ಕಾರು ಖರೀದಿಸಿದ ಖುಷಿ: ಶೋ ರೂಮ್‌ನಲ್ಲಿ ಕುಟುಂಬದ ಬಿಂದಾಸ್ ಡಾನ್ಸ್: ವಿಡಿಯೋ ವೈರಲ್

By Anusha Kb  |  First Published May 20, 2023, 2:57 PM IST

ಕುಟುಂಬವೊಂದು ಕಾರು ಖರೀದಿಸಲು ಶೋರೂಮ್‌ಗೆ ಬಂದಿದ್ದು, ಕಾರು ಖರೀದಿಸಿದ ನಂತರ ಶೋರೂಮ್ ಮುಂದೆ ದಂಪತಿ ಮಕ್ಕಳು ಎಲ್ಲರೂ ಸೇರಿ ಜೊತೆಯಾಗಿ ಡಾನ್ಸ್‌ ಮಾಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.


ಮನೆಗೊಂದು ಹೊಸ ಕಾರು ಬಂದರೆ ಆ ಮನೆಯವರ ಖುಷಿಗೆ ಮಿತಿ ಇರುವುದಿಲ್ಲ. ಅದರಲ್ಲೂ ಮಧ್ಯಮ ವರ್ಗದವರು ಇದೇ ಮೊದಲ ಬಾರಿಗೆ ಕಾರು ಖರೀದಿಸಿದ್ದರೆ ಅವರ ಖುಷಿಯೇ ಒಂತರ ಢಿಫರೆಂಟ್. ಇಲ್ಲು ಮಧ್ಯಮ ವರ್ಗದ ಕುಟುಂಬವೊಂದು ಕಾರು ಖರೀದಿಸಲು ಶೋರೂಮ್‌ಗೆ ಬಂದಿದ್ದು, ಕಾರು ಖರೀದಿಸಿದ ನಂತರ ಶೋರೂಮ್ ಮುಂದೆ ದಂಪತಿ ಮಕ್ಕಳು ಎಲ್ಲರೂ ಸೇರಿ ಜೊತೆಯಾಗಿ ಡಾನ್ಸ್‌ ಮಾಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಸ್ವತಃ ಆನಂದ್  ಮಹೀಂದ್ರ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸಿದ್ದಾರೆ. 

ಉದ್ಯಮಿ ಹಾಗೂ ಮಹೀಂದ್ರ ಗ್ರೂಪ್‌ನ (Mahindra Group) ಮುಖ್ಯಸ್ಥ ಆನಂದ್ ಮಹೀಂದ್ರ (Anand Mahindra) ಟ್ವಿಟ್ಟರ್‌ನಲ್ಲಿ ಸದಾ ಆಕ್ಟಿವ್ ಆಗಿದ್ದು, ಸದಾ ಏನಾದರೊಂದು ವೀಡಿಯೋ ಸ್ಟೋರಿ ಪೋಸ್ಟ್ ಮಾಡುತ್ತಿರುತ್ತಾರೆ. ಹೀಗಿರುವಾಗ ಈ ಕುಟುಂಬ ಮಹೀಂದ್ರ ಎನ್‌ -ಎಸ್‌ಯುವಿ ಗಾಡಿಯನ್ನೇ ಖರೀದಿಸಿ ಸಂಭ್ರಮಿಸಿದ್ದು, ಈ ವೀಡಿಯೋ ನೋಡಿದ್ಮೆಲೆ ಆನಂದ್ ಮಹೀಂದ್ರ ಕೂಡ ಈ  ಖುಷಿ ಪಡದೇ ಇರೋಕೆ ಸಾಧ್ಯನೇ ಇಲ್ಲ. ಏಕೆಂದರೆ ಈ ಕುಟುಂಬ ಖರೀದಿಸಿರೋ ಗಾಡಿ ಕೂಡ ಆನಂದ್ ಮಹೀಂದ್ರ ಸಂಸ್ಥೆಗೆ  ಸೇರಿದ ಸ್ಕಾರ್ಫಿಯೋ ಎನ್ ಎಸ್‌ಯುವಿ ಗಾಡಿ ಆಗಿದೆ... 

