ಶ್ರೀಲಂಕಾದಲ್ಲಿನ ತೀವ್ರ ಆರ್ಥಿಕ ಬಿಕ್ಕಟ್ಟಿನ (Economic crisis) ಪರಿಣಾಮವಾಗಿ ಅಲ್ಲಿನ ಉತ್ಪಾದನಾ ಮತ್ತು ಜೋಡಣಾ (Assemble)ಘಟಕಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಅನೇಕ ಭಾರತೀಯ ಆಟೊಮೊಬೈಲ್ ತಯಾರಕರು ಮುಂದಾಗಿದ್ದಾರೆ. ಶ್ರೀಲಂಕಾ ಅನಿಶ್ಚಿತ ವಿದೇಶಿ ವಿನಿಮಯ ವಿನಿಮಯ ಮತ್ತು ಇಂಧನ ಕೊರತೆ ಎದುರಿಸುತ್ತಿರುವುದರಿಂದ ಲಘು ವಾಣಿಜ್ಯ ವಾಹನಗಳು (Light commercial vehicles) ಟ್ರಕ್ಗಳು ಮತ್ತು ಬಸ್ಗಳು ಸೇರಿದಂತೆ ವಾಹನ ಕಿಟ್ಗಳ ಸಾಗಣೆಯು ತೀವ್ರವಾಗಿ ಕುಸಿದಿದೆ ಎಂದು ಉದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ.
ಟಾಟಾ ಮೋಟಾರ್ಸ್ನಂತಹ ಕಂಪನಿಗಳು ಶ್ರೀಲಂಕಾದಲ್ಲಿ ವಿತರಕರಿಗೆ ವಾಹನ ಕಿಟ್ಗಳನ್ನು ರಫ್ತು ಮಾಡುತ್ತಿದ್ದರೆ, ಮಹೀಂದ್ರಾ ಮತ್ತು ಮಹೀಂದ್ರಾ, ಅಶೋಕ್ ಲೇಲ್ಯಾಂಡ್ ಮತ್ತು ಟಿವಿಎಸ್ ಮೋಟಾರ್ಸ್ನಂತಹ ಕಂಪನಿಗಳು ಆ ದೇಶದಲ್ಲಿ ಸ್ಥಳೀಯ ಜೋಡಣೆಯ ಕಾರ್ಯಾಚರಣೆಗಳನ್ನು ಹೊಂದಿವೆ. “ವಾಹನಗಳ ಉತ್ಪಾದನಾ ಕಿಟ್ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಾರುಕಟ್ಟೆಗೆ ಸಿದ್ಧ ಉತ್ಪನ್ನಗಳನ್ನು ಪೂರೈಸಲು ಸಾಧ್ಯವಿಲ್ಲ" ಎಂದು ಶ್ರೀಲಂಕಾದಲ್ಲಿನ ಟಾಟಾ ಮೋಟಾರ್ಸ್ (Tata motors) ಮತ್ತು ಮಹೀಂದ್ರಾ ಟ್ರಾಕ್ಟರ್(Mahindra tracter) ಗಳ ಚಲನಶೀಲತೆಯ ವಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀವ್ ಪಂಡಿತಗೆ ಹೇಳಿದ್ದಾರೆ.
undefined
Maruti Suzuki Exports: 2021ರಲ್ಲಿ ಅತಿ ಹೆಚ್ಚು ವಾಹನಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ!
ವಿದೇಶೀ ವಿನಿಮಯ ಬಿಕ್ಕಟ್ಟಿನ ಕಾರಣದಿಂದ ಶ್ರೀಲಂಕಾದಲ್ಲಿ ವಾಹನ ಕಿಟ್ಗಳ ಆಮದುಗಳನ್ನು ನಿರ್ಬಂಧಿಸಲಾಗಿದೆ. ವಾಹನಗಳ ಸಂಪೂರ್ಣ ನಿರ್ಮಾಣ ಘಟಕಗಳ ಮೇಲೆ ಆಮದು ನಿರ್ಬಂಧಗಳಿರುವುದರಿಂದ ಡೀಸೆಲ್ ಮತ್ತು ಮೋಟಾರ್ ವಾಹನಗಳನ್ನು ಅಲ್ಲಿಯೇ ಜೋಡಿಸುತ್ತಿದ್ದು ಕಡಿಮೆ ಬೆಲೆಯ ವಾಹನಗಳಿಗೆ ಭಾರಿ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಶೀಘ್ರವೇ ಬಿಡುಗಡೆ ಮಾಡಲಿದೆ ಎಂದು ಟಾಟಾ ಸಂಸ್ಥೆ ತಿಳಿಸಿದೆ.ಶ್ರೀಲಂಕಾದ ರೈತರು ಹೊಸ ಟ್ರ್ಯಾಕ್ಟರ್ಗಳನ್ನು ಖರೀದಿಸಲು ಬಯಸುತ್ತಾರೆ, ಆದರೆ ಹೆಚ್ಚಿನ ಬಡ್ಡಿದರಗಳು ಮತ್ತು ಏರುತ್ತಿರುವ ಹಣದುಬ್ಬರವು ಅದನ್ನು ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಅವರು ಹೇಳಿದರು.
