Vehicle Safety ಭಾರತದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಕಠಿಣ ನಿಯಮ, ಶೀಘ್ರದಲ್ಲಿ ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ!

By Suvarna NewsFirst Published Jan 4, 2022, 3:42 PM IST
Highlights
  • ಭಾರತದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹಲವು ನಿಯಮಗಳ ತಿದ್ದುಪಡಿ
  • ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ
  • ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ, ಶೀಘ್ರದಲ್ಲಿ ಹೊಸ ನಿಯಮ
     

ನವದೆಹಲಿ(ಜ.04): ದೇಶದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಮೋಟಾರು ವಾಹನ ನಿಯಮದಲ್ಲಿ ಹಲವು ತಿದ್ದುಪಡಿ ಮಾಡಲಾಗಿದೆ. ಇದೀಗ ಭಾರತದಲ್ಲಿ ಕಾರಿನ ಸುರಕ್ಷತೆಗೆ(Car Seafety) ಮೊದಲ ಆದ್ಯತೆ ನೀಡಲಾಗುತ್ತಿದೆ. ಕಾರಿನ ಕ್ರಾಶ್ ಟೆಸ್ಟ್(Crash test) ರೇಟಿಂಗ್ ಪ್ರಕಟಿಸುವುದು ಕಡ್ಡಾಯವಾಗಿದೆ. ಎರಡು ಏರ್‌ಬ್ಯಾಗ್, ರೇರ್ ಕ್ಯಾಮಾರ, ಎಬಿಎಸ್ ಬ್ರೇಕ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್(safety features) ಈಗಾಗಲೇ ಕಡ್ಡಾಯ ಮಾಡಲಾಗಿದೆ. ಇದೀಗ ರಸ್ತೆ ಸಾರಿಗೆ ಸಚಿವಾಲಯ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತೊಂದು ತಿದ್ದುಪಡಿ ಮಾಡಲು ರೆಡಿಯಾಗಿದೆ. ಹೌದು, ಶೀಘ್ರದಲ್ಲೇ ಭಾರತದಲ್ಲಿ ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್(Airbags) ಕಡ್ಡಾಯವಾಗಲಿದೆ.

ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತನ್ ಗಡ್ಕರಿ(Nitin Gadkari) ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಇದರಲ್ಲಿ ಕಾರಿಗೆ ಕನಿಷ್ಠ ಎರಡು ಏರ್‌ಬ್ಯಾಗ್ ಕಡ್ಡಾಯ ಮಾಡಲಾಗಿದೆ. ಈ ನಿಮಯಕ್ಕೂ ಮೊದಲು ಬೇಸ್ ಮಾಡೆಲ್ ಹಾಗೂ ನೆಕ್ಸ್ಟ್ ಮಾಡೆಲ್ ಕಾರುಗಳಲ್ಲಿ ಏರ್‌ಬ್ಯಾಗ್ ಇರಲಿಲ್ಲ. ಮಿಡಲ್ ವೇರಿಯೆಂಟ್‌ನಲ್ಲಿ ಎರಡು ಏರ್‌ಬ್ಯಾಗ್, ಟಾಪ್ ವೇರಿಯೆಂಟ್‌ನಲ್ಲಿ 6 ಏರ್‌ಬ್ಯಾಗ್ ಇರುತ್ತಿತ್ತು. ನಿಯಮ ತಿದ್ದುಪಡಿ ಬಳಿಕ ಬೇಸ್ ಮಾಡೆಲ್ ಕಾರುಗಳಿಗೆ 2 ಏರ್‌ಬ್ಯಾಗ್ ಕಡ್ಡಾಯ ಮಾಡಲಾಗಿತ್ತು. ಇದೀಗ ಇದೇ ನಿಯಮಕ್ಕೆ ತಿದ್ದುಪಡಿ ತಂದು ಕನಿಷ್ಠ 6 ಏರ್‌ಬ್ಯಾಗ್ ಕಡ್ಡಾಯ ಮಾಡಲಾಗುತ್ತಿದೆ.

India safest cars ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ವರ್ಷದ ಬೆಸ್ಟ್ ಸೇಫ್ಟಿ ಕಾರು ಲಿಸ್ಟ್!

ಕಳೆದ ವರ್ಷ ನಿತಿನ್ ಗಡ್ಕರಿ ಆಟೋಮೊಬೈಲ್(Automobile) ಕಂಪನಿಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ ಮಾಡುವಂತೆ ಸೂಚಿಸಿದ್ದರು. ಇದೀಗ ನಿಯಮವಾಗಿ ತರಲು ಗಡ್ಕರಿ ಮುಂದಾಗಿದ್ದಾರೆ. ಹೊಸ ನಿಯಮದ ಪ್ರಕಾರ ಬೇಸ್ ಮಾಡೆಲ್ ಇರಲಿ, ಯಾವುದೇ ಮಾಡೆಲ್ ಇರಲಿ ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್ ಸ್ಟಾಂಡರ್ಡ್ ಆಗಲಿದೆ. ಇದರಿಂದ ಕಾರಿನ ಹಿಂಬದಿ ಪ್ರಯಾಣಿಕರಿಗೂ ಸುರಕ್ಷತೆ ಸಿಗಲಿದೆ.

