Maruti Baleno ಫೆ.23ಕ್ಕೆ ಹೊಚ್ಚ ಹೊಸ ಮಾರುತಿ ಬಲೆನೋ ಲಾಂಚ್, ಇಲ್ಲಿದೆ ಬೆಲೆ ಹಾಗೂ ವಿಶೇಷತೆ!

Published : Feb 22, 2022, 06:13 PM ISTUpdated : Feb 22, 2022, 06:25 PM IST
Maruti Baleno ಫೆ.23ಕ್ಕೆ ಹೊಚ್ಚ ಹೊಸ ಮಾರುತಿ ಬಲೆನೋ ಲಾಂಚ್, ಇಲ್ಲಿದೆ ಬೆಲೆ ಹಾಗೂ ವಿಶೇಷತೆ!

ಸಾರಾಂಶ

ಹೊಚ್ಚ ಹೊಸ ಮಾರುತಿ ಬಲೆನೋ ಕಾರು ನಾಳೆ ಬಿಡುಗಡೆ ಹಲವು ಬದಲಾವಣೆಯೊಂದಿಗೆ ಬಿಡುಗಡೆಯಾಗುತ್ತಿದೆ ಕಾರು ನೂತನ ಕಾರಿನ ಬೆಲೆ,ಎಂಜಿನ್ ಹಾಗೂ ಇತರ ಮಾಹಿತಿ  

ನವದೆಹಲಿ(ಫೆ.22): ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ಹೊಚ್ಚ ಹೊಸ ಮಾರುತಿ ಬಲೆನೋ(Maruti Baleno) ಬಿಡುಗಡೆಗೆ ಸಜ್ಜಾಗಿದೆ. ನಾಳೆ(ಫೆ.23) ನೂತನ ಮಾರುತಿ ಬಲೆನೋ ಕಾರು(Car) ಬಿಡುಗಡೆಯಾಗಲಿದೆ. ಟಾಟಾ ಅಲ್ಟ್ರೋಜ್, ಹ್ಯುಂಡೈ ಐ20 ಹಾಗೂ ಹೋಂಡಾ ಜಾಝ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಬಲೆನೋ ಕಾರು ಕನೆಕ್ಟೆಡ್ ಫೀಚರ್ಸ್, 360 ಕ್ಯಾಮಾರ ಸೇರಿದಂತೆ ಹಲವು ಹೊಸ ಫೀಚರ್ಸ್ ನೂತನ ಕಾರಿನಲ್ಲಿದೆ.

ನೂತನ ಬಲೆನೋ ಕಾರಿನ ಬೆಲೆ:
ಹೊಚ್ಚ ಹೊಸ ಕಾರಿನ ಬೆಲೆ ನಾಳೆ ಬಹಿರಂಗವಾಗಲಿದೆ. ಆದರೆ ನೂತನ ಕಾರನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡಲು ಮಾರುತಿ ಸಜ್ಜಾಗಿದೆ. ಹೊಸ ಬಲೆನೋ 6.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಸದ್ಯ ಮಾರುಕಟ್ಟೆಯಲ್ಲಿರುವ ಬಲೆನೋ ಬೆಲೆ 7.01 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಂದ 10.86 ಲಕ್ಷ ರೂಪಾಯಿ(ಎಕ್ಸ್  ರೂಂ) ಗರಿಷ್ಠ. ಇನ್ನು ಹೊಸ ಬಲೆನೋ ಕಾರಿನ ಗರಿಷ್ಠ ಬೆಲೆ 10  ಲಕ್ಷ ರೂಪಾಯಿ ಒಳಗಡೆ ಇರಲಿದೆ ಎಂದು ಮಾರುತಿ ಸುಜುಕಿ ಹೇಳಿದೆ.

2022 Maruti Baleno ಚಿತ್ರಗಳು ಬಹಿರಂಗ: ಹೆಚ್ಚು ಕ್ಯಾಬಿನ್‌ ಸ್ಪೇಸ್‌ ಲಭ್ಯ!

ನೂತನ ಬಲೆನೋ ಕಾರಿನ ಹೊರಭಾಗ ಹಾಗೂ ಒಳಭಾಗದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ವಿನ್ಯಾಸದಲ್ಲಿ ಬದಲಾವಣೆ ಮಾಡುವ ಮೂಲಕ ಆಕರ್ಷಣೆಯನ್ನು ಮತ್ತಷ್ಟು ಹೆ್ಚ್ಚಿಸಲಾಗಿದೆ. ಮುಂಭಾಗದ ಗ್ರಿಲ್ ಹೆಚ್ಚು ಅಗಲವಾಗಿದೆ. ಜೊತೆಗೆ ಕ್ರೋಮ್ ಫಿನೀಶಿಂಗ್ ಗ್ರಿಲ್ ನೀಡಲಾಗಿದೆ. ಹೊಸ ಹೆಡ್‌ಲೈಟ್ಸ್, ಹೊಸ ಡಿಆರ್‌ಎಲ್, ಇನ್ನು ಫಾಗ್ ಲ್ಯಾಂಪ್ ಗಾತ್ರ ಕೂಡ ಹೆಚ್ಚಳ ಮಾಡಲಾಗಿದೆ. ಇನ್ನು ವಿಂಡೋ ಬಳಿ ಕ್ರೋಮ್ ಫಿನೀಶಿಂಗ್ ಟಚ್ ನೀಡಲಾಗಿದೆ. LED ಟೈಲ್ ಲೈಟ್ಸ್ ಸೇರಿದಂತೆ ಹಲವು ಬದಲಾವಣೆಗಳನ್ನು ಹೊಸ ಬಲೆನೋ ಕಾರಿನಲ್ಲಿ ಕಾಣಬಹುಹುದು. 

