ಬೆಂಗಳೂರು(ಜ.28): ಲ್ಯಾಂಡ್‌ರೋವರ್‌ನಿಂದ(Land Rover) ಮತ್ತೊಂದು ರೇಂಜ್ ರೋವರ್ SUV ಬಿಡುಗಡೆಗೆ ಸಜ್ಜಾಗಿದೆ. ಇದೀಗ ಹೊಚ್ಚ ಹೊಸ ರೇಂಜ್ ರೋವರ್ SUV ಬುಕಿಂಗ್ ಆರಂಭಿಸಿದೆ. , 390 kW ಶಕ್ತಿ ಮತ್ತು 750 Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿರುವ ನೂತನ ಕಾರು ಎರಡು ಎಂಜಿನ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. 4.4 ಲೀಟರ್ ಟ್ವಿನ್ ಟರ್ಬೋ ಪೆಟ್ರೋಲ್(Petrol) ಹಾಗೂ 3.0 ಲೀಟರ್ ಡೀಸೆಲ್(Diesel) ಎಂಜಿನ್ ವೇರಿಯೆಂಟ್ ರೇಂಜ್ ರೋವರ್ ಕಾರಿನ ಬುಕಿಂಗ್ ಆರಂಭಗೊಂಡಿದೆ.
ಡೀಸೆಲ್ ಎಂಜಿನ್ ಕಾರು 258 kW ಶಕ್ತಿ ಮತ್ತು 700 Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಪ್ರಪ್ರಥಮ ಬಾರಿಗೆ, ಐದು-ಸೀಟ್ LWB ಕಾನ್ಫಿಗರೇಶನ್ ಒಳಗೊಂಡಂತೆ, ಸ್ಟ್ಯಾಂಡರ್ಡ್ ಹಾಗೂ ಲಾಂಗ್ ವ್ಹೀಲ್ ಬೇಸ್ ಎರಡರಲ್ಲೂ ಲಭ್ಯವಿದೆ.
ಭಾರತದಲ್ಲಿ ಹೊಚ್ಚ ಹೊಸ ರೇಂಜ್ ರೋವರ್ ಇವೊಕ್ ಕಾರು ಬಿಡುಗಡೆ!
ಹೊಸ ರೇಂಜ್ ರೋವರ್(Range Rover) ಎಸ್‍ವಿ ಹೆಚ್ಚು ಐಶಾರಾಮ ಮತ್ತು ವೈಯಕ್ತೀಕರಣದ ಆಯ್ಕೆ ಒದಗಿಸುವುದರಿಂದ ನಮ್ಮ ಗ್ರಾಹಕರು ತಮ್ಮಸ್ವಂತ ಗುಣವಿಶೇಷತೆಗಳು ಹಾಗೂ ವ್ಯಕ್ತಿತ್ವಕ್ಕೆ ಪೂರಕವಾದ ನಿಜವಾಗಿಯೂ ವೈಯಕ್ತಿಕವಾದ ರೇಂಜ್ ರೋವರ್‍ಅನ್ನು ಸೃಷ್ಟಿಸಿಕೊಳ್ಳಲು ಅವಕಾಶ ಒದಗಿಸುತ್ತದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಅಧ್ಯಕ್ಷ ರೋಹಿತ್ ಸೂರಿ ಹೇಳಿದ್ದಾರೆ.
ವಿಶೇಷವಾದ ಮುಂಭಾಗದ ಬಂಪರ್ ಹಾಗೂ ಫೈವ್-ಬಾರ್ ಗ್ರಿಲ್ ವಿನ್ಯಾಸಗಳು ಹೊಸ ಪ್ರಧಾನ ಮಾದರಿಯನ್ನು ಪ್ರತ್ಯೇಕಗೊಳಿಸಲಿದೆ. 5 ನಿಖರವಾಗಿ ಅನುಷ್ಠಾನಗೊಳಿಸಲಾಗಿರುವ ಪೂರ್ಣ-ಅಗಲವಾದ ಮೆಟಲ್‍ಪ್ಲೇಟೆಡ್ ಬ್ಲೇಡ್‍ಗಳನ್ನು ಹೊಂದಿರುವ ಲೋಯರ್ ಅಪರ್ಚರ್ ಹೊಂದಿದೆ. ತಮ್ಮ ಸ್ಪರ್ಶಸೂಕ್ಷ್ಮತೆಗಾಗಿಯೇ ಆಯ್ಕೆ ಮಾಡಲಾಗಿರುವ ಅತಿವಿಶಿಷ್ಟವಾದ ಮೆಟೀರಿಯಲ್‍ಗಳು ಮೃದುವಾದ ಸೆರಾಮಿಕ್ಸ್, ದೀರ್ಘಕಾಲ ಉಳಿಯುವುದಕ್ಕಾಗಿ ಆಯ್ಕೆಮಾಡಲಾದ ಮರ, ಹಾಗೂ ಹೊಳೆಯುವ ಲೋಹದ ಪ್ಲೇಟುಗಳನ್ನು ಒಳಗೊಂಡಿದ್ದು, ಇವು, ವಿಶೇಷ ವಾಹನ ಕಾರ್ಯಾಚರಣೆಗಳು, ಗುಣಮಟ್ಟಕ್ಕೆ ಇರುವ ಉತ್ಕಂಟತೆ ಹಾಗೂ ವಿವರಗಳಿಗೆ ರಾಜಿರಹಿತ ಗಮನನೀಡುವ ಅಂಶವನ್ನು ಎತ್ತಿತೋರಿಸುತ್ತವೆ. ಹೆಚ್ಚುವರಿಯಾಗಿ, ರೇಂಜ್ ರೋವರ್ ಎಸ್‍ವಿ ಮಾಡಲ್‍ಗಳು, 33.27ಸೆಂ.ಮೀ.(13.1)ಗಳ ಹಿಂಬದಿಯ ಆಸನ ಮನರಂಜನೆ ಸ್ಕ್ರೀನ್‍ಗಳಲ್ಲಿ ಲಭ್ಯವಿದೆ.
ರೇಂಜ್ ರೋವರ್ ಸ್ಪೋರ್ಟ್ SVR ಕಾರು ಬಿಡುಗಡೆ; ದುಬಾರಿ ಕಾರಿನಲ್ಲಿದೆ 10 ವಿಷೇಷತೆ!
ಕೂಲ್ ಸೆರಾಮಿಕ್ಸ್
ಹೊಸ ರೇಂಜ್ ರೋವರ್ ಎಸ್‍ವಿ, ಆಧುನಿಕ ಐಶಾರಾಮ, ಕಾರ್ಯಕ್ಷಮತೆ ಮತ್ತು ಸಾಮರ್ಥ್ಯದ ಬಗ್ಗೆ ಎಸ್‍ವಿಒ ತಂಡದ ವಿನ್ಯಾಸ ಮತ್ತು ಇಂಜಿನಿಯರಿಂಗ್ ಉತ್ಕಂಟತೆಯನ್ನು ಪ್ರದರ್ಶಿಸುವ ಹೊಸ ಸೆರಾಮಿಕ್ ರೌಂಡೆಲ್ ಹೊಂದಿರುವ ವಿಶೇಷ ವಾಹನ ಕಾರ್ಯಾಚರಣೆಗಳಿಂದ ಬಂದ ಪ್ರಪ್ರಥಮ ವಾಹನವಾಗಿದೆ. ಈ ರೌಂಡೆಲ್, ಭವಿಷ್ಯತ್ತಿನಲ್ಲಿ ವಿಶೇಷ ವಾಹನ ಕಾರ್ಯಾಚರಣೆಗಳು ಪರಿಚಯಿಸುವ ಎಲ್ಲಾ ಹೊಸ ಲ್ಯಾಂಡ್ ರೋವರ್ ವಾಹನಗಳನ್ನು ಗುರುತಿಸಬಲ್ಲ ಸರಳವಾದ ‘ಎಸ್‍ವಿ’ಮಾಡಲ್ ಹೆಸರನ್ನು ಪರಿಚಯಿಸುತ್ತದೆ.
