Tata Electric Car ವರ್ಷದಲ್ಲಿ 50,000 ಎಲೆಕ್ಟ್ರಿಕ್ ಕಾರು ಮಾರಾಟ ಗುರಿ, ಆಟೋ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಟಾಟಾ ನಿರ್ಧಾರ!

By Suvarna NewsFirst Published Jan 17, 2022, 3:45 PM IST
Highlights
  • ಭಾರತದ ಆಟೋ ಕ್ಷೇತ್ರದಲ್ಲಿ ಟಾಟಾ ಹೊಸ ಸಂಚಲನ
  • ಎಲೆಕ್ಟ್ರಿಕ್ ಕಾರು ಉತ್ಪಾದನೆಯತ್ತ ಟಾಟಾ ಮೋಟಾರ್ಸ್ ಹೆಚ್ಚಿನ ಗಮನ
  • ವಾರ್ಷಿಕ ಉತ್ಪಾದನೆ ಹೆಚ್ಚಳ, ಹೊಸ ಕಾರು ಬಿಡುಗಡೆಗೆ ನಿರ್ಧಾರ
     

ಮುಂಬೈ(ಜ.17): ದೇಶದಲ್ಲಿ ಟಾಟಾ ಮೋಟಾರ್ಸ್(Tata Motors) ಕಾರು ಮಾರುಕಟ್ಟೆಯನ್ನು ನಿಧಾನವಾಗಿ ಆಕ್ರಮಿಸಿಕೊಳ್ಳುತ್ತಿದೆ. ಮಾರುತಿ ಸುಜುಕಿ, ಹ್ಯುಂಡೈ ಸೇರಿದಂತೆ ಹಲವು ಆಟೋ ಕಂಪನಿಗಳ ಪೈಪೋಟಿ ನಡುವೆ ಟಾಟಾ ಮೋಟಾರ್ಸ್ ಹಂತ ಹಂತವಾಗಿ ಕಾರು(Cars) ಮಾರುಕಟ್ಟೆಯಲ್ಲಿ ದಿಟ್ಟ ಹೆಜ್ಜೆ ಇಡುತ್ತಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಕಾರು (Electric Car) ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಈಗಾಗಲೇ ಅಗ್ರಸ್ಥಾನ ಆಕ್ರಮಿಸಿಕೊಂಡಿದೆ. ಇದೀಗ ಈ ಸ್ಥಾನ ಭದ್ರಪಡಿಸಿಕೊಳ್ಳಲು ಟಾಟಾ ಮೋಟಾರ್ಸ್ ಹೊಸ ಪ್ಲಾನ್ ಜಾರಿಗೊಳಿಸುತ್ತಿದೆ.

ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಟಾಟಾ ಅತ್ಯುತ್ತಮ ಹಾಗೂ ಕೈಗೆಟುಕುವ ದರದಲ್ಲಿ ಕಾರು ನೀಡುತ್ತಿದೆ. ಇದೀಗ ಟಾಟಾಗೆ ಪೈಪೋಟಿ ನೀಡಲು ಎಂಜಿ ಮೋಟಾರ್ಸ್, ಹ್ಯುಂಡೈ ಸೇರಿದಂತೆ ಹಲವು ಕಾರುಗಳು ಸಜ್ಜಾಗಿದೆ. ಇದರ ಬೆನ್ನಲ್ಲೇ ಟಾಟಾ ಮೋಟಾರ್ಸ್ 2023ರಲ್ಲಿ 50,000 ಎಲೆಕ್ಟ್ರಿಕ್ ಕಾರುಗಳ ಮಾರಾಟದ(Car sales) ಗುರಿ ಇಟ್ಟುಕೊಂಡಿದೆ.  2024ರಲ್ಲಿ ಈ ಪ್ರಮಾಣವನ್ನು 1,25,000 ಎಲೆಕ್ಟ್ರಿಕ್ ಕಾರು ಮಾರಾಟದ ಗುರಿ ಇಟ್ಟಿದ್ದರೆ, 2025ರಲ್ಲಿ 1,50,000 ಕಾರು ಮಾರಾಟದ ಗುರಿ ಇಟ್ಟುಕೊಂಡಿದೆ. ಇದು ಕೇವಲ ಗುರಿಯಲ್ಲಿ ಈ ಸಾಧನೆಯತ್ತ ಟಾಟಾ ಈಗಲೇ ಹೆಜ್ಜೆಹಾಕುತ್ತಿದೆ.

Latest Videos

Upcoming Cars ಸಫಾರಿ ಡಾರ್ಕ್, ಟಿಯಾಗೋ CNG, ಮುಂದಿನ ವಾರ ಎರಡು ಟಾಟಾ ಕಾರು ಬಿಡುಗಡೆ!

