2019ರಲ್ಲಿ 3 ಪ್ರಶಸ್ತಿ ಸರಿದಂತ 80ಕ್ಕೂ ಅಧಿಕ ಅವಾರ್ಡ್ ಗೆದ್ದಿರುವ ಜಾಗ್ವಾರ್ ಐಪೇಸ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಬಿಡುಗಡೆ ದಿನಾಂಕವನ್ನು ಜಾಗ್ವಾರ್ ಇಂಡಿಯಾ ಬಹಿರಂಗ ಪಡಿಸಿದೆ.
ಫೆಬ್ರವರಿ(ಫೆ.08): ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಮೊದಲ ಎಲೆಕ್ಟ್ರಿಕ್ ಎಸ್‍ಯುವಿ, ಜಾಗ್ವಾರ್ ಐ-ಪೇಸ್ ಕಾರನ್ನು 2021 ರ ಮಾರ್ಚ್ 9 ರಂದು ಬಿಡುಗಡೆ ಮಾಡಲಿದೆ.
ಐ-ಪೇಸ್, ಪ್ರಾರಂಭವಾದಾಗಿನಿಂದ, 80 ಕ್ಕೂ ಹೆಚ್ಚು ಜಾಗತಿಕ ಪ್ರಶಸ್ತಿಗಳನ್ನು ಗೆದ್ದಿದೆ. 2019 ರಲ್ಲಿ ಏಕಕಾಲದಲ್ಲಿ ಎಲ್ಲಾ ಮೂರು ವಿಶ್ವ ಕಾರು ಪ್ರಶಸ್ತಿಗಳು - ವರ್ಷದ ವಿಶ್ವ ಕಾರು, ವರ್ಷದ ವಿಶ್ವ ಹಸಿರು ಕಾರು ಮತ್ತು ವರ್ಷದ ವಿಶ್ವ ಕಾರ್ ವಿನ್ಯಾಸ – ಗಳನ್ನು ಗೆದ್ದ ಮೊದಲ ಕಾರು ಇದಾಗಿದೆ.
undefined
ಟಾಟಾ ಒಡೆತನದ ಮತ್ತೊಂದು ಎಲೆಕ್ಟ್ರಿಕ್ ಕಾರು; ಜಾಗ್ವಾರ್ i ಪೇಸ್ ಭಾರತಕ್ಕೆ ಆಗಮನ!
ಜಾಗ್ವಾರ್ ಐಪೇಸ್ ಕಾರಿನ ಬೆಲೆ 66.07 ಲಕ್ಷ ರೂಪಾಯಯಿಂದ ಆರಂಭಗೊಳ್ಳುತ್ತಿದೆ. ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಐಪೇಸ್ ಹೊಸ ಸಂಚಲನ ಮೂಡಿಸಲಿದ ಅನ್ನೋ ವಿಶ್ವಾಸವನ್ನು ಜಾಗ್ವಾರ್ ಇಂಡಿಯಾ ವ್ಯಕ್ತಪಡಿಸಿದೆ.
ಲ್ಯಾಂಡ್ ರೋವರ್ ಡಿಫೆಂಡರ್‍ನ ಡಿಜಿಟಲ್ ಉಡಾವಣೆಗೆ ದೊರೆತ ಅಸಾಧಾರಣ ಪ್ರತಿಕ್ರಿಯೆಯ ನಂತರ, ಭಾರತದಲ್ಲಿ ಜಾಗ್ವಾರ್ ಐ-ಪೇಸ್ ಅನ್ನು ಪ್ರಾರಂಭಿಸಲು ಮತ್ತೊಂದು ಡಿಜಿಟಲ್ ಅನುಭವವನ್ನು ನಿರ್ವಹಣೆ ಮಾಡುವ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಈ ತಲ್ಲೀನಗೊಳಿಸುವ ಮತ್ತು ಆಕರ್ಷಕವಾಗಿರುವ ಡಿಜಿಟಲ್ ಈವೆಂಟ್ ಪ್ರಾಯೋಗಿಕವಾಗಿ ಸುಸ್ಥಿರ ಪರಿಸರ ವ್ಯವಸ್ಥೆಯ ದೃಷ್ಟಿಕೋನದಿಂದ ವಿನ್ಯಾಸಗೊಳಿಸಲ್ಪಟ್ಟಿದೆ, ನವೀನ ತಂತ್ರಜ್ಞಾನಗಳನ್ನು ಬಳಸುತ್ತದೆ ಮತ್ತು ಎಲೆಕ್ಟ್ರಿಕ್ ವಾಹನಗಳಂತಹ ಚಲನಶೀಲತೆಯ ಸಮರ್ಥ ವಿಧಾನಗಳನ್ನು ಬೆಂಬಲಿಸುವ ಆಧುನಿಕತೆಯತ್ತ ಮುಖ ಮಾಡಿರುವ ಮಹಾನಗರಗಳತ್ತ ದೃಷ್ಟಿ ಹಾಯಿಸುತ್ತದೆ. ಮಾಧ್ಯಮದ ಸದಸ್ಯರು, ನಮ್ಮ ಮಾನ್ಯ ಗ್ರಾಹಕರು ಮತ್ತು ಬ್ರ್ಯಾಂಡ್‍ನ ಅಭಿಮಾನಿಗಳು ಈ ವಿಶಿಷ್ಟ, ಆಧುನಿಕ ಮತ್ತು ವೈವಿಧ್ಯಮಯವಾಗಿ ವಿನ್ಯಾಸಗೊಳಿಸಿದ ಉಡಾವಣಾ ಕಾರ್ಯಕ್ರಮದ ಮೂಲಕ ದೊರೆಯುವ ವಾಸ್ತವಿಕ ಅನುಭವವನ್ನು ಸಂಪೂರ್ಣವಾಗಿ ಆನಂದಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಲಿಮಿಟೆಡ್‍ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಹೇಳಿದರು.