Upcoming Car ಮತ್ತಷ್ಟು ಆಕರ್ಷಕ, ಕೈಗೆಟುಕುವ ದರದಲ್ಲಿ ಮಹೀಂದ್ರ ಬೊಲೆರೋ SUV ಶೀಘ್ರದಲ್ಲೇ ಬಿಡುಗಡೆ!

Published : Jan 03, 2022, 08:37 PM IST
Upcoming Car ಮತ್ತಷ್ಟು ಆಕರ್ಷಕ, ಕೈಗೆಟುಕುವ ದರದಲ್ಲಿ ಮಹೀಂದ್ರ ಬೊಲೆರೋ SUV ಶೀಘ್ರದಲ್ಲೇ ಬಿಡುಗಡೆ!

ಸಾರಾಂಶ

2022ರ ಆರಂಭದಲ್ಲೇ ಹೊಚ್ಚ ಹೊಸ ಮಹೀಂದ್ರ ಬೊಲೆರೋ ಲಾಂಚ್ ತಯಾರಿ ಹೊಸ ಫೀಚರ್ಸ್, ಹೆಚ್ಚುವರಿ ಸುರಕ್ಷತೆ ಸೇರಿದಂತೆ ಹಲವು ಫೀಚರ್ಸ್  ಸೇರ್ಪಡೆ ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿವೆ

ನವದೆಹಲಿ(ಜ.03): ಹೊಸ ವರ್ಷದಲ್ಲಿ ಹೊಸ ಹೊಸ ವಾಹನ ಬಿಡುಗಡೆಯಾಗುತ್ತಿದೆ. ಇದೀಗ ಇದೇ ತಿಂಗಳಲ್ಲಿ ಮಹೀಂದ್ರ ಹೊಚ್ಚ ಹೊಸ ಬೊಲೆರೋ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಲಿದೆ. 7 ಸೀಟರ್ SUV ಕಾರು ಹಲವು ವಿಶೇಷತೆ, ಹೊಸ ಫೀಚರ್ಸ್ ಹಾಗೂ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ನೂತನ ಮಹೀಂದ್ರ ಬೊಲೆರೋ ಕಾರಿನ ಬೆಲೆ 8.71 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ 9.70 ಲಕ್ಷ ರೂಪಾಯಿ.

ಕೇಂದ್ರ ಸರ್ಕಾರದ ಸುರಕ್ಷತಾ ನಿಯಮದ ಪ್ರಕಾರ ಎಲ್ಲಾ ಕಾರುಗಳಿಗೆ ಕನಿಷ್ಠ 2 ಡ್ಯುಯೆಲ್ ಏರ್‌ಬ್ಯಾಗ್ ಇರಲೇಬೇಕು. ಹೀಗಾಗಿ ಡ್ರೈವರ್ ಏರ್‌ಬ್ಯಾಗ್ ಮಾತ್ರವಿದ್ದ ಮಹೀಂದ್ರ ಬೊಲೆರೊ ಕಾರು ಇದೀಗ ಡ್ಯುಯೆಲ್ ಏರ್‌ಬ್ಯಾಗ್ ಮೂಲಕ ಬಿಡುಗಡೆಯಾಗುತ್ತಿದೆ. ನೂತನ ಮಹೀಂದ್ರ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಆದರೆ ಮುಂಭಾಗದ ಹೆಡ್‌ಲ್ಯಾಂಪ್ಸ್, ಫಾಗ್ ಲೈಟ್ಸ್, ಮುಂಭಾಗದ ಗ್ರಿಲ್ ಸೇರಿದಂತೆ ಸಣ್ಣ ಬದದಲಾವಣೆ ಮೂಲಕ ನೂತನ ಮಹೀಂದ್ರ ಬೊಲೆರೋ ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

Mahindra Cars ಹೊಸ ಲೋಗೋದೊಂದಿಗೆ ಬಿಡುಗಡೆಯಾಗಲಿದೆ 2022ರ ಮಹೀಂದ್ರ XUV300 ಫೇಸ್‌ಲಿಫ್ಟ್!

ಮಹೀಂದ್ರ ಬೊಲೆರೋ ಫೇಸ್‌ಲಿಫ್ಟ್ ಎಂಜಿನ್:
ನೂತನ ಬೊಲೆರೋ ಕಾರಿನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 75 bhp ಪವರ್ ಹಾಗೂ 210 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ. 

