ಭಾರತದ ಮೊಟ್ಟ ಮೊದಲ ಡ್ಯುಯೆಲ್ ಸಿಲಿಂಡರ್ ಸಿಎನ್‌ಜಿ ಕಾರು ಬಿಡುಗಡೆಯಾಗಿದೆ. ಕೈಗೆಟುಕುವ ಬೆಲೆ. ಗರಿಷ್ಠ ಮೈಲೇಜ್, ಸರಿಸಾಟಿ ಇಲ್ಲದ ಬೂಟ್ ಸ್ಪೇಸ್ ಸೇರಿದಂತೆ ಹಲವು ವಿಶೇಷತೆಗಳ ನೂತನ ಅಲ್ಟ್ರೋಜ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. ನೂತನ ಕಾರಿನ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು(ಮೇ.22): ಟಾಟಾ ಮೋಟರ್ಸ್ ಹೊಚ್ಚ ಹೊಸ ಅಲ್ಟ್ರೋಜ್ ಸಿಎನ್‌ಜಿ ಕಾರು ಬಿಡುಗಡೆ ಮಾಡಿದೆ. ಬೂಟ್ ಸ್ಪೇಸ್‌ನಲ್ಲಿ ಯಾವುದೇ ರಾಜಿ ಇಲ್ಲದ, ಅತ್ಯುತ್ತಮ ಫರ್ಫಾಮೆನ್ಸ್, ಕಡಿಮೆ ನಿರ್ವಹಣೆ ವೆಚ್ಚ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ಸೌಲಭ್ಯಗಳೊಂದಿಗೆ ಟಾಟಾ ಮೋಟಾರ್ಸ್ ಅಲ್ಟ್ರೋಜ್ ಸಿಎನ್‌ಜಿ ಕಾರು ಬಿಡುಗಡೆಯಾಗಿದೆ. ನೂತನ ಟಾಟಾ ಅಲ್ಟ್ರೋಜ್ ಸಿಎನ್‌ಜಿ ಕಾರು 7.55 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ. ಭಾರತದ ಮೊತ್ತ ಮೊದಲ ಡ್ಯುಯೆಲ್ ಸಿಲಿಂಡರ್ ಆಲ್ಟ್ರೋಜ್ iCNG ಮಾರುಕಟ್ಟೆ ಪ್ರವೇಶಿಸಿದೆ. ಗ್ರಾಹಕರ ಅಗತ್ಯಗಳನ್ನು ಆಳವಾಗಿ ಅರ್ಥಮಾಡಿಕೊಂಡಿರುವ ಟಾಟಾ ಮೋಟರ್ಸ್, ಉದ್ಯಮದಲ್ಲೇ ಪ್ರಪ್ರಥಮವಾದ CNG ತಂತ್ರಜ್ಞಾನದಿಂದ ಆಲ್ಟ್ರೋಜ್ iCNGಅನ್ನು ಅಭಿವೃದ್ಧಿಪಡಿಸಿದ್ದುಇದು ಬೂಟ್ ಸ್ಪೇಸ್‌ನಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಒಂದು ಪ್ರೀಮಿಯಮ್ ಹ್ಯಾಚ್‌ಬ್ಯಾಕ್‌ನ ಎಲ್ಲಾ ಆರಾಮ ಮತ್ತು ಐಶಾರಾಮವನ್ನು ಗ್ರಾಹಕರು ಖಚಿತವಾಗಿ ಆನಂದಿಸಬಹುದಾದ ವರ್ಗದಲ್ಲೇ ಅತ್ಯುತ್ತಮವಾದ ಅಂಶಗಳೊಂದಿಗೆ ಬರುತ್ತದೆ.
