Tesla Autopilot Crash: ಸ್ವಯಂಚಾಲಿತ ಟೆಸ್ಲಾ ಕಾರಿನ ಅಪಘಾತ: ವಿಡಿಯೋ ವೈರಲ್

By Suvarna News  |  First Published Feb 21, 2022, 12:27 PM IST

*ಚಾಲನೆ ವೇಳೆ ಚಲನಚಿತ್ರ ವೀಕ್ಷಿಸುತ್ತಿದ್ದ ಚಾಲಕ
*ನಿಂತಿದ್ದ ಪೊಲೀಸ್‌ ವಾಹನಕ್ಕೆ ಕಾರು ಡಿಕ್ಕಿ
*ಕೂದಲೆಳೆಯ ಅಂತರದಲ್ಲಿ ಪೊಲೀಸ್‌ ಅಧಿಕಾರಿ ಪಾರು


Auto Desk: ಅಮೆರಿಕದ ಎಲೆಕ್ಟ್ರಿಕ್ ವಾಹನ ಟೆಸ್ಲಾ ಇವಿ (Tesla EV) ಚಾಲನೆ ವೇಳೆ, ನಿಂತಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ ಕಾರಿನಲ್ಲಿದ್ದ ಚಾಲಕ ಫೋನ್ನಲ್ಲಿ ಚಲನಚಿತ್ರ ವೀಕ್ಷಿಸುತ್ತಿದ್ದ ಎನ್ನಲಾಗಿದೆ.ಅಮೆರಿಕದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಕ್ರಾಂತಿ ಮೂಡಿಸಿದ್ದ ಟೆಸ್ಲಾ ಇವಿ ತನ್ನ ಆಟೊಮೆಟಿಕ್ ಚಾಲನೆಯಿಂದಲೂ ಆಟೊಮೊಬೈಲ್ ವಲಯದಲ್ಲಿ ಕೂಡ ಹೊಸ ಅಲೆ ಮೂಡಿಸಿತ್ತು. ಇದು ವಿಶ್ವಾದ್ಯಂತದ ಜನರಲ್ಲಿ ಕುತೂಹಲ ಕೆರಳಿಸಿತ್ತು. ಆದರೆ, ಈಗ ಒಂದರ ಹಿಂದೊಂದರಂತೆ, ಕಾರಿನಲ್ಲಿನ ಲೋಪಗಳು ಕಂಡುಬರುತ್ತಿವೆ.

ಇತ್ತೀಚಿಗೆ ನಿಂತಿದ್ದ ಪೊಲೀಸ್ ವಾಹನಕ್ಕೆ ಟೆಸ್ಲಾ ಇವಿ (EV) ಡಿಕ್ಕಿ ಹೊಡೆಯುವುದನ್ನು ತೋರಿಸುವ ವಿಡಿಯೋವೊಂದು ಹೊರಬಿದ್ದಿದ್ದು, ಆಟೊಪೈಲಟ್ ಮೋಡ್ನಲ್ಲಿ ಎಲೆಕ್ಟ್ರಿಕ್ ಕಾರನ್ನು ಹಾಕಿ ಚಾಲಕ ಫೋನ್ನಲ್ಲಿ ಚಲನಚಿತ್ರವನ್ನು ವೀಕ್ಷಿಸುತ್ತಿದ್ದ ಎಂದು ಆರೋಪಿಸಲಾಗಿದೆ.

Tap to resize

Latest Videos

ಇದನ್ನೂ ಓದಿ: Geomagnetic Storm Hits Starlink: ಆಗಸದಿಂದ ಉದುರಿ ಬೀಳುತ್ತಿವೆ ಎಲಾನ್‌ ಮಸ್ಕ್‌ SpaceX ಉಪಗ್ರಹಗಳು!

ಉತ್ತರ ಕೆರೊಲಿನಾದ ಅಧಿಕಾರಿಗಳು ಇತ್ತೀಚೆಗೆ ಡ್ಯಾಶ್ಕ್ಯಾಮ್ ರೆಕಾರ್ಡಿಂಗ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದು ಟೆಸ್ಲಾ ವಾಹನ ಆಟೋಪೈಲಟ್ ಮೋಡ್ನಲ್ಲಿ ಓಡುತ್ತಿದೆ ಮತ್ತು ಹೆದ್ದಾರಿ ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಲಾದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತೋರಿಸುತ್ತದೆ. ವೀಡಿಯೊವನ್ನು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಹಲವಾರು ವ್ಯೂಗಳನ್ನು ಪಡೆದುಕೊಂಡಿದೆ.

ಉತ್ತರ ಕೆರೊಲಿನಾ ಸ್ಟೇಟ್ ಹೈವೇ ಪೆಟ್ರೋಲ್ನಲ್ಲಿದ್ದ ಅಧಿಕಾರಿಯೊಬ್ಬರು ಇನ್ನೋರ್ವ ಅಧಿಕಾರಿಯನ್ನು ತಳ್ಳಿದ್ದರಿಂದ ದೊಡ್ಡ ಅವಘಢ ತಪ್ಪಿದಂತಾಗಿದೆ. ಅಷ್ಟರಲ್ಲಿ ಟೆಸ್ಲಾ ಇವಿ ಮುಂದೆ ಹೋಗಿ ರಸ್ತೆಯ ಬದಿಯಲ್ಲಿ ಮೈಲಿ ಮಾರ್ಕರ್ ಅನ್ನು ಸ್ಲ್ಯಾಮ್ ಮಾಡಿದ್ದು, ನಂತರ ಹುಲ್ಲಿನ ಪೊದೆಗೆ ಡಿಕ್ಕಿ ಹೊಡೆದಿದೆ. ಕಾರ್ಸ್ಕೂಪ್ಸ್ನ ವರದಿಯ ಪ್ರಕಾರ, ಪೊಲೀಸ್ ಅಧಿಕಾರಿ ಕಾರಿನ ಮಾರ್ಗದಲ್ಲೇ ಸಾವುನೊನೋವುಗಳು ಸಂಭವಿಸುತ್ತಿತ್ತು.

