ಸ್ಕೋಡಾ ಸ್ಲಾವಿಯಾ ಪ್ರೀಮಿಯಂ ಸೆಡಾನ್ (Premium Sedan) ಕಾರು ಬಿಡುಗಡೆಗೊಂಡ ಕೇವಲ ಒಂದು ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚಿನ ಬುಕಿಂಗ್ ಪಡೆದುಕೊಂಡಿದೆ
ಭಾರತೀಯ ಮಾರುಕಟ್ಟೆಯಲ್ಲಿ ಎಸ್ಯುವಿ (SUV) ಹಾಗೂ ಹ್ಯಾಚ್ಬ್ಯಾಕ್ಗಳ (Hatch back) ಹಾವಳಿ ನಡುವೆಯೂ, ಸೆಡಾನ್ ಕಾರುಗಳನ್ನು ಬಿಡುಗಡೆಗೊಳಿಸುವ ಮೂಲಕ ಸುದ್ದಿಯಾಗಿದ್ದ ಸ್ಕೋಡಾ ಇಂಡಿಯಾ (Skoda India), ತನ್ನ ಪ್ರಯತ್ನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸ್ಕೋಡಾ ಸ್ಲಾವಿಯಾ ಪ್ರೀಮಿಯಂ ಸೆಡಾನ್ (Premium Sedan) ಕಾರು ಬಿಡುಗಡೆಗೊಂಡ ಕೇವಲ ಒಂದು ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚಿನ ಬುಕಿಂಗ್ ಪಡೆದುಕೊಂಡಿದೆ. ಇದರಿಂದ ಕುಶಾಕ್ ಜೊತೆಗೆ ನ್ಯೂ ಸ್ಲಾವಿಯಾ ಸ್ಕೋಡಾ ತನ್ನ ಅತಿ ಹೆಚ್ಚು ಮಾಸಿಕ ಮಾರಾಟ ದಾಖಲಿಸಲು ಅನುವು ಮಾಡಿಕೊಟ್ಟಿದೆ. ಭಾರತದಲ್ಲಿ ಕಂಪನಿಯ ಎರಡು ದಶಕಗಳ ಕಾರ್ಯಾಚರಣೆಗಳಲ್ಲಿ 2022ರ ಮಾರ್ಚ್ ಅತ್ಯುತ್ತಮ ತಿಂಗಳಾಗಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.
2022ರ ಮಾರ್ಚ್ನಲ್ಲಿ 5,608 ಸ್ಕೋಡಾ ಕಾರುಗಳು ಮಾರಾಟವಾಗಿದೆ. ಇದು 2021ರ ಮಾರ್ಚ್ ನಲ್ಲಿ ಮಾರಾಟವಾದ 1,159 ವಾಹನಗಳಿಗಿಂತ 5 ಪಟ್ಟು ಹೆಚ್ಚಾಗಿದೆ. ಕಂಪನಿಯು ಸ್ಲಾವಿಯಾ ಮಧ್ಯಮ ಗಾತ್ರದ ಪ್ರೀಮಿಯಂ ಸೆಡಾನ್ ಮತ್ತು ಕುಶಾಕ್ ಎಸ್ಯುವಿ(SUV) ಈ ಮಾರಾಟ ಪ್ರಮಾಣ ಹೆಚ್ಚಳಕ್ಕೆ ಪ್ರಮುಖ ಕೊಡುಗೆ ನೀಡಿದೆ. 2022ರ ಜನವರಿಯಿಂದ ಮಾರ್ಚ್ ನಡುವೆ 13,120 ಸ್ಲಾವಿಯಾ ಹಾಗೂ ಕುಶಾಕ್ (Kushaq) ಕಾರುಗಳು ಮಾರಾಟವಾಗಿವೆ. 2021ರಲ್ಲಿ ಇದು 3,016ರಷ್ಟಿತ್ತು. ಭಾರತದಲ್ಲಿ ಹೊಸ ಸ್ಲಾವಿಯಾ ಮಧ್ಯಮ ಗಾತ್ರದ ಸೆಡಾನ್ ಬಿಡುಗಡೆಯಾಗಿ ಕೇವಲ ಒಂದು ತಿಂಗಳಲ್ಲಿ ಅದರ ಬುಕಿಂಗ್, 10,000 ದಾಟಿದೆ. ಇತ್ತೀಚಿನ ಇತಿಹಾಸದಲ್ಲಿ ಹಿಂದೆಂದೂ ಸ್ಕೋಡಾ ಸೆಡಾನ್ ಭಾರತದಲ್ಲಿ ಇಷ್ಟೊಂದು ಹೆಚ್ಚಿನ ಬೇಡಿಕೆಯನ್ನು ಕಂಡಿರಲಿಲ್ಲ.
undefined
ಬಹುನಿರೀಕ್ಷಿತ ಸ್ಕೋಡಾ ಸ್ಲಾವಿಯಾ ಸೆಡಾನ್ ಕಾರು ಬಿಡುಗಡೆ, ಇಲ್ಲಿದೆ ಬೆಲೆ ಹಾಗೂ ವಿಶೇಷತೆ!
