Electric Car ಟೆಸ್ಲಾಗೆ ಸೆಡ್ಡು, ಭಾರತದಲ್ಲಿ ಫಿಸ್ಕರ್ ಎಲೆಕ್ಟ್ರಿಕ್ ಕಾರು ಕಂಪನಿ ಘಟಕ ಆರಂಭಕ್ಕೆ ತಯಾರಿ, ನೇಮಕಾತಿ ಆರಂಭ!

By Suvarna NewsFirst Published Jan 31, 2022, 5:11 PM IST
Highlights
  • ಟೆಸ್ಲಾ ಭಾರತ ಆಗಮ ಹಲವು ಕಾರಣಗಳಿಂದ ವಿಳಂಬ
  • ಟೆಸ್ಲಾಗೆ ಸೆಡ್ಡು ಹೊಡೆದ ಫಿಸ್ಕರ್ Inc ಕಾರು ಕಂಪನಿ
  • ಭಾರತದಲ್ಲಿ ಕಾರು ಉತ್ಪಾದನಾ ಘಟಕ ಆರಂಭಕ್ಕೆ ತಯಾರಿ
  • ನೇಮಕಾತಿ ಆರಂಭಿಸಿದ ಎಲೆಕ್ಟ್ರಿಕ್ ಕಾರು ಕಂಪನಿ

ನವದೆಹಲಿ(ಜ.31): ಭಾರತದಲ್ಲಿ ಎಲೆಕ್ಟ್ರಿಕ್ ಕಾರಿನ(Electric Car) ಬೇಡಿಕೆ ಹೆಚ್ಚಾಗುತ್ತಿದೆ. ಇತ್ತ ಕೇಂದ್ರ ಸರ್ಕಾರ ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್(Tesla) ಕಾರನ್ನು ಭಾರತಕ್ಕೆ ತರಲು ಕೆಲ ಪ್ರಯತ್ನ ನಡೆಸಿದೆ. ಆದರೆ ಭಾರತದ ಆಮದು ಸುಂಕ, ತೆರಿಗೆ ಸೇರಿದಂತೆ ಕೆಲ ಕಾರಣಗಳಿಂದ ಟೆಸ್ಲಾ ಭಾರತದಲ್ಲಿ ಇನ್ನು ಕಾರ್ಯಾರಂಭಗೊಂಡಿಲ್ಲ. ಇದರ ನಡುವೆ ಟೆಸ್ಲಾಗೆ ಸೆಡ್ಡು ಹೊಡೆಯಲು ಅಮೆರಿಕದ(America) ಮತ್ತೊಂದು ಎಲೆಕ್ಟ್ರಿಕ್ ಕಾರು ಕಂಪನಿ ಫಿಸ್ಕರ್ Inc(Fisker) ಇದೀಗ ಭಾರತಕ್ಕೆ ಕಾಲಿಟ್ಟಿದೆ. ಭಾರತದಲ್ಲಿ ಉತ್ಪಾದನಾ ಘಟಕ ಆರಂಭಿಸಿ ಮೇಕ್ ಇನ್ ಇಂಡಿಯಾ ಮೂಲಕ ಕಾರು ವಿತರಣೆ ಮಾಡಲು ಮುಂದಾಗಿದೆ. 

ಅಮೆರಿಕದ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ ಫಿಸ್ಕರ್ Inc ಎಲೆಕ್ಟ್ರಿಕ್ ಕಾರು ಕಂಪನಿ(Electric Car Company) ಇದೀಗ ಭಾರತದಲ್ಲಿ ಉತ್ಪಾದನಾ ಘಟಕ(Production Unit) ಹಾಗೂ ಟೆಕ್ ಸೆಂಟರ್(Tech Center) ಆರಂಭಿಸುತ್ತಿದೆ. ಇದಕ್ಕಾಗಿ ನೇಮಕಾತಿ ಪ್ರಕ್ರಿಯೆ ಕೂಡ ಆರಂಭಗೊಂಡಿದೆ. ಈ ಮೂಲಕ ಟೆಸ್ಲಾ ಕಾರುಗಳು ಭಾರತದಲ್ಲಿ ಬಿಡುಗಡೆಯಾಗುವ ಮೊದಲೇ ಫಿಸ್ಕರ್ Inc ಕಂಪನಿ ಎರಡು ಜನಪ್ರಿಯ ಕಾರುಗಳು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಗೋಚರಿಸುತ್ತಿದೆ.

