800KM ಮೈಲೇಜ್, 5G ಕನೆಕ್ಷನ್; ಬರುತ್ತಿದೆ MG ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೂಪರ್ ಕಾರು!

By Suvarna NewsFirst Published Mar 27, 2021, 5:07 PM IST
Highlights

ಎಂಜಿ ಮೋಟಾರ್ಸ್ ಇದೀಗ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಇದು ಸೂಪರ್ ಕಾರಾಗಿದ್ದು,  ಸದ್ಯದ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಲು ಸಜ್ಜಾಗಿದೆ. ಬರೋಬ್ಬರಿ 800 ಕಿ.ಮೀ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳ ಮಾಹಿತಿ ಇಲ್ಲಿದೆ.
 

ನವದೆಹಲಿ(ಮಾ,27):  ಎಂಜಿ ಈಗಾಗಲೇ ಭಾರತದಲ್ಲಿ ZS ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಇದೀಗ ಸೂಪರ್ ಕಾರು ಬಿಡುಗಡೆ ಮಾಡುತ್ತಿದೆ. ಇದು ಎಲೆಕ್ಟ್ರಿಕ್ ಕಾರಾಗಿದ್ದು, ಮೈಲೇಜ್, ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. ಮಾರ್ಚ್ 31 ರಂದು ನೂತನ ಎಂಜಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಕಾರು ಅನಾವರಣಗೊಳ್ಳುತ್ತಿದೆ.

419 ಕಿ.ಮೀ ಮೈಲೇಜ್; ಹೊಸ MG ಮೋಟಾರ್ ZS ev ಎಲೆಕ್ಟ್ರಿಕ್ ಕಾರು ಬಿಡುಗಡೆ!

ಇಮೇಜ್ ಬಿಡುಗಡೆ ಮಾಡಿರುವ ಎಂಜಿ ಇದೀಗ ವಿಶ್ವದಲ್ಲೇ ಭಾರಿ ಸಂಚಲನ ಮೂಡಿಸಿದೆ. ಕಾರಣ ಎಂದಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೂಪರ್ ಕಾರು 100 ಕಿ.ಮೀ ವೇಗವನ್ನು ಕೇವಲ 3 ಸೆಕೆಂಡ್‌ನಲ್ಲಿ ತಲುಪಲಿದೆ. ಇನ್ನು ಒಂದು ಬಾರಿ ಚಾರ್ಜ್ ಮಾಡಿದರೆ 800 ಕಿಮೀ ಮೈಲೇಜ್ ನೀಡಲಿದೆ.

ಸದ್ಯ 500ರ ಆಸುಪಾಸು ಮೈಲೇಜ್ ನೀಡಬಲ್ಲ ಕಾರುಗಳು ಮಾರುಕಟ್ಟೆಯಲ್ಲಿವೆ. ವಿಶ್ವದ ಅತೀ ಜನಪ್ರಿಯ ಟೆಸ್ಲಾ ಕಾರುಗಳು ಗರಿಷ್ಠ ಮೇಲೇಜ್ ಹಾಗೂ ಅತ್ಯುತ್ತಮ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಟೆಸ್ಲಾ ಕಾರಿಗೆ ಪೈಪೋಟಿ ನೀಡಲು ಎಂಜಿ ಸಜ್ಜಾಗಿದೆ.

ಈ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ಹೊಸ ಸಂಚಲನ ಸಷ್ಟಿಸಲಿದೆ. ಕಾರಣ ಗರಿಷ್ಠ ಮೇಲೇಜ್, ಅತ್ಯಂತ ಆಕರ್ಷಕ ಲುಕ್ ಸೇರಿದಂತೆ ಹಲವು ಕಾರಣಗಳಿಂದ ಎಂಜಿ ಸೈಬರ್‌ಸ್ಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ

click me!