ಎಂಜಿ ಮೋಟಾರ್ಸ್ ಇದೀಗ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರು ಮಾರಾಟ ಕುರಿತು ಮಾಹಿತಿ ನೀಡಿದೆ. ವಿಶೇಷ ಅಂದರೆ ಎಂಜಿ ಮೋಟಾರ್ಸ್ ಎಲೆಕ್ಟ್ರಿಕ್ ಕಾರನ್ನು ಹೆಚ್ಚು ಖರೀದಿ ಮಾಡಿದ್ದು ಉತ್ತರ ಭಾರತವೋ, ದಕ್ಷಿಣ ಭಾರತವೋ? ಇದಕ್ಕೆ ಉತ್ತರ ಸಿಕ್ಕಿದೆ.
ಬೆಂಗಳೂರು(ಮಾ.23) ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ವಿಸ್ತಾರವಾಗುತ್ತಿದೆ. ಬೇಡಿಕೆ ಹೆಚ್ಚಾಗುತ್ತಿದೆ. ಹಲವು ಬ್ರ್ಯಾಂಡ್ ಕಾರುಗಳು ಭಾರತದಲ್ಲಿ ಲಭ್ಯವಿದೆ. ಅತೀ ಕಡಿಮೆ ಬೆಲೆಯಲ್ಲೂ ಇವಿ ಕಾರುಗಳು ಲಭ್ಯವಿದೆ. ಭಾರತದಲ್ಲಿ ಎಂಜಿ ಮೋಟಾರ್ಸ್ ಹಲವು ಇವಿ ಕಾರುಗಳನ್ನು ಬಿಡುಗಡೆ ಮಾಡಿದೆ. ಇದೀಗ ಎಂಜಿ ಮೋಟಾರ್ಸ್ ಅಂಕಿ ಅಂಶ ಬಿಡುಗಡೆ ಮಾಡಿದೆ. ಎಂಜಿ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳನ್ನು ಹೆಚ್ಚು ಖರೀದಿಸಿದ್ದು ಯಾರು? ಉತ್ತರ ಭಾರತವೋ? ದಕ್ಷಿಣ ಭಾರತವೋ? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಭಾರತದ ಪ್ರಮುಖ ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆ ಜೆಎಸ್‌ಡಬ್ಲ್ಯೂ ಎಮ್‌ಜಿ ಮೋಟರ್ ಇಂಡಿಯಾ 2024 ರಲ್ಲಿ ಮಾರಾಟವಾದ ಒಟ್ಟು ಇವಿಗಳ ಪೈಕಿ ದಕ್ಷಿಣ ಭಾರತದಲ್ಲೇ ಹೆಚ್ಚು ಮಾರಾಟವಾಗಿದೆ ಎಂದು ಘೋಷಿಸಿದೆ. ಇಡೀ ದೇಶದಲ್ಲಿ ಕಂಪನಿ ಒಟ್ಟು 22,646 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ಪೈಕಿ ದಕ್ಷಿಣ ಭಾರತದಲ್ಲಿ 10,698 ಯುನಿಟ್‌ಗಳು ಮಾರಾಟವಾಗಿವೆ ಎಂದು ಕಂಪನಿ ಹೇಳಿದೆ.
50 ಸಾವಿರ ಡೌನ್‌ಪೇಮೆಂಟ್ ಸಾಕು ಮನೆಗೆ ಬರಲಿಗೆ ಹೊಸ ಎಂಜಿ ಕಾಮೆಟ್ ಕಾರು
ಈ ಅವಧಿಯಲ್ಲಿ ಜೆಎಸ್‌ಡಬ್ಲ್ಯೂ ಎಮ್‌ಜಿ ಮೋಟರ್ ಇಂಡಿಯಾದ ಇವಿ ಮಾರಾಟದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ನಂತರದಲ್ಲಿ ತೆಲಂಗಾಣ ಮತ್ತು ಕೇರಳ ಇದೆ. ಇಂಥ ಅದ್ಭುತ ಮಾರಾಟದಿಂದಾಗಿ ಮಾರ್ಕೆಟ್‌ನಲ್ಲಿ ಸಂಸ್ಥೆ ಎಷ್ಟು ಬಲವಾಗಿ ಬೇರೂರಿದೆ ಮತ್ತು ಈ ರಾಜ್ಯಗಳಲ್ಲಿ ಎಮ್‌ಜಿ ಬಗ್ಗೆ ಗ್ರಾಹಕರಲ್ಲಿ ವಿಶ್ವಾಸ ಹೆಚ್ಚಿದೆ ಎಂದು ಕಂಪನಿ ಹೇಳಿದೆ.