Latest Videos

480 ಕಿ.ಮೀ ಮೈಲೇಜ್; ಬರುತ್ತಿದೆ ಫಿಸ್ಕರ್ ಒಶಿಯನ್ SUV ಕಾರು!

ಫಿಸ್ಕರ್ Inc ಕಂಪನಿ ಭಾರತದಲ್ಲಿ ಒಶಿಯನ್ ಹಾಗೂ ಪಿಯರ್ ಅನ್ನೋ ಎರಡು ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಲು ಮುಂದಾಗಿದೆ. ಇದಕ್ಕಾಗಿ ತೈವಾನಿಸ್ ಫಾಕ್ಸ್‌ಕಾನ್ ಕಂಪನಿ ಸಹಯೋಗದಲ್ಲಿ ಭಾರತದಲ್ಲಿ ಕಾರು ಉತ್ಪಾದನೆ ಆರಂಭಿಸಲಿದೆ ಎಂದು ಎಕಾನಮಿಕ್ ಟೈಮ್ಸ್ ವರದಿ ಮಾಡಿದೆ.

ಫಿಸ್ಕರ್ Inc ಕಂಪನಿಯ ಟೆಕ್ ಸೆಂಟರ್ ಹೈದರಾಬಾದ್‌ನಲ್ಲಿ(Hyderabad) ತೆರೆಯಲಾಗುತ್ತಿದೆ. ಇನ್ನು ಕಾರು ಉತ್ಪಾದನಾ ಘಟಕ ಆರಂಭದ ಕುರಿತು ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳ ಜೊತೆ ಮಾತುಕತೆ ನಡೆಸುತ್ತಿದೆ. ಈಗಾಗಲೇ ಯೂರೋಪ್ ಹಾಗೂ ಚೀನಾ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ಫಿಸ್ಕರ್ ಎಲೆಕ್ಟ್ರಿಕ್ ಕಾರುಗಳು ಭಾರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಭಾರತದಲ್ಲೂ ಜನಪ್ರಿಯಗೊಳ್ಳಲಿದೆ ಎಂದು ಫಿಸ್ಕರ್ ಹೇಳಿದೆ.

Tesla India Launch ಭಾರತದಲ್ಲಿ ವಿಶ್ವದ ಎಲ್ಲೂ ಇಲ್ಲದ ತೆರಿಗೆ, ಟೆಸ್ಲಾ ಕಾರು ಬಿಡುಗಡೆ ವಿಳಂಬಕ್ಕೆ ಕಾರಣ ಹೇಳಿದ ಮಸ್ಕ್!

ಹೈದರಾಬಾದ್‌ನಲ್ಲಿ ತೆರಯುತ್ತಿರುವ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಮೂಲಕ ಭಾರತ ಹಾಗೂ ವಿಶ್ವ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಅಧಿಪತ್ಯ ಸಾಧಿಸಲು ಫಿಸ್ಕರ್ Inc ಮುಂದಾಗಿದೆ. ಇದಕ್ಕಾಗಿ 300 ಎಂಜಿನಿಯರ್, ಸಾಫ್ಟ್‌ವೇರ್ ಡೆವಲಪ್‌ಮೆಂಟ್, ಸೇರಿದಂತೆ ಹಲವು ಪ್ರಮುಖ ಹುದ್ದೆಗಳ ನೇಮಕಾತಿಗೆ ಫಿಸ್ಕರ್ Inc ಚಾಲನೆ ನೀಡಿದೆ.

