ಮುಂದಿನ ವರ್ಷ ಭಾರತಕ್ಕೆ ಎಂಟ್ರಿ ಕೊಡುತ್ತೆ ಸೆಲ್ಫ್‌ ಡ್ರೈವ್ ಟೆಸ್ಲಾ ಕಾರ್

By Suvarna News  |  First Published Oct 25, 2020, 2:38 PM IST

ಅಮೆರಿಕದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯು ಬ್ಯಾಟರಿ ಚಾಲಿತ, ಸ್ವ ಚಾಲನೆಯ ಕಾರುಗಳನ್ನು ನಿರ್ಮಾಣ ಮಾಡುತ್ತದೆ.


ಅಮೆರಿಕದ ಕ್ಲೀನ್ ಎನರ್ಜಿ ಕಂಪನಿ, ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ಮುಂದಿನ ವರ್ಷ ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್‌ ಕಾರುಬಾರು ಮಾಡುವ ಸಾಧ್ಯತೆ ಇದೆ. ಅದರಲ್ಲೂ ದೇಶದ ಶ್ರೀಮಂತ ರಾಜ್ಯ ಮಹಾರಾಷ್ಟ್ರದಲ್ಲಿ ಟೆಸ್ಲಾ ತನ್ನ ಕಾರ್ಯಾಚರಣೆ ನಡೆಸಬಹುದು. ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಅವರು ಈ ಬಗ್ಗೆ ಟ್ವೀಟ್‌ವೊಂದನ್ನು ಮಾಡಿ ವಿಷಯ ಹೊರ ಹಾಕಿದ್ದಾರೆ.

ಕಳೆದ ವಾರ ಟೆಸ್ಲಾ ಕ್ಲಬ್ ಇಂಡಿಯಾ ಎಂಬ ಟ್ವಿಟರ್ ಹ್ಯಾಂಡಲ್‌ನಿಂದಾದ ಟ್ವೀಟ್ ಕೂಡ, ಭಾರತಕ್ಕೆ ಟೆಸ್ಲಾ ಯಾವಾಗ ಪ್ರವೇಶ ಎನ್ನುವ ರೀತಿಯಲ್ಲಿ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮಸ್ಕ್, ಖಂಡಿತವಾಗಿ ಮುಂದಿನ ವರ್ಷ ಎಂದು ಹೇಳಿದ್ದರು. ಇದೀಗ ಮಹಾರಾಷ್ಟ್ರದ ಆದಿತ್ಯ ಠಾಕ್ರೆ ಅವರು ಟೆಸ್ಲಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವುದು ಟೆಸ್ಲಾ ಪ್ರವೇಶ ಬಹುತೇಕ ಖಚಿತವಾಗುತ್ತಿದೆ.

Tap to resize

Latest Videos

undefined

Suzuki Celerio: ಸೂಪರ್ ಲೇಔಟ್ ಇರೋ ಕಾರು ಮಾರುಕಟ್ಟೆಗೆ ಯಾವಾಗ..? ಇಲ್ಲಿದೆ ಡೀಟೆಲ್ಸ್

ಗುರುವಾರ ಟ್ವೀಟ್ ಮಾಡಿರುವ ಮಹಾರಾಷ್ಟ್ರದ ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆದಿತ್ಯ ಠಾಕ್ರೆ ಅವರು, ಕೈಗಾರಿಕಾ ಸಚಿವ ಸುಭಾಶ್ ದೇಸಾಯಿ ಜತೆಗೂಡಿ ಟೆಸ್ಲಾ ಅಧಿಕಾರಿಗಳ ಜತೆ ವಿಡಿಯೋ ಕಾಲ್ ಮಾಡಿ ಅವರನ್ನು ಮಾಹಾರಾಷ್ಟ್ರಕ್ಕೆ ಆಮಂತ್ರಿಸಿರುವುದಾಗಿ ಹೇಳಿದ್ದರು. 

ಠಾಕ್ರೆ ಟ್ವೀಟ್‌ನಲ್ಲಿ ಏನಿದೆ?

ಈ ಸಂಜೆ ಕೈಗಾರಿಕಾ ಸಚಿವ ಸುಭಾಶ್ ದೇಸಾಯಿ ಜತೆಗೂಡಿ ಟೆಸ್ಲಾ ತಂಡದ ಜೊತೆಗೆ ವಿಡಿಯೋ ಕಾಲ್‌ನಲ್ಲಿ ಪಾಲ್ಗೊಂಡಿದ್ದೆ. ಈ ವೇಳೆ ಅವರನ್ನು ಮಹಾರಾಷ್ಟ್ರಕ್ಕೆ ಆಮಂತ್ರಿಸಲಾಯಿತು. ಕೇವಲ ಹೂಡಿಕೆಗಾಗಿ ಮಾತ್ರವೇ ಆಮಂತ್ರಣ ಅಲ್ಲ ಇದು. ಬದಲಿಗೆ ಎಲೆಕ್ಟ್ರಿಕ್ ವಾಹನಗಳು ಮತ್ತು ಸುಸ್ಥಿರತೆಯ ದೃಷ್ಟಿಯಿಂದ ಇದು ನನಗೆ ಮಹತ್ವ ಎನಿಸಿತು ಎಂದು ಹೇಳಿದ್ದಾರೆ. ಈ ಟ್ವೀಟನ್ನು ಅವರು ಎಲಾನ್ ಮಸ್ಕ್ ಅವರಿಗೂ ಟ್ಯಾಗ್ ಮಾಡಿದ್ದಾರೆ.

