ದಕ್ಷಿಣ ಭಾರತದ ಮೊದಲ ಸೂಪರ್ ಕಾರು ಫೆರಾರಿಯ ಅಧಿಕೃತ ಸರ್ವೀಸ್ ಸೆಂಟರ್ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಇತರ ನಗರಗಳನ್ನು ಬಿಟ್ಟು ಬೆಂಗಳೂರಿನಲ್ಲಿ ಈ ಸರ್ವೀಸ್ ಸೆಂಟರ್ ಆರಂಭಿಸಲು ಒಂದು ಬಲವಾದ ಕಾರಣವಿದೆ.
ಬೆಂಗಳೂರು(ಮಾ.27) ಸೂಪರ್ ಕಾರುಗಳ ಫೆರಾರಿ ರಸ್ತೆಯಲ್ಲಿ ಸಾಗಿದರೆ ಒಂದು ಕ್ಷಣ ಕಣ್ಣ ಹಾಯಿಸದೆ ಇರಲು ಸಾಧ್ಯವಿಲ್ಲ. ಕಾರಿನ ವಿನ್ಯಾಸ, ಐಷಾರಾಮಿ ತನ, ಸ್ಟೈಲೀಶ್ ಲುಕ್ ಸೇರಿದಂತೆ ಹಲವು ಕಾರಣಗಳಿಂದ ಫೆರಾರಿ ಬಹುತೇಕರ ನೆಚ್ಚಿನ ಕಾರಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲೆವೆಡೆ ಫೆರಾರಿ ಸೇರಿದಂತೆ ಲಕ್ಷುರಿ ಕಾರುಗಳು ರಸ್ತೆ ಮೇಲೆ ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಪ್ರತಿ ರಸ್ತೆಯಲ್ಲೂ ಸೂಪರ್ ಕಾರುಗಳು ಕಾಣಸಿಗುತ್ತದೆ. ಇದೀಗ ಫೆರಾರಿ ಅಧಿಕೃತವಾಗಿ ದಕ್ಷಿಣ ಭಾರತದಲ್ಲಿ ಮೊದಲ ಸರ್ವೀಸ್ ಸೆಂಟರ್ ಆರಂಭಿಸಿದೆ. ವಿಶೇಷ ಅಂದರೆ ಈ ಶೋ ರೂಂ ಹಾಗೂ ಸರ್ವೀಸ್ ಸೆಂಟರ್ ಬೆಂಗಳೂರಿನಲ್ಲಿದೆ.
ಎಲ್ಲಿದೆ ಈ ಫೆರಾರಿ ಸರ್ವೀಸ್ ಸೆಂಟರ್?
ದಕ್ಷಿಣ ಭಾರತದ ಮೊದಲ ಅಧಿಕೃತ ಫೆರಾರಿ ಸರ್ವೀಸ್ ಸೆಂಟರ್ ಹಾಗೂ ಶೋ ರೂಂ ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ಆರಂಭಗೊಂಡಿದೆ. ವಿಶೇಷ ಅಂದರೆ ಭಾರತದ ಎರಡನೇ ಅಧಿಕೃತ ಫೆರಾರಿ ಶೋ ರೂಂ ಹಾಗೂ ಸರ್ವೀಸ್ ಸೆಂಟರ್ ಇದಾಗಿದೆ. ಮೊದಲ ಸೆಂಟರ್ ದೆಹಲಿಯಲ್ಲಿದೆ. ನೂತನ ಸರ್ವೀಸ್ ಸೆಂಟರ್‌ನಲ್ಲಿ ಆಯ್ದ ಕಾರುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ವಿಶೇಷ ಅಂದರೆ ಯೂಸ್ಡ್ ಫೆರಾರಿ ಕಾರುಗಳು ಇಲ್ಲಿ ಲಭ್ಯವಿದೆ.
ಕನ್ನಡಿಗನ ಬಳಿ ಇದೆ 10.5 ಕೋಟಿ ರೂ ಫೆರಾರಿ ಪುರುಸಾಂಗ್ವೆ, ಈ ಕಾರು ಖರೀದಿಸಿದ ಮೊದಲ ಭಾರತೀಯ!
