306 ಕಿ.ಮೀ ಮೈಲೇಜ್, ಕೈಗೆಟುಕವ ಬೆಲೆ, ಗರಿಷ್ಠ ಸುರಕ್ಷತೆಯ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಲಾಂಚ್!

By Suvarna News  |  First Published Aug 31, 2021, 6:30 PM IST
  • ಅಪ್‌ಗ್ರೇಡೆಡ್ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಬಿಗುಗಡೆ
  • ಗರಿಷ್ಠ ಸುರಕ್ಷತೆ, 306 ಕಿ.ಮೀ ಮೈಲೇಜ್ ಹಾಗೂ ಕಡಿಮ ಬೆಲೆ
  • ಆಕರ್ಷಕ ವಿನ್ಯಾಸ ಹಾಗೂ ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್ ಹಾಗೂ ವಾರೆಂಟಿ

ಬೆಂಗಳೂರು(ಆ.31): ಭಾರತದ ಕಾರು ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆ ತಂದಿರುವ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಿಭಾಗದಲ್ಲೂ ಅಗ್ರಜನಾಗಿ ಮುಂದುವರಿದಿದೆ. ಟಾಟಾ ನೆಕ್ಸಾನ್ ಹಾಗೂ ಟಿಗೋರ್ ಎಲೆಕ್ಟ್ರಿಕ್ ಕಾರಿನ ಮೂಲಕ ದೇಶದಲ್ಲಿ ಹಸಿರು ಕಾರಿನ ಕ್ರಾಂತಿ ಮಾಡಿದೆ. ಇದೀಗ ಹೆಚ್ಚು ಮೈಲೇಜ್, ಕಡಿಮೆ ಬೆಲೆ ಹಾಗೂ ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಅಪ್‌ಗ್ರೇಡೆಟ್ ಟಾಟಾ ಟಿಗೋರ್ EV(ಎಲೆಕ್ಟ್ರಿಕ್ ಕಾರು) ಬಿಡುಗಡೆಯಾಗಿದೆ.

500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!

Latest Videos

ಟಾಟಾ ಟಿಗೋರ್ EV ಕಾರು 4 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ಪ್ರೌಢ ಪ್ರಯಾಣಿಕರ ಸುರಕ್ಷತೆ (17.00 ರಲ್ಲಿ 12.00 ಅಂಕಗಳು) ಮತ್ತು ಮಕ್ಕಳ ಪ್ರಯಾಣದಲ್ಲಿ (49.00 ರಲ್ಲಿ 37.24 ಅಂಕಗಳು)  GNCAP ನಿಂದ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಮತ್ತೊಂದು ವಿಶೇಷ ಅಂದರೆ ಜಿಪ್‌ಟ್ರಾನ್ ತಂತ್ರಜ್ಞಾನ ಬಳಸಲಾಗಿದೆ. 

ಟಿಗೋರ್ ಎಲೆಕ್ಟ್ರಿಕ್ ಕಾರಿನ ಬೆಲೆ(ಎಕ್ಸ್ ಶೋ ರೂಂ) 
ಟಿಗೋರ್ EV XE    11.99 ಲಕ್ಷ ರೂಪಾಯಿ
ಟಿಗೋರ್ EV XM    12.49 ಲಕ್ಷ ರೂಪಾಯಿ
ಟಿಗೋರ್ EV XZ+    12.99 ಲಕ್ಷ ರೂಪಾಯಿ; (ಡ್ಯುಯೆಲ್ ಟೋನ್ - 13.14 ಲಕ್ಷ ರೂ)

"ಗ್ರಾಹಕರ ಸೌಕರ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ EVಗಳು ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿವೆ ಪರಿಸರ ಸ್ನೇಹಿ ಪರಿಹಾರಗಳಿಗೆ ಆದ್ಯತೆ ಹೆಚ್ಚುತ್ತಿದೆ.   Nexon EV  ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ EV ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುತ್ತಿರುವ ಬೆಂಬಲ, ಸಬ್ಸಿಡಿಗಳನ್ನು ಒದಗಿಸುವುದು ಮತ್ತು EVಗಳು ಬೆಳೆಯಲು ಅನುಕೂಲಕರ ವಾತಾವರಣವನ್ನು ಒದಗಿಸುವುದು. ನಮ್ಮ ಇವಿ ಕೊಡುಗೆಗಳನ್ನು ನಮ್ಮ ಗ್ರಾಹಕರಿಗೆ ವಿಸ್ತರಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ನಾವು ಇಂದು Tigor EV ಅನ್ನು ಪ್ರಾರಂಭಿಸಲು ಉತ್ಸುಕರಾಗಿದ್ದೇವೆ, ಇದು ಸಮರ್ಥ ಜಿಪ್ಟ್ರಾನ್ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುತ್ತದೆ. ತಾಂತ್ರಿಕವಾಗಿ ಮುಂದುವರಿದ, ಆರಾಮದಾಯಕ ಮತ್ತು ಸುರಕ್ಷತಾ ಮಾನದಂಡಗಳ ಉನ್ನತ ವಾಹನವನ್ನು ಹೊಂದಲು ಬಯಸುವ ಎಲ್ಲಾ ಮಹತ್ವಾಕಾಂಕ್ಷೆಯ ಸೆಡಾನ್ ಖರೀದಿದಾರರಿಗೆ Tigor EV ಒಂದು ಪರಿಪೂರ್ಣ ಆಯ್ಕೆಯಾಗಿದೆ ಎಂದು ಟಾಟಾ ಮೋಟಾರಿನ ಪ್ರಯಾಣಿಕ ವಾಹನ ವಹಿವಾಟು ಘಟಕದ ಅಧ್ಯಕ್ಷರಾದ ಶೈಲೇಶ್ ಚಂದ್ರ ಹೇಳಿದ್ದಾರೆ.

