ಪಂತ್ ಜೀವ ಉಳಿಸಿದ ಮರ್ಸಿಡೀಸ್ ಬೆಂಜ್ AMG GLE43 ಕಾರಿನ ವಿಶೇಷತೆ ಏನು?

By Suvarna News  |  First Published Dec 30, 2022, 3:57 PM IST

ಅಪಘಾತದಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತೀ ವೇಗವಾಗಿ ಚಲಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಇದು ಅತ್ಯಂತ ಭೀಕರ ಅಪಘಾತ. ಆದರೆ ಪಂತ್ ಜೀವ ಉಳಿಸಿದ್ದ ಮರ್ಸಿಡೀಸ್ ಬೆಂಜ್ AMG GLE43. ಈ ಕಾರಿನಲ್ಲಿದೆ ಗರಿಷ್ಠ ಸುರಕ್ಷತಾ ಫೀಚರ್ಸ್
 


ನವದೆಹಲಿ(ಡಿ.30): ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಅಪಘಾತ ಅತ್ಯಂತ ಭೀಕರವಾಗಿದೆ. ಸಿಸಿಟಿವಿ ದೃಶ್ಯಗಳು ಈ ಅಪಘಾತದ ತೀವ್ರತೆಯನ್ನು ಸಾರಿ ಹೇಳುತ್ತಿದೆ. ಅತೀ ವೇಗವಾಗಿ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅತೀ ವೇಗದ ಚಾಲನೆ ಹಾಗೂ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತ ಸಂಭವಿಸಿದೆ. ಈ ಅಫಾತದಲ್ಲಿ ರಿಷಬ್ ಪಂತ್ ಜೀವ ಉಳಿಸಿದ್ದು ಮರ್ಸಿಡೀಸ್ ಬೆಂಜ್ AMG GLE43 ಕಾರು. ಈ ಐಷಾರಾಮಿ ಕಾರು ಗರಿಷ್ಠ ಸುರಕ್ಷತೆ ಫೀಚರ್ಸ್ ಹೊಂದಿದೆ. ಈ ಸುರಕ್ಷತಾ ಫೀಚರ್ಸ್‌ನಿಂದ ಪಂತ್ ಜೀವ ಉಳಿಸಿಕೊಂಡಿದ್ದಾರೆ.  ಈ ಕಾರಿನಲ್ಲಿ ಹಲವು ಸುರಕ್ಷತಾ ಫೀಚರ್ಸ್ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡುತ್ತದೆ.

ರಿಷಬ್ ಪಂತ್ 2017ರ ಐಪಿಎಲ್ ವೇತನದಲ್ಲಿ ಮರ್ಸಿಡೀಸ್ ಬೆಂಜ್ AMG GLE43 ಕಾರು ಖರೀದಿಸಿದ್ದಾರೆ. ರಿಷಬ್ ಪಂತ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ಇದರಲ್ಲಿ  ಮರ್ಸಿಡೀಸ್ ಬೆಂಜ್ AMG GLE43 ಕಾರು ಪಂತ್ ನೆಚ್ಚಿನ ವಾಹನವಾಗಿದೆ. ನೀಲಿ ಬಣ್ಣದ ಕಾರಿನಲ್ಲಿ ಪಂತ್ ಹಲವು ಟ್ರಿಪ್ ಹೋಗಿದ್ದಾರೆ. ದೆಹಲಿಯಿಂದ ಉತ್ತರಖಂಡಕ್ಕೆ ಇದೇ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಆದರೆ ಈ ಬಾರಿ ಪ್ರಯಾಣ ಮಾತ್ರ ಅಪಘಾತಕ್ಕೀಡಾಗಿದೆ.

Latest Videos

undefined

Rishabh Pant: ಅಪಘಾತಕ್ಕೊಳಗಾದ ರಿಷಭ್ ಪಂತ್‌ ಎಕ್ಸ್‌-ರೇ ರಿಪೋರ್ಟ್‌ ಔಟ್..! ಏನಾಗಿದೆ..?

ರಿಷಪ್ ಪಂತ್ ಬಳಿ ಇರುವ ಮರ್ಸಿಡೀಸ್ ಬೆಂಜ್ AMG GLE43 ಕಾರು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. 80 ಕಿಲೋಮೀಟರ್ ಸ್ಪೀಡ್ ದಾಟಿದಂತೆ ಒಂದು ಬೀಪ್ ಅಲರ್ಟ್ ಬರಲಿದೆ. ಇನ್ನು 120 ಕಿಲೋಮೀಟರ್ ಸ್ಪೀಡ್ ದಾಟುತ್ತಿದ್ದಂತೆ ಸತತವಾಗಿ ಬೀಪ್ ಅಲರ್ಟ್ ಬರಲಿದೆ. ಹೈವೇನಲ್ಲಿ ವೇಗವಾಗಿ ಸಾಗುತ್ತಿರುವಾಗ ಮುಂದೆ ಸಾಗುತ್ತಿರುವ ವಾಹನ ಬ್ರೇಕ್ ಹಾಕಿದರೆ ಸೆನ್ಸಾರ್ ಮೂಲಕ ಚಾಲಕನಿಗೆ ಸಿಗ್ನಲ್ ನೀಡುತ್ತದೆ. ಮುಂದೆ ಚಲಿಸುತ್ತಿರುವ ಕಾರಿನ ಬ್ರೇಕ್ ಲೈಟ್ ಸೆನ್ಸ್ ಮಾಡಿ ಚಾಲಕನ ಅಲರ್ಟ್ ಮಾಡುವ ತಂತ್ರಜ್ಞಾನ ಈ ಕಾರಿನಲ್ಲಿದೆ. 