ಟಾಟಾ ಮೋಟಾರ್ಸ್ 1961 ರಿಂದ ಶ್ರೀಲಂಕಾದಲ್ಲಿ ತನ್ನ ಕಾರ್ಯಾಚರಣೆಗಳನ್ನು ನಡೆಸುತ್ತಿದೆ ಮತ್ತು ದೇಶವು ಆದ್ಯತೆಯ ಮಾರುಕಟ್ಟೆಯಾಗಿ ಮುಂದುವರೆದಿದೆ. "ಕಂಪನಿಯು ವರ್ಷಗಳಿಂದ ಸತತವಾಗಿ ಬೆಳೆದಿದೆ ಮತ್ತು ಈಗ ಶ್ರೀಲಂಕಾದಲ್ಲಿ ಅತಿ ಹೆಚ್ಚು ಮಾರಾಟವಾಗುವ ವಾಣಿಜ್ಯ ವಾಹನ ಬ್ರ್ಯಾಂಡ್ ಆಗಿದೆ. ಇದು 750 ಕೆಜಿ ಏಸ್ನಿಂದ 45-ಟನ್ ಪ್ರೈಮಾ ಟ್ರಕ್ಗಳವರೆಗೆ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಹೊಂದಿದೆ, ”ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಬಿಎಂಡಬ್ಲ್ಯು ಐಎಕ್ಸ್ ಇವಿ ಎಸ್‌ಯುವಿ: ಬಿಡುಗಡೆಯ ದಿನವೇ ಸೋಲ್ಡ್ ಔಟ್!
ದ್ವಿಚಕ್ರ ವಾಹನ ತಯಾರಕ ಬಜಾಜ್ ಆಟೋಗಳ (Bajaj Auto) ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳು ಸೇರಿದಂತೆ ಹೆಚ್ಚಿನ ಆಟೋ ಉತ್ಪನ್ನಗಳ ಆಮದುಗಳನ್ನು ಶ್ರೀಲಂಕಾ ಸರ್ಕಾರ ಸುಮಾರು ಒಂದು ವರ್ಷದ ಹಿಂದೆಯೇ ನಿಲ್ಲಿಸಿದೆ. “ಪರಿಣಾಮವಾಗಿ, ಹಿಂದಿನ ವರ್ಷದಲ್ಲಿ ರಫ್ತು ಇಳಿಮುಖವಾಗಿತ್ತು. 2019-20 ರಲ್ಲಿ, ನಾವು 30,000 ವಾಹನಗಳನ್ನು ರಫ್ತು ಮಾಡಿದ್ದೇವೆ ಎಂದು ಬಜಾಜ್ ಆಟೋ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಶರ್ಮಾ ಹೇಳಿದ್ದಾರೆ.
2019ರ ಆಗಸ್ಟ್ ನಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ (Mahindra & Mahindra) ಐಡಿಯಲ್ ಗ್ರೂಪ್ನೊಂದಿಗೆ (ideal group) ಕೈಜೋಡಿಸಿ ಶ್ರೀಲಂಕಾದಲ್ಲಿ ಕೆಯುವಿ 100( KUV 100) ಮಿನಿ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ (SUV) ಮತ್ತು ಬೊಲೆರೊ ಮ್ಯಾಕ್ಸಿ ಪಿಕಪ್ ಟ್ರಕ್ ಅನ್ನು ಉತ್ಪಾದನೆ ಆರಂಭಿಸಿತ್ತು. ಕೆಯುವಿ 100 ಮತ್ತು ಬೊಲೆರೊ ಮ್ಯಾಕ್ಸಿ ಎಂಟ್ರಿ ಲೆವೆಲ್ ಉತ್ಪನ್ನಗಳಾಗಿದ್ದು, ಅವುಗಳಿಗೆ ಉತ್ತಮ ಬೇಡಿಕೆ ಇದೆ.
ಟಿವಿಎಸ್ ಮೋಟಾರ್ಸ್ ತನ್ನ ಹಲವಾರು ದ್ವಿಚಕ್ರ ವಾಹನ ಮಾದರಿಗಳಾದ 100 cc ಎಕಾನಮಿ ಮೋಟಾರ್ಸೈಕಲ್ TVS ಸ್ಪೋರ್ಟ್ ಮತ್ತು 125 cc ಸ್ಕೂಟರ್ TVS NTORQ ರೇಸ್ ಆವೃತ್ತಿಯನ್ನು ಸ್ಥಳೀಯ ಜೋಡಣೆಮೂಲಕ ಮಾರಾಟ ಮಾಡುತ್ತದೆ.
ಈ ವರ್ಷದ ಜನವರಿಯಲ್ಲಿ ಶ್ರೀಲಂಕಾ ಸರ್ಕಾರ ತನ್ನ ಸಾರಿಗೆ ಮಂಡಳಿಗೆ ಅಶೋಕ್ ಲೇಲ್ಯಾಂಡ್ನಿಂದ 500 ಬಸ್ಗಳನ್ನು ಖರೀದಿಸಲು ಅನುಮೋದನೆ ನೀಡಿದೆ. ಅವರ ಉತ್ಪಾದನೆ ಪ್ರಮಾಣದ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ...