ಜನವರಿ 16 ರಿಂದ ಭಾರತದಲ್ಲಿ ಡಿಫೆಂಡರ್ ಜರ್ನಿ ಆರಂಭಿಸಲಿದೆ ಲ್ಯಾಂಡ್ ರೋವರ್!

By Suvarna News  |  First Published Dec 19, 2022, 8:31 PM IST

ಆಫ್ ರೋಡ್, ಐತಿಹಾಸಿಕ ತಾಣ, ಕರಾವಳಿ, ಹಿನ್ನೀರು, ಬೆಟ್ಟ, ಪರ್ವತ ಶ್ರೇಣಿ ಸೇರಿದಂತೆ ಭಾರತದ ವಿವಿದ ದಾರಿಗಳ ಮೂಲಕ ಈ ವಿಶೇಷ ಡಿಫೆಂಡರ್ ಜರ್ನಿ ಸಾಗಲಿದೆ. ಜನವರಿ 16 ರಿಂದ ಢಿಪೆಂಡರ್ ಜರ್ನಿ ಆರಂಭಗೊಳ್ಳುತ್ತಿದೆ. 


ಬೆಂಗಳೂರು(ಡಿ.19):  ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ, ಭಾರತದಲ್ಲಿ ಡಿಫೆಂಡರ್ ಜರ್ನೀಸ್ ಅನ್ನೋ  ವಿಶೇಷವಾಗಿ ಕ್ಯೂರೇಟ್ ಪ್ರಯಾಣದ ಅನುಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. , ಡಿಫೆಂಡರ್ ವಾಹನಗಳಲ್ಲಿ, ಸ್ವಯಂ-ಚಾಲನೆಯ, ಬಹು-ದಿನ ಸಾಹಸ ಕಾರ್ಯಕ್ರಮವಾಗಿದೆ. ಪ್ರತಿಯೊಂದು ಡಿಫೆಂಡರ್ ಜರ್ನಿ, ಆಫ್-ರೋಡ್ ಟ್ರೇಲ್‌ಗಳೊಂದಿಗೆ, ಭಾರತದ ಅತ್ಯಂತ ಐತಿಹಾಸಿಕ ತಾಣಗಳ ಮೂಲಕ ಹಾದು ಹೋಗಲಿದೆ.  ಬಹು-ದಿನ ಪ್ರಯಾಣ ಅನುಭವಗಳು, ಐಷಾರಾಮಿ ವಸತಿ ಮತ್ತು ಆತಿಥ್ಯ, ಜೀವನಶೈಲಿ ಅನುಭವಗಳು, ಸಾಂಸ್ಕೃತಿಕ  ಮತ್ತು ಚಾಲನೆ, ಸಂಪೂರ್ಣವಾದ ಚಾಲನಾ ಅನುಭವ ಒದಗಿಸುತ್ತದೆ.  ಪ್ರತಿಯೊಂದು ಪ್ರಯಾಣದಲ್ಲೂ 5 ಡಿಫೆಂಡ್‌ಗಳನ್ನು ನಿಯೋಜಿಸಲಾಗುತ್ತದೆ.  ಅತ್ಯಂತ ವಿಶೇಷವಾದ ಮತ್ತು ವೈಯಕ್ತೀಕೃತ ಅನುಭವ ಒದಗಿಸುವುದಕ್ಕಾಗಿ ಕೇವಲ 5 ಡ್ರೈವ್ ಸ್ಲಾಟ್‌ಗಳು ಇರುತ್ತವೆ. 

ಮಾಡಲಾದ ಮತ್ತು ವಿಶಿಷ್ಟ ಪ್ರಯಾಣ ಅನುಭವಗಳನ್ನು ಪರಿಚಯಿಸಿದೆ. ಇದು, ಭಾರತದಾದ್ಯಂತ ಅತಿ ಮಹತ್ವಾಕಾಂಕ್ಷೆಯ ಮತ್ತು ಬಯಸುವ ಮಾರ್ಗಗಲಾಣ್ಣೂ ಒಳಗೊಂಡಿರುತ್ತದೆ. ಕೊಂಕಣ್ ಅನುಭವ  ಅನ್ನೋ ಮೊಟ್ಟಮೊದಲ ಡಿಫೆಂಡರ್ ಜರ್ನಿ ಜನವರಿ 16 ರಿಂದ ಆರಂಭಗೊಳ್ಳಲಿದೆ.  

Latest Videos

undefined

ಲ್ಯಾಂಡ್ ರೋವರ್ ಡಿಫೆಂಡರ್ ಅಮೃತ ಮಹೋತ್ಸವ, 75ನೇ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ “ಡಿಫೆಂಡರ್ ಗ್ರಾಹಕರು ಕ್ರಿಯಾಶಿಲರು ಮತ್ತು ಸಾಹಸಿಗರು. ತನ್ನ ಐತಿಹಾಸಿಕ ಚಾಲನಾ ಸಾಮರ್ಥ್ಯಗಳು ಮತ್ತು ವಿನ್ಯಾಸದೊಂದಿಗೆ ಡಿಫೆಂಡರ್ ನಮ್ಮ ಸುಂದರ ದೇಶದ ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ತೊಡಗಿಕೊಳ್ಳುವ ಖಚಿತ ಅವಕಾಶ ಒದಗಿಸುತ್ತದೆ; ಬೆರಗು ಮೂಡಿಸುವ ಕರಾವಳಿ ಪ್ರದೇಶಗಳೇ ಇರವಹುದು, ಹಿಮಾಲಯದ ಬಿಳಿಛಾಯೆಯ ಶೃಂಗಗಳೇ ಇರಬಹಹುದು ಅಥವಾ ಥಾರ್ ದ ಅಲ್ಪಾಯುಷಿ ಮರಳದಂಡೆಗಳೇ ಇರಬಹುದು. ಪ್ರತಿಯೊಂದು ಪಯಣವೂ ಜೀವಿತಾವಧಿಯ ಪ್ರವಾಸವಾಗಿರಲಿದೆ.”ಎಂದು ಹೇಳಿದರು. 

ಆರಂಭಕ್ಕೆ ನಾಲ್ಕು ಡಿಫೆಂಡರ್ ಜರ್ನೀಸ್‌ಗಳನ್ನು ಕ್ಯೂರೇಟ್ ಮಾಡಲಾಗಿದೆ

ಕೊಂಕಣ್ ಅನುಭವ
ಕೊಂಕಣ ಕರಾವಳಿಯುದ್ದಕ್ಕೂ ಇರುವ ಪಟ್ಟಣಗಳು, ಪಶ್ಚಿಮಘಟ್ಟದ ಬೆಟ್ಟಗಳು, ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ಶೋಧಿಸುವುದಕ್ಕೆ ಏಳು ದಿನಗಳ ಕಾಲದ ಗೋವಾ ಮತ್ತು ಬೆಂಗಳೂರು ನಡುವಿನ ಪಯಣ. ಕೊಂಕಣ್ ಅನುಭವ ಅಚ್ಚರಿಗಳಿಂದ ತುಂಬಿದ ಸಾಹಸವಾಗಿರುತ್ತದೆ- ಇದು, ಕರಾವಳಿಯುದ್ದಕ್ಕೂ ಇರುವ ಬೀಚ್‌ಗಳನ್ನು ಶೋಧಿಸುವುದಿರಬಹುದು ಅಥವಾ ತಂಪಾದ ಪರ್ವತದ ಗಾಳಿಯಲ್ಲಿ ಕಾಲಮಯ ಕಾಫಿಯನ್ನು ಹೀರುವುದೇ ಆಗಿರಬಹುದು. ಇದು, ಸಮೃದ್ಧವಾದ ಅಡುಗೆ ಅನುಭವಗಳು ಮತ್ತು ಕೌತುಕಮಯ ಚಟುವಟಿಕೆಗಳನ್ನು ಒದಗಿಸುವ ಐಶಾರಾಮೀ ವಸತಿಗಳನ್ನು ಒಳಗೊಂಡಿರುತ್ತದೆ. 

72 ಲಕ್ಷ ರೂಪಾಯಿ ಜಾಗ್ವಾರ್ ಕಾರಿಗೆ ತಿರಂಗ ಪೈಂಟ್, ಯುವಕನ ಕಾರ್ಯಕ್ಕೆ ಮೆಚ್ಚುಗೆ!

