Maruti discounts ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ಮಾರುತಿ ಸುಜುಕಿ, ಕೈಗೆಟುಕುವ ದರದಲ್ಲಿ ಕಾರು ಲಭ್ಯ!

By Suvarna News  |  First Published Apr 7, 2022, 7:56 PM IST
  • ಮಾರುತಿ ಸುಜುಕಿ ಕಾರು ಖರೀದಿ ಮೇಲೆ ಡಿಸ್ಕೌಂಟ್ ಆಫರ್
  • ಬೆಲೆ ಏರಿಕೆ ನಡುವೆ ಗ್ರಾಹಕರಿಗೆ ಡಿಸ್ಕೌಂಟ್ ಘೋಷಣೆ
  • ಆಯ್ದ ಕಾರುಗಳ ಮೇಲೆ ನಗದು ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್

ನವದೆಹಲಿ(ಏ.07): ಮಾರುತಿ ಸುಜುಕಿ ಗ್ರಾಹಕರಿಗೆ ಮತ್ತೊಂದು ಆಫರ್ ನೀಡುತ್ತಿದೆ. ಈಗಾಗಲೇ ಬೆಲೆ ಏರಿಕೆ ಘೋಷಣೆ ಮಾಡಿರುವ ಮಾರುತಿ ಸುಜುಕಿ ಕಾರು ಖರೀದಿಸುವ ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ಘೋಷಿಸಿದೆ. ಆಯ್ದೆ ಕಾರುಗಳು ಮೇಲೆ ಈ ಡಿಸ್ಕೌಂಟ್ ಆಫರ್ ಅನ್ವಯವಾಗಲಿದೆ. ಇಷ್ಟೇ ಅಲ್ಲ ಇದು ಸೀಮಿತ ಅವಧಿಯ ಡಿಸ್ಕೌಂಟ್ ಆಫರ್ ಆಗಿದೆ.

ಹೊಸ ಆರ್ಥಿಕ ವರ್ಷ ಆರಂಭಗೊಂಡಿದೆ. ಹೀಗಾಗಿ ಕಳೆದ ಆರ್ಥಿಕ ವರ್ಷದಲ್ಲಿ ಉತ್ಪಾದನೆಯಾಗಿರುವ ಕಾರುಗಳ ಮೇಲೆ ಡಿಸ್ಕೌಂಟ್ ನೀಡಲಾಗಿದೆ. ಡಿಸ್ಕೌಂಟ್ ಆಫರ್, ಕ್ಯಾಶ್, ಎಕ್ಸ್‌ಜೇಂಚ್ ಹಾಗೂ ಕಾರ್ಪೋರೇಟ್ ಬೋನಸ್ ಒಳಗೊಂಡಿದೆ. ನೆಕ್ಸಾ ಕಾರುಗಳಾದ ಇಗ್ನಿಸ್, ಸಿಯಾಜ್ ಹಾಗೂ ಎಸ್ ಕ್ರಾಸ್ ಕಾರುಗಳ ಜೊತೆಗೆ ಸುಜುಕಿ ಅರೆನಾ ಕಾರುಗಳಾದ ವ್ಯಾಗನರ್, ಸೆಲೆರಿಯೋ ಹಾಗೂ ಸ್ವಿಫ್ಟ್ ಕಾರಿನ ಮೇಲೆ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ.

Latest Videos

undefined

11 ಸಾವಿರ ರೂಗೆ ಬುಕ್ ಮಾಡಿ 2022ರ ಹೊಚ್ಚ ಹೊಸ ಮಾರುತಿ ಎರ್ಟಿಗಾ!

ಮಾರುತಿ ಸುಜುಕಿ ಇಗ್ನಿಸ್ ಕಾರಿನ ಮೇಲೆ 20,000 ರೂಪಾಯಿ ನಗದು ಡಿಸ್ಕೌಂಟ್ ಘೋಷಿಸಲಾಗಿದೆ. ಇದರ ಜೊತೆಗೆ 10,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಹಾಗೂ 3,000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ನೀಡಲಾಗಿದೆ. ಆದರೆ ಇಗ್ನಿಸ್ ಆಟೋಮ್ಯಾಟಿಕ್ ಕಾರಿಗೆ ಯಾವುದೇ ಡಿಸ್ಕೌಂಟ್ ಇರುವುದಿಲ್ಲ. 

ಮಾರುತಿ ಸುಜುಕಿ ಸಿಯಾಜ್ ಕಾರಿನ ಮೇಲೆ ಎಕ್ಸ್‌ಜೇಂಜ್ ಬೋನಸ್ 25,000 ರೂಪಾಯಿ ಘೋಷಿಸಲಾಗಿದೆ. ಇನ್ನು 5,000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ನೀಡಲಾಗಿದೆ ಆದರೆ ಸಿಯಾಜ್ ಕಾರಿಗೆ ಯಾವುದೇ ಕ್ಯಾಶ್ ಡಿಸ್ಕೌಂಟ್ ಘೋಷಿಸಿಲ್ಲ.