Tap to resize

Latest Videos

undefined

ಇದು ಭಾರತದ ಆಟೋ ಇಂಡಸ್ಟ್ರಿಯಲ್ಲಿ (Auto Industry)) ಕೆಲಸ ಮಾಡುತ್ತಿರುವುದಕ್ಕೆ ಸಿಕ್ಕಿದ ನಿಜವಾದ ಕೊಡುಗೆ ಹಾಗೂ ಉಡುಗೊರೆ ಎಂದು ಬರೆದು ಈ ವಿಡಿಯೋವನ್ನು ಆನಂದ್ ಮಹೀಂದ್ರ ಶೇರ್ ಮಾಡಿಕೊಂಡಿದ್ದಾರೆ. ಮೂಲತಃ ಈ ವಿಡಿಯೋವನ್ನು Car News Guru ಎಂಬ ಟ್ವಿಟ್ಟರ್ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದೆ. 32 ಸೆಕೆಂಡ್‌ಗಳ ವಿಡಿಯೋದಲ್ಲಿ ಇಡೀ ಕುಟುಂಬವೇ ಬಿಂದಾಸ್ ಆಗಿ ಹೊಸ ಗಾಡಿ ಮುಂದೆ ಶೋ ರೂಮ್‌ನಲ್ಲಿ ನರ್ತಿಸುತ್ತಿದ್ದಾರೆ. ಕಾರನ್ನ ಖರೀದಿಸುವ ವೇಳೆ ಕುಟುಂಬದ ಬಿಂದಾಸ್ ಡಾನ್ಸ್ ಎಂದು ಬರೆದು ಅವರು ಈ ವಿಡಿಯೋವನ್ನು ಆನಂದ್ ಮಹೀಂದ್ರ ಹಾಗೂ ಕೆಲವರಿಗೆ ಟ್ಯಾಗ್ ಮಾಡಿದ್ದರು.

ವಿಶೇಷ ಬೇಡಿಕೆ ಇಟ್ಟ ಉದ್ಯಮಿ ಆನಂದ್ ಮಹೀಂದ್ರಾಗೆ RRR ನಿರ್ದೇಶಕ ರಾಜಮೌಳಿ ಹೇಳಿದ್ದೇನು?

ವಿಡಿಯೋ ನೋಡಿದ ಅನೇಕರು ಹೊಸ ಕಾರು ಖರೀದಿಸಿದ ಈ ಕುಟುಂಬಕ್ಕೆ ಶುಭ ಹಾರೈಸಿದ್ದಾರೆ. ಇದು ಕೇವಲ ವಾಹನವಲ್ಲ, ಇದು ಉಜ್ವಲ ಭವಿಷ್ಯದ ಕಡೆಗೆ ಪ್ರಯಾಣವನ್ನು ಪ್ರತಿನಿಧಿಸುತ್ತದೆ. ಈ ದೃಶ್ಯವು ಭಾರತೀಯ ವಾಹನ ಉದ್ಯಮದ ಅದಮ್ಯ ಚೈತನ್ಯವನ್ನು ಸಂಕೇತಿಸುತ್ತದೆ, ಅಲ್ಲಿ ಕನಸುಗಳು ಚಕ್ರ ಕಟ್ಟಿಕೊಂಡು ಗುರಿಯ ಕಡೆಗೆ ಕಡೆಗೆ ಓಡಿಸುತ್ತವೆ, ಸ್ಫೂರ್ತಿಯನ್ನು ಹುಟ್ಟು ಹಾಕುತ್ತವೆ ಮತ್ತು ಪ್ರಗತಿಯ ಉತ್ಸಾಹವನ್ನು ಬೆಳಗಿಸುತ್ತವೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನಾವು ಜೀವನದಲ್ಲಿ ಹೆಚ್ಚು ಗೌರವಿಸುವ ಕೆಲವು ವಿಷಯಗಳು ಶುದ್ಧ ಸಂತೋಷವನ್ನು ತರುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ.

ಅಂದಹಾಗೆ ಇದು ಚಂಢೀಗಢದ ಕುಟುಂಬ ಎಂದು ಹೇಳಲಾಗಿದ್ದು, ವಾಹನ ನೋಂದಣಿ ಸಂಖ್ಯೆ ಅದನ್ನು ತೋರಿಸುತ್ತಿದೆ. ಹಿನ್ನೆಲೆಯಲ್ಲಿ ಕೇಳುತ್ತಿರುವ ಸಂಗೀತವೂ ಚಂಡೀಗಢದ ಖ್ಯಾತ ಸಂಗೀತವಾಗಿದ್ದು, ಇದಕ್ಕೆ ಕುಣಿಯದವರಿಲ್ಲ ಎಂದು ಒಬ್ಬರು ನೋಡುಗರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಕುಟುಂಬದ ಖುಷಿಯ ಕ್ಷಣದ ವೀಡಿಯೋ ಅನೇಕರಿಗೆ ಖುಷಿ ನೀಡಿದೆ. 

ಉತ್ತರಕನ್ನಡದ ಹಾಲಕ್ಕಿ ಮಹಿಳೆಯ ಸಮಾಜಮುಖಿ ಕಾರ್ಯಕ್ಕೆ ಮನಸೋತ ಉದ್ಯಮಿ ಆನಂದ್ ಮಹೀಂದ್ರಾ

What a Joyful Moment! People dancing while taking thé delivery of their Mahindra Scorpio-N SUV. pic.twitter.com/bzrNeA3FQ3

— Car News Guru (@CarNewsGuru1)

 

click me!