ಶೀಘ್ರ ಮಾರುಕಟ್ಟೆಗೆ ಬರಲಿದೆ ಕವಾಸಕಿ W175 ಬೈಕ್?

ಮುಂದುವರಿದು ಮತ್ತೊಂದು ಟ್ವೀಟ್‌ನಲ್ಲಿ ನೀತಿ ನಿರೂಪಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಬದಲಾವಣೆಗಳಲ್ಲಿ ನಾನು ದೃಢವಾಗಿ ನಂಬಿಕೆ ಹೊಂದಿದ್ದೇನೆ, ಬದ್ಧರಾಗಿದ್ದೇವೆ ಮತ್ತು ನವೀಕರಿಸಬಹುದಾದ ಇಂಧನಗಳ  ಬೆಂಬಲಿತವಾದ ಎಲೆಕ್ಟ್ರಿಕಲ್ ವಾಹನಗಳು ಭವಿಷ್ಯದ ದಾರಿ ನಾನು ವೈಯಕ್ತಿಕವಾಗಿ ನಂಬುತ್ತೇನೆ. ಈ ಚಿಂತನೆಯು ಶೀಘ್ರವೇ ಮುಖ್ಯವಾಹಿನಿಯಾಗಿ ಕಾರ್ಯಗತಗೊಳ್ಳಲಿ ಎಂದು ಆಶಿಶೋಣ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.

ಬೆಂಗಳೂರಿಗೆ ಬೇಡ, ಇಲ್ಲಿಯೇ ಇರಲಿ.
ಆದಿತ್ಯ ಠಾಕ್ರೆ ಅವರ ಟ್ವೀಟ್‌ಗೆ ಅನೇಕರು ಟ್ವೀಟ್ ಮಾಡಿ ಮಹಾರಾಷ್ಟ್ರದ ತಮ್ಮ ತಮ್ಮ ಜಿಲ್ಲೆಗಳಲ್ಲಿ ಟೆಸ್ಲಾ ಹೂಡಿಕೆ ಮಾಡುವಂತೆ ಕೇಳಿಕೊಂಡಿದ್ದಾರೆ. ಅದರಲ್ಲಿ ಟ್ವಿಟರ್  ಬಳಕೆದಾರೊಬ್ಬರು, ಏನಾದರೂ ಮಾಡಿ ಆದರೆ ಬೆಂಗಳೂರಿಗೆ ಹೋಗದಂತೆ ಮಾಡಿ. ಇಲ್ಲಿಯೇ(ಮಹಾರಾಷ್ಟ್ರ) ಹೂಡಿಕೆ ಮಾಡುವಂತೆ ಮಾಡಿ. ಎಲೆಕ್ಟ್ರಿಕಲ್ಸ್‌ನಲ್ಲಿ  ಭಾರಿ ಪ್ರಮಾಣದ ಹೂಡಿಕೆ ಇದರಿಂದ ಸಾಧ್ಯವಾಗುತ್ತದೆ ಮತ್ತು ಮಹಾರಾಷ್ಟ್ರ ಆಟೊ ಹಬ್ ಎಂಬುದನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಏತನ್ಮಧ್ಯೆ ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಕೂಡ ತಮ್ಮ ರಾಜ್ಯಗಳಲ್ಲಿ ಟೆಸ್ಲಾ ಹೂಡಿಕೆಗೆ ಪ್ರಯತ್ನಿಸುತ್ತಿವೆ ಎನ್ನಲಾಗುತ್ತಿದೆ.

ಎಲೆಕ್ಟ್ರಿಲ್ ಕಾರುಗಳ ಕಾರುಬಾರ
ಸೆಲ್ಫ್ ಡ್ರೈವಿಂಗ್ ಕಾರುಗಳ ಬೆಲೆಯಲ್ಲಿ ಕಡಿಮೆ ಮಾಡಲಾಗುವುದು ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಭರವಸೆ ನೀಡಿದ ಬಳಿಕವೂ ಕಳೆದ ತಿಂಗಳು ಟೆಸ್ಲಾ ಕಂಪನಿಯ ಮಾರುಕಟ್ಟೆಯ ಮೌಲ್ಯ 500 ಕೋಟಿ ಡಾಲರ್‌ನಷ್ಟು ಕಡಿಮೆಯಾಗಿತ್ತು. ಭಾರತೀಯ ಲೆಕ್ಕದಲ್ಲಿ ಇದು ಅಂದಾಜು 3,68,300 ಕೋಟಿ ರೂಪಾಯಿ ಆಗುತ್ತದೆ. 

ಮೈಲುಗಲ್ಲು ಸ್ಥಾಪಿಸಿದ ವಿಟಾರಾ ಬ್ರೆಜಾ

ಖಂಡಿತವಾಗಿಯೂ ಮುಂದಿನ ಕೆಲವು ವರ್ಷಗಳಲ್ಲಿ ಭಾರತವೂ ಸೇರಿದಂತೆ ಬಹುತೇಕ ಎಲ್ಲ ಕಡೆ ಎಲೆಕ್ಟ್ರಿಕಲ್ ವಾಹನಗಳ  ಭರಾಟೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಹಳಷ್ಟು ಆಟೋ ಕಂಪನಿಗಳು ಎಲೆಕ್ಟ್ರಿಕಲ್ ವಾಹನಗಳು ಉತ್ಪಾದನೆಯಲ್ಲಿ ತೊಡಗಿವೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಭಾರತೀಯ  ರಸ್ತೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಕಾರುಗಳ ಕಂಡರೆ ಆಶ್ಚರ್ಯ ಪಡಬೇಕಿಲ್ಲ. 

click me!