Tata Car Price Hike ಭರ್ಜರಿ ಡಿಸ್ಕೌಂಟ್ ಬೆನ್ನಲ್ಲೇ ಕಾರು ಬೆಲೆ ಹೆಚ್ಚಿಸಿದ ಟಾಟಾ ಮೋಟಾರ್ಸ್!

By Suvarna NewsFirst Published Jan 18, 2022, 3:45 PM IST
Highlights
  • ಮಾರುತಿ ಸುಜುಕಿ ಬೆನ್ನಲ್ಲೇ ಟಾಟಾ ಕಾರು ಬೆಲೆ ಹೆಚ್ಚಳ
  • ಜನವರಿ 19 ರಿಂದ ಟಾಟಾ ಕಾರು ಬೆಲೆ ಏರಿಕೆ
  • 0.9% ಬೆಲೆ ಹೆಚ್ಚಿಸಲು ಟಾಟಾ ಮೋಟಾರ್ಸ್ ನಿರ್ಧಾರ

ಮುಂಬೈ(ಜ.18): ದೇಶದಲ್ಲಿನ ಹಲವು ಆಟೋಕಂಪನಿಗಳು ಕಾರುಗಳ ಬೆಲೆ ಹೆಚ್ಚಳ ಮಾಡಿದೆ. ಹೊಸ ವರ್ಷದ(New Year 2022) ಆರಂಭದಲ್ಲಿ ಟಾಟಾ ಮೋಟಾರ್ಸ್(Tata Motors) ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿತ್ತು. ಇದೀಗ ಟಾಟಾ ಕಾರುಗಳ ಬೆಲೆ ಹೆಚ್ಚಳ ಘೋಷಿಸಿದೆ. ಬುಧವಾರದಿಂದ(ಜ.19)ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವಾಹನಗಳ ಬೆಲೆ(Car Price Hike) ಹೆಚ್ಚಳವಾಗುತ್ತಿದೆ. ಟಾಟಾ ತನ್ನ ಕಾರುಗಳ ಬೆಲೆಯನ್ನು ಶೇಕಡಾ 0.9 ರಷ್ಟು ಏರಿಕೆ ಮಾಡಲು ನಿರ್ಧರಿಸಿದೆ.

ಬೆಲೆ ಹೆಚ್ಚಳದ ನಡುವೆಯೂ ಟಾಟಾ ಮೋಟಾರ್ಸ್ ಸಿಹಿ ಸುದ್ದಿಯನ್ನು ನೀಡಿದೆ. ಟಾಟಾ ಮೋಟಾರ್ಸ್ ಆಯ್ದ ಕಾರುಗಳ ಮೇಲೆ 10,000 ರೂಪಾಯಿ ಡಿಸ್ಕೌಂಟ್(Discounts Offers) ಆಫರ್ ಕೂಡ ನೀಡಿದೆ. ಕಾರುಗಳ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಕಾರಣ ಕಚ್ಚಾವಸ್ತುಗಳ ಬೆಲೆ ಏರಿಕೆ, ಕಾರು ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವ ಕಾರಣ ಟಾಟಾ ಮೋಟಾರ್ಸ್ ತನ್ನ ಕಾರುಗಳ ಬೆಲೆ ಏರಿಕೆ ಮಾಡುತ್ತಿದೆ ಎಂದು ಕಂಪನಿ ಹೇಳಿದೆ.

Upcoming Cars ಸಫಾರಿ ಡಾರ್ಕ್, ಟಿಯಾಗೋ CNG, ಮುಂದಿನ ವಾರ ಎರಡು ಟಾಟಾ ಕಾರು ಬಿಡುಗಡೆ!

ಅಳೆದು ತೂಗಿ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದಂತೆ ಕಡಿಮೆ ಬೆಲೆಯನ್ನು ಏರಿಕೆ ಮಾಡಲಾಗಿದೆ. ಆದರೆ ಜನವರಿ 18ರ ಒಳಗೆ ಕಾರು ಬುಕ್(Tata Car bookings) ಮಾಡುವ ಗ್ರಾಹಕರಿಗೆ ಸದ್ಯ ಇರುವ ಬೆಲೆಯಲ್ಲಿ ಕಾರು ಸಿಗಲಿದೆ. ಈಗಾಗಲೇ ಕಾರು ಬುಕ್ ಮಾಡಿದ ಗ್ರಾಹಕರಿಗೆ ಕಾರು ಡೆಲಿವರಿ ಜನವರಿ 19ರ ನಂತ್ರ ಇದ್ದರೂ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಜನವರಿ 19 ರಿಂದ ಟಾಟಾ ಕಾರು ಬುಕ್ ಮಾಡುವ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ ಎಂದು ಕಂಪನಿ ಹೇಳಿದೆ.

