Mahindra SUV: 2022ರಲ್ಲಿ ಬರಲಿದೆ ಬಹುನಿರೀಕ್ಷೆಯ ಮಹೀಂದ್ರ ನ್ಯೂ ಸ್ಕಾರ್ಪಿಯೋ!

Suvarna News   | Asianet News
Published : Dec 27, 2021, 11:33 AM IST
Mahindra SUV: 2022ರಲ್ಲಿ ಬರಲಿದೆ ಬಹುನಿರೀಕ್ಷೆಯ ಮಹೀಂದ್ರ ನ್ಯೂ ಸ್ಕಾರ್ಪಿಯೋ!

ಸಾರಾಂಶ

*ಇನ್ನಷ್ಟು ಎಸ್‌ಯುವಿಗಳನ್ನು ಹೊರತರಲಿರುವ ಮಹೀಂದ್ರ ಹಾಗೂ ಟಾಟಾ ಮೋಟಾರ್ಸ್ * ಮಹೀಂದ್ರ ಎಕ್ಸ್‌ಯುವಿ 700 ನಂತರ ಮತ್ತೊಂದು ಆಸಕ್ತಿಕರ ವಾಹನ ಬಿಡುಗಡೆಗೆ ಸಿದ್ಧತೆ *ಗ್ರಾಹಕರಿಂದಲೂ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚಳ

Auto Desk: ಇತ್ತೀಚೆಗೆ ಬಿಡುಗಡೆಗೊಂಡ ಹೊಸ ಮಾದರಿ ಕಾರುಗಳ ಯಶಸ್ಸಿನ ಹಿನ್ನೆಲೆಯಲ್ಲಿ ದೇಶೀಯ ಆಟೊಮೊಬೈಲ್‌ ಕಂಪನಿಗಳಾದ ಮಹೀಂದ್ರ ಆ್ಯಂಡ್‌ ಮಹೀಂದ್ರ (mahindra & Mahindra) ಮತ್ತು ಟಾಟಾ ಮೋಟರ್ಸ್‌ (Tata Motors) 2022ರಲ್ಲಿ ಕೂಡ ತಮ್ಮ ಪೋರ್ಟ್‌ಫೋಲಿಯೋ ಅನ್ನು ಸದೃಢಗೊಳಿಸಲು ಮುಂದಾಗಿದೆ. ಆದ್ದರಿಂದ ಎಸ್‌ಯುವಿ (SUV) ವಲಯದಲ್ಲಿ ಈ ಎರಡೂ ಕಾರು ತಯಾರಕ ಕಂಪನಿಗಳು ಇನ್ನಷ್ಟು ಹೊಸ ಮಾದರಿಗಳನ್ನು ಅನಾವರಣಗೊಳಿಸಲಿವೆ.

ವಿಶ್ವಾದ್ಯಂತ ಆಟೊಮೊಬೈಲ್‌ ವಲಯವನ್ನು ಕಾಡುತ್ತಿರುವ ಸೆಮಿಕಂಡಕ್ಟರ್‌ (semiconductor) ಕೊರತೆಯನ್ನು ಸಮರ್ಥವಾಗಿ ನಿರ್ವಹಿಸಲು ಪರಿಣಾಮಕಾರಿ ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತಿರುವ ಈ ಕಂಪನಿಗಳು, ಇದರಿಂದ ವಾಹನಗಳ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಎಚ್ಚರವಹಿಸಿವೆ.

