ಅಂತಾರಾಷ್ಟ್ರೀ ಚಾಲಕ ಸಂಘದ ಕಂಪನಿಯಾಗಿರು ಝುಟೋಬಿ ಅಧ್ಯಯನ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಜಗತ್ತಿನ ಅತ್ಯಂತ ಅಪಾಯಕಾರಿ ರಸ್ತೆಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲನೆಯ ಸ್ಥಾನದಲ್ಲಿದೆ. ಭಾರತ ನಾಲ್ಕನೇ ಸ್ಥಾನದಲ್ಲಿದೆ. ಹಾಗೆಯೇ, ಅತ್ಯಂತ ಸುರಕ್ಷಿತ ರಸ್ತೆಗಳ ಪಟ್ಟಿಯಲ್ಲಿ ನಾರ್ವೇ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ.
ರಸ್ತೆ ಪ್ರಯಾಣ ಸುರಕ್ಷಿತವಾಗಿರಬೇಕೆಂದರೆ ಏನೇನು ಚೆನ್ನಾಗಿರಬೇಕು, ರಸ್ತೆ, ವಾಹನ ಮತ್ತು ನುರಿತ ಚಾಲಕ. ಬಹುತೇಕ ಕಾಂಬಿನೇಷನ್ ಚೆನ್ನಾಗಿದ್ದರೆ ನಿಮ್ಮ ರಸ್ತೆ ಪ್ರಯಾಣ ಸುರಕ್ಷಿತವಾಗಿರುತ್ತದೆ. ಆದರೆ, ವಾಹನಗಳು ಓಡುವ ರಸ್ತೆಗಳೇ ಅಪಾಯಕಾರಿಯಾದರೆ... ಖಂಡಿತ ಅಪಘಾತ ತಪ್ಪಿದ್ದಲ್ಲ. ಅಂದರೆ, ಸುರಕ್ಷಿತ ಪ್ರಯಾಣಕ್ಕೆ ಗುಣಮಟ್ಟದ ರಸ್ತೆಗಳು, ಹೆಚ್ಚು ಅಪಾಯಕಾರಿಯಲ್ಲದ ರಸ್ತೆಗಳೂ ಪ್ರಮುಖವಾಗುತ್ತವೆ.
ಹಾಗಾದರೆ, ಭಾರತೀಯರ ಆದ ನಾವು ನಮ್ಮ ರಸ್ತೆಗಳನ್ನು ನೋಡಿ, ಹೆಚ್ಚು ಡೇಂಜರಸ್ ಎಂದು ಭಾವಿಸಿಕೊಂಡಿರುತ್ತೇವೆ. ಆದರೆ, ನಿಮ್ಮ ಊಹೆ ತಪ್ಪು. ಜಗತ್ತಿನಲ್ಲೇ ಅತಿ ಹೆಚ್ಚು ಡೇಂಜರಸ್ ರಸ್ತೆಗಳು ಇರುವುದು ದಕ್ಷಿಣ ಆಫ್ರಿಕಾದಲ್ಲಿ!
undefined
4.10 ಕೋಟಿ ರೂ. ಬೆಲೆಯ ಬೆಂಟಗಾ ಐಷಾರಾಮಿ ಎಸ್‌ಯುವಿ ಭಾರತದಲ್ಲಿ ಬಿಡುಗಡೆ
ಅಂತಾರಾಷ್ಟ್ರೀಯ ಚಾಲಕರ ಸಂಘವಾಗಿರುವ ಝುಟೋಬಿ ಇತ್ತೀಚೆಗೆ ಸಂಶೋಧನಾ ಅಧ್ಯಯನವನ್ನು ಕೈಗೊಂಡು ವರದಿಯನ್ನು ಸಿದ್ಧಪಡಿಸಿದೆ. ಈ ವರದಿಯ ಪ್ರಕಾರ, ವಾಹನ ಚಾಲನೆಗೆ ದಕ್ಷಿಣ ಆಫ್ರಿಕಾ ಜಗತ್ತಿನ ನಂಬರ್ 1 ಡೇಂಜರಸ್ ರಸ್ತೆಗಳನ್ನು ಹೊಂದಿದೆ ದೇಶ ಎಂದು ಹೇಳಿದೆ. ಈ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ ಎಂಬುದಕ್ಕೆ ನಾವು ತುಸು ಖುಷಿಪಡೋಣ.
ಸಮೀಕ್ಷೆಯಲ್ಲಿ ಒಟ್ಟು 56 ದೇಶಗಳ ರಸ್ತೆ ಪ್ರಯಾಣವನ್ನು ಅಧ್ಯಯನಕ್ಕೆ ಪರಿಗಣಿಸಲಾಗಿದ್ದು, ಥಾಯ್ಲೆಂಡ್ ಎರಡು ಹಾಗೂ ಅಮೆರಿಕ ಮೂರನೇ ಸ್ಥಾನದಲ್ಲಿವೆ.
