Volkswagen Cars ಭಾರತದ 12 ವರ್ಷಗಳ ಪಯಣಕ್ಕೆ ಫುಲ್‌ಸ್ಟಾಪ್, ಉತ್ಪಾದನೆ ನಿಲ್ಲಿಸುತ್ತಿದೆ VW ಪೋಲೋ ಹಾಗೂ ವೆಂಟೋ!

By Suvarna News  |  First Published Feb 22, 2022, 8:00 PM IST
  • ವೋಕ್ಸ್‌ವ್ಯಾಗನ್ ಪೋಲೋ ಹಾಗೂ ವೆಂಟೋ ಕಾರಿನ ಮಾರಾಟ ಕುಸಿತ
  • ಎರಡು ಕಾರು ಉತ್ಪಾದನೆ ಸ್ಥಗಿತಗೊಳಿಸಲು ವೋಕ್ಸ್‌ವ್ಯಾಗನ್ ನಿರ್ಧಾರ
  • ಶೀಘ್ರದಲ್ಲೇ ಪೋಲೋ, ವೆಂಟೋ ಕಾರಿನ ಉತ್ಪಾದನೆ ಸ್ಥಗಿತ

ನವದೆಹಲಿ(ಫೆ.22): ಭಾರತದಲ್ಲಿ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಕಾರಿನ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದ ವೋಕ್ಸ್‌ವ್ಯಾಗನ್(Volkswagen) ಇದೀಗ ಎರಡು ಕಾರುಗಳ ಉತ್ಪಾದನೆ ಸ್ಥಗಿತಗೊಳಿಸುತ್ತಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯ ಕಾರಾಗಿದ್ದ ಪೋಲೋ(Volkswagen Polo) ಹಾಗೂ ವೆಂಟೋ(Volkswagen Vento) ಕಾರಿನ ಉತ್ಪಾದನೆ ಸ್ಥಗಿತಗೊಳಿಸಲು ವೋಕ್ಸ್‌ವ್ಯಾಗನ್ ಇಂಡಿಯಾ ಮುಂದಾಗಿದೆ.

ಬರೋಬ್ಬರಿ 12 ವರ್ಷಗಳ ಕಾಲ ಭಾರತದಲ್ಲಿ ವೋಕ್ಸ್‌ವ್ಯಾಗನ್ ಪೋಲೋ ಹಾಗೂ ವೆಂಟೋ ಕಾರು ಭರ್ಜರಿಯಾಗಿ ಓಟ ನಡೆಸಿದೆ. ಆದರೆ ಕಳೆದೊಂದು ವರ್ಷದಿಂದ ಪೋಲೋ ಹಾಗೂ ವೆಂಟೋ ಕಾರಿನ(car) ಬೇಡಿಕೆ ಕುಸಿದಿದೆ. ಇತ್ತೀಚೆಗೆ ಹಲವು ಡೀಲರ್‌ಗಳಲ್ಲಿ ಒಂದೇ ಒಂದು ಕಾರು ಬುಕ್ ಆಗಿಲ್ಲ. ಹೀಗಾಗಿ ವೋಕ್ಸ್‌ವ್ಯಾಗನ್ ಪೋಲೋ(VW Polo) ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

Latest Videos

undefined

ಚಿಪ್ ಕೊರತೆಯಿಂದ ಸ್ಥಗಿತಗೊಂಡಿದ್ದ ಕಾರು ವಿತರಣೆಗೆ ಮತ್ತೊಂದು ವಿಘ್ನ, ಐಷಾರಾಮಿ ಕಾರು ಬುಕ್ ಮಾಡಿದ ಗ್ರಾಹಕರಿಗೆ ಆಘಾತ!

ಮೂಲಗಳ ಪ್ರಕಾರ ವೆಂಟೋ ಕಾರಿನ ಬುಕಿಂಗ್ 2022ರ ಮೇ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ಜೂನ್ 2022ರಿಂದ ಪೋಲೋ ಕಾರಿನ ಬುಕಿಂಗ್ ಅಂತ್ಯಗೊಳ್ಳಲಿದೆ. ವೆಂಟೋ ಬದಲು ಈಗಾಗಲೇ ವೋಕ್ಸ್‌ವ್ಯಾಗನ್ ವರ್ಚಸ್ ಸೆಡಾನ್ ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಆದರೆ ಪೋಲೋ ಕಾರಿನ ಬದಲು ಯಾವುದೇ ಕಾರು ಬಿಡುಗಡೆ ಕುರಿತು ಮಾಹಿತಿ ನೀಡಿಲ್ಲ. 

