ಕ್ರೆಟಾ, ಸೆಲ್ತೋಸ್‌ಗೆ ಟಕ್ಕರ್ ಕೊಡಲು ಬರ್ತಿದೆ ವೋಕ್ಸ್‌ವಾಗನ್‌ ‘ಟಿಗ್ವಾನ್’ ಎಸ್‌ಯುವಿ

By Suvarna News  |  First Published Apr 1, 2021, 10:31 AM IST

ಜರ್ಮನ್ ಮೂಲದ ವೋಕ್ಸ್‌ವ್ಯಾಗನ್‌ ಕಂಪನಿಯು ತನ್ನ ನೂತನ ಕಾಂಪಾಕ್ಟ್ ಎಸ್‌ಯುವಿ ಟಿಗ್ವಾನ್ ಅನ್ನು ಭಾರತದಲ್ಲಿ ಲಾಂಚ್ ಮಾಡಲು ಮುಂದಾಗಿದೆ. ಈ ಕಾರು ಆಟೋ ಎಕ್ಸ್‌ಪೋ 2020 ಪ್ರದರ್ಶನಗೊಂಡಿತ್ತು. ಅಂದಿನಿಂದಲೂ ಈ ಎಸ್‌ಯುವಿ ಬಗ್ಗೆ ಸಖತ್ ಟಾಕ್ ಇತ್ತು ಮತ್ತು ಬಹಳಷ್ಟು ನಿರೀಕ್ಷೆಗಳಿದ್ದವು. ಇದೀಗ ಕಂಪನಿಯು ಈ ಎಸ್‌ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದೆ.


ಜರ್ಮನ್ ಮೂಲದ ವೋಕ್ಸ್‌ವಾಗನ್‌ ಕಂಪನಿ ತನ್ನ ನೂತನ ಕಾಂಪಾಕ್ಟ್ ಎಸ್‌ಯುವಿ ಟಿಗ್ವಾನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಎಸ್‌ಯುವಿ ವಿಶೇಷತೆಗಳನ್ನು ಬಹಿರಂಗಗೊಳಿಸಿದೆ.  ಈ ಎಸ್‌ಯುವಿ ಲುಕ್ ಆಕರ್ಷಕವಾಗಿದೆ. ಬಳಸಲಾಗಿರುವ ಎಂಜಿನ್, ಇತರ ಫೀಚರ್‌ಗಳ ಬಗ್ಗೆ ಗ್ರಾಹಕರಲ್ಲಿ ವಿಶೇಷ ಆಸಕ್ತಿಗಳಿವೆ ಮತ್ತು ಕುತೂಹಲವೂ ಇದೆ. ಹಾಗಾಗಿ, ಕಂಪನಿ ಈ ಕಾರಿಗೆ ಸಂಬಂಧಿಸಿದ ಬಹುತೇಕ ಮಾಹಿತಿಯನ್ನು ಬಹಿರಂಗಗೊಳಿಸಿದೆ.

ಸ್ಮಾರ್ಟ್‌ಫೋನ್ ಆಯ್ತು, ಇನ್ನು ಶಿಯೋಮಿಯಿಂದಲೂ ಎಲೆಕ್ಟ್ರಿಕ್ ವೆಹಿಕಲ್?

Tap to resize

Latest Videos

undefined

ಈಗಾಗಲೇ ಗೊತ್ತಿರುವಂತೆ ವೋಕ್ಸ್‌ವಾಗೆನ್ ಎಂಕ್ಯೂಬಿ ಎ0 ಐಎನ್ ಪ್ಲಾರ್ಟ್‌ಫಾರ್ಮ್‌ ಆಧರಿತವಾಗಿದೆ. ಭಾರತಕ್ಕೆ ಬರುತ್ತಿರುವ ಕಾರುಗಳು ಪೈಕಿ ಈ ಪ್ಲಾಟ್‌ಫಾರ್ಮ್ ಆಧರಿತ ಮೊದಲ ಕಾರ್ ಇದಾಗಿದೆ. ಈಗಾಗಲೇ ಭಾರತದಲ್ಲಿ ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್ ಹೆಚ್ಚು ಜನಪ್ರಿಯವಾಗುತ್ತಿದೆ. ಈ ಸೆಗ್ಮೆಂಟ್‌ನಲ್ಲಿ ಹುಂಡೈ ಕಂಪನಿಯ ಕ್ರೆಟಾ ಮತ್ತು ಕಿಯಾ ಕಂಪನಿಯ ಸೆಲ್ತೋಸ್ ಹೆಚ್ಚು ಪ್ರಭಾವಿಯಾಗಿವೆ. ವೋಕ್ಸ್ ವ್ಯಾಗನ್ ಈ ಟಿಗ್ವಾನ್ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ಮೂಲಕ ಹುಂಡೈನ ಕ್ರೆಟ್ ಮತ್ತು ಕಿಯಾ ಸೆಲ್ತೋಸ್‌ಗೆ ತೀವ್ರ ಸ್ಪರ್ಧೆಯನ್ನು ಒಡ್ಡುವ ಲಕ್ಷಣಗಳಿವೆ.