ಜಗತ್ತಿನ ನಂಬರ್ 1 ಸುರಕ್ಷಿತ ರಸ್ತೆಗಳು ನಿಮಗೆ ನಾರ್ವೇ ರಾಷ್ಟ್ರದಲ್ಲಿವೆ. ಸುರಕ್ಷಿತ ರಸ್ತೆಗಳ ಪಟ್ಟಿಯಲ್ಲಿ ನಾರ್ವೆಯ ನೆರೆಹೊರೆಯಾಗಿರುವ ಸ್ವಿಡನ್ ಮೂರನೇ ಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿ ಜಪಾನ್ ರಸ್ತೆಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಸ್ತೆ ಅಧ್ಯಯನಕ್ಕೆ ಸಂಬಂಧಿಸಿದಂತೆ ನಾವು ಪ್ರತಿ ದೇಶವನ್ನು ಐದು ಅಂಶಗಳ ಮೇಲೆ ವಿಶ್ಲೇಷಿಸಿದ್ದೇವೆ, ಎಲ್ಲಾ ಐದು ಅಂಶಗಳ ನಡುವೆ ಸರಾಸರಿ ಅಂತಿಮ ಸ್ಕೋರ್ ತೆಗೆದುಕೊಳ್ಳುವ ಮೊದಲು ಪ್ರತಿಯೊಬ್ಬರಿಗೂ ಪ್ರತಿ ಅಂಶಕ್ಕೆ ಹತ್ತರಲ್ಲಿ ಸಾಮಾನ್ಯ ಸ್ಕೋರ್ ನೀಡವ ಮೂಲಕ ರ್ಯಾಂಕ್ ಪಡೆದಿದ್ದೇವೆ ಎಂದು ಝುಟೋಬಿ ಹೇಳಿದೆ
ಪ್ರತಿ ಒಂದ ಲಕ್ಷ ಜನಸಂಖ್ಯೆಗೆ ರಸ್ತೆ ಸಂಚಾರ ಸಾವುಗಳು ಎಷ್ಟು ಸಂಭವಿಸಿವೆ, ಪ್ರಯಾಣಿಸುವಾಗ ವಾಹನದ ಮುಂಭಾಗದಲ್ಲಿ ಸೀಟ್-ಬೆಲ್ಟ್ ಬಳಸುವ ಕಾರು ಪ್ರಯಾಣಿಕರ ಶೇಕಡಾವಾರು ಸಂಖ್ಯೆ, ರಸ್ತೆ ಸಂಚಾರ ಸಾವಿನ ಪ್ರಮಾಣದಲ್ಲಿ ಅಲ್ಕೋಹಾಲ್ ಸೇವನೆಯಿಂದಾಗಿ ಸಂಭವಿಸಿದ ಸಾವುಗಳ ಪ್ರಮಾಣಗಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.
ಈ ಮೂರು ಸಂಗತಿಗಳ ಜತೆಗೆ ಈ ಅಂದಾಜಿಗೆ ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬಲ್ ಹೆಲ್ತ್ ಆಬ್ಸರ್ವೇಟರಿ ಡೇಟಾ ಮಾಹಿತಿ, ವಿವಿಧ ದೇಶಗಳಲ್ಲಿ ಮೋಟಾರು ಮಾರ್ಗ ಮತ್ತು ರಕ್ತದ ಆಲ್ಕೊಹಾಲ್ ಅಂಶ ನಿರ್ಬಂಧಗಳ ಗರಿಷ್ಠ ವೇಗ ಮಿತಿಯನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗಿದೆ.
ಪೆಟ್ರೋಲ್, ಡೀಸೆಲ್ ವಾಹನ ಯುಗ ಮುಕ್ತಾಯ? ಎಲೆಕ್ಟ್ರಿಕ್ ವಾಹನಗಳ ಭರಾಟೆ ಶುರು
ಆದರೆ, ಝುಟೋಬಿ ಕಂಡುಕೊಂಡ ಈ ಸಂಗತಿಗಳನ್ನು ಜಸ್ಟೀಸ್ ಪ್ರಾಜೆಕ್ಟ್ ದಕ್ಷಿಣ ಆಫ್ರಿಕಾ(ಜೆಪಿಎಸ್ಎ) ಪ್ರಶ್ನಿಸಿದೆ. ಇದೊಂದು ಎನ್‌ಜಿಒ ಆಗಿದ್ದು, ದಕ್ಷಿಣ ಆಫ್ರಿಕಾದಲ್ಲಿ ರಸ್ತೆಸಂಚಾರ ಕಾನೂನು ಸುಧಾರಣೆ ಮತ್ತು ಅವುಗಳ ಜಾರಿಯ ಕುರಿತು ಕೆಲಸ ಮಾಡುತ್ತದೆ.