ಅಪಘಾತಕ್ಕೀಡಾದ ಟೆಸ್ಲಾ ಮಾಡೆಲ್ ಎಸ್ ಮತ್ತು ಇದನ್ನು ದೇವಿಂದರ್ ಗೋಲಿ ಎಂಬ ವೈದ್ಯರು ಓಡಿಸುತ್ತಿದ್ದರು ಎಂದು ವರದಿ ಹೇಳಿದೆ. 2020ರ ಆಗಸ್ಟ್ ನಲ್ಲಿ ಸಂಭವಿಸಿದ ಅಪಘಾತದ ಸಮಯದಲ್ಲಿ ವ್ಯಕ್ತಿಯು ಫೋನ್ನಲ್ಲಿ ಚಲನಚಿತ್ರವನ್ನು ವೀಕ್ಷಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಅಧಿಕಾರಿಗಳು ಈಗಾಗಲೇ ಅಪಘಾತದ ವಿಭಿನ್ನ ಪ್ರಕರಣದ ತನಿಖೆ ನಡೆಸುತ್ತಿರುವಾಗ ಈ ಘಟನೆ ಸಂಭವಿಸಿದೆ.ಈ ವ್ಯಕ್ತಿಯನ್ನು  ಅಪಘಾತ ಪ್ರಕರಣದಲ್ಲಿ  ಬಂಧಿಸಲಾಗಿದೆ.

ಇದನ್ನೂ ಓದಿ: Tesla in India: ಎಲೆಕ್ಟ್ರಿಕ್‌ ಕಾರಿಗೆ ತೆರಿಗೆ ವಿನಾಯ್ತಿ ಕೋರಿದ್ದ ಎಲಾನ್‌ ಮಸ್ಕ್ ಮನವಿ ತಿರಸ್ಕೃತ!

ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ಫ್ಲೋರಿಡಾದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಪೊಲೀಸ್ ವಾಹನಕ್ಕೆ ಟೆಸ್ಲಾ ಮಾಡೆಲ್ 3 ಇವಿ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಈ ವೇಳೆ ಅಧಿಕಾರಿಗಳು ತಮ್ಮ ವಾಹನವನ್ನು ಮತ್ತೊಬ್ಬ ಚಾಲಕನಿಗೆ ಸಹಾಯ ಮಾಡಲು ನಿಲ್ಲಿಸಿದ್ದರು.

ಈ ಹಿಂದೆ ಕೂಡ ಟೆಸ್ಲಾ ಅನೇಕ ಕಾರಣಗಳಿಗಾಗಿ ಈಗಾಗಲೇ ಮಾರಾಟವಾಗಿರುವ ತಮ್ಮ ಅನೇಕ ವಾಹನಗಳನ್ನು ಹಿಂದಕ್ಕೆ ಪಡೆದಿವೆ. ಈಗಾಗಲೇ ಅಮೆರಿಕ ರಸ್ತೆ ಸುರಕ್ಷತಾ ಮತ್ತು ಹೆದ್ದಾರಿ ಪ್ರಾಧಿಕಾರ ಕೂಡ ಹಲವು ಪ್ರಕರಣಗಳನ್ನು ದಾಖಲಿಸಿದೆ. 

ಟೆಸ್ಲಾ (TSLA.O) ತನ್ನ ಮಾಡೆಲ್ 3 ಮತ್ತು ಮಾಡೆಲ್Sಎಸ್ ಎಲೆಕ್ಟ್ರಿಕ್ ಕಾರುಗಳಲ್ಲಿ 475,000 ಕ್ಕಿಂತ ಹೆಚ್ಚು ಹಿಂಪಡೆದಿದೆ ಮತ್ತು ಕ್ರ್ಯಾಶ್ ಆಗುವ ಅಪಾಯವನ್ನು ಹೆಚ್ಚಿಸುವ ಹಿಂಬದಿಯ ಕ್ಯಾಮರಾ ಮತ್ತು ಟ್ರಂಕ್ ಸಮಸ್ಯೆಗಳನ್ನು ಪರಿಹರಿಸಲಿದೆ ಎಂದು ಅಮೆರಿಕ ರಸ್ತೆ ಸುರಕ್ಷತೆ ನಿಯಂತ್ರಕ ತಿಳಿಸಿದೆ.

ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತೆ ಆಡಳಿತ (NHTSA) ಕಂಪನಿಯ ಚಾಲಕ ಸಹಾಯಕ ವ್ಯವಸ್ಥೆಯನ್ನು ತನಿಖೆ ಮಾಡುವಾಗ ವಾಹನ ತಯಾರಕರೊಂದಿಗೆ ಮತ್ತೊಂದು ಕ್ಯಾಮರಾ ಸಮಸ್ಯೆಯನ್ನು ಪರಿಶೀಲಿಸುತ್ತಿದೆ. ಸ್ವಯಂಚಾಲಿತ ಚಾಲನೆ ಮತ್ತು ಚಾಲನೆ ವೇಳೆ ಚಿತ್ರ, ಗೇಮ್ಗಳನ್ನು ವೀಕ್ಷಿಸಬಹುದಾದ ಪರದೆಯನ್ನು ಅಳವಡಿಸುವುದು ಅಪಘಾತಕ್ಕೆ ಕಾರಣವಾಗಬಹುದು ಎಂದು ಎನ್ಎಚ್ಟಿಎಸ್ಎ ಆರೋಪಿಸಿದೆ.

click me!