Electric Cars ಹೊಸ ವರ್ಷಕ್ಕೆ ಟಾಟಾದಿಂದ ಗೂಡ್ ನ್ಯೂಸ್, 400+ ಮೈಲೇಜ್ ಟಾಟಾ ನೆಕ್ಸಾನ್ EV ಬಿಡುಗಡೆ ರೆಡಿ!

By Suvarna News  |  First Published Dec 27, 2021, 4:20 PM IST
  • ಹೊಸ ವರ್ಷಕ್ಕೆ ಮತ್ತಷ್ಟು ಮೈಲೇಜ್ ಕಾರು ಬಿಡುಗಡೆಗೆ ಟಾಟಾ ತಯಾರಿ
  •  400+ ಮೈಲೇಜ್ ರೇಂಜ್ ಹೊಂದಿರುವ ಟಾಟಾ ನೆಕ್ಸಾನ್ ಇವಿ 
  • ಸದ್ಯದ ನೆಕ್ಸಾನ್ ಇವಿ ಮೈಲೇಜ್ 312,  ಗ್ರಾಹಕರಿಗೆ ಅತ್ಯುತ್ತಮ ಇವಿ ಕಾರು ಲಭ್ಯ

ನವದೆಹಲಿ(ಡಿ.27):  ಟಾಟಾ ಮೋಟಾರ್ಸ್ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಸದ್ಯ ಕಡಿಮೆಗೆ ಬೆಲೆಗೆ ಅತ್ಯುತ್ತಮ ಎಲೆಕ್ಟ್ರಿಕ್ ಕಾರು ನೀಡುತ್ತಿರುವ ಟಾಟಾ ಮೋಟಾರ್ಸ್ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಟಾಟಾ ಮೋಟಾರ್ಸ್ ಅಮೆರಿಕದ ಟೆಸ್ಲಾ ಕಾರುಗಳಿಗೆ ಪೈಪೋಟಿ ನೀಡಲು ಇದೀಗ 500ಕ್ಕಿಂತ ಹೆಚ್ಚು ಕಿಲೋಮೀಟರ್ ಮೈಲೇಜ್ ನೀಡಬಲ್ಲ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ವರ್ಷದಲ್ಲಿ ನೂತನ ಟಾಟಾ ನೆಕ್ಸಾನ್ ಇವಿ ಕಾರು ಬಿಡುಗಡೆಯಾಗಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 312 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಆದರೆ 2022ರ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿರುವ ನೆಕ್ಸಾನ್ ಇವಿ ಕಾರು 400 ಪ್ಲಸ್ ಮೈಲೇಜ್ ನೀಡಲಿದೆ. ನೂತನ ನೆಕ್ಸಾನ್ ಇವಿ ಕಾರಿನಲ್ಲಿ 40 kWh ಬ್ಯಾಟರಿ ಪ್ಯಾಕ್ ಬಳಸಲು ಟಾಟಾ ಮೋಟಾರ್ಸ್ ನಿರ್ಧರಿಸಿದೆ.

Tap to resize

Latest Videos

undefined

500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!

ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಇವಿ ಕಾರಿನ ಬ್ಯಾಟರಿ 30.2 kWh. ಹೀಗಾಗಿ ಶೇಕಡಾ ರಷ್ಟು ರಷ್ಟು ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಬಳಸಲಾಗುತ್ತಿದೆ. ಇದರಿಂದ ನಿರಾಯಾಸವಾಗಿ 400ಕ್ಕಿಂತ ಹೆಚ್ಚಿನ ಕಿಲೋಮೀಟರ್ ಮೈಲೇಜ್ ನೀಡಲಿದೆ. ಹೆಚ್ಚಿನ ಸಾಮರ್ಥ್ಯ ಬ್ಯಾಟರಿ ಬಳಕೆಯಿಂದ ಕಾರಿನ ಬೂಟ್ ಸ್ಪೇಸ್ ಕೊಂಚ ಕಡಿಮೆಯಾಗಲಿದೆ.

ಟಾಟಾ ನೆಕ್ಸಾನ್ ಇವಿ ತೂಕ
ಬ್ಯಾಟರಿ ಗಾತ್ರವೂ ಹೆಚ್ಚಾಗಲಿದೆ. ಹೀಗಾಗಿ ಕಾರಿನ ಟೂಕವೂ ಹೆಚ್ಚಾಗಲಿದೆ. ಟಾಟಾ ನೆಕ್ಸಾನ್ ಪೆಟ್ರೋಲ್ ಕಾರು 1.2 ಟನ್ ತೂಕ ಹೊಂದಿದ್ದರೆ, ಡೀಸೆಲ್ ನೆಕ್ಸಾನ್ ಇವಿ 1.3 ಟನ್ ತೂಕ ಹೊಂದಿದೆ. ಇನ್ನು ಈಗಾಗಲೇ ಬಿಡುಗಡೆಯಾಗಿ ಸಂಚಲನ ಮೂಡಿಸಿರುವ ನೆಕ್ಸಾನ್ ಇವಿ ತೂಕ 1.4 ಟನ್. 2022ರಲ್ಲಿ ಬಿಡುಗಡೆಯಾಗಲಿರುವ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ತೂಕ 1.4 ಟನ್ ಇರಲಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರದಿಂದ ತಾರಮತ್ಯ ಬೇಡ; ಟೆಸ್ಲಾ ಆಮದು ಸುಂಕ ಕಡಿತ ಮನವಿಗೆ ಟಾಟಾ ಮೋಟಾರ್ಸ್ ತಿರುಗೇಟು!

