ಶಾರುಖ್ ಬಳಿ ಇದೆ ವಿರಳ, ವಿಶಿಷ್ಟ ಲೆಕ್ಸಸ್ ಕಾರು. ಬೆಲೆ ಎಷ್ಟು ಗೊತ್ತಾ?

By Suvarna NewsFirst Published Feb 7, 2021, 4:07 PM IST
Highlights

ಕಿಂಗ್ ಖಾನ್ ಎಂದೇ ಪ್ರಸಿದ್ಧವಾಗಿರುವ ಬಾಲಿವುಡ್ ನಟ ಶಾರುಕ್‌ ಖಾನ್ ಬಳಿ ಸಾಮಾನ್ಯ ಕಾರುಗಳಿಂದ ಹಿಡಿದು ಐಷಾರಾಮಿ ಕಾರುಗಳಿವೆ. ಆಗಾಗ ಅವರು ಈ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಇಂಟರ್ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಅವರ ವಿಶಿಷ್ಟ ಕಾರ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ಕಾರು ಯಾವುದು ಗೊತ್ತಾ?

ಕಿಂಗ್ ಖಾನ್ ಶಾರುಕ್ ಖಾನ್ ಕಾರುಗಳ ಬಗ್ಗೆ ಹೊಂದಿರುವ ಕ್ರೇಜ್ ಗೊತ್ತಿರುವ ಸಂಗತಿಯೇ. ಅವರ ಬಳಿ ಸಾಮಾನ್ಯ ಕಾರುಗಳಿಂದ ಹಿಡಿದು ಅತ್ಯಾಧುನಿಕ ಐಷಾರಾಮಿ ಕಾರುಗಳಿವೆ. ಕಾಸ್ಟಲೀ ಕಾರುಗಳನ್ನು ಖರೀದಿಸುವುದು ಶಾರುಕ್‌ಗೆ ಕಷ್ಟವೂ ಅಲ್ಲ. ಅವರ ಬಳಿ ಬಿಎಂಡಬ್ಲೂ 7 ಸೀರೀಸ್, ರೇಂಜ್  ರೋವರ್ ಎಸ್‌ಯುವಿ ಸೇರಿದಂತೆ ಬೆನಟ್ಲೀ ಕಾಂಟಿನೇಂಟಲ್ ಜಿಟಿ ಹಾಗೂ ಮತ್ತಿತರ ಐಷಾರಾಮಿ ಕಾರುಗಳಿವೆ. ಆದರೆ, ಅವರ ಹತ್ತಿರ ಇನ್ನೂ ಒಂದು ವಿಶಿಷ್ಟವಾದ ಕಾರು ಇದೆ.

ಆ ವಿಶಿಷ್ಟವಾದ ಕಾರು ಯಾವುದು ಗೊತ್ತಾ? ವಿರಳ ಕಾರು ಎನಿಸಿಕೊಂಡಿರುವ ಲೆಕ್ಸಸ್(Lexus) ಕನ್ವರ್ಟಿಬಲ್ ಕಾರ್. ಈ ಕಾರಿನಲ್ಲಿ ಇತ್ತೀಚೆಗಷ್ಟೇ ಶಾರುಕ್ ಮುಂಬೈ ಏರ್ಪೋರ್ಟ್‌ನಲ್ಲಿ ಕಾಣಸಿಕ್ಕಿದ್ದರು. ಹಾಗಂತ ಈ ಕಾರು ಹೊಸದು ಎಂದು ಭಾವಿಸಿಕೊಳ್ಳಬೇಡಿ. ಸುಮಾರು 15 ವರ್ಷಗಳಷ್ಟು ಹಳೆಯ ಕಾರು ಇದು. ಆದರೆ, ಜಪಾನ್ ಮೂಲದ ಈ ಲೆಕ್ಸೆಸ್ ತನ್ನ ವಿಶಿಷ್ಟ ಫೀಚರ್‌ಗಳಿಂದಾಗಿ ಹೆಸರುವಾಸಿಯಾಗಿದೆ.

ದಿನಕ್ಕೆ 200ರಿಂದ 250 ಮಹೀಂದ್ರಾ ಥಾರ್‌ ಬುಕ್ಕಿಂಗ್!

