Asianet Suvarna News Asianet Suvarna News

ಹೊಸ ಇನ್ನೋವಾ ಕ್ರಿಸ್ಟಾ ಟಾಪ್ 2 ಮಾಡೆಲ್ ಬೆಲೆ ಪ್ರಕಟ, 50 ಸಾವಿರ ರೂಗೆ ಬುಕ್ ಮಾಡಿ ಹೊಸ ಕಾರು!

ಟೊಯೋಟಾ ಇನ್ನೋವಾ ಕ್ರಿಸ್ಟಾ ಕಾರಿನ ಝಡ್ ಎಕ್ಸ್ ಮತ್ತು ವಿಎಕ್ಸ್ ಮಾಡೆಲ್ ಕಾರಿನ ಬೆಲೆ ಪ್ರಕಟಗೊಂಡಿದೆ. ಹಲವು ವಿಶೇಷತೆ, ಆರಾಮಾದಾಯಕ ಪ್ರಯಾಣ ನೀಡುವ ಇನ್ನೋವಾ ಇದೀಗ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ.

Toyota kirloskar motor launch innova crysta top 2 model price in India ckm
Author
First Published May 5, 2023, 1:08 PM IST

ಬೆಂಗಳೂರು(ಮೇ.05): ಹೊಚ್ಚ ಹೊಸ ಇನ್ನೋವಾ ಕ್ರಿಸ್ಟಾದ ಟಾಪ್ ಎರಡು ಮಾಡೆಲ್ ಕಾರಿನ ಬೆಲೆ ಪ್ರಕಟಗೊಂಡಿದೆ. ಟಾಪ್ ಮಾಡೆಲ್‌ಗಳಾದ ZX ಹಾಗೂ VX ಮಾಡೆಲ್ ಕಾರಿನ ಬೆಲೆಯನ್ನು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಘೋಷಿಸಿದೆ. ಎಂಪಿವಿ ವಿಭಾಗದಲ್ಲಿ ಸದ್ಯ ಇನ್ನೋವಾ ಕಾರು ಮೀರಿಸಬಲ್ಲ ಕಾರಿಲ್ಲ. ಹಲವು ಪ್ರತಿಸ್ಪರ್ಧಿ ಕಾರುಗಳಿದ್ದರೂ ಇನ್ನೋವ ಭಾರತದಲ್ಲಿ ಗ್ರಾಹಕರ ವಿಶ್ವಾಸ ಉಳಿಸಿಕೊಂಡಿದೆ. 2005ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಇನೋವಾ ಕಾರು ಬಿಡುಗಡೆಯಾಗಿದೆ. ಬಳಿಕ ಹಲವು ರೂಪಾಂತರಗಳು, ಅಪ್‌ಗ್ರೇಡ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಇನ್ನೋವಾ ಕಾರುಗಳು ಮಾರಾಟವಾಗಿದೆ. 

ಇನೋವಾ ಕ್ರಿಸ್ಟಾ ಬೆಲೆ(ಎಕ್ಸ್ ಶೋರೂಂ)
ಇನೋವಾ ಕ್ರಿಸ್ಟಾ ZX ( 7 S ) :25,43,000 ರೂಪಾಯಿ
ಇನೋವಾ ಕ್ರಿಸ್ಟಾVX ( 8 S)    :23,84,000 ರೂಪಾಯಿ
ಇನೋವಾ ಕ್ರಿಸ್ಟಾVX ( 7 S )    :23,79,000 ರೂಪಾಯಿ
ಇನೋವಾ ಕ್ರಿಸ್ಟಾVX FLT ( 8 S) :23,84,000 ರೂಪಾಯಿ
ಇನೋವಾ ಕ್ರಿಸ್ಟಾVX FLT (7 S): 23,79,000 ರೂಪಾಯಿ

 

50 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಇನೋವಾ ಕ್ರಿಸ್ಟಾ ಡೀಸೆಲ್ ಕಾರು!

ಹೊಸ ಇನ್ನೋವಾ ಕ್ರಿಸ್ಟಾ ಡೀಸೆಲ್ ನ ಮೊದಲ ಎರಡು ಗ್ರೇಡ್ ಗಳ ಬೆಲೆಯನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಅತ್ಯಾಕರ್ಷಕ  ಫ್ಯಾಸಿಯಾ ಮತ್ತು ಶೈಲಿ, ಆರಾಮ ಮತ್ತು ಕಾರ್ಯಕ್ಷಮತೆಯ ಪರಿಪೂರ್ಣ ಮಿಶ್ರಣ ಹೊಂದಿದೆ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ಸೇಲ್ಸ್ ಮತ್ತು  ಮಾರ್ಕೆಟಿಂಗ್ ಉಪಾಧ್ಯಕ್ಷ ಅತುಲ್ ಸೂದ್  ಹೇಳಿದ್ದಾರೆ. ಹೊಸ ಇನ್ನೋವಾ ಕ್ರಿಸ್ಟಾ ಪ್ರಸಿದ್ಧ ಇನ್ನೋವಾ ಪರಂಪರೆಯನ್ನು ಮುಂದುವರಿಸುವುದು ಖಚಿತ. ವಾಹನವು ಪ್ರಯಾಣಿಕರ ಹೆಚ್ಚಿನ ಸುರಕ್ಷತೆಯನ್ನು ಖಚಿತಪಡಿಸುವ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ನಮ್ಮ ಗ್ರಾಹಕರು ಈ ವಾಹನವು ನೀಡುವ ವರ್ಧಿತ ಚಾಲನಾ ಅನುಭವವನ್ನು ಮೆಚ್ಚುತ್ತಾರೆ ಮತ್ತು ಆನಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು. 

