ಪೆಟ್ರೋಲ್ ಎಂಜಿನ್‌ನಲ್ಲಿ ಹೊಸ ಇನ್ನೋವಾ ಹೈಕ್ರಾಸ್, ಆಕರ್ಷಕ ಬೆಲೆಯಲ್ಲಿ ಕಾರು!

By Suvarna News  |  First Published Apr 16, 2024, 7:19 PM IST

ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಮಾರಾಟದಲ್ಲೂ ದಾಖಲೆ ಬರೆದಿರುವ ಇನ್ನೋವಾ ಇದೀಗ ಹೊಚ್ಚ ಹೊಸ ಹೈಕ್ರಾಸ್ ಪೆಟ್ರೋಲ್ ಎಂಜಿನ್ ಕಾರು ಬಿಡುಗಡೆ ಮಾಡಿದೆ. ಆಕರ್ಷಕ ಬೆಲೆಯಲ್ಲಿ ಕಾರು ಲಭ್ಯವಿದೆ. ಜೊತೆಗೆ ಹೆಚ್ಚುವರಿ ಫೀಚರ್ಸ್, ಆರಾಮದಾಯಕ ಪ್ರಯಾಣಕ್ಕೆ ಎಲ್ಲಾ ಸೌಲಭ್ಯಗಳು ಈ ಕಾರಿನಲ್ಲಿದೆ.
 


ಬೆಂಗಳೂರು(ಏ.16) ಟೋಯೋಟಾ ಇನ್ನೋವಾ ಕಾರು ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಅತ್ಯಂತ ಆರಾಮದಾಯಕ ಪ್ರಯಾಣಕ್ಕೆ ಹೇಳಿ ಮಾಡಿಸಿದ ಕಾರು. ಜೊತೆಗೆ ಅತ್ಯಾಧುನಿಕ ಫೀಚರ್ಸ್, ಕಡಿಮೆ ನಿರ್ವಹಣಾ ವೆಚ್ಚದೊಂದಿದೆ ಇನ್ನೋವಾ ಜನರ ನೆಚ್ಚಿನ ಕಾರಾಗಿದೆ. ಇದೀಗ ಇನ್ನೋವಾ ಹೈಕ್ರಾಸ್ ಮಾಡೆಲ್‌ನಲ್ಲಿ ಪೆಟ್ರೋಲ್ ಎಂಜಿನ್ ಕಾರು ಬಿಡುಗಡೆ ಮಾಡಿದೆ. ಇನ್ನೋವಾ ಹೈಕ್ರಾಸ್  GX (O) ಗ್ರೇಡ್ 10 ಕಾರು ಅತ್ಯಾಧುನಿಕ ಫೀಚರ್ಸ್ ಹೊಂದಿದೆ. ಜೊತೆಗೆ ಬುಕಿಂಗ್ ಕೂಡ ಆರಂಭಗೊಂಡಿದೆ. 

ನೂತನ ಇನ್ನೋವಾ ಹೈಕ್ರಾಸ್ ಪೆಟ್ರೋಲ್ ಕಾರಿನ ಬೆಲೆ
ಹೈಕ್ರಾಸ್ ಪೆಟ್ರೋಲ್ GX (O) 8 ಸೀಟು:    20,99,000 ರೂಪಾಯಿ (ಎಕ್ಸ್ ಶೋ ರೂಂ)
ಹೈಕ್ರಾಸ್ ಪೆಟ್ರೋಲ್ GX (O) 8 ಸೀಟು:    21,13,000 ರೂಪಾಯಿ (ಎಕ್ಸ್ ಶೋ ರೂಂ)

Tap to resize

Latest Videos

undefined

ಹೊಸ ಇನ್ನೋವಾ ಕ್ರಿಸ್ಟಾ ಟಾಪ್ 2 ಮಾಡೆಲ್ ಬೆಲೆ ಪ್ರಕಟ, 50 ಸಾವಿರ ರೂಗೆ ಬುಕ್ ಮಾಡಿ ಹೊಸ ಕಾರು!
 
ಹೆಚ್ಚು ಶಕ್ತಿಯುತವಾಗದ ಎಕ್ಸ್ ಟೀರಿಯರ್:  
ಮುಂಭಾಗದ ಎಲ್ಇಡಿ ಫಾಗ್ ಲ್ಯಾಂಪ್ಸ್ , ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್  ಸೆನ್ಸಾರ್ಸ್ , ರಿಯರ್ ಡೀಫಾಗರ್ ಫೀಚರ್ ಗಳನ್ನು ಹೊಂದಿದೆ.