ಟಾಟಾ ಅಲ್ಟ್ರೋಜ್ ಸಿಎನ್‌ಜಿ ವೇರಿಯೆಂಟ್ ಹಾಗೂ ಬೆಲೆ(ಎಕ್ಸ್ ಶೋ ರೂಂ)
ಟಾಟಾ ಆಲ್ಟ್ರೋಜ್ iCNG XE: 7,55,400 ರೂಪಾಯಿ
ಟಾಟಾ ಆಲ್ಟ್ರೋಜ್ iCNG XM+ : 8,40,400 ರೂಪಾಯಿ
ಟಾಟಾ ಆಲ್ಟ್ರೋಜ್ iCNG XM+ (S): 8,84,900 ರೂಪಾಯಿ
ಟಾಟಾ ಆಲ್ಟ್ರೋಜ್ iCNG XZ: 9,52,900 ರೂಪಾಯಿ
ಟಾಟಾ ಆಲ್ಟ್ರೋಜ್ iCNG XZ+ (S): 10,02,990 ರೂಪಾಯಿ
ಟಾಟಾ ಆಲ್ಟ್ರೋಜ್ iCNG XZ+O (S): 10,54,990 ರೂಪಾಯಿ
undefined
ಡ್ಯುಯೆಲ್ ಸಿಲಿಂಡರ್ ಟಾಟಾ ಅಲ್ಟ್ರೋಜ್ CNG ಕಾರು ಬುಕಿಂಗ್ ಆರಂಭ, ಕೇವಲ 21 ಸಾವಿರ ರೂ ಮಾತ್ರ!
ಆಲ್ಟ್ರೋಜ್ iCNG, ಧ್ವನಿ ನೆರವಿನ ಎಲೆಕ್ಟ್ರಿಕ್ ಸನ್‌ರೂಫ್, ವೈಲೆಸ್ ಚಾರ್ಜರ್ ಮತ್ತು ಏರ್ ಪ್ಯೂರಿಫೈಯರ್ ಮುಂತಾದ ಅತ್ಯಾಧುನಿಕ ಅಂಶಗಳಿಂದ ಸಜ್ಜುಗೊಂಡಿದೆ, ಟಿಯಾಗೊ ಮತ್ತು ಟೈಗೊಗಳಲ್ಲಿ iCNGದ ಯಶಸ್ಸಿನ ಬಳಿಕ, ಆಲ್ಟ್ರೋಜ್ iCNGವೈಯಕ್ತಿಕ ವರ್ಗದಲ್ಲಿ ಒದಗಿಸಲಾಗುತ್ತಿರುವ ಮೂರನೇ ಸಿಎನ್‌ಜಿ ಕೊಡುಗೆಯಾಗಿದೆ. ಯುವ ಕಾರು ಖರೀದಿದಾರರಿಗಾಗಿ ಸಿಎನ್‌ಜಿಯನ್ನು ಒಂದು ಆರಾಮದಾಯಕವಾದ ಪ್ರಸ್ತಾವನೆಯನ್ನಾಗಿ ಮಾಡುತ್ತಮ್ ಸಂಸ್ಥೆಯು, ಆಲ್ಟ್ರೋಜ್ iCNGದ ವಿಶಿಷ್ಟ ವಿಶೇಷತೆಗಳನ್ನು ಸಂವಹಿಸಲು OMG! its CNG (hyperlink) ಎಂಬ ಪ್ರಚಾರಾಂದೋಲನ ಕೈಗೊಂಡಿದೆ.
