Ioniq EVs acceleration issue ಐಯೋನಿಕ್ ಇವಿಯಲ್ಲಿ ಸಮಸ್ಯೆ, 2,500 ಕಾರು ಹಿಂಪಡೆದ ಹ್ಯುಂಡೈ!

By Supreetha Hebbar  |  First Published Dec 24, 2021, 8:48 PM IST
  • ಸುರಕ್ಷತಾ ಲೋಪದಿಂದ ಐಯೋನಿಕ್‌ ಇವಿಗಳನ್ನು ಹಿಂಪಡೆದ ಹ್ಯುಂಡೈ
  • ವೇಗದ ನಿಯಂತ್ರಣದಲ್ಲಿ ಲೋಪ ಪತ್ತೆ
  • ಅಪಘಾತ ತಡೆಯಲು ವಾಹನ ಹಿಂಪಡೆಯಲು ಕ್ರಮ

ಐಯೋನಿಕ್ (Ioniq) ಇವಿಗಳ ಬಿಡುಗಡೆಯಿಂದ ಎಲೆಕ್ಟ್ರಿಕ್‌ ವಾಹನಗಳ ವಲಯ ಪ್ರವೇಶಿಸಿದ್ದ ಹ್ಯುಂಡೈ ಮೋಟಾರ್ಸ್‌ (Hyundai Motors) ಈಗ 2,679 ಐಯೋನಿಕ್‌ ಇವಿ (EV)ಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ. ಇದಕ್ಕೆ ಕಾರಣ ಅದರಲ್ಲಿನ ತಾಂತ್ರಿಕ (Technical)  ದೋಷ! ಇದರ ಕೆಲವು ವಾಹನಗಳನ್ನು ಅಕ್ಸಲೇಟರ್‌ ಸೌಲಭ್ಯದಲ್ಲಿ ದೋಷಗಳು ಕಂಡುಬಂದಿದ್ದು, ಇದು ಇವಿಯ ವೇಗ ನಿಯಂತ್ರಕದ ಮೇಲೆ ಪರಿಣಾಮ ಬೀರಿದೆ.

ಇವಿಯನ್ನು ಅದರ ಚಾಲನೆ ಮಾಡುವವರು ಆಕ್ಸಲೇಟರ್‌ (Accelerator) ಪೆಡಲ್‌ ಬಳಕೆ ನಿಲ್ಲಿಸಿದ ನಂತರವೂ ನಿಧಾನಗತಿಯ ಹಾಗೂ ಅನಗತ್ಯ ಆಕ್ಸಲೇರೇಷನ್‌ ಮುಂದುವರೆಯುತ್ತಿದೆ. ಇದರಿಂದ ಚಾಲಕರು ವಾಹನದ ವೇಗ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿರುವುದರಿಂದ ಕಂಪನಿ, ಅವುಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ.

Latest Videos

Hyundai Ioniq 5 EV ಕೈಗೆಟುಕುವ ದರ, 480 ಕಿ.ಮೀ ಮೇಲೇಜ್, ಶೀಘ್ರದಲ್ಲೇ ಭಾರತದಲ್ಲಿ ಕಾರು ಬಿಡುಗಡೆ!

2016ರ ಜನವರಿ 21ರಿಂದ 2019ರ ಜೂನ್ 24ರ ಅವಧಿಯಲ್ಲಿ ತಯಾರಾಗಿರುವ 2017-2019ನೇ ಸಾಲಿನಲ್ಲಿ ಮಾರಾಟವಾಗಿರುವ ವಾಹನಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.

ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತದ (NHTSA) ದಾಖಲೆಯ ಪ್ರಕಾರ,  ಕಾರ್ಯಾಚರಣೆಯ ಸಮಯದಲ್ಲಿ ಈ ವಾಹನಗಳು 'ವಿಫಲ-ಸುರಕ್ಷಿತ' (fail-safe) ಮೋಡ್‌ಗೆ ಪ್ರವೇಶಿಸಬಹುದು. ಇದರಿಂದ EV ರೆಡಿ ಲೈಟ್‌ ಆನ್‌ ಆಗಬಹುದು. ಜೊತೆಗೆ, ಕಡಿಮೆ ವೇಗ ಮತ್ತು ಒಟ್ಟಾರೆ ಸಾಮರ್ಥ್ಯದ ಮೇಲೆ ಕೂಡ ಪರಿಣಾಮ ಬೀರಲಿದೆ. ಆದರೆ, ಅಪರೂಪದ ಸಂದರ್ಭಗಳಲ್ಲಿ 'ಫೇಲ್-ಸೇಫ್' ಮೋಡ್‌ನಲ್ಲಿರುವಾಗ, ಚಾಲಕರು ಆಕ್ಸಲೇಟರ್‌ ಬಳಕೆ ನಿಲ್ಲಿಸಿದ ನಂತರವೂ, ಚಾಲನೆಯ ವೇಗ ಹೆಚ್ಚಾಗಿಯೇ ಇರುವ ಸಾಧ್ಯತೆಯಿದೆ. 

Car of the Year award:ಹುಂಡೈನ IONIQ 5 ಕಾರಿಗೆ 2022 'ವರ್ಷದ ಜರ್ಮನ್ ಕಾರು ಪ್ರಶಸ್ತಿ!