ಒಳಗೂ ಕೂಡ ಮೃದುವಾದ ಸೂಕ್ಷ್ಮವಾದ ಸೆರಾಮಿಕ್‍ಅನ್ನು ಪರಿಚಯಿಸಲಾಗಿದ್ದು, ಗೇರ್ ಶಿಫ್ಟರ್, ಟೆರೇನ್ ರೆಸ್ಪಾನ್ಸ್ ಹಾಗೂ ವಾಲ್ಯುಂ ಕಂಟ್ರೋಲ್‍ಗಳಿಗೆ ಭವ್ಯವಾದ ಮುಟ್ಟಿದರೆ ತಂಪೆನಿಸುವ ಭಾವ ನೀಡುತ್ತದೆ. ಈ ವಿಶೇಷ ಸೆರಾಮಿಕ್ ಸಾಧನಗಳು, ಐಶಾರಾಮೀ ಕೈಗಡಿಯಾರಗಳ ಮುಖಭಾಗಕ್ಕೆ ಬಳಸುವ ಅದೇ ತಂತ್ರಗಳನ್ನು ಬಳಸಿ ತಯಾರಿಸಿದವುಗಳಾಗಿವೆ.
ಭಾರತದಲ್ಲಿ ಹೊಚ್ಚ ಹೊಸ ರೇಂಜ್ ರೋವರ್ ವೆಲಾರ್ ಡೆಲಿವರಿ ಆರಂಭ!
ಖಚಿತವಾದ ಮಾರ್ಕೆಟ್ರಿ
ವಿಶೇಷ ವಾಹನ ಕಾರ್ಯಾಚರಣೆಗಳ ತಜ್ಞ ಕಲಾವಂತಿಕೆಯು, ಮಧ್ಯದ ಕನ್ಸೋಲ್‍ನಲ್ಲಿ ಐಚ್ಛಿಕ ಮೊಸಾಯಿಕ್ ಮಾರ್ಕೆಟ್ರಿ ಒಳಗೊಂಡಂತೆ, ಒಳಾಂಗಣ ಮರದ ವೆನೀರ್‍ಗಳವರೆಗೂ ವಿಸ್ತರಗೊಂಡಿದೆ. ನಾಲ್ಕು-ಸೀಟ್ ಎಸ್‍ವಿ ಸಿಗ್ನೇಚರ್ ಸ್ಯೂಟ್‍ಗಾಗಿ ವಿನಿರ್ದೇಶನಗೊಳಿಸಲಾಗಿರುವ ಲಾಂಗ್ ವ್ಹೀಲ್‍ಬೇಸ್ ವಾಹನಗಳಿಗಾಗಿ ಮಾರ್ಕೆಟ್ರಿಯು ಕ್ಯಾಬಿನ್‍ನ ಮುಂಬದಿಯಿಂದ ಹಿಂಬದಿಯಲ್ಲಿರುವ ಫ್ರಿಡ್ಜ್ ಬಾಗಿಲಿನ ಮೂಲಕ ಹಾದುಹೋಗಿ, ವಿದ್ಯುತ್‍ರೂಪದಲ್ಲಿ ಅನನನುಷ್ಠಾನಗೊಳಿಸಬಲ್ಲ ಕ್ಲಬ್ ಟೇಬಲ್ ಒಳಗೊಂಡಂತೆ ಎಲ್ಲಾ ಸಮಾನಾಂತರ ಮೇಲ್ಮೈಗಳ ಮೇಲಿರುವ ಮಧ್ಯದ ಕನ್ಸೋಲ್ ಮೂಲಕ ಹಾದು ವಿಸ್ತರಗೊಳ್ಳುತ್ತದೆ.