ಸಿಎನ್‌ಜಿ ಅತ್ಯಂತ ಕಡಿಮೆ ನಿರ್ವಹಣೆ ವೆಚ್ಚ ಹೊಂದಿದೆ. ಸಿಎನ್‌ಜಿಯನ್ನು ಆಯ್ಕೆ ಮಾಡಿಕೊಳ್ಳುವುದೆಂದರೆ ಬೂಟ್ ಸ್ಪೇಸ್‌ನೊಂದಿಗೆ ರಾಜಿ ಮಾಡಿಕೊಳ್ಳುವುದು ಎಂದೇ ಆಗಿತ್ತು. ಆದರೆ ಅಲ್ಟ್ರೋಜ್ ಇದಕ್ಕೆ ವಿರುದ್ಧ. ಜನವರಿ 2022ರಲ್ಲಿ ನಾವು, ಟಿಯಾಗೊ ಮತ್ತು ಟೈಗೊರ್ನಲ್ಲಿ ಅತ್ಯುತ್ಕೃಷ್ಟ ಕಾರ್ಯಕ್ಷಮತೆ ಹಾಗೂ ಅತ್ಯುನ್ನತವಾದ ಅಂಶಗಳನ್ನು ಒದಗಿಸಿದ ಅತ್ಯಾಧುನಿಕವಾದ iCNG ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ ಮೊದಲು ಈ ಸಮಸ್ಯೆಯನ್ನು ಬಗೆಹರಿಸಿದೆವು ಎಂದು ಟಾಟಾ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶೈಲೇಶ್ ಚಂದ್ರ ಹೇಳಿದ್ದಾರೆ.
ಆಲ್ಟ್ರೋಜ್ iCNGಯನ್ನು ಆರು ವೈವಿಧ್ಯಗಳಲ್ಲಿ ಒದಗಿಸಲಾಗುತ್ತಿದೆ, XE, XM+, XM+(S), XZ, XZ+(S) ಮತ್ತು XZ+O(S), ಮತ್ತು ಇದು ನಾಲ್ಕು ಬಣ್ಣ ಆಯ್ಕೆಗಳಲ್ಲಿ, ಅಂದರೆ ಒಪೇರಾ ಬ್ಲೂ, ಡೌನ್‌ಟೌನ್ ರೆಡ್, ಆರ್ಕೇಡ್ ಗ್ರೇ ಮತ್ತು ಅವೆನ್ಯೂ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಸಾಮಾನ್ಯ ವಾರಂಟಿಯಾಗಿ 3 ವರ್ಷಗಳು / 100000 ಕಿ.ಮೀನೊಂದಿಗೆ ಆಲ್ಟ್ರೋಜ್ iCNG, ಒಟ್ಟೂ ಮಾಲೀಕತ್ವದ ವೆಚ್ಚವನ್ನು ಕಡಿಮೆ ಮಾಡಲಿದೆ.
ಕೈಗೆಟುಕುವ ದರದಲ್ಲಿ ಟಾಟಾ ಟಿಯಾಗೊ ಎನ್‍ಆರ್‌ಜಿ CNG ಕಾರು ಬಿಡುಗಡೆ!
ಅಲ್ಟ್ರೋಜ್ ಸುರಕ್ಷತೆಯಲ್ಲಿ 5 ಸ್ಟಾರ್ ಪಡೆದಿದೆ. (Agile, Light, Flexible ಮತ್ತು Advanced) ಆರ್ಕಿಟೆಕ್ಚರ್ ವೇದಿಕೆಯ ಮೇಲೆ ನಿರ್ಮಾಣಗೊಂಡಿದೆ.
ಅಲ್ಟ್ರಾ ಅಧಿಕ ಶಕ್ತಿಯ ಉಕ್ಕು ಮತ್ತು ರೀ-ಇನ್ಫೋರ್ಸ್ಡ್ ಬಾಡಿ ಸ್ಟ್ರಕ್ಚರ್ ಬಳಕೆಯು ಕಾರಿಗೆ ಕಠಿಣತೆ ಒದಗಿಸಿ ಅದನ್ನು ದೃಢಗೊಳಿಸಿದೆ. ಆಲ್ಟ್ರೋಜ್ iCNGದಲ್ಲಿರುವ ಸುರಕ್ಷತೆಯನ್ನು, ಇಂಧನ ಹಾಕಿಸಿಕೊಳ್ಳುವಾಗ ಕಾರನ್ನು ಸ್ವಿಚ್ ಮಾಡುವುದಕ್ಕಾಗಿ ಮೈಕ್ರೋ-ಸ್ವಿಚ್‌ನಂತಹ ಅಂಶದೊಂದಿಗೆ ಇನ್ನಷ್ಟು ವರ್ಧಿಸಲಾಗಿದೆ.