ಸ್ಕೋಡಾ ಸ್ಲಾವಿಯಾ ಫೆಬ್ರವರಿ 28ರಂದು ಬಿಡುಗಡೆಯಾಗಿತ್ತು. ಜನರು 11 ಸಾವಿರ ರೂ. ಡೌನ್ ಪೇಮೆಂಟ್ ಮಾಡಿ ಇದನ್ನು ಬುಕ್ ಮಾಡಬಹುದು. ಸ್ಲಾವಿಯಾವನ್ನು ಕುಶಾಕ್ನಂತೆಯೇ ಭಾರತಕ್ಕಾಗಿ ತಯಾರಿಸಿದ MQB A0 IN ಪ್ಲಾಟ್ಫಾರ್ಮ್ನಲ್ಲಿ ಇರಿಸಲಾಗಿದೆ. ಇದನ್ನು ಶೇ.95ರಷ್ಟು ದೇಶೀಯವಾಗಿ ತಯಾರಿಸಲಾಗಿದೆ. ಸ್ಕೋಡಾ ಸ್ಲಾವಿಯಾ ಆ್ಯಕ್ಟೀವ್, ಆ್ಯಂಬೀಷಿಯಸ್ ಮತ್ತು ಸ್ಟೈಲ್ ವೇರಿಯಂಟ್ಗಳಲ್ಲಿ ಲಭ್ಯವಿದ್ದು, ಅವುಗಳ ಬೆಲೆ ಬೆಲೆ 10.69 ಲಕ್ಷ ರೂ.ಗಳಿಂದ 17.79 ಲಕ್ಷ ರೂ.ಗಳವರೆಗೆ ಇದೆ. ಇದರ 1.0 ಲೀಟರ್, 3 ಸಿಲಿಂಡರ್ TSI ಪೆಟ್ರೋಲ್ ಎಂಜಿನ್ ಮೂಲಕ 114 hp ಪವರ್ ಮತ್ತು 175 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ 1.5 ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್ 148 hp ಪವರ್ ಮತ್ತು 250 Nm ಟಾರ್ಕ್ ಉತ್ಪಾದಿಸುತ್ತದೆ.
ಸ್ಕೋಡಾ ಕುಶಾಕ್‌ಗೆ ಹೆಚ್ಚಿದ ಬೇಡಿಕೆ: ಕಾರುಗಳ ಮಾರಾಟ 3 ಪಟ್ಟು ಏರಿಕೆ!
ಇದರ ಟಿಎಸ್ಐ ಎಂಜಿನ್ 19.47 ಕಿಮೀ ವರೆಗೆ ಮೈಲೇಜ್ ನೀಡುತ್ತದೆ 10.7 ಸೆಕೆಂಡುಗಳಲ್ಲಿ 100 ಕಿಮೀ ವರೆಗೆ ವೇಗ ಹೆಚ್ಚಿಸಬಲ್ಲದು. ಸ್ಕೋಡಾ ಸ್ಲಾವಿಯಾ ತನ್ನ ವಿಭಾಗದಲ್ಲಿ ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಸ್ಪರ್ಧೆ ನೀಡಲಿದೆ. ಸ್ಕೋಡಾ ವೋಕ್ಸ್ವ್ಯಾಗನ್ನ ಸ್ಕೋಡಾ ವಿಡಬ್ಲ್ಯೂ ಇಂಡಿಯಾ ಪ್ರಾಜೆಕ್ಟ್ 2.0 2.0 ಇಂಡಿಯಾ ಯೋಜನೆಯಡಿ ಈ ಕಾರುಗಳನ್ನು ತಯಾರಿಸಲಾಗಿದೆ. ಕಂಪನಿಯು ಈಗಾಗಲೇ ತನ್ನ ಆಕ್ಟೇವಿಯಾ ಮತ್ತು ಸುಪರ್ಬ್ ಪ್ರೀಮಿಯಂ ಸೆಡಾನ್ ಅನ್ನು ಇಂಡಿಯಾ 2.0 ಪ್ರಾಜೆಕ್ಟ್ ಅಡಿಯಲ್ಲಿ ಉತ್ತಮ ಮಾರಾಟ ದಾಖಲಿಸಿದೆ. ಸ್ಕೋಡಾ ಭಾರತ 2.5 ಯೋಜನೆಯಡಿಯಲ್ಲಿ ಹೊಸ 4 ಮೀಟರ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ. ಈ ಮುಂಬರುವ SUV MQB AO IN ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ. ಇದನ್ನು ಭಾರತದಲ್ಲಿ ತಯಾರಿಸಲಾಗುವುದು ಮತ್ತು ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.