ಸುಪೀರಿಯರ್ ಕಂಫರ್ಟ್ : 
 ಚೆಸ್ಟ್ ನಟ್  ಥೀಮ್ ಇಂಟೀರಿಯರ್ , ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು ಡೋರ್ ಪ್ಯಾನಲ್, ಮಿಡ್-ಗ್ರೇಡ್ ಫ್ಯಾಬ್ರಿಲ್ ಸೀಟ್ಸ್, ರಿಯರ್ ಸನ್ ಶೇಡ್ ವೈಶಿಷ್ಟ್ಯವನ್ನು ಹೊಂದಿದೆ.
 
ಸುಧಾರಿತ ಅನುಕೂಲತೆ : 
ಆಟೋ ಎಸಿ, 10.1" ಇನ್ಫೋಟೈನ್ ಮೆಂಟ್ ಸಿಸ್ಟಂ, ವೈರ್ ಲೆಸ್ ಆಪಲ್ ಕಾರ್ ಪ್ಲೇ, ಪನೋರಮಿಕ್ ವ್ಯೂ ಮಾನಿಟರ್
7 ಮತ್ತು 8 ಸೀಟರ್ ಆಯ್ಕೆಗಳಲ್ಲಿ ಲಭ್ಯವಿರುವ  GX (O) ಗ್ರೇಡ್ 7 ಡೈನಾಮಿಕ್ ಬಣ್ಣಗಳಲ್ಲಿ ಲಭ್ಯವಿದೆ.  ಬ್ಲ್ಯಾಕಿಶ್  ಅಗೆಹಾ ಗ್ಲಾಸ್ ಫ್ಲೇಕ್, ಪ್ಲಾಟಿನಂ ವೈಟ್ ಪರ್ಲ್ , ಆಟಿಟ್ಯೂಡ್  ಬ್ಲ್ಯಾಕ್ ಮೈಕಾ, ಸ್ಪಾರ್ಕ್ಲಿಂಗ್ ಬ್ಲ್ಯಾಕ್  ಕ್ರಿಸ್ಟಲ್  ಶೈನ್, ಸಿಲ್ವರ್ ಮೆಟಾಲಿಕ್, ಸೂಪರ್ ವೈಟ್ ಮತ್ತು ಅವಂಟ್ ಗ್ರೇಡ್  ಬ್ರೋನ್ಜ್ ಮೆಟಾಲಿಕ್ ಕಲರ್ ಗಳಲ್ಲಿ ದೊರೆಯಲಿದೆ.
 
ಹೆಚ್ಚಿನ ಕಾರ್ಯಕ್ಷಮತೆ: 
ಇನ್ನೋವಾ ಹೈಕ್ರಾಸ್ 2 ಲೀ  ಟಿಎನ್ ಜಿಎ ಗ್ಯಾಸೋಲಿನ್ ಎಂಜಿನ್ ಹೊಂದಿದ್ದು, 128 ಕಿಲೋವ್ಯಾಟ್ (174 ಪಿಎಸ್) ಮತ್ತು 205 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಲಾಂಚ್ ಗೇರ್ ಕಾರ್ಯ ವಿಧಾನದೊಂದಿಗೆ ಡೈರೆಕ್ಟ್ ಶಿಫ್ಟ್ ಸಿವಿಟಿ ಮತ್ತು ಸುಗಮ ಹಾಗೂ ಸ್ಪಂದಿಸುವ ವೇಗವರ್ಧನೆಗಾಗಿ  10 ಸ್ಪೀಡ್ ಸೀಕ್ವೆನ್ಸಿಯಲ್ ಶಿಫ್ಟ್ ಜೊತೆಗೆ 16.13 ಕಿ.ಮೀ ಬೆಸ್ಕ್ ಇನ್ ಕ್ಲಾ್ಸ ಫ್ಯೂಯಲ್ ಎಕಾನಮಿಯನ್ನು ಹೊಂದಿದೆ.