ಫಿಸ್ಕರ್ Inc ಈ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಮುಂದಿನ ವಾರದಲ್ಲಿ ಫಿಸ್ಕರ್ Inc ಅಧಿಕೃತ ಪ್ರಕಟಣೆ ಹೊರಡಿಸಲಿದೆ ಎಂದು ಎಕನಾಮಿಕ್ಸ್ ಟೈಮ್ಸ್ ತನ್ನ ವರದಿಯಲ್ಲಿ ಹೇಳಿದೆ. ಭಾರತದಲ್ಲಿ ಅತೀ ದೊಡ್ಡ ಘಟಕ ಆರಂಭಿಸಿ ಇಲ್ಲಿಂದ ವಿದೇಶಗಳಿಗೆ ರಫ್ತು ಮಾಡಲು ಫಿಸ್ಕರ್ Inc ಮುಂದಾಗಿದೆ. ಈ ಮೂಲಕ ಉತ್ಪಾದನೆ ವೆಚ್ಚವೂ ಕಡಿಮೆಯಾಗಲಿದೆ. ಜೊತೆಗೆ ಇತರ ದೇಶಗಳಲ್ಲಿ ಆಮದು ಸುಂಕ ಹೆಚ್ಚಿಲ್ಲದ ಕಾರಣ ರಫ್ತು ಸುಲಭಗೊಳ್ಳಲಿದೆ ಅನ್ನೋದು ಫಿಸ್ಕರ್ ಇಂಕ್ ಲೆಕ್ಕಾಚಾರವಾಗಿದೆ.

Tesla in India ಕರ್ನಾಟಕದಲ್ಲಿ ಘಟಕ ಆರಂಭಿಸಲು ಮಸ್ಕ್‌ಗೆ ಅಹ್ವಾನ, ರಾಜ್ಯದ ಮನವಿಗೆ ಇತರ 5 ರಾಜ್ಯದಲ್ಲಿ ಸಂಚಲನ!

ಫಿಸ್ಕರ್ Inc ನಿರ್ಧಾರ ಟೆಸ್ಲಾಗೆ ತೀವ್ರ ಹೊಡೆತ ನೀಡಿದೆ. ಭಾರತದಲ್ಲಿ ಕಾರು ಬಿಡುಗಡೆಗೆ ತಯಾರಿ ನಡೆಸಿದ ಟೆಸ್ಲಾ ಆಮದು ಸುಂಕ, ತೆರಿ ಹಾಗೂ ಸರ್ಕಾರದ ಮೇಕ್ ಇನ್ ಇಂಡಿಯಾ ನೀತಿಯಿಂದ ಹಿನ್ನಡೆ ಅನುಭವಿಸಿದೆ. ಭಾರತಕ್ಕೆ ಬಿಡಿ ಭಾಗಗಳ ತಂದು ಜೋಡಣೆ ಮಾಡಿ ಟೆಸ್ಲಾ ಕಾರು ಮಾರಾಟಕ್ಕೆ ಮುಂದಾಗಿತ್ತು. ಆದರೆ ಮೇಕ್ ಇನ್ ಇಂಡಿಯಾ ಯೋಜನೆಗೆ ಕೇಂದ್ರ ಹೆಚ್ಚಿನ ಒತ್ತು ನೀಡಿದ ಕಾರಣ ಆಮದು ಸುಂಕ ಹೆಚ್ಚಾಗಿದೆ. ಇದರಿಂದ ಅಮೆರಕದಲ್ಲಿನ 30 ಲಕ್ಷ ರೂಪಾಯಿಯ ಟೆಸ್ಲಾ ಕಾರು ಭಾರತದಲ್ಲಿ 60 ಲಕ್ಷ ರೂಪಾಯಿ ಆಗಲಿದೆ. 
 

click me!