BaaS ಪರಿಚಯಿಸಿದ ಎಂಜಿ ಮೋಟಾರ್ಸ್, ಪ್ರಮುಖ 2 ಕಾರಿನ ಬೆಲೆಯಲ್ಲಿ 10 ಲಕ್ಷ ರೂಪಾಯಿ ಕಡಿತ

Published : Sep 18, 2026, 11:40 AM IST
MG  M9 and Cyberster Couture Editions

ಸಾರಾಂಶ

ಎಂಜಿ ಮೋಟಾರ್ಸ್ BaaS ಪರಿಚಯಿಸಿದೆ. ಇದರ ಪರಿಣಾಮ ಪ್ರಮುಖ 2 ಕಾರುಗಳು ಇದೀಗ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಿದೆ. ಸಾಲು ಸಾಲು ಹಬ್ಬದ ಬೆನ್ನಲ್ಲೇ ಭರ್ಜರಿ ಆಯ್ಕೆ ಘೋಷಣೆ ಮಾಡಲಾಗಿದೆ.

ಬೆಂಗಳೂರು (ಸೆ.18) ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಇದರ ಬೆನ್ನಲ್ಲೇ ಎಂಜಿ ಮೋಟಾರ್ಸ್ ಭಾರತದಲ್ಲಿ ಭರ್ಜರಿ ಆಯ್ಕೆ ನೀಡುತ್ತಿದೆ. ಎಂಜಿ ಮೋಚಾರ್ಸ್ 2 ಕಾರುಗಳಿಗೆ BaaS ಪರಿಚಯಿಸಿದೆ. ಇದರ ಪರಿಣಾಮ 2 ಕಾರುಗಳ ಬೆಲೆಯಲ್ಲಿ ಬರೋಬ್ಬರಿ 10 ಲಕ್ಷ ರೂಪಾಯಿ ಕಡಿತಗೊಂಡಿದೆ. ಇದೀಗ ಎಂಜಿ ಮೋಟಾರ್ಸ್ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇದೀಗ ಬಹುತೇಕ ಕಂಪನಿಗಳು BaaS ಆಯ್ಕೆ ನೀಡುತ್ತಿದೆ. ಎಂಜಿ ಮೋಟಾರ್ಸ್ ಭಾರತದಲ್ಲಿ JSW ಜೊತೆ ಸೇರಿ ವಹಿವಾಟು ವಿಸ್ತರಿಸಿದ ಬೆನ್ನಲ್ಲೇ ಮಹತ್ವದ ನಿರ್ಧಾರ ಕೈಗೊಂಡಿದೆ.

ಎರಡು ಕಾರುಗಳ ಬೆಲೆಯಲ್ಲ್ 10 ಲಕ್ಷ ರೂ ಕಡಿತ

ಎಂಜಿ ಮೋಟಾರ್ಸ್ ಅವರ ಎಂಜಿ ಸೈಬರ್‌ಸ್ಟರ್ ಹಾಗೂ ಎಂಜಿ 9 ಕಾರುಗಳಿಗೆ BaaS ಪರಿಚಯಿಸಲಾಗಿದೆ. ಎರಡೂ ಎಲೆಕ್ಟ್ರಿಕ್ ಕಾರುಗಳಾಗಿದೆ. ಬಾಸ್ ಮೂಲಕ ಸೈಬರ್‌ಸ್ಟರ್ ಕಾರು ಖರೀದಿಸುವಾಗ 10.01 ಲಕ್ಷ ರೂಪಾಯಿ ಕಡಿತಗೊಡರೆ, ಎಂಜಿ 9 ಕಾರಿಗೆ 9.96 ಲಕ್ಷ ರೂಪಾಯಿ ಕಡಿತಗೊಳ್ಳುತ್ತಿದೆ.

ಏನಿದು BaaS ಆಯ್ಕೆ?