ಬಿಸಿಯಾಗುವಿಕೆಯ ಸಂದರ್ಭದ ರಕ್ಷಣೆಯು ಇಂಜಿನ್‌ಗೆ ಸಿಎನ್‌ಜಿ ಸರಬರಾಜನ್ನು ಸ್ಥಗಿತಗೊಳಿಸಿ, ಸುರಕ್ಷತಾ ಕ್ರಮವಾಗಿ ಅನಿಲವನ್ನು ಗಾಳಿಗೆ ಬಿಡುತ್ತದೆ.
ಸಂಭಾವ್ಯ ಹಾನಿಯ ಅಪಾಯವನ್ನು ಕಡಿಮೆ ಮಾಡುವುದಕ್ಕಾಗಿ ಲೋಡ್ ಫ್ಲೋರ್ ಕೆಳಗೆ ಇರುವ ವಾಲ್ವ್‌ಗಳು ಮತ್ತು ಪೈಪ್‌ಗಳನ್ನು ಸುರಕ್ಷಿತಗೊಳಿಸಲಾಗಿರುವುದರಿಂದ ಲಗೇಜ್ ಏರಿಯಾ ಕೆಳಗೆ ಸ್ಥಾಪಿತಗೊಂಡಿರುವ ಅವಳಿ ಸಿಲಿಂಡರ್ಗಳು, ಅತಿಸುರಕ್ಷಿತವಾದ ಪರಿಹಾರ ಒದಗಿಸುತ್ತವೆ. ಹೆಚ್ಚುವರಿಯಾಗಿ, ವರ್ಧಿತ ಹಿಂಬದಿ ಬಾಡಿ ಸ್ಟ್ರಕ್ಚರ್ ಮತ್ತು ಸಿಎನ್‌ಜಿ ಟ್ಯಾಂಕುಗಳಿಗಾಗಿ 6 ಪಾಯಿಂಟ್ ಮೌಂಟಿಂಗ್ ಸಿಸ್ಟಮ್, ಆಲ್ಟ್ರೋಜ್ iCNGಗೆ ಹೆಚ್ಚುವರಿಯಾಗಿ, ಹಿಂಬದಿ ಕ್ರ್ಯಾಶ್ ಸುರಕ್ಷತೆ ಒದಗಿಸುತ್ತದೆ.
ಆಲ್ಟ್ರೋಜ್ iCNG, ಧ್ವನಿ-ನೆರವಿನ ಎಲೆಕ್ಟ್ರಿಕ್ ಸನ್‌ರೂಫ್, ವೈಲೆಸ್ ಚಾರ್ಜರ್ ಮತ್ತು ಏಪ್ಯೂರಿಫೈಯ್‌ನಂತಹ ಹೊಸ ಅಂಶಗಳೊಂದಿಗೆ ಬರುತ್ತದೆ.
ಇದು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, LED DRLs, R16 ಡೈಮಂಡ್ ಕಟ್ ಅಲಾಯ್ ವೀಲ್ಸ್, Android Auto™ ಮತ್ತು Apple Carplay™ ಸಂಪರ್ಕತೆ ಇರುವ Harman™ 8-ಸ್ಪೀಕರ್ ಟಚ್‌ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್, ಪ್ರೀಮಿಯಮ್ ಲೆದರೆಟ್ ಸೀಟ್ಸ್, ಸಂಪೂರ್ಣ ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಎತ್ತರ ಸರಿಪಡಿಸಿಕೊಳ್ಳಬಹುದಾದ ಚಾಲಕ ಸೀಟ್ ಹಾಗೂ ಇನ್ನೂ ಹಲವು ಪ್ರೀಮಿಯಮ್ ಅಂಶಗಳಿಂದಲೂ ಸಜ್ಜುಗೊಂಡಿದೆ.
