ಹಲವಾರು ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಟಾಟಾ ಮಾಲೀಕತ್ವದ ಲ್ಯಾಂಡ್ ರೋವರ್ ಡಿಫೆಂಡರ್ ವಿಶ್ವದ ಅತ್ಯುತ್ತಮ ಕಾರ್ ಡಿಸೈನ್ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ 53ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.
ಲಂಡನ್(ಏ.21): ವಾರ್ಷಿಕ ವಿಶ್ವ ಕಾರು ಪ್ರಶಸ್ತಿ ಸಮಾರಂಭದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ 2021ರ ‘ವರ್ಷದ ವಿಶ್ವದ ಅತ್ಯುತ್ತಮ ವಿನ್ಯಾಸದ ಕಾರು’ಪ್ರಶಸ್ತಿ ನೀಡಲಾಗಿದೆ. ಈ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಲ್ಯಾಂಡ್ ರೋವರ್ ಗೆಲ್ಲುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಈ ಹಿಂದೆ, ರೇಂಜ್ ರೋವರ್ ವೇಲಾರ್(2018)ಮತ್ತು ರೇಂಜ್ ರೋವರ್ ಇವೋಕ್(2012) ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಕಠಿಣವಾದ 4x4ಗಾಗಿ ಜಾಗತಿಕ ಪ್ರಶಸ್ತಿಗಳ ಸಂಖ್ಯೆಗೆ ಇತ್ತೀಚಿನದು ಒಂದು ಸೇರ್ಪಡೆಯಾಗಿದೆ.
ಭಾರತದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಹೈಬ್ರಿಡ್ ಬುಕಿಂಗ್ ಆರಂಭ; ಮನೆಯಲ್ಲೆ ಸುಲಭ ಚಾರ್ಜಿಂಗ್!
undefined
70 ವರ್ಷಗಳಿಂದ ಲ್ಯಾಂಡ್ ರೋವರ್ ವಿಶ್ವದ ಪ್ರಮುಖ ಕಾರಾಗಿ ಗುರಿತುಸಿಕೊಂಡಿದೆ. ಹೊಸ ಡಿಫೆಂಡರ್, 21ನೆ ಶತಮಾನದ . ಹೆಸರು, ಆಕಾರ ಮತ್ತು ಸಾಮರ್ಥ್ಯದಲ್ಲಿ ಐತಿಹಾಸಿಕವಾಗಿರುವ ಇದು, ಅನೇಕ ಆಯ್ಕೆಗಳುಳ್ಳ ಬಾಡಿ ವಿನ್ಯಾಸಗಳಲ್ಲಿ ಲಭ್ಯವಿದ್ದು, ಇದರ ಮಾಲೀಕರು ತಮ್ಮದೇ ಜಗತ್ತನ್ನು ಸೃಷ್ಟಿಸಿಕೊಳ್ಳಲು ನೆರವಾಗುವುದಕ್ಕಾಗಿ ನಾಲ್ಕು ಆಕ್ಸಸರಿ ಪ್ಯಾಕ್‍ಗಳ ಆಯ್ಕೆಯೊಂದಿಗೆ ಇದನ್ನು ವೈಯಕ್ತೀಕರಿಸಿಕೊಳ್ಳಬಹುದು.
ವರ್ಷದ ವಿಶ್ವಕಾರ್ ವಿನ್ಯಾಸ ಬಹುಮಾನವು, ಕಳೆದ 12 ತಿಂಗಳುಗಳಲ್ಲಿ ಬಂದ ಅದ್ವಿತೀಯ ಹೊಸ ಕಾರನ್ನು ಗುರುತಿಸಿ, ತಾಂತ್ರಿಕ ಆವಿಷ್ಕಾರ ಮತ್ತು ವಿನ್ಯಾಸದ ಅತ್ಯುತ್ಕೃಷ್ಟ ಮಾನದಂಡಗಳನ್ನು ಪ್ರದರ್ಶಿಸುವ ಮತ್ತು ಸ್ಥಾಪಿತ ಪರಿಮಿತಿಗಳನ್ನು ದಾಟುವ ವಾಹನಗಳಿಗೆ ಪ್ರಶಸ್ತಿ ನೀಡುತ್ತದೆ.
ಬೆಟ್ಟ ಗುಡ್ಡ, ನದಿ ಯಾವುದೂ ಲೆಕ್ಕಕ್ಕಿಲ್ಲ: ಆಫ್ ರೋಡ್ ದಿಗ್ಗಜ ಲ್ಯಾಂಡ್ ರೋವರ್ ಡಿಫೆಂಡರ್!
ಹೊಸ ಡಿಫೆಂಡರ್ ತನ್ನ ಹಿಂದಿನ ಆವೃತ್ತಿಯಿಂದ ಪ್ರಭಾವಿತಗೊಂಡಿದ್ದರೂ, ಅದರಿಂದ ಸೀಮಿತಗೊಂಡಿಲ್ಲ.ಈ ಪ್ರಶಸ್ತಿಯನ್ನು ಗೆದ್ದಿರುವುದಕ್ಕೆ ನಮಗೆ ಬಹಳ ಹೆಮ್ಮೆಯಾಗುತ್ತಿದೆ. ಡಿಫೆಂಡರ್‍ನ ಸುಪ್ರಸಿದ್ಧ ಡಿಎನ್‍ಎ ಮತ್ತು ಆಫ್-ರೋಡ್ ಸಾಮರ್ಥ್ಯವನ್ನು ಉಳಿಸಿಕೊಳ್ಳುವ ಸಮಯದಲ್ಲೇ, ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ವಿನ್ಯಾಸದ ಪರಿಮಿತಿಗಳನ್ನು ಮೀರುವ ಮೂಲಕ 21ನೆ ಶತಮಾನದ ಡಿಫೆಂಡರ್‍ಅನ್ನು ಸೃಷ್ಟಿಸುವುದು ನಮ್ಮ ಕನಸಾಗಿತ್ತು. ಇದರ ಫಲಿತಾಂಶವಾಗಿ, ಒಂದು ಭಾವನಾತ್ಮಕ ಮಟ್ಟದಲ್ಲಿ ಗ್ರಾಹಕರೊಂದಿಗೆ ಪ್ರತಿಧ್ವನಿಸುವ ಅದ್ವಿತೀಯ 4x4 ಸಾಕಾರಗೊಂಡಿದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಚೀಫ್ ಕ್ರಿಯೇಟಿವ್ ಆಫಿಸರ್ ಗೆರ್ರಿ ಮ್ಯಾಕ್‍ಗವರ್ನ್ ಹೇಳಿದ್ದಾರೆ.