ಎಮ್‌ಜಿ ಮೋಟರ್ ಇಂಡಿಯಾ ಇವಿ ಮಾರಾಟ ಮಾಹಿತಿ 2024
ಭಾರತದ ಒಟ್ಟು ಇವಿ ಮಾರಾಟ: 22,646
ದಕ್ಷಿಣ ಭಾರತದಲ್ಲಿ ಒಟ್ಟು ಮಾರಾಟ: 10,698
ದಕ್ಷಿಣದ ಕೊಡುಗೆ: 47.2%
ಎಮ್‌ಜಿ ವಿಂಡ್ಸರ್ ರೂ 9.99 ಲಕ್ಷ ಹಾಗೂ ಬ್ಯಾಟರಿ ಆಸ್ ಎ ಸರ್ವೀಸ್ ಆಗಿ ರೂ. 3.9/km ಇದ್ದು, ಒಟ್ಟಾರೆ ಬೆಲೆ ಮತ್ತು ಪ್ಯಾಕೇಜಿಂಗ್‌ನಿಂದಾಗಿ ಭಾರತದ ಖರೀದಿದಾರರನ್ನು ಆಕರ್ಷಿಸಿದೆ. ಇದರ ಫಲಿತಾಂಶವಾಗಿ, ಬಿಡುಗಡೆಯಾದಾಗಿನಿಂದಲೂ ಭಾರತದಲ್ಲಿ ಅತ್ಯುತ್ತಮ ಮಾರಾಟದ ಇವಿ ಆಗಿದೆ. ಎಮ್‌ಜಿ ಕೊಮೆಟ್ ಆಕರ್ಷಕ ಆರಂಭಿಕ ದರ ರೂ. 4.99 ಲಕ್ಷ ಹಾಗೂ ಬ್ಯಾಟರಿ ಆಸ್ ಎ ಸರ್ವೀಸ್ ಆಗಿ ರೂ. 2.5/km ದರದಲ್ಲಿ ಲಭ್ಯವಿದೆ. ಇದು ಭಾರತದ ಸ್ಟ್ರೀಟ್ ಸ್ಮಾರ್ಟ್ ಕಾರು ಆಗಿದ್ದು, ಟ್ರಾಫಿಕ್ ಅನ್ನು ಸ್ಟೈಲಿಶ್ ಆಗಿ ಎದುರಿಸಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ. ಈ ಸ್ಟೈಲಿಶ್ ಆಗಿ ವಿನ್ಯಾಸಗೊಳಿಸಿದ ಕಾರಿನಲ್ಲಿ ಭವಿಷ್ಯದ ವಿನ್ಯಾಸವಿದೆ ಮತ್ತು ಹೆಚ್ಚಿನ ಅನುಕೂಲ ಮತ್ತು ಸುಧಾರಿತ ತಂತ್ರಜ್ಞಾನದ ವೈಶಿಷ್ಟ್ಯಗಳಿವೆ.
ಎಮ್‌ಜಿ ಝೆಡ್‌ಎಸ್ ಇವಿ ಭಾರತದ ಪ್ರಥಮ ಶುದ್ಧ ಎಲೆಕ್ಟ್ರಿಕ್ ಇಂಟರ್ನೆಟ್ ಎಸ್‌ಯುವಿ ಆಗಿದ್ದು, ರೂ. 13.99 ಲಕ್ಷ ಹಾಗೂ ಬ್ಯಾಟರಿ ಆಸ್ ಎ ಸರ್ವೀಸ್ ಆಗಿ ರೂ. 4.5/km ದರದಲ್ಲಿ ಲಭ್ಯವಿದೆ. ಎಮ್‌ಜಿ ಝೆಡ್ಎಸ್ ಇವಿಯಲ್ಲಿ 50.3kWH ಸುಧಾರಿತ ಬ್ಯಾಟರಿ ಪ್ಯಾಕ್ ಇದ್ದು, ಒಂದು ಬಾರಿ ಚಾರ್ಜ್ ಮಾಡಿದಾಗ 461km* ಅನ್ನು ಕವರ್ ಮಾಡುತ್ತದೆ. ಇದರಲ್ಲಿ ಶಕ್ತಿಯುತ ಮೋಟರ್ ಇದ್ದು, 176PS ವರ್ಗದಲ್ಲೇ ಉತ್ತಮ ಪವರ್ ಅನ್ನು ನೀಡುತ್ತದೆ ಮತ್ತು ಕೇವಲ 8.5 ಸೆಕೆಂಡುಗಳಲ್ಲಿ 0 ಇಂದ 100 ಕಿ.ಮೀ/ಗಂ.ಗೆ ಅಕ್ಸರೇಟ್ ಆಗುತ್ತದೆ. ಫ್ಲಾಗ್‌ಶಿಪ್ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಪ್ರಿಸ್ಮಾಟಿಕ್ ಸೆಲ್ ಬ್ಯಾಟರಿ ಇದೆ. ಇದು ಅಧಿಕ ಎನರ್ಜಿ ಸಾಂದ್ರತೆಯನ್ನು ಹೊಂದಿದ್ದು, ಉತ್ತಮ ರೇಂಜ್ ಮತ್ತು ಬಾಳಿಕೆಯನ್ನು ನೀಡುತ್ತದೆ.
ಎಲೆಕ್ಟ್ರಿಕ್ ಕಾರು ಖರೀದಿಸುವ ಪ್ಲಾನ್ ಇದೆಯಾ? ಇಲ್ಲಿದೆ ಕೈಗೆಟುಕುವ ಬೆಲೆಯ ಇವಿ!