ಹೊಸ ಇನ್ನೋವಾ ಕ್ರಿಸ್ಟಾ ರೂ.50,000/-ಕ್ಕೆ ಬುಕಿಂಗ್ ಗೆ ಲಭ್ಯವಿದೆ. ಔಟ್ ಲೆಟ್ ಗಳಲ್ಲಿ ಮತ್ತು ಆನ್ ಲೈನ್ ನಲ್ಲಿ ಬುಕ್ ಮಾಡಬಹುದು. ಹೊಸ ಇನ್ನೋವಾ ಕ್ರಿಸ್ಟಾ ಜಿ, ಜಿಎಕ್ಸ್, ವಿಎಕ್ಸ್ ಮತ್ತು ಝಡ್ಎಕ್ಸ್ ಎಂಬ ನಾಲ್ಕು ಗ್ರೇಡ್ಗಳಲ್ಲಿ ಮತ್ತು ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಅವಂತ್-ಗಾರ್ಡೆ ಬ್ರೋನ್ಜ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಸಿಲ್ವರ್ ಮೆಟಾಲಿಕ್ ಎಂಬ ಐದು ಬಣ್ಣಗಳಲ್ಲಿ ಬುಕಿಂಗ್ಗೆ ಲಭ್ಯವಿದೆ.

ಡಾಲಿ ಧನಂಜಯ್ ಹೊಸ ಟೋಯೋಟಾ ವೆಲ್‌ಫೈರ್ ಕಾರಿನ ವಿಶೇಷತೆ ಏನು?

ವಿಶೇಷತೆಗಳು:
•         ಇಕೋ ಮತ್ತು ಪವರ್ ಡ್ರೈವ್ ಮೋಡ್ ಗಳೊಂದಿಗೆ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನೊಂದಿಗೆ 2.4 ಲೀಟರ್ ಡೀಸೆಲ್ ಎಂಜಿನ್ ನಿಂದ ಇದು ನಿಯಂತ್ರಿಸಲ್ಪಡುತ್ತದೆ.
•         ಸುರಕ್ಷತಾ ವೈಶಿಷ್ಟ್ಯಗಳಲ್ಲಿ 7 ಎಸ್ ಆರ್ ಎಸ್ ಏರ್ ಬ್ಯಾಗ್ ಗಳು, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಮತ್ತು ಬ್ರೇಕ್ ಅಸಿಸ್ಟ್ (ಬಿಎ), 3-ಪಾಯಿಂಟ್ ಸೀಟ್ ಬೆಲ್ಟ್ ಮತ್ತು ಹೆಡ್ರೆಸ್ಟ್ ಸೇರಿವೆ.
•         ಡಿಜಿಟಲ್ ಡಿಸ್ಪ್ಲೇ, 8-ವೇ ಪವರ್ ಅಡ್ಜಸ್ಟ್ ಡ್ರೈವರ್ ಸೀಟ್, ಸ್ಮಾರ್ಟ್ ಎಂಟ್ರಿ ಸಿಸ್ಟಮ್, ಸೀಟ್ ಬ್ಯಾಕ್ ಟೇಬಲ್, ವಿವರವಾದ ಡ್ರೈವ್ ಮಾಹಿತಿಯೊಂದಿಗೆ ಟಿಎಫ್ ಟಿ  ಎಂಐಡಿ, ಲೆದರ್ ಸೀಟ್ ಕಲರ್ ಆಯ್ಕೆಗಳು (ಬ್ಲಾಕ್ ಮತ್ತು ಕ್ಯಾಮಲ್ ಟನ್ ), ಆಂಬಿಯೆಂಟ್ ಇಲ್ಯುಮಿನೇಷನ್ ಮತ್ತು ಒನ್ ಟಚ್ ಟಂಬಲ್ ಸೆಕೆಂಡ್ ರೋಮ್ ಸೀಟ್ ಗಳೊಂದಿಗೆ ಪ್ರಯಾಣಿಕರ ಆರಾಮವನ್ನು ಹೆಚ್ಚಿಸಲಾಗಿದೆ.
•         ಆಂಡ್ರಾಯ್ಡ್ ಆಟೋ / ಆಪಲ್ ಕಾರ್ ಪ್ಲೇಯೊಂದಿಗೆ ಸ್ಮಾರ್ಟ್ ಪ್ಲೇಕಾಸ್ಟ್ 8' ಟಚ್ ಸ್ಕ್ರೀನ್ ಆಡಿಯೊ ಅದ್ಭುತ ಮಲ್ಟಿಮೀಡಿಯಾ ಅನುಭವಕ್ಕಾಗಿ ಲಭ್ಯವಿದೆ.

Follow Us:
Download App:
  • android
  • ios