ಇಷ್ಟು ಮಾತ್ರವಲ್ಲದೆ, ಅವಳಿ ಸಿಲಿಂಡರ್ಗಳ ಸ್ಮಾರ್ಟ್ ಅಳವಡಿಕೆ ಗುರುತ್ವಾಕರ್ಷಣ ಕೇಂದ್ರವನ್ನು ತಗ್ಗಿಸಿ, ಹೆಚ್ಚು ಸ್ಥಿರ ಚಾಲನೆಗಳನ್ನು ಖಾತರಿಪಡಿಸುತ್ತದೆ.
ಲಗೇಜ್ ಏರಿಯಾ ಕೆಳಗಿರುವ ಅವಳಿ ಸಿಲಿಂಡರ್ಗಳ ಸ್ಮಾರ್ಟ್ ಅಳವಡಿಕೆ ICE ಕಾರುಗಳಲ್ಲಿರುವಂತೆಯೇ, ಬೂಟ್‌ಸ್ಪೇಸ್‌ಅನ್ನು ಖಾತರಿಪಡಿಸುತ್ತದೆ. ಆಲ್ಟ್ರೋಜ್ iCNG, ಸಿಎನ್‌ಜಿ ಮೋಡ್‌ನಲ್ಲಿ ಡೈರೆಕ್ಟ್ ಸ್ಟಾರ್ಟ್ ಅಂಶವಿರುವ, ಉದ್ಯಮದಲ್ಲೇ ಪ್ರಪ್ರಥಮವಾದ ಅತ್ಯಾಧುನಿಕ ಸಿಂಗಲ್ ECUದೊಂದಿಗೆ ಬರುತ್ತದೆ.
ಈ ಸಿಂಗಲ್ ECU, ಪೆಟ್ರೋಲ್ ಮತ್ತು ಸಿಎನ್‌ಜಿ ಮೋಡ್‌ಗಳ ನಡುವೆ ಬದಲಾವಣೆ ಮಾಡುವಾಗ, ಅನಾಯಾಸವಾದ ಮತ್ತು ಜಿಗಿತಮುಕ್ತ ಪರಿವರ್ತನೆಯನ್ನು ಖಾತರಿಪಡಿಸುತ್ತದೆ. ಸಿಎನ್‌ಜಿ ಮೋಡ್‌ನಲ್ಲಿ ಡೈರೆಕ್ಟ್ ಸ್ಟಾರ್ಟ್ ಇರುವುದರಿಂದ, ಗ್ರಾಹಕರು ಚಾಲನೆ ಮಾಡುತ್ತಿರುವಾಗ ಸಿಎನ್‌ಜಿ ಮೋಡ್‌ಗೆ ಬದಲಾಯಿಸಿಕೊಳ್ಳುವ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ
ಆಲ್ಟ್ರೋಜ್ iCNG, ಶಕ್ತಿಶಾಲಿಯಾದ 1.2L Revotron ಇಂಜಿನ್‌ನೊಂದಿಗೆ ಅದ್ವಿತೀಯವಾದ ಕಾರ್ಯಕ್ಷಮತೆ ಒದಗಿಸುತ್ತದೆ. ಅತ್ಯಾಧುನಿಕವಾದ iCNG ತಂತ್ರಜ್ಞಾನವು, 73.5 PS @6000 rpmಗಳ ಶಕ್ತಿ ಮತ್ತು 103 Nm @ 3500 rpm ಟಾರ್ಕ್ ಒದಗಿಸುವ ಮೂಲಕ ಸರಿಸಾಟಿಯಿಲ್ಲದ ಕಾರ್ಯಕ್ಷಮತೆ