ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್: ಟಾಟಾ ಟಿಗೋರ್ ಇವಿ ಗರಿಷ್ಠ ಸುರಕ್ಷೆಯ ಕಾರ್

By Suvarna News  |  First Published Sep 2, 2021, 2:52 PM IST

ಭಾರತೀಯ ಮಾರುಕಟ್ಟೆಗೆ ಈಗಷ್ಟೇ ಲಾಂಚ್ ಆಗಿರುವ ಟಾಟಾ ಕಂಪನಿಯ ಟಿಗೋರ್ ಇವಿ ಕ್ರ್ಯಾಶ್ ಟೆಸ್ಟ್‌ನಲ್ಲೂ ಗರಿಷ್ಠ ಸುರಕ್ಷತೆಯನ್ನು ದಾಖಲಿಸಿದೆ. ಗ್ಲೋಬಲ್ ಎನ್‌ಸಿಇಪಿ ಪರೀಕ್ಷಿಸಿದ ಮೊದಲ ಎಲೆಕ್ಟ್ರಿಕ್ ವೆಹಿಕಲ್ ಇದಾಗಿದ್ದು ಗರಿಷ್ಠ ನಾಲ್ಕು ಸ್ಟಾರ್‌ಗಳನ್ನು ಪಡೆಯಲು ಯಶಸ್ವಿಯಾಗಿದೆ.


ದೇಶಿ ವಾಹನ ಉತ್ಪಾದನಾ ಕಂಪನಿ ಟಾಟಾ ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸುತ್ತಿದೆ. ಕಂಪನಿಯು ಟಾಟಾ ಟಿಗೋ ಇವಿ ಲಾಂಚ್ ಮಾಡಿದ್ದು ಗೊತ್ತಿರುವ ಸಂಗತಿಯಾಗಿದೆ. ಈಗ ಹೊಸ ವಿಷಯ ಏನೆಂದರೆ, ಈ ಟಿಗೋರ್ ಇವಿ ಕ್ರ್ಯಾಶ್ ಟೆಸ್ಟ್‌ನಲ್ಲಿ ನಾಲ್ಕು ಸ್ಟಾರ್ ಸಂಪಾದಿಸಿದೆ.

ರಗಡ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಇಬೈಕ್‌ಗೋ, ಬೆಲೆ ಎಷ್ಟು?

Tap to resize

Latest Videos

undefined

ಹೌದು. ಇದು ನಿಜ. ಎಲ್ಲಕ್ಕಿಂತ ಹೆಚ್ಚಾಗಿ, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಡೆಸಿದ ಮೊದಲ ಎಲೆಕ್ಟ್ರಿಕ್ ವಾಹನ ಎಂಬ ಹೆಗ್ಗಳಿಕೆಗೆ ಟಿಗೋರ್ ಇವಿ ಪಾತ್ರವಾಗಿದೆ. ಈ ವಾಹನವು ವಯಸ್ಕರು ಮತ್ತು ಮಕ್ಕಳ ಸುರಕ್ಷತೆಯ ಎರಡೂ ವಿಭಾಗದಲ್ಲಿ ಗರಿಷ್ಠ ಸ್ಕೋರ್ ಗಳಿಸಿದೆ.  ಆ ಮೂಲಕ ಟಾಟಾ ಪ್ರಯಾಣಿಕ ವಾಹನಗಳ ಸುರಕ್ಷತೆಯ ಪ್ರತೀಕಗಳು ಎಂಬ ಮಾತನ್ನು ಈ ಟಿಗೋರ್ ಇವಿ ಕೂಡ ನಿಜ ಮಾಡಿದೆ.

ಟಾಟಾ ಟಿಗೋರ್ ಎಲೆಕ್ಟ್ರಿಕ್ ವಾಹನವನ್ನು ಅದರ ಅತ್ಯಂತ ಮೂಲಭೂತ ಸುರಕ್ಷತಾ ವಿವರಣೆಯಲ್ಲಿ ಮೌಲ್ಯಮಾಪನ ಮಾಡಲಾಗಿದ್ದು, ಅದರ #SaferCarsForIndia ಅಭಿಯಾನದ ಅಡಿಯಲ್ಲಿ ಎರಡು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಸುರಕ್ಷತಾ ರೇಟಿಂಗ್ ಏಜೆನ್ಸಿಯ ಪ್ರಕಾರ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಸೈಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲ್ಲಾ ಆಸನ ಸ್ಥಾನಗಳಲ್ಲಿ ಮೂರು ಪಾಯಿಂಟ್ ಬೆಲ್ಟ್‌ಗಳು ಮತ್ತು ಐಸೋಫಿಕ್ಸ್ ಕನೆಕ್ಟರ್‌ಗಳಂತಹ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಅದನ್ನು ಸಜ್ಜುಗೊಳಿಸುವ ಮೂಲಕ ಎಲೆಕ್ಟ್ರಿಕ್ ವಾಹನದ ಸುರಕ್ಷತಾ ರೇಟಿಂಗ್ ಅನ್ನು ಇನ್ನಷ್ಟು ಸುಧಾರಿಸಬಹುದಾಗಿದೆ.

ಮಾರುತಿ ಬಲೆನೋ ಫೇಸ್‌ಲಿಫ್ಟ್ ಶೀಘ್ರ ಬಿಡುಗಡೆ? ಏನೆಲ್ಲಾ ಬದಲಾವಣೆಗಳಿರಬಹುದು?