ಫೇಲ್-ಸೇಫ್' ಮೋಡ್‌ನಲ್ಲಿ ಆಕ್ಸಲೇಟರ್‌ ವೇಗವಾಗಿ ಕೆಲಸ ಮಾಡುತ್ತದೆ. ಮತ್ತು ಅದರ ಚಾಲಕರು ಅದರ ಬಳಕೆ ಸ್ಥಗಿತಗೊಳಿಸಲಾದ ಏಕಾಏಕಿ ಮತ್ತೊಮ್ಮೆ ಆಕ್ಸಲೇಟರ್‌ ಕಾರ್ಯಾರಂಭಗೊಳಿಸುತ್ತದೆ. ಆದರೆ, ಇದರಲ್ಲಿ ಬ್ರೇಕಿಂಗ್ ಮತ್ತು ಸ್ಟೀರಿಂಗ್ ವ್ಯವಸ್ಥೆಗಳು ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತವೆ ಎಂದು ಎನ್‌ಎಚ್‌ಟಿಎಸ್‌ಎ (NHTSA) ಹೇಳಿದೆ.

ತಮ್ಮ ವಾಹನಗಳನ್ನು ಹಿಂಪಡೆಯುವ ಮೂಲಕ ಹ್ಯುಂಡೈ ಸಮಸ್ಯೆಯನ್ನು ಪರಿಹರಿಸಲಿದೆ. ಇಲ್ಲಿಯವರೆಗೆ ಆಕ್ಸಲೇಟರ್‌ ಸಮಸ್ಯೆಯಿಂದ ಅಪಘಾತಗಳು ಸಂಭವಿಸಿದ ಯಾವುದೇ ಉದಾಹರಣೆಗಳಿಲ್ಲವಾದರೂ, ಮುಂಜಾಗ್ರತಾ ಕ್ರಮವಾಗಿ ಈ ವಾಹನಗಳನ್ನು ಹಿಂಪಡೆಯಲಾಗಿದೆ ಎಂದು ಕಂಪನಿ ತಿಳಿಸಿದೆ.

ಹ್ಯುಂಡೈ ಈಗಾಗಲೇ ಈ ವಾಹನಗಳ ಮಾಲೀಕರಿಗೆ ಅದರ ದೋಷದ ಕುರಿತು ಮಾಹಿತಿ ನೀಡಲು ಆರಂಭಿಸಿದ್ದು ಜನರು ತಮ್ಮ ವಾಹನಗಳನ್ನು ಹತ್ತಿರದ ಡೀಲರ್‌ಶಿಪ್‌ಗೆ ತರಲು ಸಲಹೆ ನೀಡಿದೆ. ಇಂಜಿನಿಯರ್‌ಗಳು ವಾಹನದ ಎಲೆಕ್ಟ್ರಿಕ್ ಪವರ್ ಕಂಟ್ರೋಲ್ ಯೂನಿಟ್ ಸಾಫ್ಟ್‌ವೇರ್ (Power control unit software) ಅನ್ನು ಸೇವೆಗೆ ಯಾವುದೇ ಶುಲ್ಕ ವಿಧಿಸದೆ ನವೀಕರಿಸಲಿದ್ದಾರೆ.

ಹ್ಯುಂಡೈ ಐಯೋನಿಕ್ 72.6 ಕೆಡಬ್ಲ್ಯುಎಚ್‌ (KWH) ಬ್ಯಾಟರಿ ಪ್ಯಾಕ್‌ ಹೊಂದಿದ್ದು, ಕೇವಲ 5.2 ಕ್ಷಣಗಳಲ್ಲಿ ಗಂಟೆಗೆ 0-100 ಕಿಮೀ (km/h) ವೇಗ ನೀಡಬಲ್ಲದು.

ಇದರಲ್ಲಿ 72.6 ಕೆಡ್ಬ್ಲ್ಯುಎಚ್‌ ಹಾಗೂ 58 ಕೆಡಬ್ಲ್ಯುಎಚ್‌ ಸಾಮರ್ಥ್ಯದ ಎರಡೂ ಬ್ಯಾಟರಿಗಳನ್ನು ಒಳಗೊಂಡಿದೆ.  ಇದರ ದರ 20 ಲಕ್ಷ ರೂ.ಗಳಷ್ಟಿದೆ. ಇದನ್ನು ಹ್ಯುಂಡೈ ಮೊಟ್ಟಮೊದಲ ಬಾರಿಗೆ 2018ರ ಆಟೋ ಎಕ್ಸ್‌ಪೋದಲ್ಲಿ (Auto expo) ಪ್ರದರ್ಶಿಸಿತ್ತು. ಇದರಲ್ಲಿ ಏಳು ಏರ್‌ಬ್ಯಾಗ್‌ಗಳಿದ್ದು, ಬ್ಲೈಂಡ್‌ ಸ್ಪಾಟ್‌ ಡಿಟೆಕ್ಷನ್‌ (blind spot detection), ಆಟೊನೊಮಸ್‌ ಬ್ರೇಕಿಂಗ್‌, ಲೇನ್‌ ಚೇಂಜ್‌ ಅಸಿಸ್ಟ್‌ ಮತ್ತು ಅಡಾಪ್ಟೀವ್‌ ಕ್ರೂಸ್‌ ಕಂಟ್ರೊಲ್‌ ಹಾಗೂ 7 ಇಂಚಿನ ಇನ್ಫೊಟೈನ್‌ಮೆಂಟ್‌ ಸಿಸ್ಟಮ್‌ ಅನ್ನು ಕೂಡ ಒಳಗೊಂಡಿದೆ.ಇದರಲ್ಲಿ ಆ್ಯಪಲ್‌ ಕಾರ್‌ ಪ್ಲೇ (Apple car play) ಮತ್ತು ಆಂಡ್ರಾಯ್ಡ್‌ ಆಟೋ (Android auto) ಸೌಲಭ್ಯಗಳನ್ನು ಕೂಡ ಒಳಗೊಂಡಿದೆ.

click me!