ಅನಂತಪುರಂ(ಜ.17): ಕಿಯಾ ಮೋಟಾರ್ಸ್ ಇತ್ತೀಚೆಗೆ ಕಿಯಾ ಕ್ಯಾರೆನ್ಸ್(Kia Carens) ಕಾರು ಅನಾವರಣ ಮಾಡಿದೆ. ಜನವರಿ 14 ರಿಂದ ಕ್ಯಾರೆನ್ಸ್ ಕಾರಿನ ಬುಕಿಂಗ್ ಆರಂಭಿಸಿದೆ. ಇದೀಗ ಕಿಯಾ ಕ್ಯಾರೆನ್ಸ್ ಹೊಸ ದಾಖಲೆ ಬರೆದಿದೆ. ಬುಕಿಂಗ್ ಆರಂಭಿಸಿದ ಮೊದಲ ದಿನವೇ ಕಿಯಾ ಕ್ಯಾರೆನ್ಸ್ ಕಾರು 7,738 ಬುಕಿಂಗ್(Record Bookings) ಕಂಡಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ.
ಕಿಯಾ ಕ್ಯಾರೆನ್ಸ್ ಕಿಯಾ ಮೋಟಾರ್ಸ್(Kia Motors) ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ 4ನೇ ಕಾರು. ಈ ಹಿಂದಿನ ಮೂರು ಕಾರುಗಳಿಗೆ ಈ ರೀತಿಯ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಅಷ್ಟರ ಮಟ್ಟಿಗೆ ಜನ ಕಿಯಾ ಕ್ಯಾರೆನ್ಸ್ ಕಾರಿಗೆ(MPV Car) ಮಾರುಹೋಗಿದ್ದಾರೆ. ಸೆಲ್ಟೋಸ್, ಕಾರ್ನಿವಲ್ ಹಾಗೂ ಸೊನೆಟ್ ಕಾರು ಉತ್ತಮ ಮಾರಾಟ ದಾಖಲೆ ಕಂಡಿದೆ. ಇದೀಗ ಕಿಯಾ ಕ್ಯಾರೆನ್ಸ್ ಈ ಹಿಂದಿನ ಎಲ್ಲಾ ದಾಖಲೆ ಮುರಿದಿದೆ.
Kia Price Hike ಕರೆನ್ಸ್ ಕಾರು ಬಿಡುಗಡೆಗೂ ಮುನ್ನವೇ ಗ್ರಾಹಕರಿಗೆ ಶಾಕ್ ನೀಡಿದ ಕಿಯಾ!
ಕಿಯಾ ಕರೆನ್ಸ್ 6 ಹಾಗೂ 7 ಸೀಟಿಂಗ್ ಕಾರಿನ ಆಯ್ಕೆ ಲಭ್ಯವಿದೆ. ಭಾರತದಲ್ಲಿ ಈಗಾಗಲೇ ಅತ್ಯುತ್ತಮ MPV ಕಾರುಗಳು ಲಭ್ಯವಿದೆ. ಇದರ ನಡುವೆ ಕಿಯಾ ಕ್ಯಾರೆನ್ಸ್ ಕಾರು ಭಾರಿ ಮೋಡಿ ಮಾಡಿದೆ. ಕಿಯಾ ಕ್ಯಾರೆನ್ಸ್ 5 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಪ್ರಿಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಲಕ್ಸುರಿ ಹಾಗೂ ಲಕ್ಸುರಿ ಪ್ಲಸ್ ಎಂಬ 5 ವೇರಿಯೆಂಟ್ ಕಾರುಗಳು ಲಭ್ಯವಿದೆ.