ಟಾಟಾ ಮೋಟಾರ್ಸ್ ಭಾರತದಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್(Nexon EV) ಹಾಗೂ ಟಿಗೋರ್ ಎಲೆಕ್ಟ್ರಿಕ್(Tigor EV) ಕಾರಿನ ಮೂಲಕ ಭಾರಿ ಸಂಚಲನ ಸೃಷ್ಟಿಸಿದೆ.  ಈ ಎರಡು ಕಾರುಗಳು ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರುಗಳಾಗಿದೆ. ಇನ್ನು ಪ್ರತಿಸ್ಪರ್ಧಿಯಾಗಿರುವ ಎಂಜಿ ZS ಎಲೆಕ್ಟ್ರಿಕ್ ಕಾರು 21 ರಿಂದ 23 ಲಕ್ಷ ರೂಪಾಯಿ. ಹ್ಯುಂಡೈ ಕೋನಾ 25 ಲಕ್ಷ ರೂಪಾಯಿ. ಆದರೆ ನೆಕ್ಸಾನ್ ಇವಿ 14 ರಿಂದ 18 ಲಕ್ಷ ರೂಪಾಯಿ, ಟಿಗೋರ್ ಎಲೆಕ್ಟ್ರಿಕ್ ಕಾರಿನ ಬೆಲೆ 12 ರಿಂದ 14 ಲಕ್ಷ ರೂಪಾಯಿ.

ಕೇವಲ ಈ ಎರಡು ಕಾರು ಮುಂದಿಟ್ಟುಕೊಂಡು ಭಾರತದ ಎಲೆಕ್ಟ್ರಿಕ್ ಮಾರುಕಟ್ಟೆ ಆಳಲು ಸಾಧ್ಯವಿಲ್ಲ ಅನ್ನೋದು ಟಾಟಾ ಮೋಟಾರ್ಸ್‌ಗೆ ಚೆನ್ನಾಗಿ ತಿಳಿದಿದೆ. ಕಾರಣ ಈಗಾಗಲೇ ಎಂಜಿ ಮೋಟಾರ್ಸ್ 10 ಲಕ್ಷ ರೂಪಾಯಿ ಒಳಗಿನ ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದಕ್ಕೂ ಮೊದಲೇ ಟಾಟಾ ಮೋಟಾರ್ಸ್ ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈಗಾಗಲೇ ಅನಾವರಣ ಕೂಡ ಮಾಡಿದೆ. ಇದು 10 ಲಕ್ಷ ರೂಪಾಯಿ ಒಳಗಿನ ಎಲೆಕ್ಟ್ರಿಕ್ ಕಾರಿಗಿದೆ. ಸುಮಾರು 400 ಕಿಮೀ ಮೈಲೇಜ್ ರೇಂಜ್ ಹೊಂದಿರುವ ಕಾರು ಇದಾಗಿದೆ.

Upcoming Cars 6 ಹೊಸ SUV ಕಾರು ಬಿಡುಗಡೆ ಮಾಡಲು ಸಜ್ಜಾದ ಟಾಟಾ ಮೋಟಾರ್ಸ್, ಆಟೋ ಕ್ಷೇತ್ರದಲ್ಲಿ ಸಂಚಲನ!

ಅಲ್ಟ್ರೋಜ್ ಇವಿ ಕಾರಿನ ಬಳಿಕ ಟಾಟಾ ಮೋಟಾರ್ಸ್ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ. ಟಿಯಾಗೋ ಎಲೆಕ್ಟ್ರಿಕ್ ಕಾರು 7 ರಿಂದ 9 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಟಾಟಾ ಸಿಯೆರಾ ಕಾರನ್ನು ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಟಾಟಾದಿಂದ ಹೊಸದಾಗಿ 3 ಕಾರುಗಳು ಬಿಡುಗಡೆಯಾಗಲಿದೆ.

ಟಾಟಾ ನೆಕ್ಸಾನ್ ಇವಿ ಕಾರಿನ ಮೈಲೇಜ್ ರೇಂಜನ್ನು 312 ರಿಂದ 400 ಪ್ಲಸ್ ಕಿಲೋಮೀಟರ್‌ಗೆ ಹೆಚ್ಚಿಸಿ ಹೊಸ ಕಾರು ಬಿಡುಗಡೆ ಮಾಡಲಿದೆ. ಇನ್ನು ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ 312 ಕಿ.ಮೀ ಮೈಲೇಜ್ ಕಾರು ಕೂಡ ಇರಲಿದೆ. ಟಿಗೋರ್ ಕಾರಿನ ಮೈಲೇಜ್ ರೇಂಜ್ ಕೂಡ ಹೆಚ್ಚಾಗಲಿದೆ. ಹೀಗಾಗಿ ಟಾಟಾ ಮುಂಬರುವ ದಿನಗಳಲ್ಲಿ ಒಟ್ಟು 5 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆ. ಈ ಮೂಲಕ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ ಒಟ್ಟು 7ಕ್ಕೆ ಏರಲಿದೆ. 

ಟಾಟಾ ಮೋಟಾರ್ಸ್ 2025ರ ವೇಳೆಗೆ 10 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ದೇಶದಲ್ಲಿ ಟಾಟಾ ಕಾರುಗಳ ಮೇಲೆ ಜನರು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಕಾರಣ ಅತ್ಯಂತ ಸುರಕ್ಷತೆಯ ಕಾರು, ಅತ್ಯುತ್ತಮ ವಿನ್ಯಾಸ, ದಕ್ಷ ಎಂಜಿನ್, ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.

click me!