ಕಾರಿನ ಒಳಭಾಗದಲ್ಲಿ ಅತೀ ಹೆಚ್ಚು ಬದಲಾವಣೆ ತರಲಾಗಿದೆ.ಇನ್ನು ಹೆಚ್ಚುವರಿ ಫೀಚರ್ಸ್ ಕೂಡ ನೂತನ ಕಾರಿನಲ್ಲಿದೆ. ಕಾರಿನ ಡ್ಯಾಶ್‌ಭೋರ್ಡ್ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದೆ. 9 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟುಮೆಂಟ್ ಕ್ಲಸ್ಟರ್, ಹೊಸ ಸ್ಟೀರಿಂಗ್ ವ್ಹೀಲ್, ಡ್ಯಾಶ್‌ಬೋರ್ಡ್‌ನಲ್ಲಿ ಕ್ರೋಮ್ ಬಳಸಲಾಗಿದೆ.

Auto PLI Scheme ಪ್ರೋತ್ಸಾಹ ಧನಕ್ಕೆ ಟಾಟಾ, ಮಹೀಂದ್ರಾ, ಹ್ಯುಂಡೈ ಆಯ್ಕೆ: ಮಾರುತಿ ಪಟ್ಟಿಯಿಂದ ಹೊರಗೆ!

ಕ್ಲೈಮೇಟ್ ಕಂಟ್ರೋಲ್ ಫೀಚರ್ಸ್ ಸೇರಿಸಲಾಗಿದೆ. ಇನ್ನು 360 ಡಿಗ್ರಿ ಕ್ಯಾಮಾರ, ಹೆಡ್ ಅಪ್ ಡಿಸ್‌ಪ್ಲೆ ನೀಡಲಾಗಿದೆ. ಇನ್ನು ಕಾರ್ ಕೆನೆಕ್ಟೆಡ್ ಫೀಚರ್ಸ್ ನೀಡಲಾಗಿದೆ. ಇದರಲ್ಲಿ ಅಮೆಜಾನ್, ಅಲೆಕ್ಸಾ ವಾಯ್ಸ್ ಕಮಾಂಡ್ ಸೇರಿದಂತೆ 40 ಕ್ಕೂ ಹೆಚ್ಚು ಕನಕ್ಟೆಡ್ ಫೀಚರ್ಸ್ ಆಯ್ಕೆ ನೀಡಲಾಗಿದೆ. 

ಮಾರುತಿ ಸುಜುಕಿ:
ಮಾರುತಿ ಸುಜುಕಿ ಕಾರುಗಳು ಭಾರತದಲ್ಲಿ ಅತ್ಯಂತ ಜನಪ್ರಿಯ ಕಾರುಗಳಾಗಿದೆ. ಮಾರತಿ ಬಲೆನೋ ಮಾರಾಟದಲ್ಲಿ ದಾಖಲೆ ಬರೆದಿದೆ. ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಬಲೆನೋ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಒಟ್ಟಾರೆ ಮಾರುತಿ ಸುಜುಕಿ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ 6 ರಿಂದ 8 ಕಾರುಗಳು ಸ್ಥಾನ ಪಡೆದುಕೊಂಡಿದೆ. ಇದರಲ್ಲಿ ಮಾರುತಿ ವಿಟಾರಾ ಬ್ರಿಜಾ,ಮಾರುತಿ ವ್ಯಾಗನಆರ್, ಮಾರುತಿ ಸ್ವಿಫ್ಟ್, ಮಾರುತಿ ಸೆಲೆರಿಯೋ, ಮಾರುತಿ ಅಲ್ಟೋ, ಮಾರುತಿ ಎರ್ಟಿಗಾ ಸೇರಿದಂತೆ ಹಲವು ಕಾರುಗಳು ಮಾರಾಟದಲ್ಲಿ ಟಾಪ್ 10 ಪಟ್ಟಿಯಲ್ಲಿ ಸದಾ ಸ್ಥಾನ ಪಡೆದುಕೊಂಡಿದೆ.

ಮಾರುತಿ ಕಾರಿಗೆ ಸದ್ಯ ಟಾಟಾ ಮೋಟಾರ್ಸ್ ಭಾರಿ ಪೈಪೋಟಿ ನೀಡುತ್ತಿದೆ. ವಿಟಾರಾ ಬ್ರೇಜಾಗೆ ಟಾಟಾ ನೆಕ್ಸಾನ್ ಪೈಪೋಟಿ ನೀಡಿದರೆ, ಬಲೆನೋ ಕಾರಿಗೆ ಟಾಟಾ ಅಲ್ಟ್ರೋಜ್ ಕಾರು ಪೈಪೋಟಿ ನೀಡುತ್ತಿದೆ. 

PREV
Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