ಕೆಂಪು ಬಣ್ಣದ ಲೆಕ್ಸಸ್ ಎಸ್‌ಸಿ430 ಕನ್ವರ್ಟಬಲ್ ಕಾರಿನೊಂದಿಗೆ ಛತ್ರಪತಿ ಶಿವಾಜಿ ಮಹಾರಾಜ್ ಏರ್ಪೋಟ್‌ನಲ್ಲಿ ಕಾಣಸಿಕ್ಕಿದ್ದರು. ಅವರು ತಮ್ಮ ಪುತ್ರಿ ಸುಹಾನಾ ಖಾನ್ ಅವರುನ್ನು ಡ್ರಾಪ್ ಮಾಡಲು ಈ ಕಾರಿನಲ್ಲಿ ಆಗಮಿಸಿದ್ದರು. ಜೊತೆಗೆ ಕಾರಿನಲ್ಲಿ ಅವರ ಪುತ್ರ ಕೂಡ ಇದ್ದರು ಎಂಬುದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಕ್ಲಿಪ್‌ನಲ್ಲಿ ಕಾಣಬಹುದು.  ಹಲವರ ಪ್ರಕಾರ ಇದೇ ಮೊದಲ ಬಾರಿ ಶಾರುಕ್ ಈ ಲೆಕ್ಸಸ್ ಎಸ್‌ಸಿ430 ಕಾರಿನಲ್ಲಿ ಕಂಡಿದ್ದು ಎನ್ನಲಾಗುತ್ತದೆ.

ಲೆಕ್ಸಸ್ ಎಸ್‌ಸಿ430 ಹೊಸ ಮಾಡೆಲ್ ಕಾರೇನಲ್ಲ. ಅದು 15 ವರ್ಷಗಳಷ್ಟು ಹಳೆಯ ಕಾರು. ಬಹುಶಃ ಶಾರುಕ್ ಅವರ ಗ್ಯಾರೇಜ್‌ನಲ್ಲಿ ಹಲವು ವರ್ಷಗಳಿಂದ ಇರಬಹುದು. ಆದರೆ, ಅದನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರುವುದರಿಂದ ಈಗಲೂ ಅದಕ್ಕೆ ಬ್ರ್ಯಾಂಡ್ ನ್ಯೂ ಲುಕ್ ಇದೆ. ಈ ವಿಡಿಯೋದಲ್ಲಿ ಕಾಣುವಂತೆ ಕೆಂಪು ಬಣ್ಣದ ಕಾರು ಸ್ಪೋರ್ಟಿ ಲುಕ್‌ನ್ನು ನೀಡುತ್ತದೆ. ಈ ಲೆಕ್ಸಸ್ ಎಸ್‌ಸಿ430 ಕನ್ವರ್ಟಬಲ್ 4 ಸೀಟರ್ ಮತ್ತು ಟು ಡೋರ್ ಕಾರ್ ಆಗಿದೆ. ಕಾರಿನ ಬೂಟ್‌ಸ್ಪೇಷನ್ ಅದುಮಿಡಲಾಗಿರುವ ಹಾರ್ಡ್‌ಟಾಪ್ ಅನ್ನು ಗುಂಡಿಯನ್ನು ಒತ್ತುವ ಮೂಲಕ ಟಾಪ್ ಅನ್ನು ಜೋಡಿಸಬಹುದು.

ಇನ್ನೆರಡು ತಿಂಗಳಲ್ಲಿ ಹೊಸ ತಲೆಮಾರಿನ ಮಾರುತಿ ಸೆಲೆರಿಯೋ ಮಾರುಕಟ್ಟೆಗೆ?