ಮಾರುತಿ ಸುಜುಕಿ ಎಸ್ ಕ್ರಾಸ್ ಕಾರಿಗೆ ನಗದು ಡಿಸ್ಕೌಂಟ್ 17,000 ರೂಪಾಯಿ ಘೋಷಿಸಲಾಗಿದೆ. ಇನ್ನು 25,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಿದ್ದರೆ. 5,000 ರೂಪಾಯಿ ಕಾರ್ಪೋರೇಟ್ ಆಫರ್ ನೀಡಲಾಗಿದೆ. ಇನ್ನು ವ್ಯಾಗನರ್ ಕಾರಿನ ಮೇಲ ಒಟ್ಟು 31,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಿದ್ದರೆ, 1.2 ಲೀಟರ್ ಎಂಜಿನ್ ವೇರಿಯೆಂಟ್ ಕಾರಿಗೆ ಒಟ್ಟು 26,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

Maruti Suzuki cars ಭಾರತದಲ್ಲಿ ಬೆಲೆ ಏರಿಕೆ ಬಿಸಿ, ಮಾರುತಿ ಸುಜುಕಿ ಕಾರಿನ ದರ ಹೆಚ್ಚಳ!

ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಕಾರಿಗೆ ಒಟ್ಟು 31,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಮಾರುತಿ ಸುಜುಕಿ ಸೆಲೆರಿಯೋ ಕಾರಿಗೆ 26,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಮಾರುತಿ ಸುಜುಕಿ ಕಾರಿಗೆ ಒಟ್ಟು 25,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಆಟೋಮ್ಯಾಟಿಕ್ ಕಾರಿಗೆ 17,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

ಮಾರುತಿ ಅಲ್ಟೋ 800 ಕಾರಿಗೆ 11,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಮಾರುತಿ ಸುಜುಕಿ ಡಿಸೈರ್ ಮಾನ್ಯುಯೆಲ್ ಕಾರಿಗೆ ಒಟ್ಟು 22,000 ರೂಪಾಯಿ ಹಾಗೂ ಆಟೋಮ್ಯಾಟಿಕ್ ಕಾರಿಗೆ 17,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಮಾರುತಿ ವಿಟರಾ ಬ್ರಿಜಾ ಕಾರಿಗೆ ಓಟ್ಟು 22,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

ಆಫರ್ ಕುರಿತು ಹತ್ತಿರದ ಡೀಲರ್‌ಶಿಪ್ ಬಳಿ ವಿಚಾರಿಸಿ ಖಚಿತಪಡಿಸಿದೆ. ಡಿಸ್ಕೌಂಟ್ ನಗರ, ರಾಜ್ಯ, ಪಟ್ಟಣಗಳಲ್ಲಿ ವ್ಯತ್ಯಾಸವಾಗಲಿದೆ.

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಸುಝುಕಿ ಇಂಡಿಯಾ ತನ್ನ ಕಾರುಗಳ ಬೆಲೆಯನ್ನು ಶೇ.4.3ರವರೆಗೂ ಹೆಚ್ಚಿಸಿದೆ. ಮತ್ತೊಂದೆಡೆ ಮಹೀಂದ್ರಾ ಕಂಪನಿ ಕೂಡಾ ವಿವಿಧ ಮಾದರಿಯ ಕಾರುಗಳ ಬೆಲೆಯಲ್ಲಿ ಗಣನೀಯ ಏರಿಕೆ ಮಾಡಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯ ಎಂದು ಎರಡೂ ಕಂಪನಿಗಳು ಹೇಳಿವೆ. ಮಾರುತಿ ಸುಝುಕಿ ಇಂಡಿಯಾ, ಆಲ್ಟೋದಿಂದ ಎಸ್‌-ಕ್ರಾಸ್‌ನಂತಹ ವಿವಿಧ ಶ್ರೇಣಿಯ ಕಾರನ್ನು 3.15 ಲಕ್ಷದಿಂದ 12.56 ಲಕ್ಷ ರು ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತದೆ. ಕಂಪನಿ ಜನವರಿಯಲ್ಲಿ ಶೇ. 1.4, ಏಪ್ರಿಲ್‌ನಲ್ಲಿ ಶೇ. 1.6 ಹಾಗೂ ಸೆಪ್ಟೆಂಬರ್‌ನಲ್ಲಿ ಶೇ. 1.9 ಒಟ್ಟು ಶೇ. 4.9 ರಷ್ಟುಬೆಲೆಯಲ್ಲಿ ಏರಿಕೆ ಮಾಡಿತ್ತು. ಇದೀಗ ನಾಲ್ಕನೇ ಬಾರಿ ಹೆಚ್ಚಳ ಮಾಡಿದೆ.

click me!