ಮಂದೆ ಚಲಿಸುತ್ತಿರುವ ಕಾರಿನ ವೇಗ ಕಡಿಮೆಯಾದರೆ, ಬ್ರೇಕ್ ಹಾಕಿದರೆ ಅಥವಾ ದೂರದಲ್ಲಿ ವಾಹನ ನಿಂತಿದ್ದರೆ ಈ ಸಂದೇಶವನ್ನೂ ಚಾಲಕನಿಗೆ ನೀಡಲಿದೆ. ಈ ಮೂಲಕ ಅಪಘಾತದಿಂದ ಚಾಲಕ ಎಚ್ಚರವಾಗಿರಲು ನೆರವಾಗುತ್ತದೆ. ಇನ್ನು ಕಾರು ಚಲಿಸುತ್ತಿರುವಾಗ ಎದುರಿನಿಂದ ಬರುವ ವಾಹನಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆಗಳಿದ್ದರೆ, ಕಾರು ಸ್ವಯಂ ನಿಯಂತ್ರಣಕ್ಕೆ ಬರಲಿದೆ. ಇನ್ನು ವೇಗವಾಗಿ ಚಲಿಸುತ್ತಿರುವ ಸಂದರ್ಬದಲ್ಲಿ ರಸ್ತೆಯ ಯಾವುದೇ ಬದಿಯಿಂದ ವಾಹನ ಬಂದರೆ, ಅಥವಾ ಪ್ರಾಣಿಗಳು ನುಗ್ಗಿದರೆ, ಅಥವಾ ಯಾರೇ ರಸ್ತೆ ದಾಟಿದರೂ ಚಾಲಕನಿಗೆ ಅಲರ್ಟ್ ಸಂದೇಶ ನೀಡಲಿದೆ. ಒಂದು ಲೇನ್‌ನಿಂದ ಮತ್ತೊಂದು ಲೇನ್‌ಗೆ ಕಾರು ಸಂಚರಿಸಿದರೂ ಸಂದೇಶ ರವಾನೆಯಾಗಲಿದೆ. 

ಮರ್ಸಿಡೀಸ್ ಬೆಂಜ್ AMG GLE43 ಕಾರಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಏರ್‌ಬ್ಯಾಗ್ ಸುರಕ್ಷತೆ ಸಿಗಲಿದೆ. ಸೀಟ್ ಬೆಲ್ಟ್ ಅಲರಾಂ ಕೂಡ ಇರಲಿದೆ. ಸೀಟ್ ಬೆಲ್ಟ್ ಹಾಗೂ ಏರ್‌ಬ್ಯಾಗ್ ಸುರಕ್ಷತೆಯಿಂದ ರಿಷಬ್ ಪಂತ್ ಹೆಚ್ಚಿನ ಅಪಾಯವಿಲ್ಲದೆ ಪಾರಾಗಿದ್ದಾರೆ. ರಿಷಬ್ ಪಂತ್ ಅಪಘಾತದಲ್ಲೂ ಈ ಕಾರು ಈ ಎಲ್ಲಾ ಅಲರ್ಟ್ ರವಾನಿಸಿರುತ್ತದೆ. ನಿಯಂತ್ರಣ ತಪ್ಪಿದ ಬೆನ್ನಲ್ಲೇ ಅಲರ್ಟ್ ಸಂದೇಶ ಬರಲಿದೆ. ಆದರೆ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪಂತ್‌ಗೆ ಸಾಧ್ಯವಾಗಿಲ್ಲ. ಹೀಗಾಗಿ ಭೀಕರ ಅಪಘಾತ ಸಂಭವಿಸಿದೆ.

Rishabh Pant: ವಿಕೆಟ್ ಕೀಪರ್ ಪಂತ್ ಕಾರು ಅಪಘಾತ, ಮೈ ಜುಂ ಎನಿಸುವ ಸಿಸಿಟಿವಿ ವಿಡಿಯೋ ವೈರಲ್..!

ಎಬಿಎಸ್, ಇಬಿಡಿ, ಬಿಎ, ಇಎಸ್‌ಪಿ ಸೇರಿದಂತೆ ಬ್ರೇಕ್ ಸಿಸ್ಚಮ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಅತೀ ವೇಗದಲ್ಲಿರುವ ಕಾರನ್ನು ನಿಯಂತ್ರಿಸುವ ವ್ಯವಸ್ಥೆಯೂ ಇದೆ. ಇನ್ನು ದಿಢೀರ್ ಬ್ರೇಕ್ ಹಾಕಿದಾಗ ಕಾರು ಸ್ಕಿಡ್ ಆಗದಂತೆ, ಸ್ಟೀರಿಂಗ್ ಲಾಕ್ ಆಗದಂತ ವ್ಯವಸ್ಥೆಗಳು ಈ ಕಾರಿನಲ್ಲಿದೆ. ಟಾಪ್ ಮಾಡೆಲ್ ಕಾರಿನ ಬೆಲೆ 2.07 ಕೋಟಿ ರೂಪಾಯಿ(ಎಕ್ಸ್ ಶೋ ರೂಂ)

click me!