ವೋಕ್ಸ್‌ವಾಗನ್‌ ಸುಮಾರು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿದೆ. ಆದರೆ, ಈ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವಲ್ಲಿ ಸಾಧ್ಯವಾಗಿಲ್ಲ. ಜಗತ್ತಿನ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ವೋಕ್ಸ್‌ವಾಗನ್ ಭಾರತದಲ್ಲಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ಕಂಪನಿ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಪೋಲೋ ಹ್ಯಾಚ್‌ಬ್ಯಾಕ್‌ನಿಂದ ಟಿಗ್ವಾನ್ ಎಸ್‌ಯುವಿವರೆಗೂ ಹಲ ವ್ಯಾಪ್ತಿಯ ಕಾರುಗಳನ್ನು ಹೊಂದಿದೆ. ಆದರೆ, ಸಾಕಷ್ಟು ಪೈಪೋಟಿ ನೀಡಲು ಸಾಧ್ಯವಾಗಿಲ್ಲ. ಹಾಗಾಗಿ, ಕಂಪನಿಯ ಈ ಟಿಗ್ವಾನ್ ಮೂಲಕ ಮಾರುಕಟ್ಟೆಯಲ್ಲಿ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

 

ಈ ಕಾರಿನ ವಿನ್ಯಾಸಕ್ಕೆ ಬಗ್ಗೆ ಹೇಳುವುದಾದರೆ ಟಿಗ್ವಾನ್ ಮತ್ತು ಟಿ-ರಾಕ್ ಮಧ್ಯೆ ಸಾಕಷ್ಟು ಸಾಮ್ಯತೆಗಳಿರುವುದನ್ನು ಕಾಣಬಹುದು. ಎಲ್ಇಡಿ ಹೆಡ್‌ಲೈಟ್ಸ್ ಮತ್ತು ಎಲ್ಇಡಿ ಆರ್‌ಎಲ್‌ಗಳು ಆಕರ್ಷಕವಾಗಿವೆ. 17-ಇಂಚ್ ಡುಯಲ್ ಟೋನ್ ಅಲಾಯ್ ವ್ಹೀಲ್‌ಗಳ ಮೇಲೆ ವಿಸ್ತಾರವಾದ ಕಮಾನಗಳನ್ನು ಕಾಣಬಹುದು. ಕ್ರೋಮ್ ಡೋರ್ ಹ್ಯಾಂಡಲ್ಸ್, ಸಿಲ್ವರ್ ರೂಫ್ ರೇಲ್ಸ್ ಮತ್ತು ಬ್ಲಾಕ್ಡ್ ಔಟ್ ಬಿ ಪಿಲ್ಲರ್‌ಗಳು ಗಮನ ಸೆಳೆಯುತ್ತವೆ.

ಜಬರ್ದಸ್ತ್ ಪ್ರಿಮಿಯಂ ಬೈಕ್ ಟ್ರಯಂಫ್ ಟ್ರೈಡೆಂಟ್ ರೆಸ್ತೆಗಿಳಿಯಲು ಸಜ್ಜು

ಸ್ಕೋಡಾ ಕಂಪನಿ ಕುಶ್ಕ್‌ ಕಾರ್ ನಿರ್ಮಾಣವಾಗುವ ಎಂಕ್ಯೂಬಿ ಎಒ ಐಎನ್ ಪ್ಲಾಟ್‌ಫಾರ್ಮ್‌ನಲ್ಲಿ ಈ ವೋಕ್ಸ್‌ವಾಗನ್‌ನ ಟಿಗ್ವಾನ ಕೂಡ  ಸಿದ್ಧವಾಗುತ್ತದೆ. ಹಾಗಾಗಿ, ಟಿಗ್ವಾನ್ ಎಸ್‌ವಿಯಲ್ಲಿ ನೀವು ಹೆಚ್ಚಿನ  ಜಾಗವನ್ನು ಕಾಣಬಹುದು ಎಂದು ಕಂಪನಿ ಹೇಳಿಕೊಂಡಿದೆ. ಈ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಅತಿ ಹೆಚ್ಚು ಎನ್ನಬಹುದಾದಷ್ಟು 2,651 ಎಂಎಂ ವ್ಹೀಲ್ ಬೇಸ್ ಒದಗಿಸಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡದೆ.

