ಆ್ಯಪಲ್ ಕಾರು, ಮೈಕ್ರೋ ಎಲ್‌ಇಡಿ ಯೋಜನೆ ಅರ್ಧಕ್ಕೆ ಸ್ಥಗಿತ, 600 ಮಂದಿ ಉದ್ಯೋಗ ಕಡಿತ!

By Suvarna News  |  First Published Apr 5, 2024, 5:22 PM IST

ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ಆ್ಯಪಲ್ ಶಾಕ್ ನೀಡಿದೆ. ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಆ್ಯಪಲ್ ಕಾರು ಅರ್ಧಕ್ಕೆ ನಿಂತಿದೆ. ಇತ್ತ ಮೈಕ್ರೋ ಎಲ್ಇಡಿ ಯೋಜನೆ ಕೂಡ ಸ್ಥಗಿತಗೊಂಡಿದೆ. ಇದರ ಪರಿಣಾಮ 600 ಮಂದಿಯ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ. 
 


ನ್ಯೂಯಾರ್ಕ್(ಏ.05) ಆ್ಯಪಲ್ ಕಂಪನಿ ಉತ್ಪನ್ನಗಳು ವಿಶ್ವದ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆ ಹಾಗೂ ನಂಬಿಕಸ್ಥವಾಗಿದೆ. ಬೆಲೆ ಕೊಂಚ ದುಬಾರಿಯಾದರೂ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಐಫೋನ್, ಮ್ಯಾಕ್ ಸೇರಿದಂತೆ ಹಲವು ಗ್ಯಾಜೆಟ್ಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಆ್ಯಪಲ್ ಇದೇ ಜೋಶ್‌‌ನಲ್ಲಿ ಆ್ಯಪಲ್ ಕಾರು ಯೋಜನೆ ಆರಂಭಿಸಿತು. ಇಷ್ಟೇ ಅಲ್ಲ ಸ್ಮಾರ್ಟ್‌ವಾಚ್ ಡಿಸ್‌ಪ್ಲೆ ಯೋಜನೆ ಕೂಡ ಕೈಗೆತ್ತಿಕೊಂಡಿತ್ತು. ಆದರೆ ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ಆ್ಯಪಲ್ ಶಾಕ್ ನೀಡಿದೆ. ಆ್ಯಪಲ್ ಕಾರು ಹಾಗೂ ಆ್ಯಪಲ್ ಮೈಕ್ರೋಎಲ್ಇಡಿ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಇದರಿಂದ ಈ ಯೋಜನೆಗೆ ಆಯ್ಕೆಯಾದ ಹಲವು ಉದ್ಯೋಗಿಗಳು ಅತಂತ್ರರಾಗಿದ್ದಾರೆ.

2014ರಲ್ಲಿ ಆ್ಯಪಲ್ ಕಾರು ಪ್ರಾಜೆಕ್ಟ್ ಘೋಷಣೆ ಮಾಡಿತ್ತು. 2014ರಿಂದಲೇ ಆ್ಯಪಲ್ ಕಾರು ಯೋಜನೆ ಕೆಲಸಗಳು ಆರಂಭಗೊಂಡಿತು. ಡಿಸೈನ್ ಸೇರಿದಂತೆ ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಿತ್ತು. ಬಳಿಕ ಕಾರು ಯೋಜನೆ ಘಟಕ ಆರಂಭಿಸಿ ಉದ್ಯೋಗಿಗಳ ನೇಮಕ ಮಾಡಿತ್ತು. ಎಂಜಿನಿಯರ್ಸ್ ಸೇರಿದಂತೆ ಹಲವು ಉದ್ಯೋಗಿಗಳು ಆ್ಯಪಲ್ ಕಾರು ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರು. 2024ರ ಆರಂಭದಲ್ಲೇ ಆ್ಯಪಲ್ ತನ್ನ ಕಾರು ಯೋಜನೆ ಸ್ಥಗಿತಗೊಳಿಸಲು ನಿರ್ಧರಿಸಿತ್ತು. ಫೆಬ್ರವರಿ ತಿಂಗಳಲ್ಲಿ ಕಾರು ಯೋಜನೆ ಸ್ಥಗಿತದ  ಕಾನೂನು ಪ್ರಕ್ರಿಯೆಗಳು ಆರಂಭಗೊಂಡಿತ್ತು. ಇದೀಗ ಆ್ಯಪಲ್ ಅಧಿಕೃತವಾಗಿ ಕಾರು ಯೋಜನೆ ಸ್ಥಗಿತ ಕುರಿತು ಸ್ಪಷ್ಟಪಡಿಸಿದೆ.

