ಬೆಂಗಳೂರು(ಜು.14) : ಭಾರತದ ಮುಂಚೂಣಿ ಆಟೋಮೊಬೈಲ್ ತಯಾರಿಕಾ ಸಂಸ್ಥೆಗಳ ಪೈಕಿ ಒಂದಾದ ಟಾಟಾ ಮೋಟರ್ಸ್, ಇದೀಗ ಹೊಚ್ಚ ಹೊಸ XPRES-T ಎಲೆಕ್ಟ್ರಿಕ್ ಕಾರು ಪರಿಚಯಿಸಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 213 ಕಿ.ಮೀ ಮೈಲೇಜ್ ನೀಡಬಲ್ಲ, ಶೀಘ್ರದಲ್ಲಿ ಚಾರ್ಜಿಂಗ್ ವ್ಯವಸ್ಥೆ ಇರುವ ಕಾರಾಗಿದೆ.
ಗೋವಾ ದಾಟಂಗಿಲ್ಲ, ಹುಬ್ಳೀಲಿ ಸಿಗಂಗಿಲ್ಲ; ಗಡಿ ಚೆಕ್‌ಪೋಸ್ಟ್ ಬಳಿ ಕಾರು ಡೆಲಿವರಿ ಪಡೆದ ಉದ್ಯಮಿ!
undefined
‘XPRES’ಬ್ರ್ಯಾಂಡ್ ಅಡಿ ಬರುವ ಮೊದಲ ವಾಹನವು, ‘XPRES-T’ EV ಕರೆಯಲ್ಪಡುವ ಎಲೆಕ್ಟ್ರಿಕ್ ಸೆಡಾನ್‍ಆಗಿರಲಿದೆ. ‘XPRES-T’ EV, ಗರಿಷ್ಟ ಬ್ಯಾಟರಿ, ಶೀಘ್ರ ಚಾರ್ಜಿಂಗ್ ಪರಿಹಾರದೊಂದಿಗೆ ಸಜ್ಜಾಗಿರಲಿದ್ದು, ಸುರಕ್ಷತೆ ಹಾಗು ಪ್ರಯಾಣಿಕ ಆರಾಮದ ಜೊತೆಗೆ ಕಡಿಮೆ ವೆಚ್ಚವನ್ನು ಖಾತರಿಪಡಿಸುತ್ತದೆ.
ಹೊಚ್ಚ ಹೊಸ ‘XPRES-T’ ವಿದ್ಯುತ್ ಸೆಡಾನ್, ಬುಕಿಂಗ್‍ಗಳಿಗಾಗಿ ಭಾರತದಲ್ಲಿರುವ ಆಯ್ದ ಡೀಲರ್‍ಶಿಪ್‍ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದೆ. ಇದು, 2 ರೇಂಜ್ ಆಯ್ಕೆಗಳೊಂದಿಗೆ-213 ಕಿ.ಮೀ ಹಾಗು 165 ಕಿ.ಮೀ (ARAI) ಪ್ರಮಾಣೀಕರಿಸಿರುವ ಶ್ರೇಣಿ ಯಲ್ಲಿ ಲಭ್ಯವಿದೆ. 21.5kWh ಹಾಗು 16.5 kWhನ ಅಧಿಕ ಸಾಂದ್ರತೆಯ ಬ್ಯಾಟರಿಯನ್ನು ಹೊಂದಿದೆ ಮತ್ತು ಕ್ರಮವಾಗಿ 90 ನಿಮಿಷ ಹಾಗೂ 110 ನಿಮಿಷಗಳಲ್ಲಿ . ಈ 0-80%ವರೆಗೆ ಚಾರ್ಜ್ ಮಾಡಬಹುದು ಅಥವಾ ಸುಲಭವಾಗಿ ಲಭ್ಯವಿರುವ ಹಾಗು ಸರಳವಾದ ಯಾವುದೇ 15 A ಪ್ಲಗ್ ಪಾಯಿಂಟ್‍ನಿಂದ ಸಾಮಾನ್ಯವಾಗಿಯೂಚಾರ್ಜ್ ಮಾಡಬಹುದು.
2025ರ ಹೊತ್ತಿಗೆ ಟಾಟಾದಿಂದ 10 ಹೊಸ ಎಲೆಕ್ಟ್ರಿಕ್ ವಾಹನಗಳು!
ಶೂನ್ಯಟೇಲ್‍ಪೈಪ್ ಹೊಗೆಯುಗುಳುವಿಕೆ, ಒಂದೇ ವೇಗದ ಸ್ವಯಂಚಾಲಿತ ಪ್ರಸರಣ, ಡ್ಯುಯಲ್ ಏರ್‍ಬ್ಯಾಗ್ಸ್, ಇಬಿಡಿ ಇರುವ ಎಬಿಎಸ್ ಮುಂತಾದ ಅಂಶಗಳು ಎಲ್ಲಾ ವೈವಿಧ್ಯದ ‘XPRES-T’ EVನಲ್ಲಿ ಸಾಮಾನ್ಯ ಅಳವಡಿಕೆಗಳಾಗಿರುತ್ತವೆ. ತನ್ನ ಒಳಾಂಗಣ ಹಾಗು ಹೊರಾಂಗಣಗಳಾದ್ಯಂತ, ಸಾಮಾನ್ಯ ಸ್ವಯಂಚಾಲಿತ ಹವಾಮಾನ ನಿಯಂತ್ರಣ ಹಾಗು ಎಲೆಕ್ಟ್ರಿಕ್ ಬ್ಲೂ ಆ್ಯಕ್ಸೆಂಟ್‍ಗಳಿರುವ ಪ್ರೀಮಿಯಮ್ ಕಪ್ಪು ಥೀಮ್‍ನ ಒಳಾಂಗಣವು ಅದಕ್ಕೆ, ಇತರ ಟಾಟಾ ಕಾರುಗಳಿಗಿಂತ ವಿಭಿನ್ನವಾದ, ವಿಶಿಷ್ಟವಾದ ನೋಟವನ್ನು ಒದಗಿಸುತ್ತದೆ.