ಕಾರುಗಳ ಮಾರಾಟ ಭರ್ಜರಿ ಏರಿಕೆ: ಬೈಕ್‌, ಸ್ಕೂಟರ್ ಮಾರಾಟ ಇಳಿಕೆ!

By Suvarna News  |  First Published Sep 2, 2021, 11:18 AM IST

* ಆಗಸ್ಟ್‌ನಲ್ಲಿ ಬಹುತೇಕ ಕಂಪನಿಗಳ ಮಾರಾಟ ಹೆಚ್ಚಳ

* ಅಚ್ಚರಿ ಎಂಬಂತೆ ಬೈಕ್‌, ಸ್ಕೂಟರ್ ಮಾರಾಟ ಇಳಿಕೆ

* ಕಾರುಗಳ ಮಾರಾಟ ಭರ್ಜರಿ ಏರಿಕೆ


ನವದಹಲಿ(ಸೆ.02): ಹಬ್ಬದ ಋುತುಗಳು ಆರಂಭವಾದ ಬೆನ್ನಲ್ಲೇ ದೇಶದಲ್ಲಿ ವಾಹನಗಳ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ. ಆಗಸ್ಟ್‌ ತಿಂಗಳಿನಲ್ಲಿ ಹ್ಯುಂಡೈ, ಟಾಟಾ, ಮಹೀಂದ್ರಾ, ಟೊಯೋಟಾ, ನಿಸಾನ್‌, ಕಿಯಾ, ಹೊಂಡಾ ಕಂಪೆನಿಯ ಪ್ರಯಾಣಿಕ ವಾಹನಗಳ ಮಾರಾಟ ಏರಿದೆ. ಆದರೆ ಮಾರುತಿ ಕಂಪೆನಿಯ ಮಾರಾಟ ಮಾತ್ರ ಕುಸಿತ ಕಂಡಿದೆ.

ದೇಶದ ಅತಿದೊಡ್ಡ ಕಾರು ಮಾರಾಟ ಕಂಪೆನಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ 1,10,080 ಕಾರುಗಳು ಮಾರಾಟವಾಗಿದೆ. 2020ರ ಆಗಸ್ಟ್‌ನಲ್ಲಿ 1.16 ಲಕ್ಷ ಕಾರು ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.6ರಷ್ಟು ಮಾರಾಟ ಕಡಿಮೆಯಾಗಿದೆ. ಇನ್ನು ಹುಂಡೈ 46,866, ಮಹೀಂದ್ರಾ ಅಂಡ್‌ ಮಹೀಂದ್ರಾ ಕಂಪೆನಿ 15,973 ವಾಹನ, ಟಾಟಾ ಮೋಟಾ​ರ್‍ಸ್ 28018 ವಾಹನ, ಕಿಯಾ ಮೋಟಾ​ರ್‍ಸ್ 16750 ವಾಹನ, ಹೊಂಡಾ 11177 ಕಾರು, ನಿಸಾನ್‌ 3209 ಕಾರುಗಳನ್ನು ಮಾರಾಟ ಮಾಡಿವೆ.

Latest Videos

undefined

ಬೈಕ್‌, ಸ್ಕೂಟರ್‌ ಇಳಿಕೆ:

ವಿಶೇಷವೆಂದರೆ ದೇಶದ ಅತಿದೊಡ್ಡ ದ್ವಿಚಕ್ರ ವಾಹನ ಮಾರಾಟ ಸಂಸ್ಥೆಯಾದ ಹೀರೋ ಮೋಟಾ​ರ್‍ಸ್ನ ಮಾರಾಟ ಪ್ರಮಾಣ ಶೇ.22ರಷ್ಟುಇಳಿಕೆ ಕಂಡಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಕಂಪನಿ 5.84 ಲಕ್ಷ ವಾಹನ ಮಾರಿದ್ದರೆ, ಈ ವರ್ಷ ಅದು 4.53 ಲಕ್ಷಕ್ಕೆ ಇಳಿದಿದೆ. ಇನ್ನು ಹೊಂಡಾ ಮೋಟಾ​ರ್‍ಸ್ನ ಕೂಡಾ ಶೇ.3ರಷ್ಟುಇಳಿಕೆ ದಾಖಲಿಸಿದೆ. ಕಳೆದ ವರ್ಷ 4.43 ಲಕ್ಷ ವಾಹನ ಮಾರಿದ್ದರೆ, ಈ ವರ್ಷ ಅದು 4.30 ಲಕ್ಷಕ್ಕೆ ಇಳಿದಿದೆ.

ಯಾವ ಕಂಪನಿಯಲ್ಲೆಷ್ಟು ಏರಿಗೆ

ಹ್ಯುಂಡೈ ಶೇ.2

ಮಹೀಂದ್ರಾ ಶೇ.17

ಹೊಂಡಾ ಶೇ.49

ಟಾಟಾ ಶೇ.51

ಕಿಯಾ ಶೇ.55

ನಿಸಾನ್‌ ಶೇ.400

click me!