ಪುತ್ರನ 18ನೇ ಹುಟ್ಟು ಹಬ್ಬ. ಈ ಬರ್ತ್‌ಡೇ ವಿಶೇಷವಾಗಿಸಲು ಉದ್ಯಮಿ ತಂದೆ ಮಗನಿಗೆ ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಹುರಕಾನ್ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಭಾರತದ ಈ ಉದ್ಯಮಿ ಯಾರು?
ದುಬೈ(ಏ.12) ಭಾರತದ ಉದ್ಯಮಿ ತಮ್ಮ ಮಗನ 18ನೇ ವರ್ಷದ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ ನೀಡಿ ಇದೀಗ ಭಾರಿ ಸುದ್ದಿಯಾಗಿದ್ದಾರೆ. 5 ಕೋಟಿ ರೂಪಾಯಿ ಬೆಲೆಯ ಲ್ಯಾಂಬೋರ್ಗಿನಿ ಹುರಕಾನ್ ಕಾರನ್ನು ಮಗನಿಗೆ ಬರ್ತ್‌ಡೇ ಗಿಫ್ಟ್ ಆಗಿ ನೀಡಿದ್ದಾರೆ. ಹೌದು, ದುಬೈನ ಭಾರತೀಯ ಮೂಲದ ಉದ್ಯಮಿ ವಿವೇಕ್ ಕುಮಾರ್ ರುಂಗ್ತಾ, ತಮ್ಮ ಪುತ್ರ ತರುಣ್ ರುಂಗ್ತಾಗೆ ಈ ದುಬಾರಿ ಉಡುಗೊರೆ ನೀಡಿದ್ದಾರೆ. ಹುಟ್ಟು ಹಬ್ಬದ ದಿನ ದುಬಾರಿ ಉಡುಗೊರೆ ಪಡೆದ ಪುತ್ರನ ಸಂತಸಕ್ಕೆ ಪಾರವೇ ಇರಲಿಲ್ಲ. ಈ ವಿಡಿಯೋ ವೈರಲ್ ಆಗಿದೆ.
ಮಧ್ಯಪ್ರಾಚ್ಯದಲ್ಲಿ ಹೂಡಿಕೆ ಉದ್ಯಮದಲ್ಲಿ ಸದ್ದು ಮಾಡಿರುವ ವಿಕೆಆರ್ ಗ್ರೂಪ್ ಮಾಲೀಕರಾಗಿರುವ ವಿವೇಕ್ ಕಮಾರ್ ರುಂಗ್ತಾ ಮಗನಿಗೆ ದುಬಾರಿ ಕಾರು ಉಡುಗೊರೆ ನೀಡಿದ್ದಾರೆ. ಯುನೈಟೆಡ್ ಅರಬ್ ಎಮಿರೈಟ್ಸ್‌ನಲ್ಲಿ ಉದ್ಯಮ ಸಾಮ್ರಾಜ್ಯ ಕಟ್ಟಿರುವ ವಿವೇಕ್ ಕುಮಾರ್ ಬಳಿ ಐಷಾರಾಮಿ ಕಾರುಗಳಿವೆ. ಆದರೆ ಯಾವುದೇ ಸೂಪರ್ ಕಾರು ಹೊಂದಿಲ್ಲ. ಪುತ್ರನಿಗೆ ಸೂಪರ್ ಕಾರುಗಳ ಮೇಲೆ ವಿಪರೀತ ವ್ಯಾಮೋಹ. ಹೀಗಾಗಿ 18ನೇ ಹಟ್ಟುಹಬ್ಬಕ್ಕೆ ಲ್ಯಾಂಬೋರ್ಗಿನಿ ಹುರಕಾನ್ ಕಾರು ಗಿಫ್ಟ್ ನೀಡಿದ್ದಾರೆ.
undefined
ಲ್ಯಾಂಬೋರ್ಗಿನಿ ವೆನಾಟಸ್ ಕೂಪ್, ಇದು ಕೇವಲ ಕಾರಲ್ಲ ಐಷರಾಮಿ ಅರಮನೆ!