ಅತಿಮೃದುವಾದ ಲೆದರ್ ಗಳು
ಸಾಮಾನ್ಯ ಅಂಶವಾಗಿ ರೇಂಜ್ ರೋವರ್ ಎಸ್‍ವಿ, ವಿಶೇಷ ಆಕಾರವುಳ್ಳ ಆಸನಗಳು ಹಾಗೂ ಎಸ್‍ವಿ-ನಿರ್ದಿಷ್ಟವಾದ ಎಂಬ್ರಾಯ್ಡರಿ ಪ್ಯಾಟರ್ನ್‍ಗಳೊಂದಿಗೆ ಮಾನೋಟೋನ್ ಭಾಗಶಃ ಅನಿಲೈನ್ ಲೆದರ್ ಒಳಾಂಗಣವನ್ನು ಹೊಂದಿದೆ. ಸಹಜ ಫಿನಿಶ್ ಮತ್ತು ಪೀಠೋಪಕರಣ ದರ್ಜೆಯ ಲೆದರ್‍ನ ಸೂಕ್ಷ್ಮತೆ ಇರುವ ಬಹುತೇಕ ಅನಿಲೈನ್ ಆಯ್ಕೆಗಳೂ ಕೂಡ ಲಭ್ಯವಿವೆ. ಹೆಚ್ಚು ನೈಸರ್ಗಿಕವಾದ ಸ್ಪರ್ಶತೆಗಾಗಿ ಕಡಿಮೆಸಂಸ್ಕರಣೆ ಮತ್ತು ಕಡಿಮೆ ಪಿಗ್ಮೆಂಟೇಶನ್ ಇರುವ ಸೂಕ್ಷ್ಮತೆಯು ಲ್ಯಾಂಡ್ ರೋವರ್‍ನ ಪ್ರಬಲವಾದ ಬಾಳಿಕೆ ಮಾನದಂಡಗಳನ್ನು ಪೂರೈಸುತ್ತದೆ.
ಬೆಂಗಳೂರಿನಲ್ಲಿ ನೂತನ ಜಾಗ್ವಾರ್ ಲ್ಯಾಂಡ್ ರೋವರ್ ರೀಟೈಲರ್ ಘಟಕ ಉದ್ಘಾಟನೆ!
ದೀರ್ಘಕಾಲ ಬಾಳುವ ಅಲ್ಟ್ರಾಫ್ಯಾಬ್ರಿಕ್ಸ್(Sustainable UltrafabricsTM)
ವಿಶೇಷ ವಾಹನ ಕಾರ್ಯಾಚರಣೆಗಳ ಗ್ರಾಹಕರು, ಎಸ್‍ವಿ ಇಂಟ್ರೆಪಿಡ್ ಥೀಮ್‍ನಲ್ಲಿ ಇರುವ Light Cloud ಮತ್ತು Cinder Grey UltrafabricsTM ಆಯ್ಕೆಯನ್ನು ಆಯ್ದುಕೊಳ್ಳುವ ಮೂಲಕ ಪ್ರಪ್ರಥಮ ಬಾರಿಗೆ ದೀರ್ಘಕಾಲ ಬಾಳುವಂತಹ ಪರ್ಯಾಯ ಲೆದರ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮೃದುವಾದ ಹ್ಯಾಪ್ಟಿಕ್ ಮತ್ತು ತಾಂತ್ರಿಕ ಸೌಂದರ್ಯ ಹೊಂದಿರುವ ಈ ಪಾಲಿಯುರಿಥೀನ್ ವಸ್ತುವು ಲೆದರ್‍ನ ಎಲ್ಲಾ ಗುಣವಿಶೇಷತೆಗಳನ್ನು ಹೊಂದಿರುವುದಲ್ಲದೆ ಶೇಕಡ 30ರಷ್ಟು ಹಗುರವಾಗಿದ್ದು, ತನ್ನ ಉತ್ಪಾದನೆಯಲ್ಲಿ ಕೇವಲ ಕಾಲುಭಾಗದಷ್ಟು ಇಂಗಾಲದ ಡೈಆಕ್ಸೈಡ್(CO2) ಉತ್ಪಾದಿಸುತ್ತದೆ.
