ಮಿಡ್-ಸೈಜ್ ಎಸ್ ಯುವಿಗೆ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ!

By Suvarna News  |  First Published Jan 1, 2023, 5:39 PM IST

ಭಾರತೀಯ  ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಈಗ ಭಾರಿ ಬೇಡಿಕೆಯಲ್ಲಿರುವುದು ಮಿಡ್-ಸೈಜ್ ಎಸ್ ಯುವಿ (Mid Size SUV) ವಿಭಾಗ.ಕಳೆದ ಕೆಲ ವರ್ಷಗಳಲ್ಲಿ ಅನೇಕ ಕಾರು ತಯಾರಕರು ಈ ವಿಭಾಗವನ್ನು ಪ್ರವೇಶಿಸಿದ್ದಾರೆ.


ಭಾರತೀಯ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಈಗ ಭಾರಿ ಬೇಡಿಕೆಯಲ್ಲಿರುವುದು ಮಿಡ್-ಸೈಜ್ ಎಸ್ ಯುವಿ (Mid Size SUV) ವಿಭಾಗ.ಕಳೆದ ಕೆಲ ವರ್ಷಗಳಲ್ಲಿ ಅನೇಕ ಕಾರು ತಯಾರಕರು ಈ ವಿಭಾಗವನ್ನು ಪ್ರವೇಶಿಸಿದ್ದಾರೆ. ಇದರಿಂದ ಸ್ಪರ್ಧೆಯ ಹೆಚ್ಚಳದ ಜೊತೆಗೆ, ಗ್ರಾಹಕರಿಗೆ ಹೊಸ ವೈಶಿಷ್ಟ್ಯಗಳು ಕಡಿಮೆ ಬೆಲೆಗೆ ದೊರೆಯುವಂತಾಗಿದೆ. ಜನವರಿ ತಿಂಗಳಲ್ಲಿ ನಡೆಯಲಿರುವ ಆಟೋ ಎಕ್ಸ್ಪೋ (Auto Expo) 2023 ಯಲ್ಲಿ ಕೆಲ ಕಾರು ಕಂಪನಿಗಳು ತಮ್ಮ ಚಾಲ್ತಿಯಲ್ಲಿರುವ ಮಿಡ್-ಸೈಜ್ SUVಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. 2023ರ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿರುವ ವಾಹನಗಳ ಪಟ್ಟಿ ಇಲ್ಲಿದೆ:

ಹ್ಯುಂಡೈ ಕ್ರೇಟಾ ಫೇಸ್ ಲಿಫ್ಟ್ (Hyundai Creta Facelift):
ಭಾರತದಲ್ಲಿ ಹ್ಯುಂಡೈನ ಟಾಪ್ ಮಾರಾಟವಾಗುವ ಕಾರುಗಳಲ್ಲಿ ಕ್ರೇಟಾ ಪ್ರಮುಖವಾದುದು. ಆದರೆ, ಈ ವರ್ಷ ಹೊಸ ಸ್ಪರ್ಧಿಗಳು ಪ್ರವೇಶದಿಂದ ದರ ಜನಪ್ರಿಯತೆಗೆ ಧಕ್ಕೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಹ್ಯುಂಡೈ ಕ್ರೇಟಾದ ಫೇಸ್‌ಲಿಫ್ಟ್ ಅನ್ನು ಪರಿಚಯಿಸಲು ಮುಂದಾಗಿದೆ. ಇದರಲ್ಲಿ ಟಕ್ಸನ್ ಪ್ರೇರಿತ ಪ್ಯಾರಾಮೆಟ್ರಿಕ್ ಜ್ಯುವೆಲ್ ಗ್ರಿಲ್ ನಂತಹ ಕಾರುಗಳು ಸೇರುವ ನಿರೀಕ್ಷೆ ಇದೆ. ಜೊತೆಗೆ, ಅಡಾಸ್ (ADAS) ತಂತ್ರಜ್ಞಾನ ಅಳವಡಿಕೆಯ ವದಂತಿಯೂ ಇದೆ. ಆದರೆ, ಪವರ್ ಟ್ರೇನ್‌ನಲ್ಲಿ ಯಾವುದೇ ವ್ಯತ್ಯಾಸಗಳು ಇರುವುದಿಲ್ಲ. ಈ ಕಾರು ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹ್ಯುಂಡೈ ಮಾಹಿತಿ ನೀಡಿದೆ.

ಹ್ಯುಂಡೈ ಐಯೋನಿಕ್ 6 ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲೇ ಸೋಲ್ಡ್ ಔಟ್

Latest Videos

undefined

ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ (Kia Seltos Facelift):
ಹ್ಯುಂಡೈದ ಸೋದರ ಕಂಪನಿಯಾಗಿರುವ ಕಿಯಾ ಕೂಡ ತನ್ನ ಅತ್ಯಂತ ಜನಪ್ರಿಯ ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಅನ್ನು ಪರಿಚಯಿಸುವ ನಿರೀಕ್ಷೆಯಿದೆ. ಇದು ಕೆಲ ತಿಂಗಳ ಹಿಂದೆಯೇ ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಂಡಿದೆ. ಇದರ ಮುಂಭಾಗದಲ್ಲಿ ದೊಡ್ಡ ಗ್ರಿಲ್ಸ್, ಹೊಸ ಎಲ್ ಇಡಿ ಡಿಆರ್‌ಎಲ್, ಹೊಸ ವಿನ್ಯಾಸದ ಅಲಾಯ್ ಚಕ್ರಗಳು ಮತ್ತು ಮರು ವಿನ್ಯಾಸಗೊಂಡ ಹಿಂಭಾಗಗಳನ್ನು ಕಾಣಬಹುದಾಗಿದೆ.

