಿಡುತ್ತಿರುವ ಕಾರು ತಯಾರಕ ಕಂಪನಿಗಳು ಅದರ ಬೆನ್ನಲ್ಲೇ ಹಂತಹಂತವಾಗಿ ಕಾರಿನ ದರಗಳನ್ನು ಹೆಚ್ಚಿಸುತ್ತಿವೆ. ದೇಶದ ಜನಸಾಮಾನ್ಯರ ಪ್ರಯಾಣಿಕ ವಾಹನ ಬ್ರ್ಯಾಂಡ್‌ಗಳಾಗಿರುವ ಮಾರುತಿ ಸುಜುಕಿ,( Maruti Suzuki) ಹ್ಯುಂಡೈ (Hyundai) ಸೇರಿದಂತೆ ಆಡಿ,(Audi) ಮರ್ಸಿಡಿಸ್‌ನಂತಹ (Mersidez) ಐಷಾರಾಮಿ ಕಾರುಗಳು ಕೂಡ ಹೊಸ ವರ್ಷದ ಆರಂಭದಲ್ಲಿ ದರ ಏರಿಕೆಯ ಸುಳಿವು ನೀಡಿದೆ. ಈ ಹಿನ್ನೆಲೆಯಲ್ಲಿ ಹಲವು ಕಾರು ಕಂಪನಿಗಳು ವರ್ಷಾಂತ್ಯದಲ್ಲಿ ಮಾರುಕಟ್ಟೆಯಲ್ಲಿರುವ (Market) ವಾಹನಗಳ ಮಾರಾಟಕ್ಕೆ ಅನೇಕ ಕೊಡುಗೆಗಳನ್ನು ನೀಡುತ್ತಿದೆ.

ಎಲೆಕ್ಟ್ರಿಕ್ ವೆಹಿಕಲ್ ಸೇಲ್ಸ್‌ನಲ್ಲಿ ಯುಪಿಯದ್ದೇ ಮೈಲುಗೈ

ಆಟೋಮೊಬೈಲ್ ಕ್ಷೇತ್ರದಲ್ಲಿ (Automobile Sector) ಯಾವುದೇ ರೀತಿಯ ಸೇಲ್ಸ್ ಇಲ್ಲ. ದಿನದಿಂದ ದಿನಕ್ಕೆ ಉತ್ಪಾದನೆ (Prodcution) ಕುಂಠಿತಗೊಳ್ಳುತ್ತಿದೆ, ಎಂಬೆಲ್ಲಾ ವರದಿಗಳ ಬೆನ್ನಲ್ಲೇ ಇದೀಗ ಈ ಕ್ಷೇತ್ರ ಸಾಕಷ್ಟು ಸುಧಾರಿಸಿಕೊಂಡಿದೆ. ಆದರೆ, ಚೀನಾದ (China) ಕೆಲವು ಆಟೋ ಪಾರ್ಟ್ಸ್ ಆಮದಿನಲ್ಲಿ ತೊಂದರೆ ಹಾಗೂ ದೇಸೀಯವಾಗಿ ಲಭ್ಯವಿಲ್ಲದ ಉತ್ಪನನ್ನಗಳಿಂದ ಕಾರು ಉತ್ಪಾದನೆ (Car Production) ಕುಂಠಿತವಾಗಿದೆ. ಅದಕ್ಕೆ ಕೆಲವು ಶ್ರೀ ಸಾಮಾನ್ಯರಿಗೆ ಎಟಕುವಂಥ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದರೂ, ನಿಗದಿತ ಸಮಯದಲ್ಲಿ ಪೂರೈಸಲು ಆಟೋ ಕಂಪನಿಗಳು (Auto Companies) ಒದ್ದಾಡುತ್ತಿವೆ. ಇದಕ್ಕೊಂದು ಸೂಕ್ತವೇ ಪರಿಹಾರ ತೆಗೆದುಕೊಳ್ಳದಿದ್ದರೆ ಬರುವ ದಿನಗಳು ಮತ್ತೆ ಈ ಕ್ಷೇತ್ರ ಸಂಕಟ ಅನುಭವಿಸುವಂತಾಗಬಹುದು ಎಂಬುವುದು ಹಲವರ ಅಭಿಪ್ರಾಯ. 

ಕಳೆದೊಂದು ವರ್ಷದಲ್ಲಿ ಆಟೊಮೊಬೈಲ್‌ ತಯಾರಕರು (Automobile manufacturers) ಪದೆ ಪದೇ ತಮ್ಮ ವಾಹನಗಳ ಬೆಲೆಗಳನ್ನು ಏರಿಸಿವೆ. ಇದು ಕೋವಿಡ್‌ ಸಾಂಕ್ರಾಮಿಕದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಷ್ಟಲ್ಲದೆ, ಅನೇಕ ಕಂಪನಿಗಳು ಹೊಸ ವರ್ಷದ ಆರಂಭದಲ್ಲಿ ಮತ್ತೊಂದು ಸುತ್ತಿನ ಬೆಲೆ ಏರಿಕೆಯನ್ನು ಘೋಷಿಸಿವೆ. ಇದೇ ಪ್ರವೃತ್ತಿ 2022 ರಲ್ಲಿ ಕೂಡ ಮುಂದುವರಿಯಲಿದೆ ಮತ್ತು 2023ರವರೆಗೂ ಯಾವುದೇ ದರದ ಇಳಿಕೆ ಅಥವಾ ಸ್ಥಿರತೆ ನಿರೀಕ್ಷಿಸಲು ಕಷ್ಟಸಾಧ್ಯ ಎಂದು ಗ್ರಾಂಟ್ (Grant) ಥಾರ್ನ್‌ಟನ್ (Tharnton)  ಭಾರತ್ (Bharath) ವರದಿ ತಿಳಿಸಿದೆ  ಇತ್ತೀಚೆಗೆ ಭಾರತದ ಹೆಚ್ಚುತ್ತಿರುವ ಸರಕುಗಳ ಬೆಲೆ ದೇಶದಲ್ಲಿ ಹೊಸ ಮತ್ತು ಬಳಸಿದ ವಾಹನಗಳಿಗೆ ದಾಖಲೆಯ-ಹೆಚ್ಚಿನ ಬೆಲೆ ಏರಿಕೆಗೆ ಕಾರಣವಾಗಿದೆ.

PREV
Read more Articles on
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್