ಟಾಟಾ ನೆಕ್ಸಾನ್ ಮೈಲೇಜ್
ಸದ್ಯ ಮಾರುಕಟ್ಟೆಯಲ್ಲಿರುವ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಕಂಪನಿ ಪ್ರಕಾರ 312 ಕಿಲೋಮೀಟರ್ ಮೈಲೇಜ್ ನೀಡಲಿದೆ. ಆದರೆ ಪ್ರಾಯೋಗಿಕವಾಗಿ 180 ರಿಂದ 200 ಕಿಲೋಮೀಟರ್ ಮೈಲೇಜ್ ನೀಡುತ್ತಿದೆ. ಹೊಸ ನೆಕ್ಸಾನ್ ಇವಿ ಕಾರು ಕಂಪನಿ ಹೇಳುತ್ತಿರುವುದು 400 ಕಿಲೋಮೀಟರ್, ಆದರೆ ಪ್ರಾಯೋಗಿಕವಾಗಿ 300 ರಂದ 320 ಕಿಲೋಮೀಟರ್ ಮೈಲೇಜ್ ನೀಡುವ ಸಾಧ್ಯತೆ ಇದೆ. 

ನೂತನ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಕೆಲ ಬದಲಾವಣೆ ಮಾಡಲು ಟಾಟಾ ಮೋಟಾರ್ಸ್ ಮುಂದಾಗಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ನೂತನ ಅಲೋಯ್ ವ್ಹೀಲ್ ಸೇರಿದಂತೆ ಕೆಲ ಬದಲಾವಣೆಗಳನ್ನು ಮಾಡಲಿದೆ. 

300 ರೂಪಾಯಿಗೆ 312 ಕಿ.ಮೀ ಮೈಲೇಜ್,ಇದು ಟಾಟಾ ನೆಕ್ಸಾನ್EV ಕಾರು ಬಾರು!

ಬೆಲೆ ಹೆಚ್ಚಳ
2022ರ ನೂತನ ಟಾಟಾ ನೆಕ್ಸಾನ್ ಇವಿ ಕಾರಿಗೆ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅಳವಡಿಸುತ್ತಿದೆ. ಹೀಗಾಗಿ ಕಾರಿನ ಬೆಲೆ ಕೂಡ ಹೆಚ್ಚಳವಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಇವಿ ಕಾರಿನ ಬೆಲೆ 14.25 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು, ಗರಿಷ್ಠ ಬೆಲೆ 16.85 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆದರೆ ಹೊಸ ಟಾಟಾ ನೆಕ್ಸಾನ್ ಕಾರಿನ ಬಲೆ 17 ರಿಂದ 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 

2022ರ ಟಾಟಾ ನೆಕ್ಸಾನ್ ಕಾರಿನ ಬೆಲೆ 18 ಲಕ್ಷ ರೂಪಾಯಿ ಒಳಗಿರಲಿದೆ. ಇಷ್ಟಾದರೂ ಇದು ಕೈಗೆಟುಕುವ ದರದ ಎಲೆಕ್ಟ್ರಿಕ್ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಎಂಜಿ ಮೋಟಾರ್ಸ್ ZS ಕಾರಿನ ಬೆಲೆ 20.99 ಲಕ್ಷ ರೂಪಾಯಿ, ಹ್ಯುಂಡೈ ನೆಕ್ಸಾನ್ ಕಾರಿನ ಬೆಲೆ 23.79 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಹೊಸ ನೆಕ್ಸಾನ್ ಕಾರು ಬಿಡುಗಡೆಯಾದರೆ ಹಳೇ ಕಾರು ಸ್ಥಗಿತಗೊಳ್ಳುವುದಿಲ್ಲ. 312 ಕಿಲೋಮೀಟರ್ ಮೈಲೇಜ್ ಸಾಮರ್ಥ್ಯ ಕಾರು SUV ಎಲೆಕ್ಟ್ರಿಕ್ ವಿಭಾಗದ ಎಂಟ್ರಿ ಲೆವೆಲ್ ಕಾರಾಗಲಿದೆ. ಇದರಿಂದ ಎರಡು ವೇರಿಯೆಂಟ್ ಹಾಗೂ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರಾಗಿ ಉಳಿದುಕೊಳ್ಳಲಿದೆ.
 

click me!