ವಿಶೇಷ ಚಕ್ರಗಳು
ಐಚ್ಛಿಕ ಟ್ರಿಪಲ್-ಫಿನಿಶ್ 58.42 ಸೆಂ.ಮೀ(23) ಫೋರ್ಜ್ಡ್ ಡೈಮಂಡ್ ಟರ್ನ್ಡ್ ಗಾಢ ಬೂದುಬಣ್ಣದ ಹೊಳೆಯುವ ಅಲಾಯ್ ವ್ಹೀಲ್‍ಗಳನ್ನು ವಿಶೇಷವಾಗಿ ಹೊಸ ರೇಂಜ್ ರೋವರ್ ಎಸ್‍ವಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಇಷ್ಟೇ ಅಲ್ಲದೆ, ಪವರ್ ಟ್ರೇನ್ ಮತ್ತು ವಿನ್ಯಾಸ ಥೀಮ್‍ಅನ್ನು ಅವಲಂಬಿಸಿ, ಇನ್ನೂ 12 ವಿವಿಧ ವ್ಹೀಲ್‍ಗಳನ್ನು ಕೂಡ ವಿನಿರ್ದಿಷ್ಟಗೊಳಿಸಬಹುದಾಗಿದೆ.
ವೈಯಕ್ತಿಕ ಪೈಂಟ್
ಹೊಸ ರೇಂಜ್ ರೋವರ್ ಎಸ್‍ವಿ ಗ್ರಾಹಕರು ಸಾಮಾನ್ಯವಾದ ರೇಂಜ್ ರೋವರ್ ಕಲರ್ ಪ್ಯಾಲೆಟ್‍ನಿಂದ ಅಥವಾ ಎಸ್‍ವಿ ಬಿಸ್ಪೋಕ್ ಪ್ರೀಮಿಯಮ್ ಪ್ಯಾಲೆಟ್‍ನಲ್ಲಿರುವ 14ಬಣ್ಣಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಪ್ರೀಮಿಯಮ್ ಪ್ಯಾಲೆಟ್, ಪ್ರಖರವಾದ ಹೊಳಪು ಮತ್ತು ಅತಿಸೂಕ್ಷ್ಮ ಸ್ಯಾಟಿನ್ ಫಿನಿಶ್‍ನ ಶ್ರೇಣಿಯನ್ನು ಒಳಗೊಂಡಿದೆ. ಇದಲ್ಲದೆ, ಆಯ್ಕೆಮಾಡಿಕೊಂಡ ಬಾಡಿ ಕಲರನ್ನು ಅವಲಂಬಿಸಿ ಗ್ರಾಹಕರಿಗೆ, ನಾರ್ವಿಕ್ ಬ್ಲ್ಯಾಕ್ ಅಥವಾ ಕೊರಿಂಥಿಯನ್ ಬ್ರಾಂಜ್(ಎಸ್‍ವಿ ಸೆರೆನಿಟಿ ಥೀಮ್‍ನಲ್ಲಿ ಮಾತ್ರ)ನಡುವಿನ ಕಾಂಟ್ರಾಸ್ಟ್ ರೂಪ್ ಕೂಡ ಆಯ್ದುಕೊಳ್ಳುವ ಅವಕಾಶವಿರುತ್ತದೆ.