ಕಿಯಾ ಸೆಲ್ಟೋಸ್ 1.5 ಲೀಟರ್ ಪೆಟ್ರೋಲ್, 1.4 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 1.5 ಲೀಟರ್ ಪವರ್ ಟ್ರೇನ್ ಗಳನ್ನು ಹೊಂದಿರಲಿದೆ. ಜೊತೆಗೆ, ಡಿಜಿಟಲ್ ಇನ್ ಸ್ಟ್ರೂಮೆಂಟಲ್ ಕ್ಲಸ್ಟರ್, ಹೆಚ್ಚುವರಿ ವೈಶಿಷ್ಟ್ಯಗಳು, ದೊಡ್ಡ ಪ್ಯಾನರೋಮಿಕ್ ಸನ್ ರೂಫ್ ಗಳನ್ನು ನಿರೀಕ್ಷಿಸಲಾಗುತ್ತಿದೆ. ಇದು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಭಾರತದಲ್ಲಿ 2.5 ಕೋಟಿಗೂ ಹೆಚ್ಚು ಕಾರು ಉತ್ಪಾದಿಸಲಿದೆ ಮಾರುತಿ ಸುಜುಕಿ

ಎಂ.ಜಿ.ಹೆಕ್ಟರ್ ಫೇಸ್ ಲಿಫ್ಟ್ (M.G.Hector facelift):
ಎಂಜಿ ಹೆಕ್ಟರ್ ಎಸ್ ಯುವಿ ದೇಶದಲ್ಲಿ 1 ಲಕ್ಷ ಉತ್ಪಾದನೆಯನ್ನು ತಲುಪುತ್ತಿದ್ದಂತೆಯೇ, ಎಂಜಿ ಮೋಟಾರ್ ಇಂಡಿಯಾ ಈಗಾಗಲೇ ಹೆಕ್ಟರ್ ಫೇಸ್ ಲಿಫ್ಟ್ ಅನ್ನು ಆರಂಭಿಸಿದೆ. ಹೊಸ ಎಂ.ಜಿ.ಹೆಕ್ಟರ್ ಈ ತಿಂಗಳು ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ, ನಿರ್ದಿಷ್ಟ ದಿನಾಂಕ ಪ್ರಕಟಗೊಂಡಿಲ್ಲ.

ಫೇಸ್ ಲಿಫ್ಟ್ ನಲ್ಲಿ ದೊಡ್ಡ ಗ್ರಿಲ್ಸ್, ಮರುವಿನ್ಯಾಸಗೊಂಡಿರುವ ಹೆಡ್ ಲ್ಯಾಂಪ್ಸ್, ಇಂಟೀರಿಯರ್‌ನಲ್ಲಿ 14 ಇಂಚಿನ ಟಚ್ ಸ್ಕ್ರೀನ್ಸ್ ಹಾಗೂ ಅಡಾಸ್ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಟಾಟಾ ಹ್ಯಾರಿಯರ್ ಫೇಸ್ ಲಿಫ್ಟ್ (Tata Harrier Facelift):
ಕಳೆದ ಕೆಲ ವಾರಗಳಲ್ಲಿ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್‌ನ ಟೆಸ್ಟ್ ಡ್ರೈವ್ ಮಾಡುತ್ತಿರುವುದು ಪತ್ತೆಯಾಗಿದೆ. ಈ ಎಸ್‌ಯುವಿ ಕೂಡ ಆಟೋ ಎಕ್ಸ್ಪೋದಲ್ಲಿ ಪ್ರದರ್ಶನಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಅದನ್ನು ಬಿಡುಗಡೆಗೊಳಿಸಲಾಗುವುದು ಎಂದು ನಿರೀಕ್ಷಿಸಲಾಗುತ್ತಿದೆ. ವರದಿಗಳ ಪ್ರಕಾರ, ಇದರ ಹೊರ ಭಾಗದ ವಿನ್ಯಾಸಗಳಲ್ಲಿ ಅತಿ ಕಡಿಮೆ ಬದಲಾವಣೆ ಮಾಡಲಾಗಿದೆ. ಆದರೆ, ಇಂಟೀರಿಯರ್‌ನಲ್ಲಿ ದೊಡ್ಡ ಇನ್ಫೊಟೈನ್ ಮೆಂಟ್ ಸಿಸ್ಟಮ್ ಮತ್ತು ರಿವೈಸ್ಡ್ ಇನ್ಸ್ಟ್ರೂಮೆಂಟಲ್ ಕ್ಲಸ್ಟರ್ ಹಾಗೂ ಇತರ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಇತರ ಎಸ್‌ಯುವಿಗಳಂತೆ ಹ್ಯಾರಿಯರ್ ಫೇಸ್ ಲಿಫ್ಟ್ ಕೂಡ ಅಡಾಸ್ ತಂತ್ರಜ್ಞಾನ ಹೊಂದಿರುವ ನಿರೀಕ್ಷೆಯಿದೆ.

click me!