BaaS ಆಯ್ಕೆ ಇದೀಗ ಹೆಚ್ಚು ಜನಪ್ರಿಯವಾಗುತ್ತಿದೆ. ಬ್ಯಾಟರಿ ಆ್ಯಸ್ ಎ ಸರ್ವೀಸ್ (BaaS). ಎಲೆಕ್ಟ್ರಿಕ್ ಕಾರು ಖರೀದಿಸುವಾಗ ಶಾಶ್ವತ ಬ್ಯಾಟರಿ ಇಲ್ಲದೆ ಬಾಡಿಗೆ ಬ್ಯಾಟರಿ ಮೂಲಕ ಕಾರು ಖರೀದಿಸುವ ಅವಕಾಶ. BaaS ಆಯ್ಕೆಯಲ್ಲಿ ಕಾರು ಮಾತ್ರ ಲಭ್ಯವಾಗಲಿದೆ. ಕಾರಿನಲ್ಲಿ ಬ್ಯಾಟರಿಯನ್ನು ಬಾಡಿಗೆ ಮೂಲಕ ಪಡೆಯಬೇಕು. ಬ್ಯಾಟರಿಗೆ ಪ್ರತಿ ಕಿಲೋಮೀಟರ್‌ಗೆ 8 ರೂಪಾಯಿಂತೆ ಬಾಡಿಗೆ ನೀಡಬೇಕು.

ಸೈಬರ್‌ಸ್ಟರ್ ಕಾರು BaaS ಆಯ್ಕೆ ಮೂಲಕ ಖರೀದಿ ಮಾಡಿದರೆ ಇದೀಗ 72.49 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಮೂಲಕ ಲಭ್ಯವಿದ. ಶಾಶ್ವತ ಬ್ಯಾಟರಿ ಇರುವಂತೆ ಖರೀದಿ ಮಾಡುವುದಾದರೆ 82.50 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಇನ್ನು ಎಂಜಿ 9 ಕಾರಿನ ಬೆಲೆ BaaS ಮೂಲಕ 69.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). BaaS ಇಲ್ಲದೆ ಅಂದರೆ ಶಾಶ್ವತ ಬ್ಯಾಟರಿ ಮೂಲಕ ಖರೀದಿಸುವುದಾದರೆ 79.95 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ).

BaaS ಆಯ್ಕೆ ಮೂಲಕ ಕಾರು ಖರೀದಿಸುವಾಗ ಹೆಚ್ಚಿ ಮೂತ್ತ ಹೂಡಿಕೆ ಮಾಡಬೇಕಿಲ್ಲ. ಆದರೆ ಬ್ಯಾಟರಿಗೆ ಬಾಡಿಗೆ ನೀಡಬೇಕು. ನೀವು ಎಷ್ಟು ಕಿಲೋಮೀಟರ್ ಪ್ರಯಾಣ ಮಾಡುತ್ತೀರಿ, ಅಷ್ಟು ಬಾಡಿಗೆ ನೀಡಬೇಕು. ಈ ಆಯ್ಕೆಯಿಂದ ಇದೀಗ ಎಂಜಿ ಸೈಬರ್‌ಸ್ಟರ್ ಹಾಗೂ ಎಂಜಿ 9 ಎಲೆಕ್ಟ್ರಿಕ್ ಕಾರಿನ ಬೆಲೆ ಬರೋಬ್ಬರಿ 10 ಲಕ್ಷ ರೂಪಾಯಿ ಕಡಿಮೆ ಆಗಿದೆ. ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳು ಆಗಮಿಸುತ್ತಿರುವ ಬೆನ್ನಲ್ಲೇ ಎಂಜಿ BaaS ಆಯ್ಕೆ ನೀಡಿದೆ. ಇದರಿಂದ ಗ್ರಾಹಕರು ಇದೀಗ ಐಷಾರಾಮಿ ಎಂಜಿ ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಆಸಕ್ತಿ ತೋರುವ ಸಾಧ್ಯತೆ ಹೆಚ್ಚಿದೆ.

PREV
Read more Articles on
click me!

Recommended Stories

ಪೆಟ್ರೋಲ್, CNG ಮತ್ತು EV - ನಿಮ್ಮ ಸಣ್ಣಪುಟ್ಟ ತಿರುಗಾಟಕ್ಕೆ ಯಾವುದು ಬೆಸ್ಟ್?
ಥಾರ್ ಪ್ರಿಯರಿಗೆ ಧಮಾಕಾ: ಸೆ.22ಕ್ಕೆ ಗ್ರಾಂಡ್ ಎಂಟ್ರಿ ಕೊಡಲಿದೆ ಮಹೀಂದ್ರಾ ಥಾರ್ 3-ಡೋರ್ ಫೇಸ್‌ಲಿಫ್ಟ್