ಟಾಟಾ ಮೋಟಾರ್ಸ್ ಭಾರತದ ಕಾರು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಅತ್ಯುತ್ತಮ ಕಾರುಗಳ ಮೂಲಕ ಟಾಟಾ ಮಾರಾಟದಲ್ಲಿ ದಾಖಲೆ ಬರೆಯುತ್ತಿದೆ. 2021ರ ಡಿಸೆಂಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ಹ್ಯುಂಡೈ ಹಿಂದಿಕ್ಕಿ ಗರಿಷ್ಠ ಮಾರಾಟದಲ್ಲಿ 2ನೇ ಸ್ಥಾನ ಪಡೆದುಕೊಂಡಿತ್ತು. ಮೊದಲ  ಸ್ಥಾನ ಮಾರುತಿ ಸುಜುಕಿ ಆಕ್ರಮಿಸಿಕೊಂಡಿದೆ.

Tata Safety Cars ಭಾರತದಲ್ಲಿ 5 ಸ್ಟಾರ್ ಸುರಕ್ಷತೆ ಕಾರು, ಹೊಸ ಮಾನದಂಡ ಸ್ಥಾಪಿಸಿದ ಟಾಟಾ ಮೋಟಾರ್ಸ್!

ಟಾಟಾ ಮೋಟಾರ್ಸ್ ಸಂಸ್ಥೆಯ ನೆಕ್ಸಾನ್, ಟಿಗೋರ್, ಟಿಯಾಗೋ, ಹ್ಯಾರಿಯರ್, ಸಫಾರಿ, ಹೆಕ್ಸಾ, ಅಲ್ಟ್ರೋಜ್ ಹಾಗೂ ಪಂಚ್ ಕಾರುಗಳು ದೇಶಗಲ್ಲಿ ಭಾರಿ ಸಂಚಲನ ಮೂಡಿಸಿದೆ. ಎಲ್ಲಾ ಕಾರುಗಳು ಗರಿಷ್ಠ ಸುರಕ್ಷತೆಯನ್ನು ಒದಗಿಸುವ ಕಾರುಗಳಾಗಿದೆ. ಭಾರತದಲ್ಲಿ ಕೈಗೆಟುಕುವ ದರದಲ್ಲಿ 5 ಸ್ಟಾರ್ ರೇಟಿಂಗ್ ಕಾರುಗಳನ್ನು ನೀಡುತ್ತಿದೆ. ಈ ಮೂಲಕ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇನ್ನು ಕೈಗೆಟುಕುವ ದರದಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಅತ್ಯುತ್ತಮ ತಂತ್ರಜ್ಞಾನ, ಅತ್ಯಾಧುನಿಕ ಫೀಚರ್ಸ್, ಆಕರ್ಷಕ ವಿನ್ಯಾಸ ಸೇರಿದಂತೆ ಹಲವು ವಿಶೇಷತೆಗಳು ಟಾಟಾ ಕಾರುಗಳಲ್ಲಿದೆ. 

ಕಳೆದ ವಾರ ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆ ಹೆಚ್ಚಳ ಮಾಡಿದೆ ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವ ಕಾರಣ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಮಾರುತಿ ಸುಜುಕಿ ಹೇಳಿದೆ. ಟಾಟಾ ಮೋಟಾರ್ಸ್ ಹಾಗೂ ಮಾರುತಿ ಸುಜುಕಿ ಮಾತ್ರವಲ್ಲ, ಭಾರತದಲ್ಲಿನ ಹಲವು ಆಟೋಮೊಬೈಲ್ ಕಂಪನಿಗಳು ಕಾರುಗಳ ಬೆಲೆ ಹೆಚ್ಚಳ ಮಾಡಿದೆ. 

ಕಚ್ಚಾವಸ್ತುಗಳ ಬೆಲೆ ಏರಿಕೆ, ಆಮದು ಸುಂಕ ಸೇರಿದಂತೆ ಹಲವು ಸಮಸ್ಯೆಗಳು ಭಾರತೀಯ ಆಟೋಮೊಬೈಲ್ ಕಂಪನಿಗಳಿಗೆ ಕಾಡುತ್ತಿದೆ. ಇದರ ಜೊತೆಗೆ ಚಿಪ್ ಕೊರತೆ 2021ರಲ್ಲಿ ಗಣನೀಯವಾಗಿ ಕಾರು ಉತ್ಪಾದನೆಯನ್ನು ಇಳಿಕೆ ಮಾಡಿತ್ತು. ಕೊರೋನಾ ವೈರಸ್, ಲಾಕ್‌ಡೌನ್, ಆರ್ಥಿಕ ಹಿಂಜರಿತ ಸೇರಿದಂತೆ ಹಲವು ಕಾರಣಗಳಿಂದ 2021ರಲ್ಲಿ ಭಾರತೀಯ ಆಟೋ ಕಂಪನಿಗಲು ತೀವ್ರ ಸಂಕಷ್ಟ ಎದುರಿಸಿತ್ತು. ಇದೀಗ 2022ರ ಆರಂಭದಲ್ಲೇ ಮತ್ತೆ ಕೊರೋನಾ, ಚಿಪ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಆಟೋ ಕ್ಷೇತ್ರದ ಚಿಂತೆ ಹೆಚ್ಚಿಸಿದೆ.

click me!