ಮಹೀಂದ್ರ XUV 700 ಎಬೋನಿ ಎಡಿಶನ್‌ಗೆ ಖುದ್ದು ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್

Published : Mar 18, 2025, 05:41 PM ISTUpdated : Mar 18, 2025, 05:48 PM IST
ಮಹೀಂದ್ರ XUV 700 ಎಬೋನಿ ಎಡಿಶನ್‌ಗೆ ಖುದ್ದು ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್

ಸಾರಾಂಶ

ಮಹೀಂದ್ರ XUV 700 ಕಾರು ಅತ್ಯಂತ ಜನಪ್ರಿಯಗೊಂಡಿದೆ. ಭಾರಿ ಬೇಡಿಕೆಯನ್ನು ಪಡೆದುಕೊಂಡಿದೆ. ಇದೀಗ ಮಹೀಂದ್ರ  XUV 700 ಬ್ಲಾಕ್ ಎಡಿಶನ್‌ನಲ್ಲಿ ಬಿಡುಗಡೆಯಾಗಿದೆ. ಇದು ಎಬೋನಿ ಎಡಿಶನ್ ಕಾರು. ಈ ಕಾರಿನ ಆಕರ್ಷಕ ನೋಟ, ಫೀಚರ್, ಪರ್ಫಾಮೆನ್ಸ್‌ಗೆ ಖುದ್ದು ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್ ಆಗಿದ್ದಾರೆ.

ನವದೆಹಲಿ(ಮಾ. 18)  ಮಹೀಂದ್ರ ಕಾರುಗಳು ಭಾರತ ಮಾತ್ರವಲ್ಲ, ಹಲವು ದೇಶಗಳಲ್ಲಿ ಭಾರಿ ಬೇಡಿಕೆಯ ಕಾರಾಗಿದೆ. ಅತ್ಯಾಕರ್ಷಕ ವಿನ್ಯಾಸ, ಪರ್ಫಾಮೆನ್ಸ್, 5 ಸ್ಟಾರ್ ಸೇಫ್ಟಿ ಸೇರಿದಂತೆ ಹಲವು ಕಾರಣಗಳಿಂದ ಮಹೀಂದ್ರ ದೇಶದ ಹೆಮ್ಮೆಯ ಹಾಗೂ ಬೇಡಿಕೆಯ ಕಾರಾಗಿದೆ. ಮಹೀಂದ್ರ ಕಾರುಗಳ ಪೈಕಿ XUV 700 ಕಾರು ಅತೀ ಹೆಚ್ಚು ಮಾರಾಟ ಕಾಣುವ ಮೂಲಕ ದಾಖಲೆ ಬರೆದಿದೆ. ಇದೀಗ ಬಹುತೇಕರು ಮಹೀಂದ್ರ XUV 700 ಕಾರು ಬಯಸುತ್ತಿದ್ದಾರೆ. ಇದರ ನಡುವೆ ಮಹೀಂದ್ರ ಇದೀಗ ಬ್ಲಾಕ್ ಎಡಿಶನ್ ಎಬೋನಿ XUV 700 ಕಾರು ಬಿಡುಗಡೆ ಮಾಡಿದೆ. ಡಾರ್ಕ್ ಎಡಿಶನ್ ಕಾರಿನ ಆಕರ್ಷಕ ವಿನ್ಯಾಸ, ಲುಕ್, ಪರ್ಫಾಮೆನ್ಸ್ ನೋಡಿ ಖುದ್ದು ಉದ್ಯಮಿ, ಮಹೀಂದ್ರ ಆ್ಯಂಡ್ ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಮಹೀಂದ್ರ ಎಬೋನಿ ಎಡಿಷನ್‌ ಕಾರಿನ ಕುರಿತು ಆನಂದ್ ಮಹೀಂದ್ರ ಟ್ವೀಟ್ ಹಂಚಿಕೊಂಡಿದ್ದಾರೆ. ಬ್ಲಾಕ್ ಆ್ಯಂಡ್ ಬ್ಯೂಟಿಫುಲ್ ಎಂದು ಆನಂದ್ ಮಹೀಂದ್ರ ಹೊಸ ಎಬೋನಿ ಎಡಿಶನ್ ಕಾರಿನ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆನಂದ್ ಮಹೀಂದ್ರ ಹಂಚಿಕೊಂಡ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ.ಕಾರಿನ ವಿನ್ಯಾಸ, ಡಾರ್ಕ್ ಎಡಿಶನ್, ಸ್ಪೋರ್ಟಿ ಲುಕ್ ಮೆಚ್ಚಿಕೊಂಡಿದ್ದಾರೆ.

ಕೋಲ್ಕತಾದಿಂದ ಚೆನ್ನೈ ಪ್ರಯಾಣ ಕೇವಲ 3 ಗಂಟೆ, 600 ರೂ, ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್

ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 700 ಅತ್ಯಂತ ಜನಪ್ರಿಯ ವಾಹನವಾಗಿದೆ. ಈ ವಾಹನ ಬಿಡುಗಡೆಯಾಗಿ ಕೇವಲ 43 ತಿಂಗಳುಗಳಲ್ಲಿ 250000 ಯುನಿಟ್‌ಗಳು ಮಾರಾಟವಾಗಿ ದಾಖಲೆ ಸೃಷ್ಟಿಯಾಗಿತ್ತು. ಇದೀಗ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ 700 ಎಸ್‌ಯುವಿಯ ಎಬೋನಿ ಎಡಿಷನ್‌ ಅನ್ನು ಬಿಡುಗಡೆ ಮಾಡಿದೆ.

 

 

ಗಾಢ ಕಪ್ಪು ಬಣ್ಣದ, ಬೆಳ್ಳಿಯ ತುಸು ಲೇಪನವಿರುವ ಈ ಡಾರ್ಕ್‌ ಎಡಿಷನ್‌ ಅದ್ದೂರಿಯಾಗಿ ಮೂಡಿ ಬಂದಿದೆ. ಅತ್ಯಾಕರ್ಷಕ ಹೊರಾಂಗಣ, ಆರಾಮದಾಯಕ ಒಳಾಂಗಣವನ್ನು ಹೊಂದಿರುವ ಈ ಎಸ್‌ಯುವಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. 7 ಸೀಟುಗಳು ಈ ಕಾರಿನಲ್ಲಿ 18 ಇಂಚಿನ ಇನ್‌ಫೋಟೇನ್‌ಮೆಂಟ್‌ ವ್ಯವಸ್ಥೆ ಇದೆ. 2.0 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಮತ್ತು 2.2 ಲೀ ಡೀಸೆಲ್‌ ಎಂಜಿನ್‌ನಲ್ಲಿ ಈ ಎಸ್‌ಯುವಿ ದೊರೆಯುತ್ತದೆ. ಇದರ ಆರಂಭಿಕ ಬೆಲೆ ರೂ.19.64 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  ಈ ಕಾರು ಬಿಡುಗಡೆಯಾದ ಬೆನ್ನಲ್ಲೇ ಬುಕಿಂಗ್ ಹೆಚ್ಚಾಗುತ್ತಿದೆ. 

ಮೊದಲು ಕಾರು, ಡಿಸೈನ್, ಸರ್ವೀಸ್ ಸರಿಮಾಡಿ, ಟೀಕಿಸಿದ ವ್ಯಕ್ತಿಗೆ ಆನಂದ್ ಮಹೀಂದ್ರ ಉತ್ತರಕ್ಕೆ ಮೆಚ್ಚುಗೆ!

PREV
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್