ಇದೇ ತಿಂಗಳು ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ!

Published : Feb 08, 2021, 02:51 PM IST
ಇದೇ ತಿಂಗಳು ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ!

ಸಾರಾಂಶ

ಮಾರುತಿ ಸುಜುಕಿ ಸ್ವಿಫ್ಟ್ 3ನೇ ಜನರೇಶನ್ ಕಾರು 2018ರಲ್ಲಿ ಬಿಡುಗಡೆಯಾಗಿದೆ. ಇದೀಗ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಹಲವು ವಿಶೇಷತೆಗಳನ್ನೊಳಗೊಂಡಿರುವ ನೂತನ ಕಾರಿನ ಹೆಚ್ಚಿನ ವಿವರ ಇಲ್ಲಿದೆ.  

ನವದೆಹಲಿ(ಫೆ.08): ಭಾರತದಲ್ಲಿ ಅತೀ ಹೆಚ್ಚು ಜನಪ್ರಿಯ ಮಾರುತಿ ಸ್ವಿಫ್ಟ್ ಕಾರು ಇದೀಗ ಫೇಸ್‌ಲಿಫ್ಟ್ ಅಪ್‌ಗ್ರೇಡ್‌ನೊಂದಿಗೆ ಬಿಡುಗಡೆಯಾಗುತ್ತಿದೆ. ಇದೇ ತಿಂಗಳು ನೂತನ ಕಾರು ಮಾರುಕಟ್ಟೆ ಪ್ರವೇಶಿಸುತ್ತಿದೆ. ನೂತನ ಸ್ವಿಫ್ಟ್ ಕಾರು ಹೆಚ್ಚು ದಕ್ಷ ಎಂಜಿನ್, ಹೆಚ್ಚು ಪವರ್‌ ಹೊಂದಿದೆ.

2021ರಲ್ಲಿ ಗರಿಷ್ಠ ಮಾರಾಟವಾದ ಟಾಪ್ 5 ಕಾರು; ಇಲ್ಲಿದೆ ಲಿಸ್ಟ್!

ನೂತನ ಸ್ವಿಫ್ಟ್ ಕಾರು K12N ಡ್ಯುಯೆಲ್ ಜೆಟ್ ಎಂಜಿನ್ ಹೊಂದಿದೆ.  90 PS ಪವರ್ ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಕಾರಿಗಿಂತ 7 PS ಹೆಚ್ಚು ಪವರ್‌ಫುಲ್ ಆಗಿದೆ. ಇನ್ನು ಗೇರ್‌ಬಾಕ್ಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 5 ಸ್ಪೀಡ್ ಮಾನ್ಯುಯೆಲ್ ಹಾಗೂ 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. 

ನೂತನ ಸ್ವಿಫ್ಟ್ ಕಾರಿನ ಬೆಲೆಯಲ್ಲೂ ಕೊಂಚ ಬದಲಾವಣೆಯಾಗಲಿದೆ. ಬೆಲೆ ಕೊಂಚ ಏರಿಕೆಯಾಗಲಿದೆ.  ಇದೇ ತಿಂಗಳ ಅಂತ್ಯದಲ್ಲಿ ನೂತನ ಸ್ವಿಫ್ಟ್ ಕಾರು ಬಿಡುಗಡೆಯಾಗುತ್ತಿದೆ. ಇಷ್ಟೇ ಅಲ್ಲ ಕಾರಿನ ಒಳಭಾಗದಲ್ಲಿ ಕ್ಯಾಬಿನ್ ಸೇರಿದಂತೆ ಕೆಲ ಬದಲಾವಣೆ ಮಾಡಲಾಗಿದೆ 
 

PREV
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್