ನೀಲಗಿರಿ ಅನುಭವ 
ಪಶ್ಚಿಮ ಘಟ್ಟಗಳು ಮತ್ತು ನೀಲಗಿರಿಯ ಸುಪ್ರಸಿದ್ಧ ಕಾಫಿ ತೋಟಗಳ ಮೂಲಕ ಹಾದುಹೋಗುವ ಸಮೃದ್ಧ ಪ್ರಕೃತಿಯಿಂದ ಸುತ್ತುವರಿದ ಬೆಂಗಳೂರು ಮತ್ತು ಕೊಯಮತ್ತೂರು ನಡುವಣ ಪಯಣ. ಏಳು ದಿನಗಳ ಕಾಲದ ನೀಲಗಿರಿ ಅನುಭವ, ಭವ್ಯವಾದ ಕಾಡುಗಳ ಮೂಲಕ ಪ್ರಯಾಣವನ್ನು ಒಳಗೊಂಡಿದ್ದು, ಹುಲಿ ಸಂರಕ್ಷಣಾಲಯ, ಐಶಾರಾಮೀ ಪ್ರದೇಶಗಳಲ್ಲಿ ವಸತಿ ಮತ್ತು ಅದ್ವಿತೀಯವಾದ ಸೂರ್ಯಾಸ್ತ ಕ್ರೂಸ್‌ಅನ್ನು ಒಳಗೊಂಡಿರುತ್ತದೆ. 

ಕೋರಮಂಡಲ್ ಅನುಭವ 
ಪೂರ್ವ ಘಟ್ಟಗಳು ಹಾಗೂ ಬಂಗಾಳ ಕೊಲ್ಲಿಯನ್ನು ಒಳಗೊಂಡ ಅಸಾಮಾನ್ಯ ಕರಾವಳಿಯಾದ್ಯಂತದ ಕೊಯಮತ್ತೂರು ಮತ್ತು ಚೆನ್ನೈ ನಡುವಣ ಪಯಣ. ಕೋರಮಂಡಲ್ ಅನುಭವವು ಸಾಂಸ್ಕೃತಿಕವಾಗಿ ಸಮೃದ್ಧವಾದ ಪಯಣವಾಗಿದ್ದು, ಆ ಪ್ರದೇಶದ ವರ್ಣಮಯ ಪರಂಪರೆ ಮತ್ತು ಸಂಪ್ರದಾಯದ ಪೂರ್ಣತೊಡಗಿಕೊಳ್ಳುವಿಕೆ ಒದಗಿಸುತ್ತದೆ. 

ಮಲಬಾರ್ ಅನುಭವ 
ವಿಶಿಷ್ಟವಾದ ಭೌಗೋಳಿಕ ಪ್ರದೇಶ, ಪ್ರಶಾಂತ ಹಿನ್ನೀರು, ಇನ್ನೂ ಹಾಳಾಗದಿರುವ ಬೀಚುಗಳು, ಸಮೃದ್ಧ ಸಂಸ್ಕೃತಿ ಮತ್ತು ಸಾಂಬಾರದೊಂದಿಗೆ ಪ್ರದೇಶವನ್ನು ಶೋಧಿಸಲು ಕೊಯಮತ್ತೂರು ಮತ್ತು ಕೊಚ್ಚಿನ್ ನಡುವಣ ಪಯಣ. ಮಲಬಾರ್ ಅನುಭವವು, ಮಾರ್ಗದ ಪ್ರತಿಯೊಂದು ಹೆಜ್ಜೆಯಲ್ಲೂ ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ. 

2023ರ ಉದ್ದಕ್ಕೂ ಇಂತಹ ಇನ್ನೂ ಅನೇಕ ಪಯಣಗಳನ್ನು ಕ್ಯೂರೇಟ್ ಮಾಡಿ ಪರಿಚಯಿಸಲಾಗುತ್ತದೆ. 
ಜಾಗ್ವಾರ್ ಲ್ಯಾಂಡ್ ರೋವರ್ಡಿಯಾ, ಭಾರತದಲ್ಲಿ ಡಿಫೆಂಡರ್ ಜರ್ನಿಗಳನ್ನು ಯೋಜಿಸಿ ಅನುಷ್ಠಾನಗೊಳಿಸಲು ಕೂಗರ್ ಮೋಟ್‌ಸ್ಪೋರ್ಟ್‌ಗೆ ಅಧಿಕಾರ ನೀಡಿದೆ. ಭಾಗವಹಿಸುತ್ತಿರುವ ಒಟ್ಟಾರೆ ಅನುಭವವನ್ನು ತಡೆರಹಿತ ಹಾಗೂ ಸುಲಭಗೊಳಿಸಲು, ಲ್ಯಾಂಡ್ ರೋವ್‌ನ ತರಬೇತಿ ಪಡೆದ ಇನ್ಸ್‌ಟ್ರಕ್ಟ್‌ಗಳ ತಂಡವು ಪ್ರತಿಯೊಂದು ಪಯಣವನ್ನೂ ಮುನ್ನಡೆಸಿ ಮಾರ್ಗದರ್ಶನ ಒದಗಿಸುತ್ತಾರೆ. 
 

click me!