ಡ್ಯುಯೆಲ್ ಟೋನ್ ಕಲರ್
ಮಹೀಂದ್ರ ಬೊಲೆರೋ ಫೇಸ್‌‌ಲಿಫ್ಟ್ ಕಾರಿನಲ್ಲಿನ ಮತ್ತೊಂದು ಬದಲಾವಣೆ ಎಂದರೆ ಡ್ಯುಯೆಲ್ ಟೋನ್ ಕಲರ್‌ನಲ್ಲಿ ಲಭ್ಯವಿದೆ. ಈ ಮೂಲಕ ನೂತನ ಮಹೀಂದ್ರ ಬೊಲೆರೋ ಆಕರ್ಷಣೆ ಮತ್ತಷ್ಚು ಹೆಚ್ಚಿದೆ. ಬ್ಲೂಟೂಥ್ ಸಂಪರ್ಕಿತ ಮ್ಯೂಸಿಕ್ ಸಿಸ್ಟಮ್,  AUX ಹಾಗೂ USB ಕೆನೆಕ್ಟಿವಿಟಿ, ಮಾನ್ಯುಯೆಲ್ ಏರ್‌ ಕಂಡೀಷನ್, ಕೀ ಲೆಸ್ ಎಂಟ್ರಿ, ಪವರ್ ಸ್ಟೀರಿಂಗ್, ಸೆಮಿ ಡಿಜಿಟಲ್ ಇನ್ಸ್ಟುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. 

Upcoming Car ಬಹುನಿರೀಕ್ಷಿತ, ಆಕರ್ಷಕ ಮಹೀಂದ್ರ ಸ್ಕಾರ್ಪಿಯೋ ಕಾರು ಬಿಡುಗಡೆ ದಿನಾಂಕ, ಬೆಲೆ ಬಹಿರಂಗ!

ಮಹೀಂದ್ರ ಸ್ಕಾರ್ಪಿಯೋ:
ಶೀಘ್ರದಲ್ಲೇ ಮಹೀಂದ್ರ ನೂತನ ಸ್ಕಾರ್ಪಿಯೋ ಬಿಡುಗಡೆ ಮಾಡಲಿದೆ. ನ್ಯೂ ಜನರೇಶನ್ ಸ್ಕಾರ್ಪಿಯೋ ಇದಾಗಿದೆ. ವಿಶೇಷ ಅಂದರೆ 7 ಸೀಟರ್ ಈ ಕಾರು ಹೊಸ ರೂಪ, ಹೊಸ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಆಗಸ್ಟ್ 15 ರಂದು ಹೊಚ್ಚ ಹೊಸ ಸ್ಕಾರ್ಪಿಯೋ ಕಾರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ನೂತನ ಸ್ಕಾರ್ಪಿಯೋ ಕಾರಿನ ಬೆಲೆ 9.99 ಲಕ್ಷ ರೂಪಾಯಿಯಿಂದ 12.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ನೂತನ ಸ್ಕಾರ್ಪಿಯೋ ಕಾರು 2.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ ಡೀಸೆಲ್ ಎಂಜಿನ್ ಬಳಸುವ ಸಾಧ್ಯತೆ ಇದೆ.

ಮಹೀಂದ್ರ XUV300 ಕಾರೂ ಅಪ್‌ಗ್ರೇಡೆಡ್ ಆಗಿ ಬಿಡುಗಡೆಯಾಗಲಿದೆ. 2022ರಲ್ಲಿ ಮಹೀಂದ್ರ XUV300 ಫೇಸ್‌ಲಿಫ್ಟ್ ಕಾರು ಹೊಸ ಲೋಗೋದಲ್ಲಿ ಬಿಡುಗಡೆಯಾಗಲಿದೆ. XUV300 ಕಾರು  XUV700 ಡಿಸೈನ್ ಪ್ರೇರಿತವಾಗಿದೆ. ಹೀಗಾಗಿ ಹೊಚ್ಚ ಹೊಸ ಕಾರು ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಮಹೀಂದ್ರ ಇತ್ತೀಚೆಗೆ ಮಹೀಂದ್ರ XUV700 ಕಾರು ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ 7 ಸೀಟರ್ ಕಾರು ಇದಾಗಿದೆ.  

ಭಾರತದಲ್ಲಿ ಸುರಕ್ಷತೆಯ ಕಾರುಗಳನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡುತ್ತಿರುವ ಆಟೋಮೊಬೈಲ್ ಕಂಪನಿ ಮಹೀಂದ್ರ. ಟಾಟಾ ಹಾಗೂ ಮಹೀಂದ್ರ 5 ಸ್ಟಾರ್ ರೇಟಿಂಗ್ ಕಾರು ಬಿಡುಗಡೆ ಮಾಡುತ್ತಿದೆ. ಹೀಗಾಗಿ ಸ್ವದೇಶಿ ಕಂಪನಿಗಳಾದ ಮಹೀಂದ್ರ ಹಾಗೂ ಟಾಟಾ ಭಾರತದ ವಾಹನ ಮಾರುಕಟ್ಟೆ ಅಗ್ರ ಸ್ಥಾನಕ್ಕೆ ದಾಪುಗಾಲಿಡುತ್ತಿದೆ.

 

PREV
Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