ಕ್ಯುರೇಟ್ ಮಾಡಲಾದ ವಿನ್ಯಾಸ ಥೀಮ್
ವಿಶೇಷವಾಗಿ ಕ್ಯುರೇಟ್ ಮಾಡಲಾದ ಎಸ್‍ವಿ ಸೆರೆನಿಟಿ ಹಾಗೂ ಎಸ್‍ವಿ ಇಂಟ್ರೆಪಿಡ್ ವಿನ್ಯಾಸ ಥೀಮ್‍ಗಳು ಹೊಸ ರೇಂಜ್ ರೋವರ್ ಎಸ್‍ವಿದಲ್ಲಿರುವ ವೈಯಕ್ತೀಕೃತ ಪ್ರಯಾಣಕ್ಕೆ ಮುಖ್ಯವಾದವುಗಳಾಗಿವೆ. ಈ ಥೀಮ್‍ಗಳನ್ನು, ಸಾಮಾನ್ಯ ರೇಂಜ್ ರೋವರ್ ಎಸ್‍ವಿ ಒಳಾಂಗಣ ಅಥವಾ ಹೊರಾಂಗಣಕ್ಕೆ ಪೂರಕವಾಗಿ ಅಥವಾ ಇಡೀ ವಾಹನಕ್ಕೆ ಒಂದೇ ಥೀಮ್ ಆಗಿ ಪ್ರಯೋಗಿಸುವುದಕ್ಕಾಗಿ ಒಳಾಂಗಣಕ್ಕೆ ಅಥವಾ ಹೊರಾಂಗಣಕ್ಕೆ, ಸ್ವತಂತ್ರವಾಗಿ ವಿನಿರ್ದಿಷ್ಟಗೊಳಿಸಬಹುದಾಗಿದೆ. Specially curated SV Serenity and SV Intrepid ಪ್ರಯೋಗಿಸಬಹುದು. ಒಟ್ಟೂ ಏಳು ವಿವಿಧ ವಿನ್ಯಾಸ ಥೀಮ್ ಸಂಯೋಜನೆಗಳಿಂದ ಆಯ್ಕೆ ಮಾಡಿಕೊಳ್ಳಬಹುದು.
ಒಳಗಡೆ ಈ ವಿನ್ಯಾಸ ಥೀಮ್‍ಗಳು, ಪರಸ್ಪರ ವೈರುಧ್ಯವಿರುವ ಟೂ-ಟೋನ್ ಫ್ರಂಟ್-ಟು-ರೇರ್ ಕಲರ್‍ವೇ ಆಯ್ಕೆಗಳನ್ನು ಪರಿಚಯಿಸುತ್ತಿದ್ದು, ಇವು ಒಳಾಂಗಣದ ಕೇಂದ್ರಬಿಂದುವನ್ನು ಅಂದರೆ, ಎಸ್‍ವಿ ಸೆರೆನಿಟಿಯಲ್ಲಿ ಹಿಂಬದಿ ಆಸನಗಳನ್ನು ಮತ್ತು ಎಸ್‍ವಿ ಇಂಟ್ರೆಪಿಡ್‍ನಲ್ಲಿ ಮುಂಬದಿ ಆಸನಗಳನ್ನು ಎತ್ತಿತೋರಿಸುತ್ತವೆ. ಹೆಚ್ಚುವರಿಯಾಗಿ, ಎಸ್‍ವಿ ಇಂಟ್ರೆಪಿಡ್‍ನಲ್ಲಿ, ಎಸ್‍ವಿ-ನಿರ್ದಿಷ್ಟ ಆಸನಗಳಿಗಾಗಿಯೇ ಇರುವ ಆಯತಾಕಾರದ ಪರ್ಪೊರೇಶನ್ ಪ್ಯಾಟರ್ನ್, ಪ್ರಗತಿಪರವಾದ ನಾನ್-ಲೆದರ್ ಅಲ್ಟ್ರಾಫ್ಯಾಬ್ರಿಕ್ಸ್ (Ultrafabrics)ಆಯ್ಕೆಯನ್ನು ಹೊಂದಿದೆ.