ಟಾಟಾ ಟಿಗೋರ್ ಇವಿ ಲಾಂಚ್
ಭಾರತದ ಕಾರು ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆ ತಂದಿರುವ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಿಭಾಗದಲ್ಲೂ ಅಗ್ರಜನಾಗಿ ಮುಂದುವರಿದಿದೆ. ಟಾಟಾ ನೆಕ್ಸಾನ್ ಹಾಗೂ ಟಿಗೋರ್ ಎಲೆಕ್ಟ್ರಿಕ್ ಕಾರಿನ ಮೂಲಕ ದೇಶದಲ್ಲಿ ಹಸಿರು ಕಾರಿನ ಕ್ರಾಂತಿ ಮಾಡಿದೆ. ಇದೀಗ ಹೆಚ್ಚು ಮೈಲೇಜ್, ಕಡಿಮೆ ಬೆಲೆ ಹಾಗೂ ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಅಪ್‌ಗ್ರೇಡೆಟ್ ಟಾಟಾ ಟಿಗೋರ್ ಇವಿ(ಎಲೆಕ್ಟ್ರಿಕ್ ಕಾರು) ಬಿಡುಗಡೆಯಾಗಿದೆ.

ಗ್ರಾಹಕರ ಸೌಕರ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇವಿಗಳು ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿವೆ ಪರಿಸರ ಸ್ನೇಹಿ ಪರಿಹಾರಗಳಿಗೆ ಆದ್ಯತೆ ಹೆಚ್ಚುತ್ತಿದೆ.   ನೆಕ್ಸಾನ್ ಇವಿ  ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಇವಿ ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುತ್ತಿರುವ ಬೆಂಬಲ, ಸಬ್ಸಿಡಿಗಳನ್ನು ಒದಗಿಸುವುದು ಮತ್ತು ಇವಿಗಳು ಬೆಳೆಯಲು ಅನುಕೂಲಕರ ವಾತಾವರಣವನ್ನು ಒದಗಿಸುವುದು. ನಮ್ಮ ಇವಿ ಕೊಡುಗೆಗಳನ್ನು ನಮ್ಮ ಗ್ರಾಹಕರಿಗೆ ವಿಸ್ತರಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ನಾವು ಇಂದು ಟಿಗೋರ್ ಇವಿ ಅನ್ನು ಪ್ರಾರಂಭಿಸಲು ಉತ್ಸುಕರಾಗಿದ್ದೇವೆ, ಇದು ಸಮರ್ಥ ಜಿಪ್ಟ್ರಾನ್ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುತ್ತದೆ. ತಾಂತ್ರಿಕವಾಗಿ ಮುಂದುವರಿದ, ಆರಾಮದಾಯಕ ಮತ್ತು ಸುರಕ್ಷತಾ ಮಾನದಂಡಗಳ ಉನ್ನತ ವಾಹನವನ್ನು ಹೊಂದಲು ಬಯಸುವ ಎಲ್ಲಾ ಮಹತ್ವಾಕಾಂಕ್ಷೆಯ ಸೆಡಾನ್ ಖರೀದಿದಾರರಿಗೆ ಟಿಗೋರ್ ಒಂದು ಪರಿಪೂರ್ಣ ಆಯ್ಕೆಯಾಗಿದೆ ಎಂದು ಟಾಟಾ ಮೋಟಾರಿನ ಪ್ರಯಾಣಿಕ ವಾಹನ ವಹಿವಾಟು ಘಟಕದ ಅಧ್ಯಕ್ಷರಾದ ಶೈಲೇಶ್ ಚಂದ್ರ ಹೇಳಿದ್ದಾರೆ.

ಟಾಟಾ ಮೋಟಾರು ಹೊಸ ಟಿಗೋರ್ ಇವಿಯನ್ನು ಮೂರು ರೂಪಾಂತರಗಳಲ್ಲಿ ನೀಡುತ್ತಿದೆ: XE, XM, XZ+ (XZ+ ಡ್ಯುಯಲ್ ಟೋನ್ ಆಯ್ಕೆ ಲಭ್ಯವಿದೆ), ಇದು ಇವಿ ಮಾಲೀಕರಿಗೆ 8 ವರ್ಷ ಮತ್ತು 160,000 ಕಿ.ಮೀ ಬ್ಯಾಟರಿ ಮತ್ತು ಮೋಟಾರ್ ವಾರೆಂಟಿ ಒದಗಿಸಲಿದೆ. ಇದರ ಇತರ ವೈಶಿಷ್ಟ್ಯಗಳಲ್ಲಿ ವಿದ್ಯುತ್ ಹೊಂದಾಣಿಕೆ ಮತ್ತು ಮಡಿಸಬಹುದಾದ ಒಆರ್‌ವಿಎಂಗಳು, ಪುಶ್ ಬಟನ್ ಪ್ರಾರಂಭದೊಂದಿಗೆ ಸ್ಮಾರ್ಟ್ ಕೀ, ಪೋರ್ಟಬಲ್ ಚಾರ್ಜಿಂಗ್ ಕೇಬಲ್, ಇತ್ಯಾದಿಗಳು ಒಳಗೊಂಡಿದೆ.

ಥಾರ್‌‌ ಪ್ರಬಲ ಸ್ಪರ್ಧಿ ಹೊಸ ಫೋರ್ಸ್ ಗೂರ್ಖಾ ಆಫ್‍‌ರೋಡ್ SUV ಲಾಂಚ್‌ಗೆ ರೆಡಿ

click me!