ಈ ಟಿಗ್ವಾನ್‌ ಒಳಾಂಗಣ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಇಲ್ಲ. ಈಗ ಕಂಪನಿ ಹೊರಮೈ ವಿನ್ಯಾಸದ ಬಗ್ಗೆಯಷ್ಟೇ ಮಾಹಿತಿ ಗೊತ್ತಾಗುವಂತೆ ಮಾಡಿದೆ. ಪ್ರೀಮಿಯಂ ಡಿಜಿಟಲ್ ಕಾಕ್‌ಪಿಟ್ ಇದ್ದು, ಇಲ್ಲಿ 10.1 ಇಂಚ್ ಇನ್ಫೋಟೈನ್‌ಮೆಂಟ್  ಟಚ್‌ಸ್ಕ್ರೀನ್‌ ಇದ್ದು, ಇದು ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಸಪೋರ್ಟ್ ಮಾಡುತ್ತದೆ. ಜೊತೆಗೆ 10.2 ಇಂಚ್ ಡಿಜಿಟಲ್ ಇನ್ಸುಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟ್ಸ್, ವಾತಾನುಕೂಲಿ ಸೀಟ್‌ಗಳು ಗಮನ ಸೆಳೆಯುತ್ತವೆ.

ಈ ಎಸ್‌ಯುವಿಯಲ್ಲಿ 1.0 ಲೀಟರ್ 3 ಸಿಲೆಂಡರ್‌ಗಳ ಎಂಜಿನ್ ಇರಲಿದ್ದು ಟರ್ಬೋಚಾರ್ಜ್ಡ್‌ಗೂ ಬೆಂಬಲ ನೀಡಲಿದೆ. ಇಷ್ಟು ಮಾತ್ರವಲ್ಲದೇ ಈ ಟಿಗ್ವಾನ್ ಟರ್ಬೋಚಾರ್ಜ್ಡ್ 1.5 ಲೀ. 4  ಸಿಲೆಂಡರ್ ಎಂಜಿನ್‌ ವರ್ಷನ್‌ನಲ್ಲೂ ಸಿಗಲಿದೆ. 1.0 ಲೀ. ಎಂಜಿನ್ ನಿಮಗೆ 115 ಪಿಎಸ್ ಪವರ್ ಹಾಗೂ 175 ನ್ಯೂಟನ್ ಮೀಟರ್  ಟಾರ್ಕ್ ಪವರ್ ಉತ್ಪಾದಿಸುತ್ತದೆ. ಹಾಗೆಯೇ 1.5 ಲೀಟರ್ ಎಂಜಿನ್ ನಿಮಗೆ 150 ಪಿಎಸ್ ಪವರ್ ಮತ್ತು 250 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡ್ ಟ್ರಾನ್ಸಿಮಿಷನ್ ಇರಲಿದೆ. ಆದರೆ, 1.5 ಲೀಟರ್ ಎಂಜಿನ್ ವರ್ಷನ್‌ನಲ್ಲಿ ಗ್ರಾಹಕರು ಆಪ್ಷನಲ್ ಆಗಿ 7 ಸ್ಪೀಡ್ ಡಿಎಸ್‌ಜಿ ಆಟೋಮೆಟಿಕ್ ಗಿಯರ್ ಬಾಕ್ಸ್ ಫೀಚರ್ ಪಡೆಯಲಿದ್ದಾರೆ.

ಜಗತ್ತಿನ ಅತ್ಯಂತ ಡೇಂಜರಸ್ ರಸ್ತೆಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ನಂ.1

ಟಿಗ್ವಾನ್ ಎಂಜಿನ್ ಮತ್ತು ವಿನ್ಯಾಸವನ್ನು ವಿಶ್ಲೇಷಿಸಿದರೆ ಇದೊಂದು ಪ್ರೀಮಿಯಂ ಕಾಂಪಾಕ್ಟ್ ಎಸ್‌ಯುವಿ ಎಂಬುದರಲ್ಲ ಯಾವುದೇ ಅನುಮಾನವಿಲ್ಲ. 10ರಿಂದ 18 ಲಕ್ಷ ರೂಪಾಯಿ ಮಧ್ಯೆ ಈ ಟಿಗ್ವಾನ್ ಮಾಡೆಲ್‌ಗಳು ಮಾರಾಟಕ್ಕೆ ದೊರೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

 

click me!