ನಾವು ನಂ.1 ಸ್ಥಾನದಲ್ಲಿರಲು ಬಯಸುತ್ತೇವೆ: ರಾಜೇಶ್‌ ಜೆಜುರಿಕರ್‌

ಈ ಕುರಿತು ಪಿಟಿಐನೊಂದಿಗೆ ಮಾತನಾಡಿರುವ ಮಹೀಂದ್ರ ಆ್ಯಂಡ್‌ ಮಹೀಂದ್ರ ಕಾರ್ಯನಿರ್ವಾಹಕ ನಿರ್ದೇಶಕ (ಆಟೋ ಮತ್ತು ಕೃಷಿ ವಲಯಗಳು) ರಾಜೇಶ್‌ ಜೆಜುರಿಕರ್‌, “ಪ್ರಮುಖ ಎಸ್‌ಯುವಿ ವಲಯದಲ್ಲಿ ನಾವು ನಂ.1 ಸ್ಥಾನದಲ್ಲಿರಲು ಬಯಸುತ್ತೇವೆ. ಈಗಾಗಲೇ ನಮ್ಮ ಹೊಸ ಥಾರ್‌, ಎಕ್ಸ್‌ಯುವಿ 300, ಬೊಲೆರೋ ನಿಯೋ ಕಾರುಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿವೆ. ಎಕ್ಸ್‌ಯುವಿ 700ಕ್ಕೆ ದೊರೆತಿರುವ ಅನಿರೀಕ್ಷಿತ ಪ್ರತಿಕ್ರಿಯೆ, ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿವೆ” ಎಂದರು.

ಮಹೀಂದ್ರ ಕಂಪನಿ 2027ರ ವೇಳೆಗೆ 13 ಹೊಸ ವಾಹನಗಳ ಬಿಡುಗಡೆ ಘೋಷಿಸಿದೆ. ಮುಂದಿನ ವರ್ಷ ಹೊಸ ಸ್ಕಾರ್ಪಿಯೋ (Scropio) ಬಿಡುಗಡೆಯಾಗಲಿದೆ. ಇದು ನಮ್ಮ ಸದ್ಯದ ಆದ್ಯತೆಯ ಉತ್ಪನ್ನವಾಗಿದೆ ಎಂದು ಅವರು ತಿಳಿಸಿದರು.

ಸಮಸ್ಯೆಯ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ

ಎಲೆಕ್ಟ್ರಿಕ್‌ ವಲಯಗಳಲ್ಲಿ ಕೂಡ ಮಹೀಂದ್ರ ಹೊಸ ಪ್ರಯೋಗಗಳನ್ನು ಮಾಡಲಿದ್ದು, ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳಲ್ಲಿ ನಂ.1 ಮಾರಾಟಗಾರರಾಗಿ ಉಳಿಯುವುದು ನಮ್ಮ ಮುಂದಿನ ಗುರಿಯಾಗಲಿದೆ. ಜೊತೆಗೆ, ನಮ್ಮ ಮಾರಟ ಮತ್ತು ಸೇವಾ ಸಂಪರ್ಕ ಹೆಚ್ಚಳ, ಅಗತ್ಯ ಪಾಲುದಾರಿಕೆಗಳೊಂದಿಗೆ ಲಾಭದಾಯಕ ವಾತಾವರಣ ಸೃಷ್ಟಿಸುವುದು ಕೂಡ ಮುಂದಿನ ವರ್ಷದ ಉದ್ದೇಶವಾಗಿರಲಿದೆ ಎಂದು ಹೇಳಿದರು.

ಸದ್ಯ ಮಾರುಕಟ್ಟೆಯಲ್ಲಿ ಮೂಲ, ವಿಶ್ವಾಸಾರ್ಹ ಮತ್ತು ವಿಭಿನ್ನ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಮುಂದಿನ ವರ್ಷ ಕೂಡ ಪ್ರಯಾಣಿಕ ವಾಹನಗಳು, ಕಚ್ಚಾ (Raw materials) ದರ ಹೆಚ್ಚಳ, ಸಾಗಣೆ ದರ ಏರಿಕೆ ಮತ್ತು ಪೂರೈಕೆ ಸರಣಿಯ ಅವ್ಯವಸ್ಥೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಚಿಪ್‌ ಕೊರತೆ ವಿಶ್ವದ ಹಲವು ಕ್ಷೇತ್ರಗಳನ್ನು ಕಾಡುತ್ತಿದೆ. ಕಳೆದ ಕೆಲ ತಿಂಗಳುಗಳಲ್ಲಿ ಈ ಪರಿಸ್ಥಿತಿ ಸುಧಾರಿಸಿದ್ದರೂ, ಸಮಸ್ಯೆ ಇನ್ನೂ ಗಂಭೀರವಾಗಿಯೇ ಇದೆ.  ಈ ಕುರಿತು ಮಾತನಾಡಿರುವ ಟಾಟಾ ಮೋಟಾರ್ಸ್‌ ಅಧಯಕ್ಷ (ಪ್ರಯಾಣಿಕ ವಾಹನ ವ್ಯವಹಾರ ಘಟಕ) ಶೈಲೇಶ್ ಚಂದ್ರ,“ಈ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಸಮಸ್ಯೆಯ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಪೂರೈಕೆ ಸರಣಿಯನ್ನು ಮತ್ತೊಮ್ಮೆ ವ್ಯವಸ್ಥಿತಗೊಳಿಸಲು ತ್ವರಿತ ಯೋಜನೆಗಳ ಜಾರಿಯ ಅಗತ್ಯವಿದೆ” ಎಂದಿದ್ದಾರೆ.

