ಹಬ್ಬಕ್ಕೆ ಡಬಲ್ ಧಮಾಕ; ಮಾರುತಿ ಸ್ವಿಫ್ಟ್ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!

By Suvarna News  |  First Published Oct 19, 2020, 3:18 PM IST

ನವರಾತ್ರಿ ಹಬ್ಬಕ್ಕೆ ಮಾರುತಿ ಸುಜುಕಿ ಸ್ವಿಫ್ಟ್ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಭಾರತದಲ್ಲಿ 24 ಲಕ್ಷ ಸ್ವಿಫ್ಟ್ ಕಾರುಗಳ ಮಾರಾಟದ ಸಂತದಲ್ಲಿ ಮಾರುತಿ ಇದೀಗ ಹೆಚ್ಚುವರಿ ಫೀಚರ್ಸ್, ಆಕರ್ಷಕ ಬೆಲೆ ಜೊತೆಗೆ ಹಬ್ಬದ ಕೆಲ ರಿಯಾಯಿತಿಗಳು ಲಭ್ಯವಿದೆ. ನೂತನ ಸ್ವಿಫ್ಟ್ ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ.


ನವದೆಹಲಿ(ಅ.19): ಮಾರುತಿ ಸುಜುಕಿ ಸ್ವಿಫ್ಟ್ ಕಾರು ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕಾರು. ಹಲವು ಬದಲಾಣೆಗಳೊಂದಿಗೆ ಬಿಡುಗಡೆಯಾಗುತ್ತಲೇ ಬಂದಿರುವ ಸ್ವಿಫ್ಟ್ ಕಾರು ಕೈಗೆಟುಕುವ ದರ ಹಾಗೂ ಆಕರ್ಷಕ ವಿನ್ಯಾಸ, ಉತ್ತಮ ಮೈಲೇಜ್ ಸೇರಿದಂತೆ ಹಲವು  ವಿಶೇಷತೆಗಳನ್ನು ಹೊಂದಿದೆ. ಇದೀಗ ಈ ನವರಾತ್ರಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಹೊಚ್ಚ ಹೊಸ ಸ್ವಿಫ್ಟ್ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ ಮಾಡಿದೆ.

ಭಾರತದಲ್ಲಿ ವಾಹನ ಸಬ್‌ಸ್ಕ್ರಿಪ್ಶನ್ ಆರಂಭಿಸಿದ ಮಾರುತಿ ; ಸುಲಭವಾಗಿ ಪಡೆಯಿರಿ ಕಾರು!.

Latest Videos

undefined

ಲಿಮಿಟೆಡ್ ಎಡಿಶನ್ ಕಾರಿನಲ್ಲಿ ಹೆಚ್ಚುವರಿ ಫೀಚರ್ಸ್‌ಗಳಾದ ಕಾರಿನ ಹಿಂಭಾಗದ ಅಂದ ಹೆಚ್ಚಿಸುವ ಸ್ಪಾಯ್ಲರ್ ಹಾಗೂ ರೇರ್ ಬಾಡಿ ಕಿಟ್, ಬಾಡಿ ಸೈಟ್ ಮೊಲ್ಡಿಂಗ್, ಸೈಡ್ ಬಾಡಿ ಕಿಟ್, ಡೊರ್ ವಿಸರ್, ಬ್ಲಾಕ್ ಗಾರ್ನಿಶ್ ಗ್ರಿಲ್ ಹಾಗೂ ಫ್ರಂಟ್ ಬಾಡಿ ಕಿಟ್‌ಗಳನ್ನು ನೀಡಲಾಗಿದೆ. ಎಕ್ಸ್ ಶೋ ರೂ ಬೆಲೆಗಿಂತ ಕೇವಲ 24,000 ರೂಪಾಯಿಗಳಲ್ಲಿ ಈ ಹೆಚ್ಚುವರಿ ಫೀಚರ್ಸ್ ಪಡೆಯಬಹುದು.

ಮಾರುತಿ S ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆ; ಕ್ರೆಟಾ, ಸೆಲ್ಟೋಸ್ ಕಾರಿಗಿಂತ ಕಡಿಮೆ ಬೆಲೆ!.

ಸ್ವಿಫ್ಟ್ ಪ್ರತಿ ಬಾರಿ ಗ್ರಾಹಕರಿಗೆ ಅತ್ಯುತ್ತಮ ಹಾಗೂ ಆತ್ಯಾಧುನಿಕ ತಂತ್ರಜ್ಞಾನದ ಅನುಭವ ನೀಡಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಾರು ಪೂರೈಸಿದೆ. ಇದೀಗ ಲಿಮಿಟೆಡ್ ಎಡಿಶನ್ ಮೂಲಕ ಮತ್ತಷ್ಟು ಆಗ್ರೆಸ್ಸೀವ್ ಹಾಗೂ ಸ್ಪೋರ್ಟ್ಸ್ ಲುಕ್ ಕಾರು ನೀಡುತ್ತಿದೆ ಎಂದು ಮಾರುತಿ ಸುಜುಕಿ ಮಾರ್ಕೆಟಿಂಗ್ ಹಾಗೂ ಸೇಲ್ಸ್ ವಿಭಾಗದ ನಿರ್ದೇಶಕ ಶಶಾಂಕ್ ಶ್ರೀವತ್ಸವ್ ಹೇಳಿದ್ದಾರೆ.

ಕಾರಿನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 1.2 ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಮಾರುತಿ ಸ್ವಿಫ್ಟ್ ಕಾರು, 82 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.

click me!