ಐಷಾರಾಮಿ ಹಾಗೂ ಕನೆಕ್ಟೆಡ್ ಜಾಗ್ವಾರ್ F ಪೇಸ್ ಬುಕಿಂಗ್ ಆರಂಭ!

By Suvarna NewsFirst Published Apr 10, 2021, 3:51 PM IST
Highlights

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಹೊಸ ಕಾರು ಎಫ್ ಪೇಸ್ ಬುಕಿಂಗ್ ಆರಂಭಿಸಿದೆ. ನೂತನ ಕಾರು ಹಲವು ವಿಶೇಷತೆಗಳನ್ನು ಹೊಂದಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. ಹೊಸ ಕಾರಿನ ಬುಕಿಂಗ್ ಹಾಗೂ ವಿತರಣೆ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರು (ಏ.10): ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ, ಭಾರತದಲ್ಲಿ ಹೊಸ ಜಾಗ್ವಾರ್ ಎಫ್-ಪೇಸ್ ಕಾರಿನ ಬುಕಿಂಗ್ ಆರಂಭಿಸಿದೆ. ದೃಢವಾದ ಹೊಸ ಹೊರಮೈ, ಸುಂದರವಾಗಿ ರಚಿಸಲಾದ ನವೀನ ಒಳಾಂಗಣಗಳು, ಹೊಸ ಪೀಳಿಗೆಯ ಪಿವಿ ಪ್ರೊ ಇನ್ಫೋಟೈನ್‍ಮೆಂಟ್ ಮತ್ತು ಇನ್-ಲೈನ್ ನಾಲ್ಕು-ಸಿಲಿಂಡರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍ಗಳ ಆಯ್ಕೆಯೊಂದಿಗೆ, ಹೊಸ ಜಾಗ್ವಾರ್ ಎಫ್-ಪೇಸ್ ಹೆಚ್ಚು ಮಾರುಕಟ್ಟೆ ಪ್ರವೇಶಿಸಿದೆ. 

470 ಕಿ.ಮೀ ಮೈಲೇಜ್; ಭಾರತದಲ್ಲಿ ಜಾಗ್ವಾರ್ I-PACE ಎಲೆಕ್ಟ್ರಿಕ್ ಕಾರು ಬಿಡುಗಡೆ!

"ಅದರ ಇತ್ತೀಚಿನ ರೂಪದಲ್ಲಿ, ಹೊಸ ಜಾಗ್ವಾರ್ ಎಫ್-ಪೇಸ್‍ನ ಅತ್ಯುತ್ತಮ ವಿನ್ಯಾಸದ ಬಾಹ್ಯರೇಖೆಗಳು, ಆಹ್ಲಾದಕರವಾದ ಕಾರ್ಯಕ್ಷಮತೆ ಮತ್ತು ಹೆಚ್ಚು ಐಷಾರಾಮಿ ಮತ್ತು ಸಂಪರ್ಕಿತ ಅನುಭವವು ಭಾರತದ ಅನೇಕ ಹೃದಯಗಳನ್ನು ಸೆಳೆಯಲು ಬದ್ಧವಾಗಿದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರೋಹಿತ್ ಸೂರಿ ಹೇಳಿದರು.

ಹೊಸ ಜಾಗ್ವಾರ್ ಎಫ್-ಪೇಸ್ ಭಾರತದಲ್ಲಿ ಆರ್-ಡೈನಾಮಿಕ್ ಎಸ್ ಟ್ರಿಮ್‍ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ಗಳಲ್ಲಿ ದೊರೆಯಲಿವೆ ಮತ್ತು ವಿತರಣೆಗಳು ಮೇ 2021 ರಿಂದ ಪ್ರಾರಂಭವಾಗಲಿವೆ. 

ಜಾಗ್ವಾರ್ ಎಫ್ ಪೇಸ್ ಕಾರಿನ ವಿಶೇಷತೆ:

  • ಪ್ರಶಸ್ತಿ ವಿಜೇತ ಜಾಗ್ವಾರ್ ಎಫ್-ಪೇಸ್ ವರ್ಧಿತ ಬಾಹ್ಯ ವಿನ್ಯಾಸ, ನವೀನ ಒಳಾಂಗಣಗಳು, ಸುಧಾರಿತ ಸಂಪರ್ಕ ಮತ್ತು ದಕ್ಷ ಪವರ್‍ಟ್ರೇನ್‍ಗಳೊಂದಿಗೆ ರೂಪಾಂತರಗೊಂಡಿದೆ
  • ಮುಂದಿನ ಪೀಳಿಗೆಯ 2.0 ಎಲ್, ನಾಲ್ಕು ಸಿಲಿಂಡರ್, ಟರ್ಬೋಚಾಜ್ರ್ಡ್ ಇಂಜಿನಿಯಮ್ ಡೀಸೆಲ್ ಎಂಜಿನ್ ಪರಿಚಯ
  • ಪೆಟ್ರೋಲ್ ಮತ್ತು ಡೀಸೆಲ್ ಪವರ್‍ಟ್ರೇನ್‍ಗಳ ಮೇಲಿನ ಆರ್-ಡೈನಾಮಿಕ್ ಎಸ್ ಟ್ರಿಮ್‍ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ದೊರೆಯಲಿದೆ
  • ವಿತರಣೆಗಳು ಮೇ 2021 ರಿಂದ ಪ್ರಾರಂಭವಾಗುತ್ತವೆ
click me!