Tap to resize

Latest Videos

undefined

ಐಫೋನ್‌ ಖರೀದಿಸಲು ಇದು ಸರಿಯಾದ ಸಮಯ, ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಕೇವಲ 8,249ಗೆ ಲಭ್ಯ

ಇತ್ತ ಸ್ಮಾರ್ಟ್‌ವಾಚ್ ಡಿಸ್‌ಪ್ಲೆ ಪ್ರಾಜೆಕ್ಟ್ ಕೂಡ ಸ್ಥಗಿತಗೊಂಡಿದೆ. ಇದೀಗ ಕಾರು ಯೋಜನೆ ಹಾಗೂ ಮೈಕ್ರೋಎಲ್ಇಡಿ ಯೋಜನೆ ಸ್ಥಗಿತಗೊಂಡಿರುವ ಕಾರಣ ಈ ಎರಡು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ನುರಿತ ಉದ್ಯೋಗಿಗಳನ್ನು ಆ್ಯಪಲ್ ಕಂಪನಿಯ ಇತರ ಯೋಜನೆಗಳಿಗೆ ವರ್ಗಾವಣೆ ಮಾಡಲಾಗಿದೆ. ಆದರೆ ಮತ್ತೆ ಹಲವು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಎರಡು ಯೋಜನೆ ಸ್ಥಗಿತಗೊಂಡಿರುವ ಕಾರಣ ಆ್ಯಪಲ್‌ನ 600 ಉದ್ಯೋಗಿಗಳಿ ಕತ್ತರಿ ಬಿದ್ದಿದೆ.

ಆ್ಯಪಲ್ ಕಾರು ಯೋಜನೆಯಡಿಯಲ್ಲಿದ್ದ 371 ಉದ್ಯೋಗಿಗಳ ಉದ್ಯೋಗ ಕಡಿತಗೊಂಡಿದೆ. ಸಾಂತಾ ಕ್ಲಾರ ಕಚೇರಿಯಲ್ಲಿದ ಬಹುತೇಕ ಉದ್ಯೋಗಿಗಳು ಕೆಲಸ ಕಳದುಕೊಂಡಿದ್ದಾರೆ. ಇನ್ನುಳಿದ ಉದ್ಯೋಗಿಗಳು ಮೈಕ್ರೋಲ್ಯಾಬ್LED ಯೋಜನೆಯಡಿಯಿಂದ ಉದ್ಯೋಗ ಕಳೆದುಕೊಂಡಿದ್ದಾರೆ. 2024-25ರ ಆರ್ಥಿಕ ವರ್ಷದ ಆರಂಭದಲ್ಲೇ ಪ್ರತಿಷ್ಠಿಕ ಆ್ಯಪಲ್ ಕಂಪನಿಯ ಉದ್ಯೋಗ ಕಡಿತ ತಲೆನೋವು ತಂದಿದೆ.

24K ಗೋಲ್ಡ್‌, 159 ವಜ್ರ ಹೊದಿಸಿದ ಜಗತ್ತಿನ ಅತೀ ದುಬಾರಿ ಐಫೋನ್‌, ಅಬ್ಬಬ್ಬಾ.ಬೆಲೆ ಇಷ್ಟೊಂದಾ?
 

click me!