ಜೆಪಿಎಸ್ಎ ಅಧ್ಯಕ್ಷ ಹಾವರ್ಡ್ ಡೆಮೋವಸ್ಕಿ ಅವರು ದಕ್ಷಿಣ ಆಫ್ರಿಕನ್ ಚಾಲಕರು ಕಳಪೆ ಎಂದು ಒಪ್ಪಿಕೊಳ್ಳುತ್ತಲೇ, ಝುಬೋಟಿ ಅಧ್ಯಯನಕ್ಕೆ ಹಳೆಯ ಅಂಕಿ-ಸಂಖ್ಯೆಗಳನ್ನು ಬಳಸಿಕೊಂಡಿದೆ ಎಂದು ಆಕ್ಷೇಪಿಸುತ್ತಾರೆ. ಹಾಗೆಯೇ, ದಕ್ಷಿಣಾ ಆಫ್ರಿಕಾವೊಂದೇ ಈ ಪಟ್ಟಿಯಲ್ಲಿ ಯಾಕೆ ಇರೋದು ಎಂದು ಡೆಮೋವಸ್ಕಿ ಅವರು ಪ್ರಶ್ನಿಸಿದ್ದಾರೆ.
ಜಗತ್ತಿನಲ್ಲೇ ಅತ್ಯಂತ ಕೆಟ್ಟ ರಸ್ತೆಗಳ ದೇಶ ಎಂದು ಆರೋಪಿಸುವುದು ನ್ಯಾಯಸಮ್ಮತ ಎನಿಸಿಕೊಳ್ಳುವುದಿಲ್ಲ. ಒಂದು ವೇಳೆ ನೀವು ಜಗತ್ತಿನಲ್ಲೇ ಅತಿ ಕೆಟ್ಟ ದೇಶ ಎಂಬ ಬಗ್ಗೆ ಮಾತನಾಡುವುದಾದರೆ ನೀವು ಸಮತೋಲನದ ನಡಿಗೆಯನ್ನು ಅನುಸರಿಸಬೇಕಾಗುತ್ತದೆ ಎಂದು ಡೆಮೋವಸ್ಕಿ ಅವರು ರೆಡಿಯೋ ಕೇಪ್ ಟಾಕ್‌ಗೆ ತಿಳಿಸಿದ್ದಾರೆ. ಡೇಂಜರಸ್ ರಸ್ತೆಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಎಂದು ಹೇಳಿದ್ದರಿಂದ ಅವರು ಈ ಸಂದರ್ಶನ ನೀಡಿದ್ದರು.
2021 ಕವಾಸಕಿ ನಿಂಜಾ ಜೆಡ್ಎಕ್ಸ್ 10 ಆರ್ ಬಿಡುಗಡೆ, ಬೆಲೆ ಬಗ್ಗೆ ಒಂದಿಷ್ಟು
ದಕ್ಷಿಣ ಆಫ್ರಿಕಾದ ಚಾಲಕರು ಆಘಾತಕಾರಿ ರಸ್ತೆ ಸುರಕ್ಷತಾ ದಾಖಲೆಯನ್ನು ಹೊಂದಿದ್ದಾರೆ. ಆ ಅಧ್ಯಯನದ ಮೇಲೆ ನಾನು ಹೆಚ್ಚು ನಂಬುವುದಿಲ್ಲದ್ದವಾದರಿಂದ ದಕ್ಷಿಣ ಆಫ್ರಿಕನ್ನರು ಅಪಾಯಕಾರಿ ಚಾಲಕರು ಮತ್ತು ಅಜಾಗರೂಕ ಚಾಲಕರು ಮತ್ತು ನಮ್ಮ ರಸ್ತೆಗಳಲ್ಲಿ ಇತರರ ಸುರಕ್ಷತೆಯ ಬಗ್ಗೆ ಬಹಳ ಕಡಿಮೆ ಕಾಳಜಿಯನ್ನು ಹೊಂದಿದ್ದಾರೆಂದು ತೋರಿಸಲು ಇನ್ನೂ ಸಾಕಷ್ಟು ಪುರಾವೆಗಳಿವೆ ಎಂದು ಅವರು ರೆಡಿಯೋ ಸಂದರ್ಶನದಲ್ಲಿ ತಿಳಿಸಿದ್ದಾರೆ.