 ಟಫ್ ಎಕ್ಸ್ ಟೀರಿಯರ್: 
ಹೊಸ ಗ್ರೇಡ್ ಬೋಲ್ಡ್ ಮತ್ತು ಮಸ್ಕ್ಯುಲಾರ್  ಎಸ್ ಯುವಿ ತರಹದ ಎಕ್ಸ್ ಟೀರಿಯರ್ ಅನ್ನು ಹೊಂದಿದೆ. 16-ಇಂಚಿನ ಸಿಲ್ವರ್ ಅಲಾಯ್ ವೀಲ್ಸ್ , ಎಲ್ಇಡಿ ಸ್ಟಾಪ್ ಲ್ಯಾಂಪ್ ನೊಂದಿಗೆ ರೂಫ್ ಎಂಡ್ ಸ್ಪಾಯ್ಲರ್ ಮತ್ತು ಎಲ್ ಇಡಿ ಸ್ಪಾಟ್ ಲ್ಯಾಂಪ್ ಜೊತೆಗೆ ರೂಫ್ ಎಂಡ್ ಸ್ಪಾಯ್ಲರ್, ಆಟೋ ಫೋಲ್ಡ್ ಓಆರ್ ವಿಎಂ,  ಎಲೆಕ್ಟ್ರಿಕ್ ಅಡ್ಜಸ್ಟ್ ಮತ್ತು ಟರ್ನ್ ಇಂಡಿಕೇಟರ್ ವೈಶಿಷ್ಟ್ಯಗಳನ್ನು ಹೊಂದಿದೆ.
 
ಐಷಾರಾಮಿ ಮತ್ತು ಆರಾಮದಾಯಕ ಇಂಟೀರಿಯರ್
ಇನ್ನೋವಾ ಹೈಕ್ರಾಸ್ GX (O) ಸುಧಾರಿತ ಕ್ಯಾಬಿನ್ ಸೌಂದರ್ಯವನ್ನು ಹೊಂದಿದೆ. ಡಾರ್ಕ್ ಚೆಸ್ಟ್ನಟ್ ಕ್ವಿಲ್ಟೆಡ್ ಲೆದರ್ ಸೀಟುಗಳೊಂದಿಗೆ ಸಾಫ್ಟ್ ಟಚ್ ಲೆದರ್  ಮತ್ತು ಮೆಟಾಲಿಕ್ ಡೆಕೋರೇಟೆಡ್ ಲೈನಿಂಗ್ ನ್ನು ಒಳಗೊಂಡಿದೆ.

50 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಇನೋವಾ ಕ್ರಿಸ್ಟಾ ಡೀಸೆಲ್ ಕಾರು!

ಸುಧಾರಿತ ಸುರಕ್ಷತಾ ಕೊಡುಗೆ:
ಇನ್ನೋವಾ ಹೈಕ್ರಾಸ್ ಆಟೋ-ಹೋಲ್ಡ್ ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಆಲ್-ವೀಲ್ ಡಿಸ್ಕ್ ಬ್ರೇಕ್  6  ಎಸ್ ಆರ್ ಎಸ್ ಏರ್ ಬ್ಯಾಗ್  ಮತ್ತು ಐಎಸ್ ಒಫಿಕ್ಸ್ ಆಂಕರ್ ಗಳು ಸೇರಿದಂತೆ ಸಮಗ್ರ ಸುರಕ್ಷತಾ ವೈಶಿಷ್ಟ್ಯಗಳನ್ನು ಸಾಟಿಯಿಲ್ಲದ ಆರಾಮದೊಂದಿಗೆ ನೀಡುತ್ತಿದೆ.  ವೈಯಕ್ತಿಕ ಐಷಾರಾಮಕ್ಕಾಗಿ ಕ್ಯಾಪ್ಟನ್ ಸೀಟುಗಳನ್ನು ನೀಡುತ್ತದೆ, ಹೆಚ್ಚಿದ ಬೂಟ್ ಸ್ಪೇಸ್ ಗಾಗಿ 3ನೇ ಸಾಲಿನ ಫೋಲ್ಡ್-ಫ್ಲಾಟ್ ಸೀಟ್, ರೀಕ್ಲೈನ್ ಮೂರನೇ ಸಾಲಿನ ಸೀಟ್ ಗಳು  ಎಲ್ಲಾ ಪ್ರಯಾಣಿಕರಿಗೆ ಪ್ರತಿ ಪ್ರಯಾಣವು ಆನಂದದಾಯಕವಾಗಿರಲಿದೆ ಎಂಬುದನ್ನು ಖಚಿತಪಡಿಸುತ್ತದೆ.
 

click me!