ಸದ್ಯ ಡ್ರೈವರ್ ಹಾಗೂ ಕೋ ಡ್ರೈವರ್‌ಗೆ ಎರಡು ಏರ್‌ಬ್ಯಾಗ್ ಕಡ್ಡಾಯ ಮಾಡಲಾಗಿತ್ತು. ಹೊಸ ನಿಯಮ ಜಾರಿಯಾದ ಬಳಿಕ ಹಿಂಬದಿ ಪ್ರಯಾಣಿಕರು ಸೇರಿದಂತೆ ಒಟ್ಟು 6 ಏರ್‌ಬ್ಯಾಗ್ ಕಡ್ಡಾಯವಾಗಿದೆ. ಕೇಂದ್ರ ಸರ್ಕಾರ ಪ್ರಯಾಣಿಕರ ಸುರಕ್ಷತೆಗಾಗಿ ಈ ನಿಯಮ ಜಾರಿಗೆ ತರುತ್ತಿದೆ. ಆದರೆ ಆಟೋ ಕಂಪನಿಗಳು ಇದೀಗ ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳಬೇಕಾಗಿದೆ. 6 ಏರ್‌ಬ್ಯಾಗ್ ಅಳವಡಿಕೆ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಆಟೋ ಕಂಪನಿಗಳು ತಲೆಬಾಗಿದೆ. ಇದು ಅಗತ್ಯ ಎಂದಿದೆ. ಆದರೆ ಮಾರಾಟ ವಿಚಾರ ಬಂದಾಗ 6 ಏರ್‌ಬ್ಯಾಗ್ ಆಟೋ ಕಂಪನಿಗಳಿಗೆ ತಲೆನೋವಿಗೆ ಕಾರಣವಾಗಿದೆ. ಕಾರಣ ಕೊರೋನಾ ಹೊಡೆತದಿಂದ ಮಾರಾಟ ಕುಸಿದಿದೆ. ಇದೀಗ ಮತ್ತೆ 4 ಏರ್‌ಬ್ಯಗ್ ಹೆಚ್ಚುವರಿಯಾಗಿ ಸೇರಿಸುವುದರಿಂದ ಕಾರಿನ ಬೆಲೆ ಹೆಚ್ಚಾಗಲಿದೆ. ಇದರಿಂದ ಮಾರಾಟ ಮತ್ತಷ್ಟು ಕುಸಿಯಲಿದೆ ಅನ್ನೋದು ಆಟೋಮೊಬೈಲ್ ಕಂಪನಿಗಳ ಮಾತು. 

Safety Alerts Navigation ಕೇಂದ್ರದಿಂದ ಚಾಲಕರಿಗೆ ಅಪಘಾತ, ಅಪಾಯ ಎಚ್ಚರಿಸುವ ಉಚಿತ ನ್ಯಾವಿಗೇಶನ್ ಆ್ಯಪ್ ಬಿಡುಗಡೆ!

6 ಏರ್‌ಬ್ಯಾಗ್ ಅಂದರೆ ಸದ್ಯ 2 ಇರುವ ಏರ್‌ಬ್ಯಾಗ್‌ಗಳಿಗೆ ಹೆಚ್ಚುವರಿಯಾಗಿ 4 ಏರ್‌ಬ್ಯಾಗ್ ಸೇರಿಸಲು 8,000 ರಿಂದ 10,000 ರೂಪಾಯಿ ಆಗಲಿದೆ. ಇದರಿಂದ ಕಾರಿನ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಈಗಾಗಲೇ ಹೊಸ ವರ್ಷದಿಂದ ಕಚ್ಚಾವಸ್ತುಗಳ ಬೆಲೆ ಹೆಚ್ಚಳದಿಂದ ಬಹುತೇಕ ಕಂಪನಿಗಳು ಕಾರಿನ ಬೆಲೆ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಇದೀಗ ಏರ್‌ಬ್ಯಾಗ್ ಕಾರಣಕ್ಕೆ ಮತ್ತೆ ಬೆಲೆ ಹೆಚ್ಚಳವಾಗಲಿದೆ. ಇದರಿಂದ ಭಾರತದಲ್ಲಿ ಆಟೋ ಕಂಪನಿಗಳಿಗೆ ಮತ್ತಷ್ಟು ನಷ್ಟವಾಗಲಿದೆ ಅನ್ನೋ ಮಾತುಗಳು ಇವೆ. ಆದರೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಸೇಫ್ಟಿ ವಿಚಾರದಲ್ಲಿ ರಾಜಿ ಇಲ್ಲ, ಹೀಗಾಗಿ ಕಡ್ಡಾಯ ಮಾಡಲು ಹೊರಟಿದೆ.

ದ್ವಿಚಕ್ರ ವಾಹನದಲ್ಲಿ 4 ವರ್ಷದೊಳಗಿನ ಮಕ್ಕಳ ಕರೆದೊಯ್ಯಲು ಪಾಲಿಸಬೇಕು ಹೊಸ ನಿಯಮ!

ಕಾರಿನ ಹಿಂಬದಿ ಪ್ರಯಾಣಿಕರಿಗೆ ಏರ್‌ಬ್ಯಾಗ್ ಇಲ್ಲದ ಕಾರಣ 17,538 ಪ್ರಯಾಣಿಕರು ಅಪಘಾತದಲ್ಲಿ(Road Accident) ಸಾವನ್ನಪ್ಪಿದ್ದಾರೆ. ರಸ್ತೆ ಅಪಘಾತ ತಡೆಯಲು ಹಲವು ಕ್ರಮಗಳನ್ನು ಕೈಗೊಂಡರು ಅಫಘಾತದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿಲ್ಲ. ಹೀಗಾಗಿ ಹೈವೆ ರಸ್ತೆಗಳಲ್ಲಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೊಸ ಹೈವೇ ರಸ್ತೆಗಳು, ಅಂತಾರಾಷ್ಟ್ರೀಯ ದರ್ಜೆಯ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೀಗ ಏರ್‌ಬ್ಯಾಗ್ ನಿಯಮದ ಮೂಲಕ ಮತ್ತಷ್ಟು ಸುರಕ್ಷತೆ ನೀಡಲು ಕೇಂದ್ರ ಮುಂದಾಗಿದೆ.

click me!