ಇದು ಟೊಯೋಟಾ ಕಂಪನಿ ಸೋರರ್ ಕನ್ವರ್ಟಬಲ್‌ ಕಾರಿನ ರೀತಿಯಲ್ಲೇ ಇದೆ. ಈ ಕಾರು ಅಂತಾರಾಷ್ಟ್ರೀಯವಾಗಿ ಹೆಚ್ಚು ಮಾರಾಟ ಕಂಡ ಕಾರ್ ಆಗಿತ್ತು. ಸೋರರ್ ಮತ್ತು ಲೆಕ್ಸಸ್ ಎಸ್‌ಸಿ430 ಕಾರುಗಳು ಒಂದೇ ರೀತಿಯ ವಿನ್ಯಾಸಗಳನ್ನು ಒಳಗೊಂಡಿವೆ. ಹಾಗೆಯೇ ಎಸ್‌ಸಿ430 ಮುಖ್ಯ ಆಕರ್ಷಣೆಯೇ ಅದರ ವಿನ್ಯಾಸವಾಗಿದೆ. ಮಜಾ ಏನ್ ಗೊತ್ತಾ... ಮರ್ಸೀಡೆಸ್ ಬೆಂಜ್‌ ಎಸ್‌ಎಲ್‌ಗೆ ಅಗ್ಗದ ಪರ್ಯಾಯ ಕಾರ್ ಆಗಿ ಎಸ್‌ಸಿ430 ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಈ ಕಾರು 4.3 ಲೀ. ವಿ8 ಲೀಟರ್ ಎಂಜಿನ್ ಹೊಂದಿದ್ದು ಅದು 282 ಬಿಎಚ್‌ಪಿ ಪವರ್ ಮತ್ತು 419 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಕಾರಿನ ಹಿಂಬದಿಗೆ ಎಂಜಿನ್ ಶಕ್ತಿ ವರ್ಗಾವಣೆ ಮಾಡಲಾಗುತ್ತದೆ ಮತ್ತು 250 ಗರಿಷ್ಠ ವೇಗವನ್ನು ಹೊಂದಿದೆ. ಐದು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸಿಮಿಷನ್ ಇದ್ದು, ಕೇವಲ 7 ಸೆಕೆಂಡ್‌ನಲ್ಲಿ 0 ದಿಂದ 100 ಕಿ.ಮೀ. ಸ್ಪೀಡ್ ಪಡೆದುಕೊಳ್ಳುತ್ತದೆ. ಅಷ್ಟು ಶಕ್ತಿಶಾಲಿ ಎಂಜಿನ್ ಅನ್ನು ಈ ಕಾರ್ ಹೊಂದಿದೆ. ಕಾರಿನ ಒಳಾಂಗಣವೂ ಅತ್ಯಾಕರ್ಷವಾಗಿದೆ. ಸೀಟುಗಳಿಗೆ ಚರ್ಮದ ಹೊದಿಕೆಗಳಿವೆ. ಇನ್ಫೋಟೈನಮೆಂಟ್ ಇದ್ದು ನ್ಯಾವಿಗೇಷನ್ ಸಿಸ್ಟಮ್ ಒಳಗೊಂಡಿದೆ.  ಬಾಗಿಲು ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ವುಡನ್ ಪ್ಯಾನೆಲ್ ಅಳವಡಿಸಲಾಗಿದೆ. ಇದರಿಂದ ಕಾರಿಗೆ ಪ್ರೀಮಿಯಂ ಲುಕ್ ಬಂದಿದೆ.

ಆಂಧ್ರದ ಕರ್ನೂಲ್‌ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನ.. ಯಾವಾಗಿನಿಂದ?

ಅಂದ ಹಾಗೆ, ಲೆಕ್ಸೆಸ್ ಎಸ್‌ಸಿ430 ಕಾರು ಈಗ ಉತ್ಪಾದನೆಯಾಗುತ್ತಿಲ್ಲ. ಈ ಕಾರಿನ ಉತ್ಪಾದನೆಯನ್ನು ಜಪಾನ್ ಮೂಲದ ಕಂಪನಿ ನಿಲ್ಲಿಸಿ ಬಿಟ್ಟಿದೆ. ಈ ಮಾಡೆಲ್ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದ್ದಾಗ ಅದರ ಬೆಲೆ 25 ಲಕ್ಷ ರೂಪಾಯಿಯಾಗಿತ್ತು. ಅಂದರೆ, ನೀವು 15 ವರ್ಷಗಳ ಬಳಿಕ ಈ ಕಾರಿನ ಬೆಲೆ ಎಷ್ಟಾಗಿರಬಹುದು ಎಂದು ಊಹಿಸಬಹುದು.

click me!