ಟಾಟಾ ಪಂಚ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ!

ಇದರ ಜೊತೆಗೆ, ಗ್ರಾಹಕರಿಗೆ ಡಿಜಿಟಲ್‌ ಅನುಭವ ಒದಗಿಸುವ ಹಾಗೂ ಈ ಮೂಲಕ ಸುಸ್ಥಿರ ವಾಹನಗಳನ್ನು ಒದಗಿಸುವ ಕೆಲಸಗಳು ಮುಂದುವರಿಯಲಿದೆ. 2021ರಲ್ಲಿ ಟಾಟಾ ಡಾರ್ಕ್ ಶ್ರೇಣಿ, ಟಿಯಾಗೋ ಎನ್‌ಆರ್‌ಜಿಯಂತಹ ವಾಹನಗಳು ಬಿಡುಗಡೆಯಾಗಿವೆ.  ಜೊತೆಗೆ, ಭಾರತದ ಮೊದಲ ಸಬ್‌-ಕಾಂಪ್ಯಾಕ್ಟ್‌ ಎಸ್‌ಯುವಿ- ಟಾಟಾ ಪಂಚ್‌ಗೆ (Tata Punch) ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್‌ ದಶಕಗಳಲ್ಲೇ ದಾಖಲೆಯ ಮಾರಾಟ ದಾಖಲಿಸಿದ್ದು, ಎಲೆಕ್ಟ್ರಿಕ್‌ ವಾಹನಗಳಲ್ಲಿ ಅತಿ ಹೆಚ್ಚು ತ್ರೈಮಾಸಿಕ ಮಾರಾಟ ದಾಖಲಿಸಿದೆ. ಇದು ಕಂಪನಿಯ ವರ್ಷದಿಂದ ವರ್ಷದ ಮಾರುಕಟ್ಟೆ ಪಾಲುದಾರಿಕೆ ಶೇ.11ರಷ್ಟು ಏರಿಕೆಯಾಗಿದ್ದು, ಒಟ್ಟು ಶೇ.7.1ಕ್ಕೆ ತಲುಪಿದೆ.

ಮುಂದಿನ ವರ್ಷ ಕೂಡ ಹಲವು ಎಸ್‌ಯುವಿಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಲಿವೆ. ಇದರಿಂದ ಜನರಿಗೆ ಸಾಕಷ್ಟು ಆಯ್ಕೆಯ ಅವಕಾಶ ದೊರೆಯುವುದರ ಜೊತೆಗೆ, ಸ್ಪರ್ಧೆಯ ಹೆಚ್ಚಳದಿಂದ ಉತ್ತಮ ಸೌಕರ್ಯಗಳನ್ನು ಒಳಗೊಂಡ ವಾಹನಗಳು ಕೂಡ ಕಡಿಮೆ ದರದಲ್ಲಿ ದೊರೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ:

1) Most Searched SUVs : ಕಿಯಾ ಸೆಲ್ಟೋಸ್, ಥಾರ್, ಟಾಟಾ ನೆಕ್ಸಾನ್, 2021ರ ಟಾಪ್ SUV?

2) Flex Fuel Engines: ದೇಶವನ್ನು ಪೆಟ್ರೋಲ್‌, ಡೀಸೆಲ್ ಬಳಕೆಯಿಂದ ಮುಕ್ತ ಮಾಡಲು ಗಡ್ಕರಿ‌ ಹೊಸ ಪ್ಲ್ಯಾನ್!

3) Dual Mode Vehicle: ರಸ್ತೆ ಮತ್ತು ರೈಲು ಹಳಿಗಳೆರಡರ ಮೇಲೂ ಓಡಲಿದೆ ಜಪಾನ್‌ನ ಮಿನಿ ಬಸ್!‌

PREV
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್