ತಾಯಿ ನಿಧನವಾಗಿ 3 ವರ್ಷಗಳ ನಂತರ ಹೊಸ ಕಾರು ಖರೀಸಿದ ಜಾನ್ವಿ!
93 ಅಂತರರಾಷ್ಟ್ರೀಯ ಪತ್ರಿಕೋದ್ಯಮಿಗಳನ್ನು ಒಳಗೊಂಡ ತೀರ್ಪುಗಾರರ ತಂಡವು ಅಂಕ ನೀಡಿತ್ತು. ಈ ಕಠಿಣ ಹಾದಿಯಲ್ಲಿ ಲ್ಯಾಂಡ್ ರೋವರ್ ಅತ್ಯುತ್ತಮ ಡಿಸೈನ್ ಕಾರು ಪ್ರಶಸ್ತಿ ಪಡೆದುಕೊಂಡಿದೆ.
ಮೂಲ ಡಿಫೆಂಡರ್ ಸ್ಟ್ರಿಪ್ಡ್ ಬ್ಯಾಕ್ ಗುಣವಿಶೇಷತೆಯನ್ನು ಒಳಗಡೆ ಅಳವಡಿಸಿಕೊಳ್ಳಲಾಗಿದೆ. ಡಿಫೆಂಡರ್ 110 ಐದು, ಆರು ಅಥವಾ 5+2 ಸೀಟಿಂಗ್ ಮಾದರಿಯನ್ನು ಒದಗಿಸಿದರೆ, ಚಿಕ್ಕ ಕುಟುಂಬ ಅಥವಾ ಆರು ಪ್ರಯಾಣಿಕರು ಆಸೀನರಾಗಬಹುದಾಗಿದೆ.
ಡಿಫೆಂಡರ್ ಸಾಮರ್ಥ್ಯದ ವಿಸ್ತಾರವು, ಆಫ್-ರೋಡ್ ಒರಟುತನ ಮತ್ತು ಆನ್-ರೋಡ್ ಆರಾಮದ ಮಿತಿಯನ್ನು ಎತ್ತರಿಸಿದೆ. ಲ್ಯಾಂಡ್ ರೋವರ್ ಬಲಿಷ್ಟ ಅಲ್ಯುಮಿನಿಯಮ್ ಪ್ಲಾಟ್‍ಫಾರ್ಮ್‍ನ ಬಲದೊಂದಿಗೆ, ಬ್ರ್ಯಾಂಡ್‍ನ ಅತಿಗಟ್ಟಿಯಾದ ಬಾಡಿ ರಚನೆ-ಆಧುನಿಕ ಆಲ್-ಟೆರೇನ್ ತಂತ್ರಜ್ಞಾನಗಳು-ಅತ್ಯಾಧುನಿಕ ಪವರ್‍ಟ್ರೇನ್‍ಗಳು ತಡೆದುನಿಲ್ಲಿಸಲಾಗದ ಸಾಮರ್ಥ್ಯ ಒದಗಿಸುತ್ತವೆ. ಅತ್ಯಂತ ಎಚ್ಚರಿಕೆಯಿಂದ ಸೂಕ್ಷ್ಮಗೊಳಿಸಲಾದ ಅದರ ಹ್ಯಾಂಡ್ಲಿಂಗ್, ಎಲ್ಲಾ ಭೂಪ್ರದೇಶಗಳಲ್ಲೂ ಸಾರ್ಥಕ ಚಾಲನೆ ಮತ್ತು ಮೊದಲ-ದರ್ಜೆಯ ಆರಾಮ ಒದಗಿಸುತ್ತದೆ. ಯೂರೋ ಎನ್‍ಸಿಎಪಿದ ತಜ್ಞರು ಡಿಫೆಂಡರ್‍ಗೆ ಗರಿಷ್ಟ ಐದು ನಕ್ಷತ್ರಗಳ ಸುರಕ್ಷಾ ಶ್ರೇಯಾಂಕ ನೀಡಿದರು.
ಡಿಫೆಂಡರ್, ತಾನು ಆರಂಭವಾದಾಗಿನಿಂದಲೂ, ಟಾಪ್ ಗೇರ್ 2020 ವರ್ಷದ ಕಾರು, ಮೋಟಾರ್ ಟ್ರೆಂಡ್‍ನ 2021ರ ವರ್ಷದ ಎಸ್‍ಯುವಿ, ಮತ್ತು ಆಟೋಕಾರ್ ಅತ್ಯುತ್ತಮ ಎಸ್‍ಯುವಿ 2020 ಒಳಗೊಂಡಂತೆ 50ಕ್ಕಿಂತ ಹೆಚ್ಚಿನ ಜಾಗತಿಕ ಪ್ರಶಸ್ತಿ ಸಮ್ಮಾನಗಳನ್ನು ಗೆದ್ದಿದೆ.