ಕಾರು ಮಾಲೀಕನಿಗೆ ವಿಮೆ ನಿರಾಕರಿಸಿದ ಕಂಪನಿಗೆ ಕೋರ್ಟ್ ವಾರ್ನಿಂಗ್; 36 ಲಕ್ಷ ರೂ ಪರಿಹಾರಕ್ಕೆ ಸೂಚನೆ!

By Suvarna News  |  First Published Jul 13, 2021, 5:26 PM IST
  • ವಿಮೆ ಕಂಪನಿಯಿಂದ ಅನ್ಯಾಯ ಎಂದು ಕೋರ್ಟ್ ಮೊರೆ ಹೋಗಿದ್ದ ಬೆಂಗಳೂರು ನಿವಾಸಿ
  • ಕಾರು ಅಪಘಾತ ನಕಲಿ ಎಂದ ವಿಮೆ ಕಂಪನಿ ವಿರುದ್ಧ ದೂರು
  • BMW ಕಾರು ಮಾಲೀಕನಿಗೆ 36 ಲಕ್ಷ ರೂಪಾಯಿ ಪರಿಹಾರ ನೀಡಲು ಸೂಚನೆ

ಬೆಂಗಳೂರು(ಜು.13): ವಿಮೆ ಮೊತ್ತ ಬಿಡುಗಡೆಯಾಗಲು ಹಲವು ದಾಖಲೆಗಳು, ವಿಮೆ ಕಂಪನಿಗಳ ತನಿಖೆ ಸೇರಿದಂತೆ ಹಲವು ಪ್ರಕ್ರಿಯೆ ಅನಿವಾರ್ಯ. ಈ ಪ್ರಕ್ರಿಯೆ ಮುಗಿದ ಬಳಿಕ ನೀವಂದುಕೊಂಡಷ್ಟು ಪರಿಹಾರ ಅಥವಾ ವಿಮೆ ಹಣ ಸಿಗುತ್ತೆ ಎಂದು ಖಚಿತವಾಗಿ  ಹೇಳಲು ಸಾಧ್ಯವಿಲ್ಲ. ಆದರೆ ವಿಮೆ ಕಂಪನಿ ಪರಿಹಾರ ಮೊತ್ತ ನೀಡಲು ಸುಳ್ಳು ಕಾರಣ ನೀಡಿದ ವಿಮೆ ಕಂಪನಿಗೆ ಬೆಂಗಳೂರು ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗ ಖಡಕ್ ವಾರ್ನಿಂಗ್ ನೀಡಿದೆ. ಇಷ್ಟೇ ಅಲ್ಲ 36 ಲಕ್ಷ ರೂಪಾಯಿ ಪರಿಹಾರ ನೀಡಲು ಸೂಚಿಸಿದೆ.

2 ಲಕ್ಷ ರುಪಾಯಿ ವಿಮೆ ಆಸೆಗೆ ಬಿದ್ದು 2.84 ಲಕ್ಷ ಕಳೆದುಕೊಂಡ..!

Tap to resize

Latest Videos

undefined

ಹೆಚ್ಎಎಲ್ ನಿವಾಸಿ ಶರತ್ ಕುಮಾರ್ ಮುನಿರೆಡ್ಡಿ ತಮ್ಮ BMW ಕಾರು ಅಪಘಾತವಾದ ಬಳಿಕ ವಿಮೆಗೆ ಮನವಿ ಮಾಡಿದ್ದಾರೆ. ಆದರೆ ಹಲವು ಸುತ್ತಿನ ಪರಿಶೀಲನೆ, ತನಿಖೆ ಬಳಿಕ ವಿಮೆ ಕಂಪನಿ ಹಣ ನೀಡಲು ನಿರಾಕರಿಸಿದೆ. ಇಷ್ಟೇ ಅಲ್ಲ ಅಪಘಾತ ನಕಲಿ, ಪ್ರಕರಣ ಸೃಷ್ಟಿಸಲಾಗಿದೆ ಎಂದು ವಿಮೆ ಕಂಪನಿ ಹೇಳಿತ್ತು.

ಇದರಿಂದ ಕೆರಳಿದ ಶರತ್ ಕುಮಾರ್ ಬೆಂಗಳೂರಿನ ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಈ ಕುರಿತು ವಾದ ವಿವಾದ, ದಾಖಲೆ ಪರಿಶೀಲನೆ ಬಳಿಕ ಇದೀಗ ಆಯೋಗ, BMW ಮಾಲೀಕನಿಗೆ 36 ಲಕ್ಷ ರೂಪಾಯಿ ಹಾಗೂ ಬಡ್ಡಿ ನೀಡುವಂತೆ ವಿಮೆ ಕಂಪನಿಗೆ ಸೂಚಿಸಿದೆ.

ಕಾರು ಕಡಿಮೆ ಓಡಿಸುತ್ತೀರಾ? ಕಡಿಮೆ ಪಾವತಿಸಿ; ಬಂದಿದೆ ಕಿ.ಮೀ ಇನ್ಶುರೆನ್ಸ್!

ಜನವರಿ 5 , 2020ರಂದು ಶರತ್ ಕಮಾರ್ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ತೆರಳುತ್ತದ್ದ ವೇಳೆ ಬೆಲ್ಲಘಟ್ಟ ಗ್ರಾಮದ ಬಳಿ ನಾಯಿಯೊಂದು ಅಡ್ಡಬಂದಿತ್ತು. ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದ ಶರತ್ ಕುಮಾರ್ ನಿಯಂತ್ರ ತಪ್ಪಿ ಕೆರೆಗೆ ಬಿದ್ದಿತ್ತು. 

ಕಾರು ಮುಳುಗಲು ಆರಂಭಿಸಿತು. ಸಹ ಪ್ರಯಾಣಿಕ ಹೇಗೋ ಹೊರಬಂದು ನನ್ನು ರಕ್ಷಿಸಿದ್ದರು. ಅಪಘಾತ ಹಾಗೂ ಕಾರು ಕೆಸರು ನೀರಿನಲ್ಲಿ ಮುಳುಗಿದ ಕಾರಣ ಕಾರು ಸಂಪೂರ್ಣ ಹಾಳಾಗಿತ್ತು. ಆದರೆ ಈ ಪ್ರಕರಣವನ್ನು ವಿಮೆ ಕಂಪನಿ ಸೃಷ್ಟಿಸಲಾಗಿದೆ ಎಂದು ವಿಮೆ ನೀಡಲು ನಿರಾಕರಿಸಿತ್ತು.
 

click me!