ಸರ್ಕಾರದಿಂದ ಭರ್ಜರಿ ಆಫರ್; ಟಾಟಾ ನೆಕ್ಸಾನ್, ಟಿಗೋರ್ ಎಲೆಕ್ಟ್ರಿಕ್ ಕಾರಿನ ಮೇಲೆ 3 ಲಕ್ಷ ರೂ ಡಿಸ್ಕೌಂಟ್!

ಮೈಲೇಜ್:
ಟಾಟಾ ಮೋಟಾರ್ಸ್ 70% ಮಾರುಕಟ್ಟೆ ಪಾಲುದಾರಿಕೆಯೊಂದಿಗೆ ಪ್ರಸ್ತುತ ಎಲೆಕ್ಟ್ರಿಕ್ ವಾಹನ ವೈಯಕ್ತಿಕ ವಿಭಾಗದ ಮಾರುಕಟ್ಟೆಯನ್ನು ಮುನ್ನಡೆಸುತ್ತುತ್ತಿದೆ. ಟಾಟಾ ಟಿಗೋರ್ ಒಂದು ಬಾರಿ ಚಾರ್ಜ್ ಮಾಡಿದರೆ 306 ಕೀ.ಮೀ ಪ್ರಯಾಣದ ರೇಂಜ್ ನೀಡಲಿದೆ.   ಜಾಗತಿಕವಾಗಿ ಸ್ವೀಕಾರಾರ್ಹವಾದ CCS2 ಚಾರ್ಜಿಂಗ್ ಪ್ರೋಟೋಕಾಲ್‌ಗೆ ಹೊಂದಿಕೊಳ್ಳುತ್ತದೆ ಮತ್ತು ಯಾವುದೇ 15 A ಪ್ಲಗ್ ಪಾಯಿಂಟ್‌ನಿಂದ ವೇಗವಾಗಿ ಚಾರ್ಜ್ ಮಾಡಬಹುದು ಮತ್ತು ನಿಧಾನವಾಗಿ ಚಾರ್ಜ್ ಮಾಡಬಹುದು. 

ಅತ್ಯದ್ಭುತ ವಿನ್ಯಾಸ, ಸೌಕರ್ಯ ಮತ್ತು ರೋಮಾಂಚಕ ಕಾರ್ಯಕ್ಷಮತೆಯೊಂದಿಗೆ ವರ್ಗದ ಪ್ರಮುಖ ಸುರಕ್ಷತೆಯೊಂದಿಗೆ ಸಜ್ಜಿತವಾದ Tigor EV ಯು 55 ಕಿಲೋವ್ಯಾಟ್ ಗರಿಷ್ಠ ಪವರ್ ಔಟ್ಪುಟ್ ಮತ್ತು 170 Nm ಗರಿಷ್ಠ ಟಾರ್ಕ್ ಅನ್ನು ನೀಡುತ್ತದೆ ಮತ್ತು 26-ಕಿಲೋವ್ಯಾಟ್ ಲಿಕ್ವಿಡ್ ಕೂಲ್ಡ್, ಹೈ ಎನರ್ಜಿ ಸಾಂದ್ರತೆಯ ಬ್ಯಾಟರಿ ಪ್ಯಾಕ್ ನಿಂದ ನಿಯಂತ್ರಿಸಲ್ಪಡುತ್ತದೆ.  

ಗೋವಾ ದಾಟಂಗಿಲ್ಲ, ಹುಬ್ಳೀಲಿ ಸಿಗಂಗಿಲ್ಲ; ಗಡಿ ಚೆಕ್‌ಪೋಸ್ಟ್ ಬಳಿ ಕಾರು ಡೆಲಿವರಿ ಪಡೆದ ಉದ್ಯಮಿ!

ಟಾಟಾ ಮೋಟಾರು ಹೊಸ Tigor EV ಅನ್ನು ಮೂರು ರೂಪಾಂತರಗಳಲ್ಲಿ ನೀಡುತ್ತಿದೆ: XE, XM, XZ+ (XZ+ ಡ್ಯುಯಲ್ ಟೋನ್ ಆಯ್ಕೆ ಲಭ್ಯವಿದೆ), ಇದು EV ಮಾಲೀಕರಿಗೆ 8 ವರ್ಷ ಮತ್ತು 160,000 KM ಬ್ಯಾಟರಿ ಮತ್ತು ಮೋಟಾರ್ ವಾರೆಂಟಿ ಒದಗಿಸಲಿದೆ. ಇದಲ್ಲದೆ, ಇದು ಉತ್ತಮವಾದ ಚಾಲನಾ ಡೈನಾಮಿಕ್ಸ್ ಮತ್ತು ತೀಕ್ಷ್ಣವಾದ ನಿರ್ವಹಣೆಗಾಗಿ ಸಮತೋಲಿತ ನಿಲಂಬನಗಳನ್ನೂ ಸಹ ನೀಡುತ್ತದೆ. ಮತ್ತು ಇದರ ಇತರ ವೈಶಿಷ್ಟ್ಯಗಳಲ್ಲಿ ವಿದ್ಯುತ್ ಹೊಂದಾಣಿಕೆ ಮತ್ತು ಮಡಿಸಬಹುದಾದ ORVM ಗಳು, ಪುಶ್ ಬಟನ್ ಪ್ರಾರಂಭದೊಂದಿಗೆ ಸ್ಮಾರ್ಟ್ ಕೀ, ಪೋರ್ಟಬಲ್ ಚಾರ್ಜಿಂಗ್ ಕೇಬಲ್, ಇತ್ಯಾದಿಗಳು ಒಳಗೊಂಡಿದೆ.

click me!