2010ರಲ್ಲಿ ವೋಕ್ಸ್‌ವ್ಯಾಗನ್ ಪೋಲೋ ಮಹಾರಾಷ್ಟ್ರದಲ್ಲಿ ಚಕನ್ ಉತ್ಪಾದನಾ ಘಟಕದಲ್ಲಿ ಉತ್ಪಾದನೆಯಾಗಿತ್ತು. ಬಳಿಕ ಕಾರ್ ಆಫ್ ದಿ ಇಯರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಆದರೆ ಪೋಲೋ 4 ಮೀಟರ್‌ಗಿಂತ ಉದ್ದವಾಗಿರುವ ಕಾರಣ ತೆರಿಗೆ ವಿನಾಯಿತಿ ಇಲ್ಲ. ಮತ್ತೊಂದೆಡೆ ಜರ್ಮನ್ ಕಾರು ಉತ್ಪಾದಕ ಪೇರೆಂಟ್ ಕಂಪನಿ ವೋಕ್ಸ್‌ವ್ಯಾಗನ್ ಎಲ್ಲಾ ಕಾರುಗಳು ಕೊಂಚ ದುಬಾರಿಯಾಗಿದೆ. ಹೀಗಾಗಿ ಜನರು ಇದೀಗ ಕಡಿಮೆ ಮೊತ್ತ, ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಗರಿಷ್ಠ ಸುರಕ್ಷತೆಯ ಕಾರುಗಳ ಮೊರೆ ಹೋಗುತ್ತಿದ್ದಾರೆ.

Volkswagen Virtus World Premiere: ಮಾ.8ರಂದು ಹೊಸ ಸೆಡಾನ್‌ ಕಾರಿನ ಜಾಗತಿಕ ಪ್ರೀಮಿಯರ್!

ಪೋಲೋ ಕಾರಿನ ದುಬಾರಿ ಹಣೆಪಟ್ಟಿ ತೆಗೆಯಲು ವೋಗ್ಸ್‌ವ್ಯಾಗನ್ ಹಲವು ಯತ್ನಗಳನ್ನು ಮಾಡಿದೆ. 1.0 ಲೀಟರ್ ಎಂಜಿನ್ ಕಾರನ್ನು ಬಿಡುಗಡೆ ಮಾಡಿತ್ತು. ಆದರೆ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿಲ್ಲ. ಪೋಲೋ ಕಾರಿಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ಐ20, ಟಾಟಾ ಅಲ್ಟ್ರೋಜ್, ಮಾರಿತಿ ಬಲೆನೋ ಕಾರುಗಳಿವೆ. 

ವೆಂಟೋ ಕಾರಿನ ಬದಲು ವೋಕ್ಸ್‌ವ್ಯಾಗನ್ ವರ್ಚಸ್ ಕಾರು ಬಿಡುಗಡೆಯಾಗುತ್ತಿದೆ. ಹೀಗಾಗಿ ವೆಂಟೋ ಕಾರಿನ ಉತ್ಪಾದನೆ ಸ್ಥಗಿತಗೊಳಿಸಲಾಗುತ್ತಿದೆ. ಆದರೆ ವರ್ಚಸ್ ಕಾರಿನ ಬೆಲೆ ವೆಂಟೋಗಿಂತ ದುಬಾರಿಯಾಗಿದೆ. ಇನ್ನು ವೆಂಟೋಗಿಂತ ಹೆಚ್ಚು ಸ್ಥಳಾವಕಾಶ, ಗಾತ್ರದಲ್ಲಿ ದೊಡ್ಡದಾಗಿದೆ. ಪವರ್‌ಫುಲ್ ಎಂಜಿನ್, ಪ್ರಿಮೀಯಂ ಸೆಡಾನ್ ಕಾರು ಇದಾಗಿದೆ. ಹೀಗಾಗಿ ಬೆಲೆಯೂ ಕೊಂಚ ದುಬಾರಿಯಾಗಿದೆ. ನೂತನ ವೋಕ್ಸ್‌ವ್ಯಾಗನ್ ವರ್ಚಸ್ ಕಾರು ಹ್ಯುಂಡೈ ವರ್ನಾ, ಮಾರುತಿ ಸಿಯಾಜ್, ಹೋಂಡಾ ಸಿಟಿ ಹಾಗೂ ಮುಂಬರುವ ಸ್ಕೋಡಾ ಸ್ಲಾವಿಯಾ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.

ವೋಕ್ಸ್‌ವ್ಯಾಗನ್ ಕಾರು ಮಾರ್ಚ್ 8 ರಂದು ಅನಾವರಣಗೊಳ್ಳಲಿದೆ. ವರ್ಚಸ್ ಕಾರು 2,651 mm ವ್ಹೀಲ್‌ಬೇಸ್ ಹೊಂದಿದೆ. ಇನ್ನು ವರ್ಚಸ್ ಕಾರು ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. 1.0 TSI ಎಂಜಿನ್ ಕುರಿತು ಗ್ರಾಹಕರು ಆಸಕ್ತಿ ಹೊಂದಿದ್ದಾರೆ. ಹೀಗಾಗಿ ನೂತನ ಕಾರಿನಲ್ಲಿ ಇದೇ ಎಂಜಿನ್ ಬಳಸುವ ಸಾಧ್ಯತೆ ಇದೆ. ಈ ಕಾರು 115 PS ಪವರ್  ಹಾಗೂ 178 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮಾನ್ಯುಯೆಲ್ ಹಾಗೂ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಲಭ್ಯವಿದೆ.

ವರ್ಚಸ್ ಕಾರಿನ ಎರಡು ವೇರಿಯೆಂಟ್ ಲಭ್ಯವಿದೆ. 1.0 ಲೀಟರ್ ಹಾಗೂ 1.5 ಲೀಟರ್. ಎರಡೂ ಪೆಟ್ರೋಲ್ ಎಂಜಿನ್ ಕಾರುಗಳು. ಈ ಕಾರು 150 PS ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

 

click me!