ಕಿಯಾ ಕ್ಯಾರೆನ್ಸ್ ಕಾರು ಮೂರು ಎಂಜಿನ್‌ಗಳಲ್ಲಿ ಲಭ್ಯವಿದೆ. ಇದೇ ಎಂಜಿನ್ ಕಿಯಾ ಸೆಲ್ಟೋಸ್(kia Seltos) ಹಾಗೂ ಹ್ಯುಂಡೈ ಕ್ರೆಟಾ ಕಾರಿನಲ್ಲಿ ಬಳಸಲಾಗಿದೆ. 1.5 ಲೀಟರ್ ಡೀಸೆಲ್ ಎಂಜಿನ್, 1.5 ಲೀಟರ್ ನ್ಯಾಚ್ಯುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್, 1.4 ಲೀಟರ್ ಟರ್ಬೋಚಾರ್ಜ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ. 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಸ್ಟಾಂಡರ್ಡ್ ಆಗಿದೆ. 1.5 ಲೀಟರ್ ನ್ಯಾಚ್ಯುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಕಾರು 115 PS ಪವರ್ ಹಾಗೂ 144 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 1.5 ಡೀಸೆಲ್ ಎಂಜಿನ್ ಕಾರು 115 PS ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಟರ್ಬೋ ಪೆಟ್ರೋಲ್ ಎಂಜಿನ್ ಕಾರು 140 PS ಪವರ್ ಹಾಗೂ 242 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.
Kia Carens MPV ಬಿಡುಗಡೆಗೂ ಮುನ್ನ ಕಿಯಾ ಕರೆನ್ಸ್ ಕಾರಿನ ವೇರಿಯೆಂಟ್, ಎಂಜಿನ್, ಫೀಚರ್ಸ್ ಮಾಹಿತಿ ಬಹಿರಂಗ!
ಕಿಯಾ ಕ್ಯಾರೆನ್ಸ್ ಕಾರಿನಲ್ಲಿ ಹಲವು ಲೋಡೆಡ್ ಫೀಚರ್ಸ್‌ಗಳಿವೆ(Loded Features). ಎಲೆಕ್ಟ್ರಿಕ್ ಸನ್‌ರೂಫ್, ಸ್ಪಾಟ್ ಲ್ಯಾಂಪ್ಸ್, ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ಆ್ಯಂಬಿಯೆಂಟ್ ಲೈಟ್ಸ್, ವೆಂಟಿಲೇಟೆಡ್ ಫ್ರಂಟ್ ಸೀಟ್, ರೈನ್ ಸೆನ್ಸಿಂಗ್ ವೈಪರ್ಸ್, ವೈಯರ್‌ಲೆಸ್ ಚಾರ್ಜಿಂಗ್ ಪ್ಲಾಟ್, ಡ್ರೈವರ್ ರೇರ್‌ವ್ಯೂವ್ ಮಾನಿಟರ್, ಕೀಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರ್ಯೂಸ್ ಕಂಟ್ರೋಲ್, LED ಹೆಡ್‌ಲ್ಯಾಂಪ್ಸ್, LED ಟೈಲ್ಸ್ ಲ್ಯಾಂಪ್ಸ್, LED ಡೇಟೈಮ್ ರನ್ನಿಂಗ್ ಲ್ಯಾಂಪ್ಸ್, ಏರ್ ಪ್ಯೂರಿಫೈಯರ್ ಸೇರಿದಂತೆ ಹಲವು ವಿಶೇಷ ಫೀಚರ್ಸ್ ಈ ಕಾರಿನಲ್ಲಿದೆ.
ಟಾಪ್ ಮಾಡೆಲ್ ಕಾರಿನಲ್ಲಿ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಮ್, ಬೊಸ್ ಸೌಂಡ್ ಸಿಸ್ಟಮ್ ಹಾಗೂ ಲೋವರ್ ವೇರಿಯೆಂಟ್ ಕಾರಿನಲ್ಲಿ 8 ಇಂಚಿನ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ. ಸದ್ಯ ಕಾರಿನ ಬೆಲೆ ಬಹಿರಂಗವಾಗಿಲ್ಲ. ಆದರೆ 15 ರಿಂದ 18 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.