ಲ್ಯಾಂಬೋರ್ಗಿನಿಯ ಸಿಗ್ನೆಚರ್ ಹಳದಿ ಕಲರ್ ಕಾರು ಪಡೆದ ವಿಡಿಯೋವನ್ನು ಪುತ್ರ ಹಂಚಿಕೊಂಡಿದ್ದಾರೆ. ತಂದೆಯ ಉಡುಗೊರೆಗೆ ನನ್ನಲ್ಲಿ ಮಾತುಗಳೇ ಇಲ್ಲ. ಪ್ರೀತಿ ಹಾಗೂ ಸಂತೋಷದಿಂದ ನನ್ನ ಮನಸ್ಸು , ಹೃದಯ ತುಂಬಿದೆ. ನನ್ನ 18ನೇ ಹುಟ್ಟುಹಬ್ಬವನ್ನು ವಿಶೇಷವಾಗಿಸಿದ ತಂದೆಗೆ ಧನ್ಯವಾದ. ಪ್ರೀತಿ, ವಾತ್ಸಲ್ಯದ ಜೊತೆಗೆ ಆಸೆಯನ್ನೂ ಪೂರೈಸಿದ್ದಾರೆ. ಕೋಟಿ ಕೋಟಿ ನಮನ ಎಂದು ತರುಣ್ ರುಂಗ್ತಾ ಹೇಳಿದ್ದಾರೆ.
18ನೇ ಹಟ್ಟುಹಬ್ಬದ ದಿನ ಯುಎಇನ ಖ್ಯಾತ ಲ್ಯಾಂಬೋರ್ಗಿನಿ ಶೋರೂಂಗೆ ತೆರಳಿದ ವಿವೇಕ್ ಕುಮಾರ್ ರುಂಗ್ತಾ ಕುಟಂಬ ಹೊಚ್ಚ ಹೊಸ ಕಾರು ಡೆಲಿವರಿ ಪಡೆದುಕೊಂಡಿದ್ದಾರೆ. ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮ ಆಚರಿಸಿದ್ದಾರೆ. ಕಾರು ಅನ್‌ಬಾಕ್ಸ್ ಮಾಡಿದ ತರುಣ್ ರುಂಗ್ತಾ ಸಂತಸ ಹಂಚಿಕೊಂಡಿದ್ದಾರೆ. ದುಬೈನಲ್ಲಿ ನೆಲೆಸಿರುವ ವಿವೇಕ್ ಕುಮಾರ್ ರುಂಗ್ತಾ ಕುಟುಂಬ ಐಷಾರಾಮಿ ಬಂಗಲೆ ಸೇರಿದಂತೆ ಹಲವು ಮನೆಗಳನ್ನು ಹೊಂದಿದೆ.
8.89 ಕೋಟಿ ರೂ ಬೆಲೆಯ ಲ್ಯಾಂಬೋರ್ಗಿನಿ Revuelto ಹೈಬ್ರಿಡ್ ಸೂಪರ್ ಕಾರು ಬಿಡುಗಡೆ!
ದುಬೈನಲ್ಲಿ ಕಾರು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕನಿಷ್ಟ ವಯಸ್ಸು 18. ಇತ್ತ ತರುಣ್ ರುಂಗ್ತಾ 18 ತುಂಬಿದ ಬೆನ್ನಲ್ಲೇ ಲೈಸೆನ್ಸ್‌ಗೆ ಅರ್ಜಿ ಹಾಕಿ ಪರೀಕ್ಷೆ ಪಾಸ್ ಮಾಡಿದ್ದಾರೆ. ದ್ವಿಚಕ್ರ ವಾಹನ ಲೈಸೆನ್ಸ್ ಪಡೆಯಲು ಕನಿಷ್ಠ 17 ವಯಸ್ಸು ಆಗಿರಬೇಕು.