ಫೆರಾರಿ ಕಾರುಗಳ ಕೇರ್, ನಿರ್ವಹಣೆ, ರಿಪೇರಿ, ಬಿಡಿ ಭಾಗಗಳು ಇಲ್ಲಿ ಲಭ್ಯವಿದೆ. ಬೆಂಗಳೂರಿನ ಈ ಸರ್ವೀಸ್ ಸೆಂಟರ್ ಪ್ರೀಮಿಯರ್ ಒನರ್‌ಶಿಪ್, ಎಕ್ಸ್‌ಪೀರಿಯನ್ಸ್ ಸೆಂಟರ್ ಸೇರಿದಂತೆ ಹಲವು ವೇದಿಕೆಗಳನ್ನು ಒದಗಿಸುತ್ತಿದೆ. ಈ ಮೂಲಕ ದಕ್ಷಿಣ ಭಾರತದ ಫೆರಾರಿ ಮಾಲೀಕರಿಗೆ ಸುಲಭ ತಮ್ಮ ಕಾರಗಳ ನಿರ್ವಹಣೆ ಮಾಡಲು ಸಹಕಾರಿಯಾಗಿದೆ.
ಬೆಂಗಳೂರಿನಲ್ಲಿ ಯಾಕೆ?
ಭಾರತದಲ್ಲಿ ಹಲವು ನಗರಗಳಿವೆ. ಆದರೆ ಲಕ್ಷುರಿ ಕಾರು, ಸೂಪರ್ ಕಾರು ಅನ್ನೋ ಮಾತು ಬಂದಾಗ ಎಲ್ಲರ ಚಿತ್ತ ಬೆಂಗಳೂರಿನತ್ತ ತಿರುಗಲಿದೆ. ಇದಕ್ಕೆ ಕಾರಣವೂ ಇದೆ. ದೇಶದಲ್ಲಿ ಅತೀ ಹೆಚ್ಚು ಸೂಪರ್ ಕಾರುಗಳು ಮಾರಾಟವಾಗುವುದು ಬೆಂಗಳೂರಿನಲ್ಲಿ. ಫೆರಾರಿ ಮಾತ್ರವಲ್ಲ, ಲ್ಯಾಂಬೋರ್ಗಿನಿ ಸೇರಿದಂತೆ ಹಲವು ಸೂಪರ್ ಕಾರುಗಳು ಬೆಂಗಳೂರಿನಲ್ಲಿ ಅತೀ ಹೆಚ್ಚು ಮಾರಾಟ ಕಾಣುತ್ತದೆ. ಹೀಗಾಗಿ ಫೆರಾರಿ ಇತರ ನಗರಗಳಿಗಿಂತ ಬೆಂಗಳೂರಿನಲ್ಲಿ ಸರ್ವೀಸ್ ಸೆಂಟರ್ ಆರಂಭಿಸಿದೆ.
360° ಕೇರ್
ಬೆಂಗಳೂರಿನ ಹೊಸ ಸರ್ವೀಸ್ ಸೆಂಟರ್‌ನಲ್ಲಿ ಗ್ರಾಹಕರಿಗೆ 360° ಕೇರ್ ನೀಡಲಿದೆ. ಕಾರುಗಳ ಸಂಪೂರ್ಣ ಚೆಕ್ಅಪ್, ನಿರ್ವಹಣೆ,ರಿಪೇರಿ, ಬಿಡಿ ಭಾಗ ಸೇರಿದಂತೆ ಎಲ್ಲವೂ ಇಲ್ಲಿ ನೀಡಲಿದೆ. ಇದರಿಂದ ಫೆರಾರಿ ಕಾರು ಮಾಲೀಕರು ನಿಶ್ಟಿಂತೆಯಿಂದ ಪ್ರಯಾಣ ಮಾಡಬಹುದು. ಅಧಿಕೃತ ಸರ್ವೀಸ್ ಸೆಂಟರ್ ಕಾರು ಗ್ರಾಹಕರು ಬೇಡಿಕೆ, ಅಗತ್ಯ ಹಾಗೂ ದೂರುಗಳಿಗೆ ತಕ್ಕಂತೆ ಈ ಸರ್ವೀಸ್ ಸೆಂಟರ್ ಕಾರ್ಯನಿರ್ವಹಿಸಲಿದೆ ಎಂದು ಬೆಂಗಳೂರು ಫೆರಾರಿ ಹೇಳಿದೆ.
ಶ್ರೀಮಂತ ಉದ್ಯಮಿ ಅದಾನಿ ಬಳಿ ಇರುವ ಐಷಾರಾಮಿ ಕಾರುಗಳೆಷ್ಟು? ಇಲ್ಲಿದೆ ಲಿಸ್ಟ್!